हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
Daily Manna

ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.

Saturday, 19th of April 2025
3 1 70
Categories : ನಂಬಿಕೆ (Faith) ಬಿಡುಗಡೆ (Deliverance)
ಕ್ರೈಸ್ತರಾದ ನಾವೆಲ್ಲರೂ ದೇವರು ನಮಗೆ ವಾಗ್ದಾನ ಮಾಡಿದ ಆಶೀರ್ವಾದಗಳನ್ನು ಅನುಭವಿಸಲು ಬಯಸುವವರಾಗಿದ್ದೇವೆ. ಆದಾಗ್ಯೂ, ಸತ್ಯವೆಂದರೆ ಆ ಆಶೀರ್ವಾದಗಳನ್ನು ಸಂಪೂರ್ಣವಾಗಿ ಆನಂದಿಸಲು ಆಗಾಗ್ಗೆ  ಕೆಲವು ಕೋಟೆಗಳನ್ನು ನಿಭಾಯಿಸಬೇಕಾಗುತ್ತದೆ. ಕೆಲವು ಹೊಸ ಕ್ರೈಸ್ತರು ತಮ್ಮ ಜೀವನದಲ್ಲಿ ಕಿರುಕುಳ, ಆತ್ಮೀಕ ಯುದ್ಧಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಲೇ ಇರುವಾಗ ಭ್ರಮನಿರಸನಗೊಳ್ಳಬಹುದು. 

"ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; ತಮಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು ಬಳಿಕ ಆ ವಾಕ್ಯದ ನಿವಿುತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬೀಜಬಿದ್ದ ಬಂಡೆಯ ನೆಲವಾಗಿರುವವರು". (ಮಾರ್ಕ್ 4:16-17)

 ಆಶೀರ್ವಾದಗಳಿಗೆ ಮುಂಚಿತವಾಗಿ ಯುದ್ಧಗಳು ಹೆಚ್ಚಾಗಿ ನಡೆಯುತ್ತವೆ ಎಂಬುದು ಅವರು  ತಿಳಿದಿರುವುದಿಲ್ಲ. ಯೆಹೋಶುವ 1:3 ರಲ್ಲಿ, ದೇವರು ಇಸ್ರಾಯೇಲ್ಯರಿಗೆ ಅವರು ಕಾಲಿಡುವ ಪ್ರತಿಯೊಂದು ಸ್ಥಳವನ್ನು ಅವರಿಗೆ ನೀಡುವುದಾಗಿ ವಾಗ್ದಾನ ಮಾಡಿದನು. ಆದಾಗ್ಯೂ, ಈ ವಾಗ್ದಾನವು ಅವರ ವಿಧೇಯತೆ ಮತ್ತು ಭೂಮಿಯಲ್ಲಿ ವಾಸಿಸುತ್ತಿದ್ದ ಶತ್ರು ರಾಷ್ಟ್ರಗಳನ್ನು ಓಡಿಸುವ ಇಚ್ಛೆಯ ಮೇಲೆ ಷರತ್ತುಬದ್ಧವಾಗಿತ್ತು. ಅರಣ್ಯಕಾಂಡ 33:55 ರಲ್ಲಿ,  ಅವರು ಈ ಜನಾಂಗಗಳನ್ನು ಓಡಿಸದಿದ್ದರೆ, ಅವರು ಯಾರನ್ನು ಉಳಿಯಲು ಬಿಡುತ್ತಾರೋ ಅವರೆ  ಇವರಿಗೆ ಪಕ್ಕೆಲುಬುಗಳಲ್ಲಿ ಕಿರಿಕಿರಿಯುಂಟು ಮಾಡುವವರೂ ಮಗ್ಗುಲ ಮುಳ್ಳುಗಳೂ ಆಗುತ್ತಾರೆ ಎಂದು ದೇವರು ಇಸ್ರಾಯೇಲ್ಯರಿಗೆ ಎಚ್ಚರಿಕೆ ನೀಡಿದ್ದನು,

ಅದೇ ರೀತಿಯಲ್ಲಿ  ನಮ್ಮ ಸ್ವಂತ ಜೀವನದಲ್ಲಿಯೂ , ದೇವರು ನಮಗೆ ವಾಗ್ದಾನ ಮಾಡಿದ ಆಶೀರ್ವಾದಗಳನ್ನು ನಾವು ಸಂಪೂರ್ಣವಾಗಿ ಅನುಭವಿಸಬೇಕಾದರೆ, ನಾವು ನಿಭಾಯಿಸಬೇಕಾದ ಕೆಲವು ಆತ್ಮೀಕ ಕೋಟೆಗಳಿವೆ. ಈ ಕೋಟೆಗಳು ವ್ಯಸನಗಳು, ನಕಾರಾತ್ಮಕ ಚಿಂತನೆಯ ಮಾದರಿಗಳು, ಭಯ ಅಥವಾ ಅನಾರೋಗ್ಯಕರ ಸಂಬಂಧಗಳಂತಹ ಹಲವು ವಿಭಿನ್ನ ರೂಪಗಳನ್ನು ತೆಗೆದುಕೊಳ್ಳಬಹುದು. ಕೋಟೆ ಯಾವುದೇ ಇರಲಿ, ನಾವು ಅದನ್ನು ಗುರುತಿಸಿ ಅದನ್ನು ಜಯಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾದ್ದು ಬಹು ಮುಖ್ಯ.  ನಾವು ಹೋರಾಡುವ ಆಯುಧಗಳು ಲೋಕದ ಆಯುಧಗಳಲ್ಲ ಬದಲಾಗಿ, ಅವುಗಳಿಗೆ ಕೋಟೆಗಳನ್ನು ಕೆಡವುವಂತ ದೈವಿಕ ಶಕ್ತಿ ಇದೆ 2 ಕೊರಿಂಥ 10:4 ಎಂದು ಹೇಳುತ್ತದೆ

ಈ ಕೋಟೆಗಳ ವಿರುದ್ಧದ ಯುದ್ಧದಲ್ಲಿ ನಮಗಿರುವ ಶ್ರೇಷ್ಠ ಆಯುಧವೆಂದರೆ ಪ್ರಾರ್ಥನೆ ಮತ್ತು ದೇವರ ವಾಕ್ಯ. ನಾವು ಪ್ರಾರ್ಥನೆಯಲ್ಲಿ ಮತ್ತು ದೇವರ ವಾಕ್ಯವನ್ನು ಓದುವಲ್ಲಿ ಸಮಯವನ್ನು ಕಳೆಯುವಾಗ, ನಮ್ಮ ಜೀವನದಲ್ಲಿ ಕೋಟೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ನಮಗೆ ಸಾಧ್ಯವಾಗುತ್ತದೆ. 

ಕ್ರೈಸ್ತರಾದ ನಾವು, ಮೊದಲು ನಮ್ಮ ಜೀವನದಲ್ಲಿ ದೇವರ ವಾಗ್ದಾನಗಳು ಫಲಪ್ರದವಾಗುವುದನ್ನು ತಡೆಯಲು ಪ್ರಯತ್ನಿಸುವ ಒಬ್ಬ ಎದುರಾಳಿ ನಮಗಿದ್ದಾನೆ ಎಂದು ಗುರುತಿಸಬೇಕು. ಈ ವಾಗ್ದಾನಗಳ ನೆರವೇರಿಕೆಗಾಗಿ ಕಾಯುವ ಸಮಯದಲ್ಲಿ, ನಾವು ಧೈರ್ಯ ಕಳೆದುಕೊಳ್ಳಬಾರದು. ಬದಲಾಗಿ, ಶತ್ರುವಿನ ತಂತ್ರಗಳ ವಿರುದ್ಧ ದೇವರ ವಾಕ್ಯದ ಸತ್ಯವನ್ನು ಚಲಾಯಿಸುವ ಮೂಲಕ ನಾವು ಆತ್ಮೀಕ ಯುದ್ಧದಲ್ಲಿ ತೊಡಗಬೇಕು. ನಾವು ಎದುರಿಸುವ ಪ್ರತಿಯೊಂದು ಯುದ್ಧವು ಅಂತಿಮವಾಗಿ ಆಶೀರ್ವಾದಕ್ಕೆ ಕಾರಣವಾಗುತ್ತದೆ ಎಂದು ನಾವು ನಂಬಬಹುದು. "ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮುಂಚೆ ಉಂಟಾದ ಪ್ರವಾದನೆಗಳನ್ನು ನಾನು ನೆನಸಿ - ನೀನು ಅವುಗಳಿಂದ ಧೈರ್ಯಗೊಂಡು ಕ್ರೈಸ್ತರ ದಿವ್ಯಯುದ್ಧವನ್ನು ನಡಿಸಬೇಕೆಂದು ನಿನಗೆ ಆಜ್ಞಾಪನೆಮಾಡುತ್ತೇನೆ. ಎಂದು ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆಯುತ್ತಾನೆ.(1 ತಿಮೊಥೆಯ 1:18)

ಆತ್ಮೀಕ  ಯುದ್ಧಗಳು ದೌರ್ಬಲ್ಯ ಅಥವಾ ನಂಬಿಕೆಯ ಕೊರತೆಯ ಸಂಕೇತವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ವಾಸ್ತವವಾಗಿ, ಅವು ನಾವು ನಮ್ಮ ನಂಬಿಕೆಯಲ್ಲಿ ಬೆಳೆಯುತ್ತಿದ್ದೇವೆ ಮತ್ತು ಪಕ್ವವಾಗುತ್ತಿದ್ದೇವೆ ಎಂಬುದರ ಸಂಕೇತವಾಗಿರಬಹುದು. ನಮ್ಮ ಜೀವನದಲ್ಲಿ ಎದುರಾಗುವ  ಭದ್ರಕೋಟೆಗಳನ್ನು ನಾವು ಜಯಿಸಿದಾಗ, ನಮ್ಮ ದಾರಿಯಲ್ಲಿ ಬರಬಹುದಾದ ಸವಾಲುಗಳನ್ನು ನಿಭಾಯಿಸಲು ನಾವು ಮತ್ತಷ್ಟು ಬಲಶಾಲಿಯಾಗುತ್ತೇವೆ ಮತ್ತು ಇನ್ನೂ ಹೆಚ್ಚಾಗಿ ಸಜ್ಜಾಗುತ್ತೇವೆ. 

ಯಾಕೋಬ 1:2-4 ರಲ್ಲಿ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.ಎಂದು ಹೇಳುವುದನ್ನು ನೋಡುತ್ತೇವೆ. ನಾವು ಎದುರಿಸುವ ಪರೀಕ್ಷೆಗಳು ಮತ್ತು ಯುದ್ಧಗಳ ಮೂಲಕ, ನಾವು ಬೆಳೆಯಬಹುದು ಮತ್ತು ಕ್ರಿಸ್ತನಂತೆ ಆಗಬಹುದು. ಆದ್ದರಿಂದ, ನಮ್ಮ ಜೀವನದಲ್ಲಿ ನಾವು ಆತ್ಮೀಕ ಹೋರಾಟಗಳು ಮತ್ತು ಭದ್ರಕೋಟೆಗಳನ್ನು ಎದುರಿಸುವಾಗ ನಾವು ನಿರುತ್ಸಾಹಗೊಳ್ಳಬಾರದು. ಬದಲಾಗಿ, ನಾವು ಭಗವಂತನಲ್ಲಿ ನಂಬಿಕೆ ಇಡೋಣ ಮತ್ತು ಅವುಗಳನ್ನು ಜಯಿಸಲು ಆತನ ಬಲವನ್ನು ಅವಲಂಬಿಸೋಣ. ನಾವು ಹಾಗೆ ಮಾಡುವಾಗ, ವಾಗ್ದತ್ತ ದೇಶದಲ್ಲಿ ದೇವರು ನಮಗೆ ವಾಗ್ದಾನ ಮಾಡಿದ ಆಶೀರ್ವಾದಗಳನ್ನು ನಾವು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗುತ್ತದೆ.

"ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ. (ಯೆಹೋಶುವ 1:9) 

Bible Reading: 2 Samuel 19
Prayer
ತಂದೆಯೇ, ಶತ್ರುಗಳ ತಂತ್ರಗಳ ವಿರುದ್ಧ ನಾವು ಆತ್ಮೀಕ ಯುದ್ಧದಲ್ಲಿ ತೊಡಗಿರುವಾಗ ನಿನ್ನ ಸತ್ಯದಲ್ಲಿ ದೃಢವಾಗಿ ನಿಲ್ಲಲು ನಮಗೆ ಯೇಸುನಾಮದಲ್ಲಿ  ಸಹಾಯ ಮಾಡು. ನಿನ್ನ ಶಕ್ತಿಯಿಂದ ನಮ್ಮನ್ನು ಬಲಪಡಿಸು ಮತ್ತು ನೀನು ವಾಗ್ದಾನ ಮಾಡಿದ ಆಶೀರ್ವಾದಗಳಿಗೆ ನಮ್ಮನ್ನು ಯೇಸುನಾಮದಲ್ಲಿ ನಡೆಸು ಆಮೆನ್.


Join our WhatsApp Channel


Most Read
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ಸೆರೆಯಲ್ಲಿ ದೇವರ ಸ್ತೋತ್ರ
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ನಿಮ್ಮ ಗತಿಯನ್ನು ಬದಲಾಯಿಸಿ
● ಕನಸುಗಳ ಕೊಲೆಪಾತಕರು
● ಕೃಪೆಯ ಉಡುಗೊರೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login