हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.
Daily Manna

ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.

Wednesday, 5th of February 2025
3 1 191
Categories : ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಇಸ್ರಾಯೇಲೇ, ನಾನು ನಿನಗೆ ಹೀಗೆ ಮಾಡುತ್ತೇನೆ. ನಾನು ನಿನಗೆ ಹೀಗೆ ಮಾಡುವುದರಿಂದ, ನೀನು ನಿನ್ನ ದೇವರನ್ನು ಎದುರುಗೊಳ್ಳಲು ಸಿದ್ಧಮಾಡಿಕೋ. (ಆಮೋಸ 4:12)

ಮದುವೆಯ ದಿನವು ದಂಪತಿಗಳಿಗೆ ಅತ್ಯಂತ ಸಂತೋಷದಾಯಕ ದಿನವಾಗಿದೆ. ಇನ್ನೂ ಮದುವೆಯಾಗದ, ಅದರಲ್ಲೂ ವಿಶೇಷವಾಗಿ ಸ್ತ್ರೀಯರು, ಎಲ್ಲರನ್ನೂ ಆಕರ್ಷಿಸುವ ಮತ್ತು ಎಲ್ಲರ ಗಮನದ ಕೇಂದ್ರಬಿಂದುವಾಗಿರುವ ವಿಶೇಷ ದಿನವನ್ನು ಎದುರುನೋಡುತ್ತಿರುತ್ತಾರೆ. ಪ್ರಾಯಶಃ  ಜೀವನದಲ್ಲಿ ನೂರಾರು ಜನರು ತಮ್ಮ ಮನೆಯ ಪುಟ್ಟ ಹುಡುಗಿಯ ಜೀವನದ ವಿಶೇಷ ಕ್ಷಣವನ್ನು ಅಲಂಕರಿಸಲು ನಗರದಾದ್ಯಂತ ಪ್ರಯಾಣಿಸುವ ಏಕೈಕ ದಿನ ಅದಾಗಿರುತ್ತದೆ.

ಒಮ್ಮೆ ತಮ್ಮ ಕುಟುಂಬದ ಮಗಳಾಗಿದ್ದವಳು ಈಗ  ಇನ್ನೊಬ್ಬ ವ್ಯಕ್ತಿಗೆ ಹೆಂಡತಿಯಾಗಲಿದ್ದಾಳೆ ಎನ್ನುವಂತದ್ದು ಯಾವಾಗಲೂ ವಿಶೇಷ ಕ್ಷಣವಾಗಿದೆ. ನೀವು ವಧುವಿನ ಕಡೆಯವರಾಗಿದ್ದರೆ ಅಥವಾ ಅವರ ಮದುವೆಯ ದಿನದಂದು ವಧುವಿನ ಹತ್ತಿರದಲ್ಲಿದ್ದರೆ, ನಿಮ್ಮ ಉಳಿದ ಜೀವನಕ್ಕೆ ವೇದಿಕೆಯಾಗಲಿರುವ ಆ ಒಂದು ವಿಶೇಷ ದಿನಕ್ಕೆ  ನೀವು ಎಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂಬುದನ್ನು ನೀವು ಬಹುಶಃ ಅರ್ಥಮಾಡಿಕೊಳ್ಳಬಹುದು.  
ಒಂದು ವಾರಕ್ಕೆ ಹಾಲ್  ಬುಕಿಂಗ್ ಮತ್ತು ಮದುವೆಗೆ ಚರ್ಚ್‌ನಲ್ಲಿ ದಿನಾಂಕವನ್ನು ನಿಗಧಿಪಡಿಸುವುದು  ನಂತರ ಆ ದಿನವು  ಅಂತಿಮವಾಗಿ ಬಂದೇ ಬಿಡುತ್ತದೆ  ವಧುವಿನ ಸಖಿಯರು  ವಧುವಿನ  ಜೊತೆಯಲ್ಲಿ ಸುತ್ತುವರೆಯುತ್ತಾರೆ , ಆ ದಿನದ ಅತ್ಯಂತ ಸುಂದರ ಸ್ತ್ರೀಯಾಗಿ ಕಾಣುವಂತೆ  ಅಲಂಕರಿಸಿಕೊಳ್ಳಲು ಆಕೆ ಈಗ  ಸಿದ್ಧಳಗಿದ್ದಾಳೆ. ಅವಳು ತನಗೆ  ಚೆನ್ನಾಗಿ ಒಪ್ಪುವ  ಮದುವೆಯ ಗೌನ್ ಮತ್ತು ಆಭರಣಗಳು ಮತ್ತು ಅದಕ್ಕೆ ತಕ್ಕಂತ  ಆರಾಮದಾಯಕ ಬೂಟುಗಳನ್ನು ಧರಿಸುತ್ತಾಳೆ. ಇಲ್ಲಿ ಕೆಲವೊಮ್ಮೆ ಕಿರೀಟದಂತೆ ಕಾಣುವ ರಾಜ ಮುಕುಟವು ಸೇರಿ  ಬರುತ್ತದೆ. ನಂತರ ಅವಳು ಮುಸುಕನ್ನು ಹೊದ್ದುಕೊಳ್ಳುತ್ತಾಳೆ . ಬ್ಯುಟಿಶಿಯನ್ ಆಕೆಯ ಅಂದವನ್ನು ಹೆಚ್ಚಿಸುವ  ಕೆಲಸವನ್ನು ಮಾಡುತ್ತಾಳೆ. ನಂತರ ಅವಳ ಕೈಗಳನ್ನು ಕೈಗವಸುಗಳಿಂದ ಮುಚ್ಚಲಾಗುತ್ತದೆ, ನಂತರ ಅವಳಿಗೆ  ಸರಿ ಹೊಂದಿಕೆಯಾಗುವ ಕೈಚೀಲವನ್ನು ನೀಡಲಾಗಿ  ರಾಯಧನದೊಂದಿಗೆ ಹೊರನಡೆಯುತ್ತಾಳೆ.ಒಬ್ಬ ವಧುವನ್ನು ಅವಳ ಮಹತ್ವಪೂರ್ಣ  ದಿನಕ್ಕಾಗಿ ಸಿದ್ಧಪಡಿಸಲು ನಾವು ಮಾಡಿದ ಪ್ರಯತ್ನ ಮತ್ತು ವಿವರಗಳನ್ನು ಇದುನಮಗೆ ತೋರಿಸುತ್ತದೆ. 

ಎಲ್ಲಾ ವಧುಗಳಂತೆ,  ಎಸ್ತೇರಳು ಕೂಡ ತನ್ನ ತಯಾರಿಯ ಕ್ಷಣವನ್ನು ಹೊಂದಿದ್ದಳು. ರಾಜನ ಮುಂದೆ ಕಾಣಿಸಿಕೊಳ್ಳುವುದು ಒಂದು ಬಾರಿಯ ಅವಕಾಶವಾಗಿದ್ದು, ನೀವು ಊಹಿಸಬಹುದಾದ ಎಲ್ಲಾ ವಿವರಗಳನ್ನು ಅದು ಪೂರೈಸಬೇಕಾಗುತ್ತದೆ. ರಾಜನು ಸಹ ಆ ಕನ್ಯೆಯರೆಲ್ಲಾ  ಅವನ ಮುಂದೆ ಕಾಣಿಸಿಕೊಳ್ಳುವ ಮೊದಲು ಅವರ ಸಿದ್ಧತೆಗಾಗಿ ನಿಬಂಧನೆಗಳನ್ನು ಮಾಡಿದನು." ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನ ಕೋಪವು ಶಾಂತವಾಗಿ ಅವನು ವಷ್ಟಿಯನ್ನೂ ಅವಳನ್ನೂ, ಅವಳ ವರ್ತನೆಯನ್ನೂ, ಅವಳಿಗೆ ವಿರೋಧವಾಗಿ ತಾನು ನೀಡಿದ ತೀರ್ಪನ್ನೂ ಜ್ಞಾಪಿಸಿಕೊಂಡನು.ಆಗ ಅರಸನ ಸೇವೆ ಮಾಡುವ ದಾಸರು ಅವನಿಗೆ, “ಅರಸನಿಗೋಸ್ಕರ ರೂಪವತಿಯಾದ ಕನ್ಯೆಯರನ್ನು ಹುಡುಕಲಿ. ರೂಪವತಿಯಾರಾದ ಸಮಸ್ತ ಕನ್ಯೆಯರು ರಾಜಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮನೆಗೆ, ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿಕಾರಿಗಳಾದ ಹೇಗೈ ಎಂಬವನ ವಶಕ್ಕೆ ಒಪ್ಪಿಸಲಿ. ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರಿಗಳನ್ನು ನೇಮಿಸಲಿ. ಹೇಗೈ ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಕೊಡಲಿ. ಅರಸನ ದೃಷ್ಟಿಗೆ ಮೆಚ್ಚಿಗೆಯಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ,” ಎಂದನು. ಆ ಮಾತು ಅರಸನಿಗೆ ಸರಿಕಂಡುಬಂದದ್ದರಿಂದ ಅದೇ ಪ್ರಕಾರ ಮಾಡಿದನು."(ಎಸ್ತೇರಳು 2:1-4)

ಹೌದು, ವಷ್ಟಿಯು ಸಿಂಹಾಸನವನ್ನು ಕಳೆದುಕೊಂಡಳು , ಆದರೆ ಈಗ ಯಾರು ಅಧಿಕಾರವನ್ನು ತೆಗೆದುಕೊಳ್ಳಬೇಕೋ  ಅವರು  ಸಿದ್ಧರಾಗಿರಬೇಕು. ಎಸ್ತರ್ ಳಂತೆ ನಾವೆಲ್ಲರೂ ಒಂದಲ್ಲ ಒಂದು ದಿನ ಮದಲಿಂಗನ  ಮುಂದೆ ನಿಲ್ಲಲು ತಯಾರಾಗಬೇಕು. ಸಭೆಯು  ಕ್ರಿಸ್ತನ ಮದಲಗಿತ್ತಿ  ಎಂದು ಬೈಬಲ್ ಹೇಳುತ್ತದೆ. ಮತ್ತು ಈ ವರನು ತನ್ನ ವಧುವನ್ನು ಆ ದೊಡ್ಡ ಅರಸನ  ಮುಂದೆ ನಿರ್ಮಲವಾಗಿ ಪ್ರಸ್ತುತಪಡಿಸಲು ಬಯಸುತ್ತಾನೆ. ಎಫೆಸ 5:25-27 ರಲ್ಲಿ ಸತ್ಯವೇದ ಹೇಳುವುದೇನೆಂದರೆ, "ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು.  ಅದನ್ನು ಕಳಂಕ ಸುಕ್ಕು ಮುಂತಾದ್ದೊಂದೂ ಇಲ್ಲದ ಕನ್ನಿಕೆಯೋ ಎಂಬಂತೆ ಪರಿಶುದ್ಧವೂ ನಿರ್ದೋಷವೂ ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಮಾಡಿದನು." 

ಈ ವಿಶೇಷ ದಿನಕ್ಕಾಗಿ ನೀವು ಎಷ್ಟು ಸಿದ್ಧರಾಗಿರುವಿರಿ? ನೀವು ಕ್ರಿಸ್ತನ ಮದಲಗಿತ್ತಿಯಾಗಿದ್ದೀರಿ ಎಂಬುದು  ನಿಮಗೆ ತಿಳಿದಿದೆಯೇ? ಇಸ್ರಾಯೇಲ್ಯರು ರಾಜನ ಮುಂದೆ ಹಾಜರಾಗಲು ಒಂದು ಕ್ಷಣವನ್ನು ಹೊಂದಿದ್ದರು ಹಾಗೆಯೇ ನೀವೂ ಸಹ  ಈ ಭೇಟಿಗೆ  ಸಿದ್ಧರಾಗಿರಬೇಕು. ವಿಮೋಚನಾಕಾಂಡ  19:10-11 ರಲ್ಲಿ ಬೈಬಲ್ ಹೇಳುವುದೇನೆಂದರೆ "ಮೋಶೆ ಜನರ ಮಾತುಗಳನ್ನು ಯೆಹೋವನಿಗೆ ಅರಿಕೆಮಾಡಲಾಗಿ ಯೆಹೋವನು ಅವನಿಗೆ ಹೇಳಿದ್ದೇನಂದರೆ - ನೀನು ಜನರ ಬಳಿಗೆ ಹೋಗಿ ಈ ಹೊತ್ತು ನಾಳೆ ಅವರನ್ನು ಪರಿಶುದ್ಧಗೊಳಿಸು;  ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಂಡು ಮೂರನೆಯ ದಿನದಲ್ಲಿ ಸಿದ್ಧರಾಗಿರಬೇಕು. ಮೂರನೆಯ ದಿನದಲ್ಲಿ ಯೆಹೋವನು ಸಮಸ್ತಜನರಿಗೂ ಪ್ರತ್ಯಕ್ಷನಾಗಿ ಸೀನಾಯಿ ಬೆಟ್ಟದ ಮೇಲಕ್ಕೆ ಇಳಿದುಬರುವನು."

ಪ್ರತಿಯೊಂದು ಕೊಳಕು ಮತ್ತು ಪಾಪದಿಂದ ತಮ್ಮನ್ನು ತಾವು ಪವಿತ್ರಗೊಳಿಸಿಕೊಳ್ಳುವುದೇ  ಪ್ರಮುಖ ಸಿದ್ಧತೆಯಾಗಿತ್ತು. ಯೇಸು ತನ್ನ ರಕ್ತವನ್ನು ಸುರಿಸಿದ್ದಾನೆ  ಆದ್ದರಿಂದ ನಾವು ಆ ವಿಶೇಷ ದಿನಕ್ಕಾಗಿ-ಕರ್ತನ ಮಹಾ ದಿನಕ್ಕಾಗಿ  ಪವಿತ್ರರಾಗಬಹುದು. ಮದಲಿಂಗನು  ತನ್ನ ವಧುವನ್ನು ಮನೆಗೆ ಕರೆದುಕೊಂಡು ಹೋಗಲು ಬರುವಂತೆಯೇ ಯೇಸು ನಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಬರಲಿದ್ದಾನೆ . ಆದರೆ ಪ್ರಶ್ನೆಯೆಂದರೆ, ಈ ವಿಶೇಷ ದಿನಕ್ಕಾಗಿ ನೀವು ಎಷ್ಟರ ಮಟ್ಟಿಗೆ  ಸಿದ್ಧರಾಗಿರುವಿರಿ? ನಿಮ್ಮ ಹೃದಯ ಮತ್ತು ಮನಸ್ಸನ್ನು ಪುನರ್ವಿಮರ್ಶಿಸಿಕೊಳ್ಳಲು ಮತ್ತು ಶುದ್ಧಪಡಿಸಿಕೊಳ್ಳಲು ಇದುವೇ  ಸಮಯವಾಗಿದೆ.

Bible Reading: Leviticus 10-12
Prayer
ತಂದೆಯೇ, ಇಂದು ನನಗಾಗಿ  ಕಳುಹಿಸಿ ಕೊಟ್ಟ ಈನಿನ್ನ  ಸತ್ಯ ವಾಕ್ಯಕ್ಕಾಗಿ  ಯೇಸುನಾಮದಲ್ಲಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ಇಂದು ನಿಮ್ಮ ಸನ್ನಿದಿಯಲ್ಲಿ ನನ್ನನ್ನು  ಪ್ರಸ್ತುತ ಪಡಿಸಿಕೊಳ್ಳುತ್ತೇನೆ ಆದ್ದರಿಂದ ನೀನೇ  ನನ್ನನ್ನು ಪವಿತ್ರಗೊಳಿಸಿ ಶುದ್ಧೀಕರಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ವಧುವು  ವರನ ಬರುವಿಕೆಗೆ ಸಿದ್ಧವಾಗುವಂತೆ ಯೇಸುನಾಮದಲ್ಲಿ  ಈಗ ನನ್ನನ್ನು ಪವಿತ್ರಗೊಳಿಸು. ಪವಿತ್ರಾತ್ಮನ ಸಹಾಯದಿಂದ ನಾನು ಇಂದಿನಿಂದ ದೋಷರಹಿತ ಜೀವನವನ್ನು ನಡೆಸಲು ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ  ಪ್ರಾರ್ಥಿಸುತ್ತೇನೆ. ಆಮೆನ್.


Join our WhatsApp Channel


Most Read
● ನಿಮ್ಮ ನಂಬಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ
● ನಂಬಿಕೆ ಎಂದರೇನು ?
● ನೆಪ ಹೇಳುವ ಕಲೆ
● ಗೌರವ ಮತ್ತು ಮೌಲ್ಯ
● ದೈವೀಕ ಅನುಕ್ರಮ -2
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login