हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಮನ್ನಾ, ಕಲ್ಲಿನ ಹಲಗೆಗಳು ಮತ್ತು ಆರೋನನ ಕೋಲು
Daily Manna

ಮನ್ನಾ, ಕಲ್ಲಿನ ಹಲಗೆಗಳು ಮತ್ತು ಆರೋನನ ಕೋಲು

Sunday, 27th of April 2025
2 0 113
Categories : ಆತ್ಮನ ಫಲ (Fruit of the Spirit) ರೂಪಾಂತರ(transformation)
"ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದ ತಗಡನ್ನು ಮಡಾಯಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು; ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆ ಬರೆದಿದ್ದ ಕಲ್ಲಿನ ಹಲಿಗೆಗಳೂ ಇದ್ದವು" (ಇಬ್ರಿಯ 9:4) 

ಅಪೊಸ್ತಲ ಪೌಲನ ಪ್ರಕಾರ, ಪವಿತ್ರ ಒಡಂಬಡಿಕೆಯ ಮಂಜೂಷದೊಳಗೆ ಮೂರು ಮಹತ್ವದ ವಸ್ತುಗಳನ್ನು ಸಂರಕ್ಷಿಸಿಡಲಾಗಿತ್ತು. ಈ ವಸ್ತುಗಳಲ್ಲಿ ಮನ್ನಾವನ್ನು ಒಳಗೊಂಡಿರುವ ಚಿನ್ನದ ಪಾತ್ರೆ, ಧರ್ಮಶಾಸ್ತ್ದ ಕಲ್ಲಿನ  ಹಲಗೆಗಳು ಮತ್ತು ಆರೋನನ ಕೋಲು ಇತ್ತು . ಈ ವಸ್ತುಗಳನ್ನು ಅತೀ ಪವಿತ್ರ ಸ್ಥಳವಾದ  ಮೂರನೇ ಕೋಣೆಯಲ್ಲಿ ಕಾಣಬಹುದಿತ್ತು. 

ಅರಣ್ಯಕಾಂಡ 11:6–9 ರಲ್ಲಿ ವಿವರಿಸಿದಂತೆ, ಪರಲೋಕದಿಂದ  ಕಳುಹಿಸಲಾದ ಅದ್ಭುತವಾದ ರೊಟ್ಟಿಯಾದ ಮನ್ನಾವು, ಇಸ್ರಾಯೇಲ್ಯರು ಅರಣ್ಯದಲ್ಲಿ ತಮ್ಮ  ನಲವತ್ತು ವರ್ಷಗಳ ಕಠಿಣ ಪ್ರಯಾಣದ ಸಮಯದಲ್ಲಿ ಅವಲಂಬಿಸಿದ್ದ ಪೋಷಣೆಯಾಗಿತ್ತು. ಈ ದೈವಿಕ ಆಹಾರವು ಇಸ್ರಾಯೇಲ್ಯರನ್ನು ಪೋಷಿಸಿ ದೇವರ ಒದಗಿಸುವಿಕೆ ಮತ್ತು ತಾನು ಆದುಕೊಂಡ ಜನರಿಗೆ ಆತನು ತೋರುವ ಕಾಳಜಿಯ ನಿರಂತರ ಜ್ಞಾಪನೆಯಾಗಿ ಕಾರ್ಯನಿರ್ವಹಿಸಿತು. 

ಮಂಜೂಷವು ಸ್ವತಃ ಕ್ರಿಸ್ತನ ಪರಿಪೂರ್ಣ ಚಿತ್ರಣವಾಗಿದೆ.  ಯೇಸು ಕ್ರಿಸ್ತನನ್ನು ನಮ್ಮ ಕರ್ತನು ಮತ್ತು ರಕ್ಷಕನಾಗಿ ನಾವು ಸ್ವೀಕರಿಸಿದಾಗ, ನಾವು ಮನ್ನಾ ವನ್ನು, ಧರ್ಮಶಾಸ್ತ್ರ ವನ್ನು  ಮತ್ತು ಕೋಲನ್ನೂ  ಸಹ ಪಡೆಯಬಹುದು. ಮನ್ನವು ಸ್ವರ್ಗದಿಂದ ಬಂದ ರೊಟ್ಟಿಯಾಗಿತ್ತು (ವಿಮೋಚನಕಾಂಡ 16:4), ಮತ್ತು ಯೇಸು ಪರಲೋಕದಿಂದ ಇಳಿದು ಬಂದ ರೊಟ್ಟಿಯಾಗಿದ್ದು  ಪರಲೋಕದ ಮನ್ನವಾಗಿದ್ದನು (ಯೋಹಾನ 6:32-35).

ಆರಂಭದಲ್ಲಿ ಜೀವರಹಿತವಾಗಿದ್ದ  ಮರದ ಕೊಂಬೆಯಾಗಿದ್ದ ಆರೋನನ ಕೋಲು, ಅರಣ್ಯಕಾಂಡ 17:7–9 ರಲ್ಲಿ ವಿವರಿಸಿದಂತೆ,ಆ ಕೋಲು ಚಿಗುರಿ, ಮೊಗ್ಗೆ ಬಿಟ್ಟು ಹೂವರಳಿ ಬಾದಾಮಿ ಹಣ್ಣುಗಳನ್ನು ಫಲಿಸುವ  ಕೋಲಾಗಿ ರೂಪಾಂತರಗೊಂಡಿತು. ಈ ಅದ್ಭುತ ಚಿಹ್ನೆಯು ಇಸ್ರೇಲೀಯರಿಗೆ ಆರೋನನು ನಿಜವಾಗಿಯೂ ದೇವರಿಂದ  ನೇಮಕಗೊಂಡ ಯಾಜಕನೆಂದು ಪ್ರದರ್ಶಿಸಿ ಅನಿಶ್ಚಿತತೆ ಮತ್ತು ವಿವಾದದ ಸಮಯದಲ್ಲಿ ಜನರಲ್ಲಿ ಅವನ ಅಧಿಕಾರ ಮತ್ತು ನಾಯಕತ್ವವನ್ನು ಧೃಡಪಡಿಸಿತು. 

ನಾವು ಫಲವನ್ನು ಮತ್ತು ಸಮೃದ್ಧಿಯಾದ ಫಲಗಳನ್ನು ನೀಡಬೇಕಾದರೆ ದೇವರ ಸಾನಿಧ್ಯಕ್ಕೆ ಸಂಪರ್ಕದಲ್ಲಿರುವುದು ಎಷ್ಟು  ಪ್ರಾಮುಖ್ಯತೆವಾದದ್ದು ಎಂದು  ಆರೋನನ ಕೋಲು ಸೂಚಿಸುತ್ತದೆ. ನಿಮ್ಮ ಜೀವನದ ಸತ್ತ ಕ್ಷೇತ್ರಗಳನ್ನು ಮತ್ತೆ ಜೀವಂತಗೊಳಿಸಲು ನಿಮಗೆ ಬೇಕಾಗಿರುವುದು ದೇವರ ಸಾನಿಧ್ಯ. ಆ ಸತ್ತು ಹೋದ ವ್ಯವಹಾರ, ಸತ್ತು ಹೋದ ದಾಂಪತ್ಯ ಇತ್ಯಾದಿಗಳನ್ನು ಪುನರುಜ್ಜೀವನಗೊಳಿಸಲು ನಿಮಗೆ ಬೇಕಾಗಿರುವುದು ದೇವರ ಸಾನಿಧ್ಯ.

ಆದಾಗ್ಯೂ, ಕ್ರೈಸ್ತ ಜೀವನದಲ್ಲಿ ಪವಿತ್ರಾತ್ಮನ  ಪ್ರಮುಖ ಪುರಾವೆಯೆಂದರೆ, ಆರೋನನ ಕೋಲಿನಂತೆ, ನಂಬಿಕೆಯುಳ್ಳವರು ತಮ್ಮ ಜೀವನದಲ್ಲಿ ನಿಜವಾದ ಬದಲಾವಣೆ ಮತ್ತು ಕ್ರಿಸ್ತನಂತಹ ಪಾತ್ರವನ್ನು ಪ್ರದರ್ಶಿಸುವ ಆತ್ಮೀಕ ಫಲವನ್ನು ಉತ್ಪಾದಿಸುತ್ತಾರೆ! 

ಕರ್ತನಾದ ಯೇಸು ಹೇಳಿದಂತೆ:
"ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷೇಹಣ್ಣುಗಳನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವದುಂಟೇ?  ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.  ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ."(ಮತ್ತಾಯ 7:16-20)

ಕೊನೆಯದಾಗಿ, ಧರ್ಮಶಾಸ್ತ್ರದ ಹಲಗೆಗಳು ದೇವರ ಆಜ್ಞೆಗಳ ಸ್ಪಷ್ಟವಾದ ಪ್ರಾತಿನಿಧ್ಯವಾಗಿದ್ದವು, ಏಕೆಂದರೆ ಅವುಗಳನ್ನು ಮೋಶೆಯೇ ಕಲ್ಲಿನ ಮೇಲೆ ಕೆತ್ತಿ  ಚಿನ್ನದ ಒಡಂಬಡಿಕೆಯ ಮಂಜೂಷದೊಳಗೆ ಇರಿಸಿದನು. ಧರ್ಮೋಪದೇಶಕಾಂಡ 10:5 ರ ಪ್ರಕಾರ ಈ ಹಲಗೆಗಳು ಇಸ್ರಾಯೇಲ್ಯರಿಗೆ ಮೂಲಭೂತ ನೀತಿಯ ಮತ್ತು ನೈತಿಕ ಮಾರ್ಗಸೂಚಿಗಳಾಗಿ ಕಾರ್ಯನಿರ್ವಹಿಸಿ ದೇವರೊಂದಿಗಿನ ಅವರ ಒಡಂಬಡಿಕೆಯ ಸಂಬಂಧ ಮತ್ತು ಆತನ ಚಿತ್ತಕ್ಕೆ ಅನುಗುಣವಾಗಿ ಬದುಕುವ ಅವರ ಜವಾಬ್ದಾರಿಯನ್ನು ಒತ್ತಿಹೇಳುತಿತ್ತು.ಅದೇ ರೀತಿಯಲ್ಲಿ, ದೇವರ ವಾಕ್ಯವು ನಮ್ಮನ್ನು ಶರೀರಾದ ಆಸೆಗಳಿಂದ ಬೇರ್ಪಡಿಸಿ  ನಮ್ಮನ್ನು ಪವಿತ್ರ ಜನರೆಂದು ಗುರುತಿಸುತ್ತದೆ. ಇದು ಪವಿತ್ರೀಕರಣವನ್ನು ಪ್ರತಿನಿಧಿಸುತ್ತದೆ.

Bible Reading: 1 kings 11-12
Prayer
ತಂದೆಯೇ, ನನ್ನನ್ನು ಪ್ರೋತ್ಸಾಹಿಸುವ ಮತ್ತು ನನಗೆ ಬಲ ನೀಡುವ ನಿನ್ನ   ವಾಕ್ಯಕ್ಕಾಗಿ ನಿನಗೆ ಸ್ತೋತ್ರ  ನಾನು ಫಲವನ್ನೂ  ಮತ್ತು ಸಮೃದ್ಧಿಯಾದ ಫಲವನ್ನು ನೀಡುವಂತೆ  ಯಾವಾಗಲೂ ನಿಮ್ಮ ಪ್ರಸನ್ನತೆಯ  ಸಂಪರ್ಕದಲ್ಲಿರಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ ಆಮೆನ್!


Join our WhatsApp Channel


Most Read
● ಆತನ ಬಲದ ಉದ್ದೇಶ.
● ಕೊರತೆಯಿಲ್ಲ
● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ತುರ್ತು ಪ್ರಾರ್ಥನೆ.
● ದೇವರಿಗಾಗಿ ಮತ್ತು ದೇವರೊಂದಿಗೆ.
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login