हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ತಪ್ಪು ಆಲೋಚನೆಗಳು
Daily Manna

ತಪ್ಪು ಆಲೋಚನೆಗಳು

Tuesday, 1st of April 2025
2 1 146
Categories : ನಂಬಿಕೆಗಳನ್ನು(Beliefs) ರೂಪಾಂತರ(transformation)
"ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ; ಉಣ್ಣು, ಕುಡಿ, ಎಂದು ಹೇಳಿದರೂ ನಿನ್ನಲ್ಲಿ ಅವನಿಗೆ ಪ್ರೀತಿಯಿಲ್ಲ. (ಜ್ಞಾನೋಕ್ತಿ 23:7)

ದೇವರು ನಿಮಗಾಗಿ ಜೀವನದಲ್ಲಿ ಒಂದು ಸ್ಥಾನವನ್ನು ನಿರ್ಣಯಿಸಿದ್ದಾನೆ. ಆದರೂ ನೀವು ಇನ್ನೂ ಅಲ್ಲಿಗೆ ಏಕೆ ಸೇರಿಲ್ಲ? ಏಕೆಂದರೆ ನಿಮ್ಮನ್ನು ಅದರಿಂದ ಪ್ರತ್ಯೇಕಿಸುವ "ಗೋಡೆಗಳು" ಅಲ್ಲಿ ಇವೆ. ಆ ಗೋಡೆಗಳಲ್ಲಿ ಒಂದು ತಪ್ಪಾದ ಆಲೋಚನೆಗಳಾಗಿದ್ದು  ಅದು ಮಾನಸಿಕವಾದ  ಅಡೆತಡೆಗಳಿಗೆ ಕಾರಣವಾಗುತ್ತದೆ. ತಪ್ಪು ಆಲೋಚನೆಗಳನ್ನು ದೇವರ ಚಿತ್ತ, ಯೋಜನೆಗಳು ಮತ್ತು ನಿಮ್ಮ ಜೀವನದ ಉದ್ದೇಶಗಳೊಂದಿಗೆ ಹೊಂದಿಕೆಯಾಗದಂತ  ಆಲೋಚನೆಗಳು ಎಂದು ವ್ಯಾಖ್ಯಾನಿಸಲಾಗಿದೆ. 

ಒಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಏನು ಯೋಚಿಸುತ್ತಾನೆ ಎಂಬುದು ಅವನ ಬಾಯಿಂದ ಹೊರಡುವ ಮಾತುಗಳಿಗಿಂತಲೂ  ಮುಖ್ಯವಾಗಿರುತ್ತವೆ. ನಮ್ಮ ಮನಸ್ಸೇ  ನಮ್ಮ ಜೀವನವನ್ನು ರೂಪಿಸುತ್ತದೆ. ನಾವೀಗ ಇರುವ ಪ್ರಸ್ತುತ ಸ್ಥಿತಿಯು ನಮ್ಮ ಆಲೋಚನೆಗಳ ಫಲಿತವಾಗಿದೆ.
"ಆದರೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ." ಎಂದು  ಫಿಲೆಮೋನ 1:14  ನಲ್ಲಿ ದೇವರು ಹೇಳುತ್ತಾನೆ .ದೇವರು ನಿನ್ನ ಮನಸ್ಸಿನ ಸಮ್ಮತಿಯಿಲ್ಲದೆ ಏನನ್ನೂ ಮಾಡುವುದಿಲ್ಲ. ಹಾಗಾದರೆ, ನಿಮ್ಮ ಆಲೋಚನೆಗಳು ಯಾವುವು? 

"ಆದರೆ ಕಾಲೇಬನ ಜೊತೆಯಲ್ಲಿ ಹೋದವರು - ಆ ಜನರು ನಮಗಿಂತ ಬಲಿಷ್ಠರು; ಅವರ ಮೇಲೆ ಹೋಗುವದಕ್ಕೆ ನಮಗೆ ಶಕ್ತಿಸಾಲದು ಅಂದರು. ಅದಲ್ಲದೆ ಇವರು ತಾವು ಸಂಚರಿಸಿ ನೋಡಿದ ದೇಶದ ವಿಷಯವಾಗಿ ಇಸ್ರಾಯೇಲ್ಯರಿಗೆ ಅಶುಭಸಮಾಚಾರವನ್ನು ಹೇಳುವವರಾಗಿ - ನಾವು ಸಂಚರಿಸಿ ನೋಡಿದ ದೇಶವು ತನ್ನಲ್ಲಿ ವಾಸಿಸುವವರನ್ನು ನುಂಗಿಬಿಡುತ್ತದೆ; ಅದಲ್ಲದೆ ನಾವು ಅದರಲ್ಲಿ ನೋಡಿದ ಜನರೆಲ್ಲರೂ ಬಹಳ ಎತ್ತರವಾದವರು; ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಉನ್ನತಪುರುಷರನ್ನು ನೋಡಿದೆವು. ನಾವು ಅವರ ಮುಂದೆ ವಿುಡತೆಗಳಂತೆ ಇದ್ದೇವೆಂದು ತಿಳಿದುಕೊಂಡೆವು; ಅವರಿಗೂ ನಾವು ಹಾಗೆಯೇ ತೋರಿದೆವು ಅಂದರು." ಎಂದು ಸತ್ಯವೇದದ ಅರಣ್ಯಕಾಂಡದ  13:31-33 ವಾಕ್ಯ ಹೇಳುತ್ತದೆ.

ದೇವರು ಜನರಿಗೆ ತಾನು ಅವರಿಗಾಗಿ ಸಿದ್ಧಪಡಿಸಿದ್ದನ್ನು ಈಗಾಗಲೇ ಮುಂತಿಳಿಸಿದ್ದನು. ಆದರೆ ಹಿಂದಿರುಗಿ ಬಂದ ನಾಯಕರು ಮನಸ್ಸುಗಳು ವಾಗ್ದತ್ತ ದೇಶದಲ್ಲಿ ದೇವರು  ನೇಮಿಸಿರುವ ನಿಬಂಧನೆಗಳನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಅವರು ತಮ್ಮ ಮನಸ್ಸಿನಲ್ಲಿ ತಮ್ಮನ್ನು  ಮಿಡತೆಗಳಂತೆ ನೋಡಿಕೊಂಡರು ಎಂದು ಬೈಬಲ್ ಹೇಳುತ್ತದೆ. ಇವರು ಪೂರ್ಣವಾಗಿ ಬೆಳೆದ ಮನುಷ್ಯರಾಗಿದ್ದರೂ ಅವರ ಆಲೋಚನೆಗಳು ತಪ್ಪಾಗಿತ್ತು. ದೇವರು ಅವರು ತನ್ನ ಆಶೀರ್ವಾದಗಳ ಕುರಿತು ಆಲೋಚಿಸಬೇಕೆಂದು ಬಯಸಿದ್ದನು, ಆದರೂ ಅವರು ತಮ್ಮನ್ನು ತಾವು ಅನರ್ಹರೆಂದೇ  ಭಾವಿಸುತ್ತಿದ್ದರು. ದೇವರು ನಿಮಗೆ ಎಷ್ಟು ಬಾರಿ ಒಂದು ಮಹತ್ತರವಾದದನ್ನು ತೋರಿಸಿದ್ದಾನೆ, ಆದರೆ ನಿಮ್ಮ ಮನಸ್ಸು ಸಹ ಬಹುಶಃ ಅದು ಬೇರೆಯವರಿದ್ದಾಗಿರಬಹುದು ಎಂದು ಹೇಳಿರಬಹುದು? "ನಾನು ದೊಡ್ಡ ಶ್ರೀಮಂತನಾಗಲು ಸಾಧ್ಯವಿಲ್ಲವೇನೋ? ನಾನು ಅಂತಹ ಸ್ಥಾನಕ್ಕೆ ಅರ್ಹನಲ್ಲವೇನೋ? ಇವು ನಮ್ಮ ಜೀವನಕ್ಕಾಗಿ ದೇವರು ಇಟ್ಟಿರುವ ಆಶೀರ್ವಾದಕ್ಕಿಂತ ನಮ್ಮನ್ನು ಕೆಳಗಿಡುವ ಕೆಲವು ತಪ್ಪು ಆಲೋಚನೆಗಳಾಗಿವೆ.

ನಾವು ಇಹಾಲೋಕಾನುಸಾರ ನಡೆಯದೇ  ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಬೇಕು  ಎಂಬ ರೋಮನ್ನರು 12:2 ರಲ್ಲಿ ಅಪೊಸ್ತಲ ಪೌಲನು ಬರೆದವಾಕ್ಯ ನಮಗೆ ನೆನಪಿಸುವುದು ಸಹ ಇದನ್ನೇ. ತಪ್ಪು ಆಲೋಚನೆಗಳು  ದೇವರ ಸತ್ಯವನ್ನು ನೋಡುವುದನ್ನು ಮತ್ತು ಆತನ ಆಶೀರ್ವಾದಗಳನ್ನು ಅನುಭವಿಸುವುದನ್ನು ತಡೆಯುವಂತವುಗಳಾಗಿವೆ . ಕ್ರಿಸ್ತ ಯೇಸುವಿನ ಪುನರುತ್ಥಾನದ ನಂತರ ಶಿಷ್ಯರು ಒಂದುಕಡೆ ಕೂಡಿ ಬಂದಾಗ ಅಲ್ಲಿ " ಬಾಗಿಲುಗಳು ಮುಚ್ಚಲ್ಪಟ್ಟಿದ್ದರೂ " ಎಂಬ ವಾಸ್ತವದ ಹೊರತಾಗಿಯೂ ಯೇಸು ಅವರಿದ್ದ ಕೋಣೆಗೆ ಪ್ರವೇಶಿಸಿದನು (ಯೋಹಾನ 20:19-31 ನೋಡಿ).
ಪುನರುತ್ಥಾನಗೊಂಡ ಕ್ರಿಸ್ತನಿಗೆ ಗೋಡೆಗಳು ತಡೆಗೋಡೆಯಾಗಲಿಲ್ಲ. ನಮ್ಮನ್ನು ತಡೆಹಿಡಿಯುತ್ತಿರುವ , ನಿರ್ಬಂಧಿಸುತ್ತಿರುವ  ಅಥವಾ ಹೊರಗಿಡುತ್ತಿರುವ ದೈಹಿಕ ಅಥವಾ ಮಾನಸಿಕ - ಯಾವುದೇ ಗೋಡೆಗಲಾಗಲೀ ."ನನ್ನ ದೇವರ ಸಹಾಯದಿಂದ, ನಾನು ಯಾವುದೇ ಪ್ರಾಕಾರವನ್ನು ಹಾರಬಲ್ಲೆನು " ಎಂದು ಅರಸನಾದ ದಾವೀದನು ಹೇಳಿದಂತೆ ಹೇಳುತ್ತೇನೆ  (II ಸಮುವೇಲ 22:30 ).

ಬಳಿಕ ಕಾಲೇಬನು ಯಹೋಶುವನು  ಆ ಇಸ್ರಾಯೆಲ್ಯಾರ ಬಳಿಗೆ ಬಂದು ಆ ದೇಶವು ಚೆನ್ನಾಗಿದೆ ದೇವರು ಅದನ್ನು ನಮ್ಮ ವಶಕ್ಕೆ ಕೊಡುವನು ನಾವು ಅವರನ್ನು ನುಂಗಿ ಪುಷ್ಟಿಯಗುವೆವು ಎಂದು ಹೇಳಿದರು. ಇದುವೇ  ನಮಗೆ ಇರಬೇಕಾದ ಮನಸ್ಥಿತಿಯಾಗಿದೆ. ನಾವು ಭೂಮಿಯನ್ನೇ  ಸ್ವಾಧೀನಪಡಿಸಿಕೊಳ್ಳಲು ಸಮರ್ಥರಾಗಿದ್ದೇವೆ ಎಂದು ಹೇಳುವ ಸರಿಯಾದ ಚಿಂತನೆಯನ್ನು ನಾವು ಹೊಂದಿರಬೇಕು. ನಾವು ದೇವರ ಆಶೀರ್ವಾದಗಳನ್ನು ವ್ಯಕ್ತಪಡಿಸಲು ಸಮರ್ಥರಾಗಿದ್ದೇವೆ. ಮತ್ತು ಅದನ್ನು ವಿರೋಧಿಸುವ ಪ್ರತಿಯೊಂದು ನಕಾರಾತ್ಮಕ ಕಲ್ಪನೆಯನ್ನು ಕೆಡವುವ ಜವಾಬ್ದಾರಿ ನಮಗಿದೆ."ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು  ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಶಿಕ್ಷೆ ಮಾಡುವದಕ್ಕೆ ಸಿದ್ಧರಾಗಿದ್ದೇವೆ." 2ಕೊರಿಂಥ 10:5-6.

ದೇವರ ವಾಕ್ಯದೊಂದಿಗೆ ಹೊಂದಾಣಿಕೆಯಾಗದ  ಪ್ರತಿಯೊಂದು ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಬಿಸಾಡಿ . ಆತನ ವಾಕ್ಯವು ನಿಮ್ಮಲ್ಲಿ ಸಮೃದ್ಧವಾಗಿ ವಾಸಿಸಲಿ. ವಾಗ್ದತ್ತ ಭೂಮಿಯ ಬಗ್ಗೆ ತಪ್ಪಾಗಿ ಯೋಚಿಸಿದ ಜನರು ಅದರೊಳಗೆ ಪ್ರವೇಶಿಸಲಿಲ್ಲ. ಆದ್ದರಿಂದ, ನಿಮ್ಮ ಮನಸ್ಸನ್ನು ದೇವರ ವಾಕ್ಯದಿಂದ ಸುತ್ತಲ್ಪಟ್ಟು ಮತ್ತು ಲೇಪಿಸಲ್ಪಟ್ಟಿರಲಿ. ದೇವರು ನಿಮಗೆ ಸಾಧ್ಯ ಎಂದು ಹೇಳಿದರೆ, ನಿಮ್ಮ ಮನಸ್ಸು ಅದೇ ರೀತಿ ಯೋಚಿಸಲಿ, ಆಗ ನೀವು ಅದೇ ಆಗುತ್ತೀರಿ. 

Bible Reading: 1 Samuel 1-3
Prayer
ತಂದೆಯೇ, ನನ್ನ ಜೀವನದಲ್ಲಿ ನೀನು ತೋರಿಸಿದಂತ  ನಿನ್ನ ಎಲ್ಲಾ ಒಳ್ಳೆಯತನಕ್ಕೆ ನಿನಗೆ ಸ್ತೋತ್ರ. ನಾನು ಯಾವಾಗಲೂ ಸರಿಯಾಗಿಯೇ ಯೋಚಿಸುವಂತೆ  ನೀನು ಸಹಾಯ ಮಾಡಬೇಕೆಂದು  ಪ್ರಾರ್ಥಿಸುತ್ತೇನೆ. ನನ್ನ ಮನಸ್ಸನ್ನು ನಿನ್ನ ವಾಕ್ಯಕ್ಕೆ ಒಪ್ಪಿಸಿ ಕೊಟ್ಟು  ನಿನ್ನ ವಾಕ್ಯದಲ್ಲಿ ನೀನು ವಾಗ್ದಾನ ಮಾಡಿದಂತೆ ನನ್ನ ಜೀವನವು ನಿನ್ನ  ಆಶೀರ್ವಾದಗಳನ್ನು ಆನಂದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಜೀವನವು ನಿಮ್ಮ ಮಹಿಮೆಯನ್ನು ಸಂಪೂರ್ಣವಾಗಿ ಪ್ರಕಟಿಸಬೇಕೆಂದು ಯೇಸುನಾಮದಲ್ಲಿ  ಆದೇಶಿಸುತ್ತೇನೆ. ಆಮೆನ್.


Join our WhatsApp Channel


Most Read
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
● ದೈತ್ಯರ ಜನಾಂಗ
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದ್ವಾರ ಪಾಲಕರು / ಕೋವರ ಕಾಯುವವರು
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login