हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಅಸಾಮಾನ್ಯ ಆತ್ಮಗಳು
Daily Manna

ಅಸಾಮಾನ್ಯ ಆತ್ಮಗಳು

Saturday, 22nd of March 2025
2 0 126
"ಶರೀರಭಾವದ ಕರ್ಮಗಳು ಪ್ರಸಿದ್ಧವಾಗಿಯೇ ಅವೆ; ಯಾವವಂದರೆ - ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತಣ ಇಂಥವುಗಳೇ. ಇವುಗಳ ವಿಷಯದಲ್ಲಿ - ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು ನಾನು ಹಿಂದೆ ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ. " (ಗಲಾತ್ಯ 5:19-21) 

ನಮ್ಮ ಶರೀರದ ಭಾವದ ಕರ್ಮಗಳು ಪೂರ್ಣವಾಗಿ ಪ್ರಕಟಗೊಳ್ಳಲು ಪ್ರಾರಂಭಿಸುವ ಕಡೆಯ ದಿನಗಳಲ್ಲಿ ನಾವು  ಇದ್ದೇವೆ ಎಂಬುದು ನಿಸ್ಸಂದೇಹ. ಸೈತಾನನು ಭೂಮಿಗೆ ವಿಭಿನ್ನ ಆತ್ಮಗಳನ್ನು ಬಿಡುಗಡೆ ಮಾಡುವ ಸಮಯದಲ್ಲಿ ನಾವಿದ್ದೇವೆ, ಆದ್ದರಿಂದ ವಿಶ್ವಾಸಿಗಳು ಸಹ ಈಗ ಬಹು ಜಾಗರೂಕರಾಗಿರಬೇಕು. ನಾವು ನಮ್ಮ ಹೃದಯಗಳನ್ನು ಕಾಪಾಡಿಕೊಳ್ಳಬೇಕಾದ ಮತ್ತು ಜಾಗರೂಕರಾಗಿರಬೇಕಾದ ಸಮಯವಿದಾಗಿದ್ದು  ತಪ್ಪಿದ್ದಲ್ಲಿ ನಾವು ಈ ವಿನಾಶಕಾರಿ ಶಕ್ತಿಗಳಿಗೆ ಬಲಿಯಾಗಬಹುದು. ಸತ್ಯವೇದವು ಈ ಆತ್ಮಗಳು ವಿಭಿನ್ನ ರೂಪಗಳಲ್ಲಿ ಪ್ರಕಟವಾಗುವ ಬಗ್ಗೆ ಮಾತನಾಡುತ್ತದೆ  ಆದ್ದರಿಂದ ನಾವು ಇವುಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕು.

 ಅಲ್ಲದೆ, ಕ್ರಿಸ್ತನು ಭೂಮಿಗೆ ಹಿಂದಿರುಗುವ ಮೊದಲು ಕಡೆಯ ದಿನಗಳಲ್ಲಿ ಪ್ರಸಿದ್ಧವಾಗಿರುವ ಪಾಪಗಳನ್ನು ಪ್ರಕಟಣೆ ಪುಸ್ತಕವು ಪಟ್ಟಿ ಮಾಡುತ್ತದೆ. ಉದಾಹರಣೆಗೆ, ಸತ್ಯವೇದದ ಪ್ರಕಟಣೆ 9:20-21 ರಲ್ಲಿ ಹೇಳುವುದೇನೆಂದರೆ, " ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ; ಅವರು ದೆವ್ವಗಳ ಪೂಜೆಯನ್ನೂ ಬಂಗಾರ ಬೆಳ್ಳಿ ತಾಮ್ರ ಕಲ್ಲು ಮರ ಇವೇ ಮುಂತಾದವುಗಳಿಂದ ಮಾಡಲ್ಪಟ್ಟು ನೋಡಲಾರದೆ ಕೇಳಲಾರದೆ ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ.  ಇದಲ್ಲದೆ ತಾವು ನಡಿಸುತ್ತಿದ್ದ ಕೊಲೆ ಮಾಟ ಜಾರತ್ವ ಕಳ್ಳತನ ಇವುಗಳೊಳಗೆ ಒಂದನ್ನೂ ಬಿಟ್ಟು ಮಾನಸಾಂತರ ಮಾಡಿಕೊಳ್ಳಲಿಲ್ಲ." ಎಂಬುದೇ.

ಈ ಆತ್ಮಗಳಲ್ಲಿ ಒಂದು ಮಾಟಮಂತ್ರ. ಅಂತ್ಯಕಾಲದಲ್ಲಿ ಜನರನ್ನು ನಿಯಂತ್ರಿಸುವ ಎಲ್ಲಾ ಆತ್ಮಗಳಲ್ಲಿ ಇದು ಬಹುಶಃ ಅತ್ಯಂತ ಬಲಿಷ್ಠವಾದ ಆತ್ಮವಾಗಿದೆ. ಮಾಟಮಂತ್ರವು ಅತೀಂದ್ರಿಯ ಅಥವಾ ಮಾಟಮಂತ್ರಕ್ಕೆ ಸಂಬಂಧಿಸಿದೆ ಎಂದು ನಾವು ಭಾವಿಸುತ್ತೇವೆ. ಆದಾಗ್ಯೂ, ಈ ಪದದ ಅರ್ಥವು ಹೆಚ್ಚು ಆಳವಾಗಿದೆ. "ಮಾಟಮಂತ್ರ" ಎಂಬ ಗ್ರೀಕ್ ಪದವು "ಫಾರ್ಮಾಕಿಯಾ" ಎಂಬ ಮೂಲದಿಂದ ಬಂದಿದೆ

"ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಕಾಣಿಸುವದಿಲ್ಲ. ವಧೂವರರ ಸ್ವರವು ಇನ್ನೆಂದಿಗೂ ಕೇಳಿಸುವದಿಲ್ಲ. ನಿನ್ನ ವರ್ತಕರು ಭೂವಿುಯ ಪ್ರಭುಗಳಾಗಿದ್ದರಲ್ಲವೇ. ನಿನ್ನ ಮಾಟದಿಂದ ಎಲ್ಲಾ ಜನಾಂಗದವರು ಮರುಳಾದರು." ಎಂದು  ಸತ್ಯವೇದದ ಪ್ರಕಟನೆ 18:23 ರಲ್ಲಿ ಹೇಳುತ್ತದೆ, ನಾವು ನಮ್ಮ ಇಂಗ್ಲಿಷ್ ಪದ ಫಾರ್ಮಸಿಯನ್ನು ಈ ಪದದಿಂದ ಪಡೆದುಕೊಂಡಿದ್ದೇವೆ. ಇದನ್ನು ಹೊಸ ಒಡಂಬಡಿಕೆಯಲ್ಲಿ ಐದು ಬಾರಿ ಬಳಸಲಾಗಿದೆ (ಗಲಾತ್ಯ 5:20; ಪ್ರಕಟನೆ 9:21; 18:23; 21:8; 22:15). ಕೆಲವೊಮ್ಮೆ ಇದನ್ನು "ಮಾಟಮಂತ್ರ" ಎಂದು ಮತ್ತು ಇತರ ಬಾರಿ "ಮಾಟ" ಎಂದು ಅನುವಾದಿಸಲಾಗಿದೆ.

ನನ್ನ ಆಪ್ತ ಪಾಸ್ಟರ್ ಸ್ನೇಹಿತರೊಬ್ಬರು  ಒಮ್ಮೆ ಇತರ ವ್ಯಕ್ತಿಗಳೊಂದಿಗೆ(ಇದು ಅವನು ರಕ್ಷಿಸಲ್ಪಡುವ ಮೊದಲು) ಪಾರ್ಟಿಯಲ್ಲಿದ್ದನು. ಅವರೆಲ್ಲರೂ ಕುಡಿದು ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದಾಗ, ಕೋಣೆಯಲ್ಲಿ ವಿಚಿತ್ರವಾದ, ಭಯಂಕರವಾಗಿ ಕಾಣುವ ಜೀವಿಯೊಂದು  ಚಲಿಸುತ್ತಿರುವುದನ್ನು ಅವನು ನೋಡಿದನು. ಅದು ದೆವ್ವ ಎಂದು ತಿಳಿದು ಅವನು ಕಿರುಚಿದನು. ಆಮೇಲೆ ಅವನು ಯೇಸು ಯೇಸು  ಎಂದು ಕೂಗ ತೊಡಗಿದನು, ಆಗ  ಆ ಜೀವಿ ಗಾಳಿಯಲ್ಲಿ ಕರಗಿಹೋಯಿತು. ಆಶ್ಚರ್ಯಕರ ಸಂಗತಿಯೆಂದರೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಅವನ ಎಲ್ಲಾ ಸ್ನೇಹಿತರು ಇದ್ದಕ್ಕಿದ್ದಂತೆ ಪ್ರಜ್ಞೆಗೆ ಬಂದರು. ಅವನು ಈ ಜೀವಿಯ ಬಗ್ಗೆ ಅವರಿಗೆ ಹೇಳಿದನು. ಅವರು ಸಹ ಈ ಜೀವಿಯನ್ನು ನೋಡಿದ್ದನ್ನು ಒಪ್ಪಿಕೊಂಡರು. ಇದು ವ್ಯಸನದ ದೆವ್ವ. ನಂತರ ಅವರೆಲ್ಲರೂ ರಕ್ಷಿಸಲ್ಪಟ್ಟರು.

ಇಂತಹ ಅಸಾಮಾನ್ಯ ಆತ್ಮಗಳ ಬಂಧನದಲ್ಲಿ ಎಷ್ಟು ಜನರು ಇಂದು ಸಿಲುಕಿಕೊಂಡಿದ್ದಾರೆ? ಅಂತಹ ಆತ್ಮಗಳು ನಮ್ಮನ್ನು ಆಕರ್ಷಿಸದಂತೆ ನಾವು ಜಾಗರೂಕರಾಗಿರಬೇಕು. ಮುಖ್ಯ ವಿಷಯವೆಂದರೆ ನಾವು ಅದಕ್ಕಾಗಿ ಯಾವಾಗಲೂ ದೇವರ ಆತ್ಮದಿಂದ ತುಂಬಿರಬೇಕು." ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ.ಆದರೆ ಪವಿತ್ರಾತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ ಕೀರ್ತನೆ ಹಾಡುತ್ತಾ ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಕ್ರಿಸ್ತನಿಗೆ ಭಯಪಡುವವರಾಗಿದ್ದು ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ". ಎಂದು  ಸತ್ಯವೇದದ ಎಫೆಸ 5:18-21  ಹೇಳುತ್ತದೆ, " 

ಯಾವಾಗಲೂ  ಸರಿಯಾದ ಜನರ  ಸಹವಾಸದೊಂದಿಗೆ  ಸುತ್ತುವರೆದಿರಿ. ಈ ಅಸಾಮಾನ್ಯ ಆತ್ಮಗಳನ್ನು ಜನರ ಮೂಲಕ  ರವಾನಿಸಬಲ್ಲ  ಸಂಗೀತಗಳು ಈಗ ನಮ್ಮ ಮಧ್ಯದಲ್ಲಿವೆ . ಅದಕ್ಕಾಗಿಯೇ ಸತ್ಯವೇದವು  ಕೀರ್ತನೆಗಳು ಮತ್ತು ಆತ್ಮೀಕ  ಹಾಡುಗಳನ್ನು ಹಾಡಿ ಎಂದು ಹೇಳುತ್ತದೆ ಇದರಿಂದ ನಿಮ್ಮ ಆತ್ಮೀಕ  ಮನುಷ್ಯನು ಯಾವಾಗಲೂ ದೇವರಲ್ಲಿ  ಜೀವಂತವಾಗಿರುತ್ತಾನೆ, ಇದರ ಮುಖೇನ ಆತನು  ಈ ಕಡೆಯ  ದಿನಗಳ ಆತ್ಮಗಳು ಪ್ರವೇಶಿಸದಂತೆ  ಬಾಗಿಲು ಮುಚ್ಚುತ್ತಾನೆ. 

Bible Reading: Judges 4-5
Prayer
ತಂದೆಯೇ, ಇಂದು ನೀನು ನನ್ನ ಹೃದಯದಲ್ಲಿ ಕೊಟ್ಟ ವಾಕ್ಯದ ಬೆಳಕಿಗಾಗಿ ಯೇಸುನಾಮದಲ್ಲಿ  ಸ್ತೋತ್ರ ಸಲ್ಲಿಸುತ್ತೇನೆ . ನನ್ನ ಹೃದಯದ ದ್ವಾರವನ್ನು ಸತ್ಯದಿಂದ ಕಾಪಾಡಲು ನೀನೇ  ನನಗೆ ಸಹಾಯ ಮಾಡುಬೇಕೆಂದು  ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಈ ಅಂತ್ಯಕಾಲದ ಬಿರುಗಾಳಿ ಮತ್ತು ಅಲೆಗಳಲ್ಲಿ  ನಾನು ಕೊಚ್ಚಿ ಹೋಗದಂತ ಸ್ಥಿರವಾದ ನಂಬಿಕೆಯನ್ನು ಅನುಗ್ರಹಿಸಬೇಕೆಂದು ಯೇಸುನಾಮದಲ್ಲಿ  ಪ್ರಾರ್ಥಿಸುತ್ತೇನೆ. ಆಮೆನ್.


Join our WhatsApp Channel


Most Read
● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಪುರುಷರು ಏಕೆ ಪತನಗೊಳ್ಳುವರು -1
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ಸಫಲತೆ ಎಂದರೇನು?
● ಅಪನಂಬಿಕೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login