english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮ್ಮ ಜಗತ್ತನ್ನು ರೂಪಿಸಲು ನಿಮ್ಮ ಕಲ್ಪನೆಯನ್ನು ಬಳಸಿಕೊಳ್ಳಿ.
ಅನುದಿನದ ಮನ್ನಾ

ನಿಮ್ಮ ಜಗತ್ತನ್ನು ರೂಪಿಸಲು ನಿಮ್ಮ ಕಲ್ಪನೆಯನ್ನು ಬಳಸಿಕೊಳ್ಳಿ.

Friday, 27th of June 2025
3 0 135
ಇಂದು, ನಾನು ನಿಮ್ಮ ಕಲ್ಪನೆಯ ಕುರಿತು ಮಾತನಾಡಲು ಬಯಸುತ್ತೇನೆ. ನೀವು ದಿನವಿಡೀ ವಿಷಯಗಳನ್ನು ಕಲ್ಪಿಸಿಕೊಳ್ಳುತ್ತಿರುತ್ತೀರಿ. ನೀವು ಕೇಳುವ ಮಾತುಗಳು ನಿಮ್ಮ ಕಲ್ಪನೆಯಲ್ಲಿ ಚಿತ್ರಗಳನ್ನು ರೂಪಿಸಿ ಬಿಡುತ್ತವೆ.  ಹೆಚ್ಚಿನ ಜನರು ದುರದೃಷ್ಟವಶಾತ್ ಮತ್ತು ದೇವರ ವಾಕ್ಯಕ್ಕೆ ವಿರುದ್ಧವಾಗಿ, ತಮ್ಮ ಜೀವನದಲ್ಲಿ ಏನು ತಪ್ಪಾಗಿಬಿಡುತ್ತದೆಯೋ ಎಂದು ಭಯಪಡುವ ಅಥವಾ ಕಾಳಜಿ ವಹಿಸುವ ವಿಷಯಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಪತ್ರಿಕೆಗಳು ಮತ್ತು ಮಾಧ್ಯಮಗಳು ಸಹ ನಕಾರಾತ್ಮಕ ಕಲ್ಪನೆಗಳನ್ನು ಉತ್ತೇಜಿಸುವ ಸುದ್ದಿಗಳನ್ನು ಹರಡುವ ಮೂಲಕ ಅಂತಹ ಭಯಗಳಿಗೆ ಇಂಧನ ತುಂಬಿಸುತ್ತವೆ. 

ನಿಮ್ಮಲ್ಲಿನ ಅಸ್ತವ್ಯಸ್ತವಾಗಿರುವ ಜಗತ್ತನ್ನು ಮರುರೂಪಿಸಲು ನಿಮ್ಮ ಕಲ್ಪನೆಯೇ ಪ್ರಬಲ ಸಾಧನವಾಗಬಹುದು. ನಾನು ಹೀಗೇಕೆ ಹೇಳುತ್ತಿದ್ದೇನೆ? ವಿವರಿಸುತ್ತೇನೆ. ನೀವು ಊಹಿಸುವ, ಪ್ರಚೋದಿಸುವ ಮತ್ತು ಪ್ರಾರಂಭಿಸುವ ಮಾತುಗಳು ನಿಮ್ಮ ನಂಬಿಕೆ ಮತ್ತು ಸಮಾಧಾನ ಸೇರಿದಂತೆ ಎಲ್ಲದರ ಮೇಲೂ ಪರಿಣಾಮ ಬೀರುತ್ತವೆ. 

"ದೃಢ ಮನಸ್ಸುಳ್ಳವರನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವೆ, ಏಕೆಂದರೆ ಅವರಿಗೆ ನಿನ್ನಲ್ಲಿ ಭರವಸವಿದೆ."ಯೆಶಾಯ 26:3 ಹೇಳುತ್ತದೆ.

ಒಂದು ದಿನ ದೇವರು ಅಬ್ರಹಾಮನನ್ನು ರಾತ್ರಿಯಲ್ಲಿ ಎಬ್ಬಿಸಿ ಅವನ ಗುಡಾರದಿಂದ ಅವನನ್ನು ಹೊರಗೆ ಕರೆದೊಯ್ದು “ ಆತನು (ದೇವರು) ಅವನನ್ನು (ಅಬ್ರಹಾಮನನ್ನು) ಹೊರಗೆ ಕರೆತಂದು, “ಈಗ ಆಕಾಶದ ಕಡೆಗೆ ನೋಡಿ ನಕ್ಷತ್ರಗಳನ್ನು ಎಣಿಸಬಲ್ಲೆಯಾದರೆ ಅವುಗಳನ್ನು ಹೇಳು” ಎಂದು ಹೇಳಿದನು. ಆತನು ಅವನಿಗೆ, “ನಿನ್ನ ಸಂತತಿಯು ಹಾಗೆಯೇ ಆಗುವುದು” ಎಂದು ಹೇಳಿದನು.” “ಅವನು (ಅಬ್ರಹಾಮ) ಕರ್ತನನ್ನು ನಂಬಿದನು, ಮತ್ತು ಆತನು(ದೇವರು) ಅದನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು” (ಆದಿಕಾಂಡ 15:6). 

ದೇವರು ಅಬ್ರಹಾಮನನ್ನು ಆಶೀರ್ವದಿಸಲು ಬಯಸಿದನು ಆದರೆ ಆತನಿಗೆ ಅಬ್ರಹಾಮನ ಕಲ್ಪನೆಯ ಅಗತ್ಯವಿತ್ತು. ಅಬ್ರಹಾಮನಿಗೆ ಯಾವುದೇ ಮಕ್ಕಳಿಲ್ಲದ ಕಾರಣ ಮತ್ತು ಇನ್ನೂ ಇಂದ್ರಿಯಗಳಲ್ಲೇ ಬದುಕುತ್ತಿರುವುದರಿಂದ, ದೇವರು ಹೇಳಿದಂತೆ ಅವನ ಸಂತತಿಯು ಭೂಮಿಯ ಧೂಳಿನಷ್ಟು ಅಸಂಖ್ಯಾತವಾಗಿರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ದೇವರು ಅವನಲ್ಲಿ ಕಲ್ಪನೆಯನ್ನು ಹುಟ್ಟಿಸುವ ಕಾರ್ಯ ಮಾಡಬೇಕಾಗಿತ್ತು ಮತ್ತು ಇದನ್ನು ಮಾಡಲು ಆತನು ಅವನನ್ನು ಹೊರಗೆ ಕರೆದೊಯ್ದು, ನಕ್ಷತ್ರಗಳನ್ನು ಅವನಿಗೆ ತೋರಿಸಿ ಅವುಗಳನ್ನು ಎಣಿಸಲು ಹೇಳಿದನು.

ಅಬ್ರಹಾಮನು ನಕ್ಷತ್ರಗಳನ್ನು ನೋಡುತ್ತಿದ್ದಂತೆ, ಅವನು ದೇವರ ಕಲ್ಪನೆಯನ್ನು ಗ್ರಹಿಸಿಕೊಂಡನು; ಆ ನಕ್ಷತ್ರಗಳಲ್ಲಿ ತನ್ನ ಮಕ್ಕಳ ಮುಖಗಳನ್ನು ಅವನು ಊಹಿಸಬಲ್ಲವನಾದನು. ಅವನು ದೇವರನ್ನು ನಂಬಿದ್ದನೆಂದು ಬೈಬಲ್ ಘೋಷಿಸುತ್ತದೆ, ನಂತರ ದೇವರು ಅವನ ಹೆಸರನ್ನು 'ಅಬ್ರಾಮ್' ಅಂದರೆ 'ಶ್ರೇಷ್ಠ ತಂದೆ' ಎಂಬುದರಿಂದ 'ಅಬ್ರಹಾಮ ' ಅಂದರೆ 'ಅನೇಕ ಜನಾಂಗಗಳ ತಂದೆ' ಎಂದು ಬದಲಾಯಿಸಿದನು.

ನೋಡಿ, ಅವನು ದೇವರನ್ನು ನಂಬುವವರೆಗೆ ಮತ್ತು ಆತನು ಹೇಳಿದ ವಿಷಯದ ದರ್ಶನವನ್ನು ಅವನೊಳಗೆ ಸಾಗಿಸುವವರೆಗೆ ದೇವರು ಅವನನ್ನು "ಅಬ್ರಹಾಮ" ಎಂದು ಕರೆಯಲು ಸಾಧ್ಯವಾಗಲಿಲ್ಲ.

ದೇವರು ತನ್ನ ಹೆಂಡತಿಯ ಹೆಸರನ್ನು 'ಸಾರಾಯಳು ' ಅಂದರೆ 'ವಿವಾದಾತ್ಮಕ' ಎನ್ನುವ ಪದದಿಂದ 'ಸಾರಾ' ಅಂದರೆ 'ರಾಜಕುಮಾರರ ರಾಣಿ' ಅಥವಾ 'ರಾಜಕುಮಾರರ ತಾಯಿ' ಎಂದು ಬದಲಾಯಿಸಿದನು. ಅಬ್ರಹಾಮನ ಹೃದಯದಲ್ಲಿ ತಾನು ಸ್ಥಾಪಿಸಿದ ಚಿತ್ರಣವನ್ನು ಜೀವಂತವಾಗಿಡಲು ದೇವರು ಇದನ್ನು ಮಾಡಿದನು. 

ನಿಮ್ಮ ಕಲ್ಪನೆಯು ನಿಮ್ಮ ಜಗತ್ತನ್ನು ನಿರ್ಮಿಸಲು ಅಥವಾ ಮರುಸೃಷ್ಟಿಸಲು ನೀವು ಬಳಸಬಹುದಾದ ಪ್ರಬಲ ಸಾಧನವಾಗಿದೆ. 

Bible Reading: Psalms 27-34
ಪ್ರಾರ್ಥನೆಗಳು
ತಂದೆಯೇ, ನನ್ನ ಕಲ್ಪನೆಯನ್ನು ನಿಮ್ಮ ವಾಕ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ನನಗೆ ಸಹಾಯ ಮಾಡಿ ಇದರಿಂದ ಅದು ನನ್ನ ಜೀವನವನ್ನು ಯೇಸುನಾಮದಲ್ಲಿ ರೂಪಿಸಲಿ. ಆಮೆನ್.


Join our WhatsApp Channel


Most Read
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ಅಲೆದಾಡುವುದನ್ನು ನಿಲ್ಲಿಸಿ
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್