हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Daily Manna

ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ

Friday, 29th of November 2024
4 1 310
Categories : ಉಪವಾಸ ಮತ್ತು ಪ್ರಾರ್ಥನೆ (Fasting and prayer)

ವೈವಾಹಿಕ ಒಪ್ಪಂದ, ಆಶೀರ್ವಾದ ಮತ್ತು ಸ್ವಸ್ಥತೆ.

 ‭ ‭" 18ಮತ್ತು ಯೆಹೋವದೇವರು - ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಅಂದನು."(ಆದಿಕಾಂಡ‬ ‭2:18‬).

ಮದುವೆ ಎಂಬುದು ಒಂದು ದೈವೀಕ ಸಂಸ್ಥೆಯಾಗಿದೆ ಮತ್ತು ಅದರ ಉದ್ದೇಶ ಫಲದಾಯಕತೆ, ಅನ್ಯೋನ್ಯತೆ ಮತ್ತು ಸಹಭಾಗಿತ್ವ.ಪೋಷಕರಾಗಿ ನಮ್ಮ ಕರ್ತವ್ಯ ನಾವು ನಮ್ಮ ಮಕ್ಕಳನ್ನು ದೇವರ ಭಯದಲ್ಲಿ ಬೆಳೆಸಬೇಕು.ಅಂಥಹ ಮಕ್ಕಳು ಈ ಲೋಕದ ಆಯಾಮದಲ್ಲಿ ದೇವರ ಸೈನಿಕರಂತೆ ಜೀವನ ಸಾಗಿಸುತ್ತಾರೆ.ಇಂಥ ಒಂದು ಕುಟುಂಬದಿಂದ ತನ್ನ ರಾಜ್ಯಕ್ಕೆ ಏನಾಗಬಹುದು ಎಂಬ ಅರಿವು ಸೈತಾನನಿಗೆ ಇದೆ ಅದಕ್ಕಾಗಿಯೇ ಅವನು ಇಂಥ ಕುಟುಂಬದ ವಿರುದ್ಧವಾಗಿ ತನ್ನ ಬಲದ ಮಿತಿಯಲ್ಲಿ ಏನು ಸಾಧ್ಯವೋ ಅಂಥ ಎಲ್ಲಾ ಕಾರ್ಯಾಚರಣೆ ಮಾಡುತ್ತಲೇ ಇರುತ್ತಾನೆ.

11ಯೆಹೋವದೇವರು ಸೂರ್ಯನೂ ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?"(ಕೀರ್ತನೆಗಳು‬ ‭84:11‬ ‭).
"25ನಿಮ್ಮ ಅಪರಾಧಗಳು ಇವುಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮಗೆ ಮೇಲನ್ನು ತಡೆದಿವೆ."
(ಯೆರೆಮೀಯ‬ ‭5:25‬).

ಮದುವೆ ಎಂಬುದು ಒಳ್ಳೆಯ ಸಂಗತಿ ಮತ್ತು ದೇವರು ಯಾವ ಒಳಿತನ್ನೂ ತನ್ನ ಜನರಿಗೆ ಅನುಗ್ರಹಿಸದೇ ಹಿಡಿದಿಟ್ಟುಕೊಳ್ಳುವುದಿಲ್ಲ. ನೀವು ಯಾವಾಗ ಒಳ್ಳೆಯದನ್ನು ನಿರಾಕರಿಸುತ್ತೀರೋ, ನಿಮ್ಮನ್ನ ನೀವು ಬೆಲೆಯಿಲ್ಲದವುಗಳಿಗಾಗಿ ಮಾರಿಕೊಳ್ಳುತ್ತೀರಿ  ಇದು ದೇವರ ಚಿತ್ತವಲ್ಲ. ಇದು ಹೀಗಾಗಿದ್ದರೆ ಒಂದೋ ಅದು ನಿಮ್ಮ ಪಾಪದಿಂದ ಇಲ್ಲವೇ ಸೈತಾನನ ಕಾರ್ಯದಿಂದ ಆಗಿರುತ್ತದೆ.

ವೈವಾಹಿಕ ಒಪ್ಪಂದ ಮತ್ತು ಆಶೀರ್ವಾದಕ್ಕೆ ವಿರೋಧವಾಗಿ ಸೈತಾನನು ಸಾಮಾನ್ಯವಾಗಿ ತಂದೊಡ್ದುವ ಆಕ್ರಮಣಗಳಾವುವು?

1. ತಪ್ಪಾದ ಆಯ್ಕೆ.
ಸಂಸೋನನು ಅಭಿಶಿಕ್ತನು ಆದರೆ ಅವನ ತಪ್ಪಾದ ವೈವಾಹಿಕ ಸಂಬಂಧಗಳು ದೇವರು ಅವನಿಗಾಗಿ ಇಟ್ಟ ಅವನ ಕರೆಯಿಂದಲೇ ವಜಾಗೊಳಿಸಿತು. ಜನರು ತಪ್ಪಾದ ಕಾರಣಗಳಿಗಾಗಿ ಮದುವೆಯಾಗುತ್ತಾರೆ. ತಪ್ಪಾದ ಕಾರಣಗಳು ತಪ್ಪಾದ ವೈವಾಹಿಕ ಸಂಗಾತಿಯನ್ನೇ ಆಕರ್ಷಿಸುತ್ತದೆ. ನಿಮ್ಮ ಜೀವಿತಕ್ಕಾಗಿ ಇರುವ ದೇವರಚಿತ್ತಕ್ಕಾನುಸಾರವಾಗಿ ಮದುವೆ ಮಾಡಿಕೊಳ್ಳಿ. ಸೈತಾನನು ತಪ್ಪಾದ ವ್ಯಕ್ತಿಯೊಡನೆ ನೀವು ಮದುವೆ ಮಾಡಿಕೊಳ್ಳುವಂತೆ ತಪ್ಪಾದ ಪ್ರಭಾವವನ್ನು ಬೀರಬಹುದು ಆದ್ದರಿಂದ ಎಚ್ಚರವಾಗಿರ್ರಿ ಮತ್ತು ಆತ್ಮೀಕರಾಗಿರ್ರಿ.

ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಂತದ್ದು ಶಾರೀರಿಕ ನೋಟದ ಆಧಾರದಲ್ಲಿಯೋ  ಇಲ್ಲವೇ ಅವರಿಗಿರುವ ಸಂಪತ್ತಿನ ಮೇಲೆ ಆಧಾರವಾಗಿಯೋ ಇರಬಾರದು.  ನಿಮ್ಮ ಜ್ಞಾನೇಂದ್ರಿಯಗಳಿಂದ ಆತ್ಮೀಕ ಆಯಾಮದಲ್ಲೇನಿದೆ ಎಂದು ನೀವು ನೋಡಲಾರಿರಿ. ಮರೆಯಾಗಿರುವ ರಹಸ್ಯಗಳನ್ನು ಬಯಲುಪಡಿಸುವಂತೆಯೂ ಮತ್ತು ಆತನ ಚಿತ್ತವೇನೆಂದು ತಿಳಿಸುವಂತೆಯೂ ನೀವು ದೇವರ ಮುಖ ದರ್ಶನವನ್ನು ಎದುರು ನೋಡಬೇಕು. ಕೆಲವರು ಮದುವೆಯಾದ ತಮ್ಮ ಜೀವನ ಸಂಗಾತಿಗಳ ದೆಸೆಯಿಂದ ತಮ್ಮನ್ನೂ ನಾಶಪಡಿಸಿಕೊಂಡು,ತಮಗಾಗಿ ಇದ್ದ ದೈವೀಕ ಕರೆಯನ್ನೂ ನಷ್ಟ ಪಡಿಸಿಕೊಂಡಿದ್ದಾರೆ.

2. ಮದುವೆಗೆ ತಡೆಗಳು ಅಥವಾ ಕಲ್ಪನೆಗಳು.
"ನೀತಿವಂತರ ಮಾರ್ಗವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ."(ಜ್ಞಾನೋಕ್ತಿಗಳು‬ ‭4:18‬).

ನಮ್ಮ ಜೀವಿತದಲ್ಲಿ ತಡೆಯುಂಟಾಗಬೇಕು ಎಂಬುದು  ದೇವರ ಚಿತ್ತವಲ್ಲ. ನಾವು ಹೊಳೆಯುತ್ತಾ ಅಭಿವೃದ್ಧಿಯಾಗುತ್ತಾ ಮಹಿಮೆಯಿಂದ ಇನ್ನೂ ಹೆಚ್ಚಿನ ಮಹಿಮೆಗೆ ಸಾಗಬೇಕೆಂಬುದೇ ನಮ್ಮ ಜೀವಿತದ ಮೇಲೆ ದೇವರಿಗಿರುವ ಚಿತ್ತ.ಇದ್ದದಕ್ಕಿಂತ ಏನಾದರೂ ನಮ್ಮ ಜೀವಿತದಲ್ಲಿ ಕಡಿಮೆಯಾಗುತ್ತಿದರೆ ಅದು ದುಷ್ಟನಿಂದ ಆದದ್ದು.

3. ಚಿಕ್ಕಂದಿನಲ್ಲಿಯೇ ಮಕ್ಕಳನ್ನು ತರಬೇತುಗೊಳಿಸಿ.
" ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು."(ಜ್ಞಾನೋಕ್ತಿಗಳು‬ ‭22:6‬).
‭‭
"4ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ; 5ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು. ಊರುಬಾಗಲಲ್ಲಿ ವೈರಿಗಳ ಸಂಗಡ ವ್ಯಾಜ್ಯವಾಡುವಾಗ ಅಂಥವರು ಅಪಮಾನಹೊಂದುವದಿಲ್ಲ." (ಕೀರ್ತನೆಗಳು‬ ‭127:4‭-‬5‬)

ತಂದೆತಾಯಿಗಳು ತಮ್ಮ ಮಕ್ಕಳನ್ನು ದೇವರ ಮಾರ್ಗದಲ್ಲಿ ತರಬೇತುಗೊಳಿಸುವುದರಲ್ಲಿ ಯಶಸ್ವಿಯಾದರೆ ಅಂಥಹ ಮಕ್ಕಳು ದೇವರ ಸೇನಾಧಿಪತಿಗಳಂತೆ ಇರುತ್ತಾರೆ. ಸೈತಾನನು ಪ್ರತೀ ಮಗುವಿನಲ್ಲಿರುವ ಅದರ ಮಹತ್ತರವಾದ ಸಾಮರ್ಥ್ಯದ ಬೀಜದ ಬಗ್ಗೆ ಅರಿವಿರುವವನಾಗಿದ್ದಾನೆ. ಮತ್ತು ಅವನು ಆ ಮಕ್ಕಳು ಇನ್ನೂ ಚಿಕ್ಕವರಾಗಿರುವಾಗಲೇ ಅವರ ಮನಸ್ಸನ್ನು ಸೆರೆಹಿಡಿಯಲು ಗುರಿಇಟ್ಟಿರುತ್ತಾನೆ. ಹೀಗಾಗಿ ಪ್ರಾರ್ಥನಾ ಪೂರ್ವಕವಾಗಿ ನಿಮ್ಮ ಮಕ್ಕಳನ್ನು ಸಂರಕ್ಷಿಸಿ ಮತ್ತು ನಿಮ್ಮ ಮಕ್ಕಳಲ್ಲಿ ಉತ್ತಮ ನೈತಿಕತೆಯನ್ನು ನೀವು ಬಿತ್ತಿದ್ದೀರಿ ಎನ್ನುವ ಭರವಸೆ ನಿಮಗಿರಲಿ. ಸೈತಾನನು ಶಾಲಾವಸ್ಥೆಯಲ್ಲಿಯೇ ಸಾಮಾಜಿಕ ಜಾಲತಾಣಗಳ ಮೂಲಕ ತುಣುಕುಗಳನ್ನು ತೋರಿಸುತ್ತಾ ದುಷ್ಟ ಸಂಗೀತಗಳ ಮೂಲಕ ಮಕ್ಕಳ ಮನಸ್ಸಿನ ಮೇಲೆ ದಾಳಿ ಮಾಡುತ್ತಾನೆ.

ನೀವು ನಿಮ್ಮ ಮಕ್ಕಳಿಗಾಗಿ ಅವರ ಶಾಲಾ ವಾರ್ಷಿಕ ಪಠ್ಯಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಕೊಡಿಸುವಾಗಲೇ ಸೈತಾನನು ಅದರ ಉಪಯೋಗವನ್ನು ಪಡೆದುಕೊಳ್ಳುತ್ತಾನೆ.ಹಾಗಾಗಿ ನಿಮ್ಮ ಮಕ್ಕಳನ್ನು ಆತ್ಮೀಕವಾಗಿ ತರಬೇತು ಗೊಳಿಸುವುದು ಅತ್ಯಗತ್ಯ.

4. ವಿಚ್ಛೇದನ.
"ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು ಎಂದು ಹೇಳಿದನು." (ಮಾರ್ಕ‬ ‭10:9‬)
  
ನೀವು ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ ಕೊಳ್ಳುವುದರಲ್ಲಿ ಯಶಸ್ವಿಯಾದರೂ ಸೈತಾನನು ವಿವಾಹ ವಿಚ್ಚೇಧನವನ್ನು ನಿಮ್ಮ ಜೀವನದಲ್ಲಿ ಪರಿಚಯಿಸಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ನಿಮ್ಮ ಕುಟುಂಬದಲ್ಲಿ ಬಡತನ, ಬಿರುಗಾಳಿ ಮತ್ತು ರೋಗಗಳನ್ನು ತಂದುಹಾಕಿ ಕುಟುಂಬದ ನೆಮ್ಮದಿಯ ಮೇಲೆ ಆಕ್ರಮಣ ಮಾಡುತ್ತಾನೆ. ನಿಮ್ಮ  ಸಂಗಾತಿಯ ನಡುವೆ ಕೋಪ -ತಪ್ಪುಗ್ರಹಿಕೆಗಳನ್ನು ಹುಟ್ಟಿಸಿ ನೆಮ್ಮದಿಯನ್ನು ಹಾಳುಗೆಡುವುತ್ತಾನೆ. ನೀವು ಅವನ ತಂತ್ರೋಪಾಯಗಳನ್ನು ತಿಳಿದುಕೊಂಡು ಬಿಟ್ಟರೆ ಅವನ ಆಟಗಳ ಮೇಲೆ ಪ್ರಯೋಜನ ಹೊಂದುವಿರಿ. ವಿವಾಹ ವಿಚ್ಚೇದನ ಪಡೆದ ಯಾವುದೇ ದಂಪತಿಗಳಾಗಿದ್ದರೂ ಅವರು ತಮ್ಮ ಮದುವೆಯ ಸಮಯದಲ್ಲಿ ವಿಚ್ಛೇದನದ ಉದ್ದೇಶ ಹೊಂದಿರಲು ಸಾಧ್ಯವೇ ಇಲ್ಲ. ಅವರು ತಮ್ಮ ವಿವಾಹ ಸಮಯದಲ್ಲಿ "ಸಾವು ಬಿಟ್ಟು ಇನ್ಯಾವುದು ನಮ್ಮನ್ನು ಅಗಲಿಸದು" ಎಂದು ಪರಸ್ಪರ ಪ್ರಮಾಣ ಮಾಡಿರುತ್ತಾರೆ. ಆದರೆ ಸೈತಾನನು ಸವಾಲುಗಳೊಂದಿಗೆ ಲಗ್ಗೆ ಇಟ್ಟು ಅವರಿಬ್ಬರನ್ನು ಅಗಲಿಸುತ್ತಾನೆ.

5. ವ್ಯಭಿಚಾರ.
"ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು; ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ."
(2 ಕೊರಿಂಥದವರಿಗೆ‬ ‭2:11)

ದಂಪತಿಗಳ ವಿರುದ್ಧವಾಗಿ ಸೈತಾನನು ಬಳಸುವ ಬಹುದೊಡ್ಡ ಅಸ್ತ್ರ ಅದು ವ್ಯಭಿಚಾರ. ಸೈತಾನನು ಅಪರಿಚಿತ ಗಂಡಸು /ಹೆಂಗಸನ್ನು ಆಯೋಜಿಸಿ ಅನೇಕ ವಿವಾಹಿತ ದಂಪತಿಗಳನ್ನು ಭ್ರಷ್ಟಗೊಳಿಸುತ್ತಾನೆ. ದಂಪತಿಗಳಲ್ಲಿ ಒಬ್ಬರು ಈ ವಿಚಾರದಲ್ಲಿ ಬಿದ್ದು ಹೋದ ತಕ್ಷಣವೇ ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಮುಚ್ಚಿಟ್ಟ ತರುವಾಯ ಆ ತಪ್ಪನ್ನು ಪದೇ ಪದೇ ಮಾಡುತ್ತಿರುತ್ತಾರೆ ಏಕೆಂದರೆ ಅದು ಬಯಲಾದ ತಕ್ಷಣ ಅದನ್ನು ನಿಲ್ಲಿಸುವುದು ಅವರಿಗೆ ಕಷ್ಟಕರ.

ಒಮ್ಮೆ ಒಬ್ಬ ದೇವರ ಮನುಷ್ಯನು ಆತ್ಮದಲ್ಲಿ ಬಲವಾಗಿ ನಡೆಸಲ್ಪಡುತ್ತಿರುವಾಗ ಪವಿತ್ರಾತ್ಮನು ಒಮ್ಮೆ ಹೀಗೆ ಹೇಳಿದನು. " ದಂಪತಿಗಳು ಜೊತೆಜೊತೆಯಾಗಿ ಕೂತು ಅಶ್ಲೀಲವಿರುವ ಚಿತ್ರಗಳನ್ನು ನೋಡುವಂತದ್ದು ವೈವಾಹಿಕ ಜೀವನದಲ್ಲಿ ವ್ಯಭಿಚಾರ ನುಸುಳಲು ಮಾರ್ಗ ಮಾಡಿಕೊಡುತ್ತದೆ. ಆ ಚಿತ್ರಗಳಲ್ಲಿ ಪಾತ್ರವಹಿಸುತ್ತಿರುವವರು ನಿಜವಾದ ದಂಪತಿಗಳಲ್ಲದ ಕಾರಣ ಇಂಥ ಹಾದರಕ್ಕೆ ಸಂಬಂಧಿಸಿದ ಚಿತ್ರಗಳನ್ನು ವೀಕ್ಷಿಸುವಂತದ್ದು ಲೈಂಗಿಕ ಅನೈತಿಕತೆಯ ದುರಾತ್ಮಕ್ಕೆ ಮನೆಯಲ್ಲಿ ಜಾಗಕೊಟ್ಟಂತೆ. " ಎಂದು. ಆದ್ದರಿಂದ ಜಾಗರೂಕರಾಗಿರ್ರಿ.

ವೈವಾಹಿಕ ಒಪ್ಪಂದವನ್ನು ಆಶೀರ್ವಾದವನ್ನು ಸ್ವಸ್ಥತೆಯನ್ನು ಅನುಭವಿಸುವುದು ಹೇಗೆ?

ನೀವು ನಿಮ್ಮ ವೈವಾಹಿಕ ಸಂಬಂಧದಲ್ಲಿ ನೋವನ್ನು ಸಂಕಟವನ್ನು ಅನುಭವಿಸುತ್ತಿದ್ದರೆ ದೇವರು ನಿಮ್ಮ ವೈವಾಹಿಕ ಸಂಬಂಧವನ್ನು ಸ್ವಸ್ಥಪಡಿಸುವನು. ಹಾಗೆಯೇ ನೀವು ನಿಮ್ಮ ವೈವಾಹಿಕ ಸಂಬಂಧದಲ್ಲಿ  ಆಶೀರ್ವಾದ ಹೊಂದಬೇಕಿದ್ದರೆ ಅಥವಾ ವೈವಾಹಿಕ ಒಪ್ಪಂದಕ್ಕೆ ಬರಲು ಬಯಸುತ್ತಿದ್ದರೆ ದೇವರ ವಾಕ್ಯವು ನಿಮ್ಮನ್ನು ಆವರಿಸಿ ಕಾಯುತ್ತದೆ.

ಹಾಗಾದರೆ, ನೀವು ಮಾಡಬೇಕಾದ ಕಾರ್ಯಗಳಾವುವು?

ಎ) ಒಡಂಬಡಿಕೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.
ಯೆಶಾಯ 34:16 ರ ಪ್ರಕಾರ ಯಾವ ಪ್ರಾಣಿ ಪಕ್ಷಿಗಳಿಗಾದರೂ ಸಂಗಾತಿಗಳ ಕೊರತೆಯಿರುವುದಿಲ್ಲ ಎಂದು ದೇವರು  ಘೋಷಿಸಿದ್ದಾನೆ. ದೇವರು ಪ್ರಾಣಿಪಕ್ಷಿಗಳ ಮೇಲೆಯೇ ಇಷ್ಟು ಕಾಳಜಿ ವಹಿಸುವುದಾದರೆ ಇನ್ನು ನಿಮ್ಮ ಬಗ್ಗೆ ಇನ್ನೆಷ್ಟು ಕಾಳಜಿ ವಹಿಸಬಹುದು? ನೀವು ಪ್ರಾಣಿ ಪಕ್ಷಿಗಳಿಗಿಂತ ಬೆಲೆಯುಳ್ಳವರು (ಮತ್ತಾಯ 10:31)

ನೀವು ಒಬ್ಬಂಟಿಗರಾಗಿದ್ದರೆ ಮದುವೆಯೇ ನಿಮ್ಮನ್ನು ಪರಿಪೂರ್ಣ ಗೊಳಿಸುವಂತದ್ದು ಎನ್ನುವ ಹಾಗೆ ನಿಮ್ಮನ್ನು ನೀವು ನೋಡಿಕೊಳ್ಳಬೇಡಿ. ಮದುವೆಯೇ ಎಲ್ಲದಕ್ಕೂ ಅಂತಿಮ ಎಂದು ಕೊಳ್ಳಬೇಡಿ.ಮದುವೆಯು ನಿಮ್ಮನ್ನು ಪರಿಪೂರ್ಣ ಗೊಳಿಸುವುದಿಲ್ಲ ನೀವು ಕ್ರಿಸ್ತನಲ್ಲಿ ಪರಿಪೂರ್ಣರು. (ಕೊಲಸ್ಸೆ 2:10)

ಬಿ) ಪ್ರೀತಿಯಲ್ಲಿ ಬೆಳೆಯಿರಿ.
ಪ್ರೀತಿಯು ನಿಮ್ಮ ವೈವಾಹಿಕ ಜೀವನದ ಯಾವುದೇ ಗಾಯವನ್ನಾದರೂ ಗುಣಪಡಿಸಬಲ್ಲದು. ಪ್ರೀತಿಯು ನಿಮ್ಮ ಕುಟುಂಬವನ್ನು ಆಶೀರ್ವಧಿಸಬಹುದು ಮತ್ತು ಅದು ನಿಮ್ಮ ಮನೆಯಲ್ಲಿ ದೇವರ ಪ್ರಸನ್ನತೆಯನ್ನು ಆಕರ್ಶಿಸುವಂತೆ ಮಾಡಬಲ್ಲದು. ಪ್ರೀತಿಯು ಎಲ್ಲಕ್ಕಿಂತ ದೊಡ್ಡದು ಪ್ರೀತಿಯು ನಂಬಿಕೆ, ನಿರೀಕ್ಷೆ, ಬಲ ಎಲ್ಲದಕ್ಕಿಂತ ದೊಡ್ಡದು. (1ಕೊರಿಯಂತೆ 13:13). ಆರಾಧನೆಯಲ್ಲಿ ಕಾಲಕಳೆಯುವಂತದ್ದು ಪ್ರೀತಿಯಲ್ಲಿ ಬೆಳೆಯಲು ಇರುವ ಒಂದು ಮಾರ್ಗವಾಗಿದೆ.ಹೀಗೆ ನೀವು ಮಾಡುವಾಗ ದೇವರ ಪ್ರೀತಿರಸವು ನಿಮ್ಮ ಹೃದಯದಲ್ಲಿ ಧಾರಾಳವಾಗಿ ಸುರಿಸಲ್ಪಡುತ್ತದೆ. (ರೋಮ 5:5)

ಸಿ) ಸದ್ಗುಣಗಳನ್ನು ಬೆಳೆಸಿಕೊಳ್ಳಿರಿ.
"ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ.4 ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು".(ರೋಮಾಪುರದವರಿಗೆ‬ ‭5:3‭-‬4‬).

ನಿಮ್ಮ ಚಾರಿತ್ರ್ಯವೇ ನೀವು ವೈವಾಹಿಕ ಸಂಬಂಧದಲ್ಲಿ ಸಂತೋಷವನ್ನು ಅನುಭವಿಸುತ್ತೀರೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ. ದುರಾಚಾರವು ಮನೆಯನ್ನು ಮುರಿಯುತ್ತದೆ ಮತ್ತು ಸಮಾಜದಲ್ಲಿ ಮಕ್ಕಳ ಸ್ಥಿತಿಯನ್ನು ವೈಫಲ್ಯದಿಂದ ತುಂಬಿಸುತ್ತದೆ.

Bible Reading Plan : Mark : 12 - 16
Prayer
1. ಯೇಸುನಾಮದಲ್ಲಿ ನನ್ನ ಮನೆಯನ್ನು ನನ್ನ ಕುಟುಂಬದ ಸದಸ್ಯರನ್ನು ಯೇಸುವಿನ ರಕ್ತದಲ್ಲಿ ಮರೆಮಾಚುತ್ತೇನೆ. (ಪ್ರಕಟಣೆ 12:11)

2. ನನ್ನ ಹಾಗೂ ನನ್ನ ಮನೆಯ ಮೇಲೆ ನನ್ನ ಮಕ್ಕಳ ಮೇಲೆ ನನ್ನ ಸಂಗಾತಿಯ ಮೇಲೆ ಹಿಡಿತ ಸಾಧಿಸುವ ಎಲ್ಲಾ ಸೈತಾನನ ಬಲಗಳನ್ನು ಯೇಸುನಾಮದಲ್ಲಿ ಮುರಿಯುತ್ತೇನೆ (ಲೂಕ 10:19)

3. ನನ್ನ ಮನಸ್ಸು, ನನ್ನ ಮಕ್ಕಳು ಮತ್ತು ನನ್ನ ಸಂಗಾತಿಗೆ ವಿರುದ್ಧವಾದ ಎಲ್ಲಾ ಸೈತಾನನ ದಾಳಿಗಳು ಯೇಸುನಾಮದಲ್ಲಿ ನಾಶವಾಗಿ ಹೋಗಲಿ (ಯೆಶಾಯ 54:17)

4. ನನ್ನ ಕುಟುಂಬವನ್ನು ನಾಶ ಪಡಿಸಲು ಯತ್ನಿಸುವ ಎಲ್ಲಾ ಬಲಗಳು ಯೇಸುನಾಮದಲ್ಲಿ ನಾಶವಾಗಿ ಹೋಗಲಿ(2ಕೊರಿಯಂತೆ 10:3-4)

5. ಕರ್ತನೇ ನನ್ನ ವೈವಾಹಿಕ ಜೀವಿತವನ್ನು ಸ್ವಸ್ಥ ಪಡಿಸು ಆಶೀರ್ವಧಿಸು. (ವಿವಾಹಿತರಿಗಾಗಿ)(ಮಾರ್ಕ್ 10:9).

6. ಪರಲೋಕದಲ್ಲಿ ನಿಶ್ಚಯವಾಗಿರುವ ನನ್ನ ಬಾಳಸಂಗಾತಿಯನ್ನು ಸೇರಲು ವಿರೋಧಿಸುವ ಯಾವುದೇ ಶಕ್ತಿಯಾದರೂ ಯೇಸುನಾಮದಲ್ಲಿ ನಾಶವಾಗಿಹೋಗಲಿ (ವಿವಾಹಕ್ಕಾಗಿ ಪ್ರಾರ್ಥಿಸುತ್ತಿರುವ ಅವಿವಾಹಿತರಿಗಾಗಿ)(ಆದಿಕಾಂಡ 2:18)

7. ಕರ್ತನೇ ನಿನ್ನ ದಯೆಯೂ ನನ್ನ ಮೇಲೆ ಸದಾ ನೆಲೆಗೊಂಡಿರಲಿ. ಯೇಸುನಾಮದಲ್ಲಿ ನಿನ್ನ ದಯೆಯು ನನ್ನ ವೈವಾಹಿಕ ಒಪ್ಪಂದದ ಮೇಲೇಯೂ ಆಶೀರ್ವಾದದ ಮೇಲೇಯೂ ನೆಲೆಗೊಂಡಿರಲಿ. (ಕೀರ್ತನೆ 102:13)

8. ವ್ಯಭಿಚಾರದ, ವಿಚ್ಚೇದನದ ದುಶ್ಚಟದ ದುರಾತ್ಮಗಳೆಲ್ಲವೂ ನನ್ನ ಜೀವಿತದಿಂದಲೂ ನನ್ನ ಕುಟುಂಬದಿಂದಲೂ ಯೇಸುನಾಮದಲ್ಲಿ ಕಿತ್ತೊಗೆಯಲ್ಪಡಲಿ.(ಇಬ್ರಿಯ 13:4)

9. ತಂದೆಯೇ, ಯೇಸುನಾಮದಲ್ಲಿ ನಿನ್ನ ಪ್ರೀತಿಯಲ್ಲಿಯೂ ಭಯದಲ್ಲಿಯೂ ಜ್ಞಾನದಲ್ಲಿಯೂ ಬೆಳೆಯುವಂತೆ ಸಹಾಯ ಮಾಡು. (2ಪೇತ್ರ 3:18).

10. ನನ್ನ ವೈವಾಹಿಕ ಜೀವಿತಕ್ಕೂ ನನ್ನ ಕುಟುಂಬಕ್ಕೂ ವಿರುದ್ಧವಾಗಿ ಮಾಡುವ ಎಲ್ಲಾ ಮಾಟ -ಮಂತ್ರ ಕಾರ್ಯಗಳನ್ನು ಯೇಸುನಾಮದಲ್ಲಿ ಪವಿತ್ರಾತ್ಮನ ಅಗ್ನಿಯು ಸುಟ್ಟು ಬೂದಿಮಾಡಲಿ (ಧರ್ಮೋಪದೇಶಕಾಂಡ 18:10).

11. ನನ್ನ ರಕ್ತಸಂಬಂಧಿಗಳಿಂದ ಉಂಟಾದ ಎಲ್ಲಾ ರೋಗಗಳು ವ್ಯಾದಿಗಳು ವಿಚ್ಛೇದನ ದುಶ್ಚಟ ವ್ಯಭಿಚಾರ ಮತ್ತು ವೈವಾಹಿಕ ಸಂಬಂಧದಲ್ಲಿನ ನೋವುಗಳಿಗೆ ಕಾರಣವಾದ ಎಲ್ಲಾ ನಕಾರಾತ್ಮಕ ನಮೂನೆಗಳು ಯೇಸುನಾಮದಲ್ಲಿ ನಾಶವಾಗಿ ಹೋಗಲಿ.(ಗಲಾತ್ಯ 3:13)

12. ದುಷ್ಟ ಸಂಬಂಧಿತ ಯಾವುದೇ ಕೌಟುಂಬಿಕ ಮಾದರಿಗಳಿಂದ ಯೇಸುನಾಮದಲ್ಲಿ ನಾನು ಸಂಪರ್ಕ ಕಡಿದು ಕೊಳ್ಳುತ್ತೇನೆ. (2ಕೊರಿಯಂತೆ 5:17)

13. ನಾನು ನನ್ನ ತಂದೆಯ ಮನೆಯಲ್ಲಿ ನಡೆಸಲ್ಪಡುತ್ತಿದ್ದ ಪಾರಂಪರ್ಯದಿಂದ ಬಂದ ಎಲ್ಲಾ ದುರಾತ್ಮ ಸಂಬಂಧಿತ ಒಡಂಬಡಿಕೆಗಳಿಂದ ಯೇಸುನಾಮದಲ್ಲಿ ಸಂಪರ್ಕ ವನ್ನು ಕಡಿದುಕೊಳ್ಳುತ್ತೇನೆ. (ಯೋಹಾನ 8:32)

Join our WhatsApp Channel


Most Read
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
● ಕರ್ತನ ಸೇವೆ ಮಾಡುವುದು ಎಂದರೇನು-I
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
● ಪುರುಷರು ಏಕೆ ಪತನಗೊಳ್ಳುವರು -6
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ಮಳೆಯಾಗುತ್ತಿದೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login