ಅನುದಿನದ ಮನ್ನಾ
ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
Tuesday, 22nd of October 2024
3
0
154
Categories :
ಮಾನಸಿಕ ಆರೋಗ್ಯ (Mental Health)
"ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ. "(ಕೀರ್ತನೆ 95:6)
ಜೀವನವು ಸಾಮಾನ್ಯವಾಗಿ ಜವಾಬ್ದಾರಿಗಳು, ಒತ್ತಡಗಳು ಮತ್ತು ಗೊಂದಲಗಳ ಸುಂಟರಗಾಳಿಯಂತೆ ಭಾಸವಾಗುತ್ತದೆ. ಈ ಅವ್ಯವಸ್ಥೆಯ ಮಧ್ಯೆ, ನಮ್ಮಲ್ಲಿ ಅನೇಕರು ಶಾಂತಿಗಾಗಿ ಹಂಬಲಿಸುತ್ತೇವೆ- ನಿಜವಾದ, ತಾತ್ಕಾಲಿಕ ಪರಿಹಾರವನ್ನು ಮೀರಿದಂತ ಶಾಶ್ವತ ಶಾಂತಿಯನ್ನು ಹಂಬಲಿಸುತ್ತೇವೆ. ಆದರೆ ನಾವು ಅದನ್ನು ಎಲ್ಲಿ ಕಂಡುಕೊಳ್ಳುತ್ತೇವೆ? ತ್ವರಿತ ಪರಿಹಾರಗಳನ್ನು ಮತ್ತು ಮನಸ್ಸನ್ನು ವಿಕೇಂದ್ರಗೊಳಿಸುವ ಕ್ಷಣಗಳನ್ನು ಒದಗಿಸುವ ಈ ಜಗತ್ತಿನಲ್ಲಿ, ಸತ್ಯವೇದವು ಆರಾಧನೆಯಲ್ಲಿ ಶಾಂತಿ ಕಂಡುಬರುತ್ತದೆ ಎಂಬ ಆಳವಾದ ಸತ್ಯವನ್ನು ಬೋದಿಸುತ್ತದೆ. ಆರಾಧನೆಯು ನಮ್ಮ ಗಮನವನ್ನು ಪ್ರಪಂಚದ ಗದ್ದಲಗಳ ಕಡೆಯಿಂದ ನಮ್ಮ ದೇವರ ಹಿರಿಮೆಯ ಕಡೆಗೆ ಬದಲಾಯಿಸುತ್ತದೆ. ನಮ್ಮ ದಣಿದ ಆತ್ಮಗಳಿಗೆ ನಾವು ವಿಶ್ರಾಂತಿಯನ್ನು ಕಂಡುಕೊಳ್ಳುವುದು ಈ ಆರಾಧನೆಯ ಮೂಲಕವೇ.
ಆರಾಧನೆ ಎಂದರೆ ಕೇವಲ ಹಾಡುಗಳನ್ನು ಹಾಡುವುದು ಅಥವಾ ವಾಕ್ಯಗಳನ್ನು ಹೇಳುವುದಲ್ಲ-ಇದು ನಮ್ಮ ಹೃದಯದ ಭಂಗಿಯ ಕುರಿತದ್ದಾಗಿದೆ . ಆರಾಧನೆಯು ಶರಣಾಗತಿಯ ಕಾರ್ಯವಾಗಿದೆ, ನಮ್ಮ ಜೀವನದ ಪ್ರತಿಯೊಂದು ಅಂಶದ ಮೇಲೆ ದೇವರ ಸಾರ್ವಭೌಮತ್ವದ ಅಂಗೀಕಾರವಾಗಿದೆ. ನಾವು ಆರಾಧಿಸುವಾಗ, ಎಲ್ಲವೂ ದೇವರ ನಿಯಂತ್ರಣದಲ್ಲಿದೆ ಎಂದು ನಾವು ಘೋಷಿಸುತ್ತೇವೆ ಮತ್ತು ಆತನಿಗೆ ಯೋಗ್ಯವಾದ ಮಹಿಮೆ ಮತ್ತು ಗೌರವವನ್ನು ನಾವು ಸಲ್ಲಿಸುತ್ತೇವೆ.
ಕೀರ್ತನೆ 95:6 ರಲ್ಲಿ ಕೀರ್ತನೆಗಾರನು ನಮ್ಮನ್ನು “ಆರಾಧನೆಯಲ್ಲಿ ಸಾಷ್ಟಾಂಗ ಎರಗುವಂತೆಯೂ ” ಮತ್ತು “ನಮ್ಮ ಸೃಷ್ಟಿಕರ್ತನಾಗಿರುವ ಕರ್ತನ ಮುಂದೆ ಮೊಣಕಾಲೂರುವಂತೆಯೂ ” ಆಹ್ವಾನಿಸುತ್ತಾನೆ. ದೀನತೆಯ ಈ ಭಂಗಿ ಗಮನಾರ್ಹವಾಗಿದೆ. , ನಾವು ನಮ್ಮ ಸ್ವಂತ ಜೀವನದ ಹೊರೆಗಳನ್ನು ನಾವೇ ಹೊತ್ತುಕೊಳ್ಳಬೇಕಾದ ಉಸ್ತುವಾರಿಯ ಅಗತ್ಯ ನಮಗಿಲ್ಲ ಎಂದು ಇದು ನಮಗೆ ನೆನಪಿಸುತ್ತದೆ. ಆರಾಧನೆಯಲ್ಲಿ, ಪ್ರತಿ ಸಮಸ್ಯೆಯನ್ನು ಪರಿಹರಿಸುವ ಅಥವಾ ಪ್ರತಿ ಪರಿಸ್ಥಿತಿಯನ್ನು ನಿಯಂತ್ರಿಸುವ ಅಗತ್ಯವನ್ನು ನಾವು ಬಿಟ್ಟು ಬದಲಾಗಿ, ಇಡೀ ಭೂಮ್ಯಕಾಶಗಳನ್ನು ತನ್ನ ಕೈಯಲ್ಲಿ ಹಿಡಿದಿರುವವನ ಮುಂದೆ ನಾವು ಅಡ್ಡಬೀಳುತ್ತೇವೆ . ನಾವು ಇದನ್ನು ಮಾಡುವಾಗ, ನಂಬಲಾಗದ ಸಂಗತಿಗಳು ಸಂಭವಿಸುತ್ತದೆ - ನಮ್ಮ ಹೃದಯಗಳು ಆತನ ಶಾಂತಿಯಿಂದ ತುಂಬಲ್ಪಡುತ್ತದೆ.
ಆರಾಧನೆಯು ಪ್ರಪಂಚದ ಗದ್ದಲವನ್ನು ಮೌನಗೊಳಿಸುತ್ತದೆ. ನಾವು ದೇವರ ಶ್ರೇಷ್ಠತೆಯ ಮೇಲೆ ಕೇಂದ್ರೀಕರಿಸಲು ಸಮಯವನ್ನು ಕೊಡುವಾಗ, ನಮ್ಮ ಸಮಸ್ಯೆಗಳು ಕುಗ್ಗುತ್ತವೆ. ಒಮ್ಮೆ ನಮ್ಮನ್ನು ಆವರಿಸಿದ ಗೊಂದಲಗಳು ಮತ್ತು ಚಿಂತೆಗಳು ಮರೆಯಾಗಲು ಪ್ರಾರಂಭಿಸುತ್ತವೆ. ಆರಾಧನೆಯು ನಮ್ಮ ಸನ್ನಿವೇಶಗಳ ಉನ್ಮಾದದಿಂದ ನಮ್ಮನ್ನು ಎಳೆದು ಸರ್ವಶಕ್ತನ ಉಪಸ್ಥಿತಿಯಲ್ಲಿ ನಮ್ಮನ್ನು ನಿಲ್ಲಿಸುತ್ತದೆ. ಈ ಪರಿಶುದ್ಧ ಜಾಗದಲ್ಲ್ಲಿಯೇ ನಾವು ಎಲ್ಲಾ ಗ್ರಹಿಕೆಯನ್ನು ಮೀರಿಸುವ ದೈವೀಕ ಶಾಂತಿಯನ್ನು ಅನುಭವಿಸುತ್ತೇವೆ.
ಆದರೆ ಆರಾಧನೆಯನ್ನು ನಮಗೆ ಎಲ್ಲವೂ ಸರಿಯಾಗಿದೆ ಎನ್ನುವ ಸಮಯದಲ್ಲಿ ಮಾತ್ರವಲ್ಲ - ಇದು ಜೀವನವು ಅಲ್ಲಕಲ್ಲೋಲ ವಾಗಿದೆ ಎಂದು ಭಾವಿಸುವ ಸಮಯದಲ್ಲೂ ಮಾಡಬೇಕಾದ ಸಂಗತಿಯಾಗಿದೆ. 2 ಪೂರ್ವಕಾಲ ವೃತ್ತಾಂತ 20 ರಲ್ಲಿ, ಅರಸನಾದ ಯೆಹೋಷಾಫಾಟನು ಅಸಾಧ್ಯವಾದ ಯುದ್ಧವನ್ನು ಎದುರಿಸುತ್ತಿರುವ ಸನ್ನಿವೇಶವನ್ನು ನಾವು ಓದುತ್ತೇವೆ. ಆ ಸಮಯದಲ್ಲಿ ಅರಸನು ಭಯಗೊಳ್ಳುವ ಅಥವಾ ತನ್ನ ಸ್ವಂತ ಶಕ್ತಿಯ ಮೇಲೆ ಅವಲಂಬಿತಾನಾಗುವ ಬದಲು, ಯೆಹೋಷಾಫಾಟನು ತನ್ನ ಜನರನ್ನು ಆರಾಧನೆಗೆ ಕರೆದನು. ಯುದ್ಧವನ್ನು ಗೆಲ್ಲುವ ಮೊದಲೇ ಅವರು ದೇವರನ್ನು ಸ್ತುತಿಸಿದರು ಮತ್ತು ದೇವರು ಅವರನ್ನು ಅದ್ಭುತ ರೀತಿಯಲ್ಲಿ ಗೆಲ್ಲಿಸುವ ಮೂಲಕ ಪ್ರತಿಕ್ರಿಯಿಸಿದರು. ಅವರ ಆರಾಧನೆಯ ಕ್ರಮವು ದೇವರ ಶಾಂತಿ ಮತ್ತು ಶಕ್ತಿಯನ್ನು ಅವರ ಪರಿಸ್ಥಿತಿಗೆ ಆಹ್ವಾನಿಸಿತು.
ಅದೇ ರೀತಿ, ನಮ್ಮ ಹೋರಾಟಗಳ ಮಧ್ಯೆ ನಾವು ಆರಾಧಿಸುವಾಗ, ನಮ್ಮ ಹೃದಯ ಮತ್ತು ಮನಸ್ಸಿನ ಮೇಲೆ ಆಳ್ವಿಕೆ ನಡೆಸಲು ನಾವು ದೇವರ ಶಾಂತಿಯನ್ನು ಆಹ್ವಾನಿಸುತ್ತೇವೆ. ಆರಾಧನೆಯು ದೇವರು ಯಾರೆಂಬುದನ್ನು ನಮಗೆ ನೆನಪಿಸುತ್ತದೆ - ಆತನು ನಮ್ಮ ಸೃಷ್ಟಿಕರ್ತ, ನಮ್ಮ ಪೋಷಕ, ನಮಗೆ ಒದಗಿಸುವಾತನು, ನಾವು ಎಷ್ಟೇ ಸವಾಲುಗಳನ್ನು ಎದುರಿಸಿತ್ತಿದ್ದರೂ ಆತನು ನಂಬಿಗಸ್ತನಾಗಿರುತ್ತಾನೆ. ಆರಾಧನೆಯು ನಮ್ಮ ಲಕ್ಷ್ಯವನ್ನು ನಮ್ಮ ಕೊರತೆಯ ಮೇಲೆ ಕೇಂದ್ರೀಕರಿಸುವುದರಿಂದ ನಾವು ಯಾರಿಗೆ ಸೇರಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳುವ ಆಯಾಮಕ್ಕೆ ಬದಲಾಯಿಸುತ್ತದೆ.
ಆರಾಧನೆಯ ಅತ್ಯಂತ ಸುಂದರವಾದ ಒಂದು ಅಂಶವೆಂದರೆ ಅದಕ್ಕೆ ಯಾವುದೇ ವಿಶೇಷ ಸಂದರ್ಭಗಳ ಅಗತ್ಯವಿಲ್ಲ. ದೇವರನ್ನು ಆರಾಧಿಸಲು ನಿಮಗೆ ಪರಿಪೂರ್ಣ ಜೀವನದ, ಸಮಸ್ಯೆ-ಮುಕ್ತ ವಾರದ ಅಥವಾ ಉತ್ತಮ ಮನಸ್ಥಿತಿಯ ಅಗತ್ಯವಿಲ್ಲ. ವಾಸ್ತವವಾಗಿ, ನಾವು ನಮ್ಮ ಮನಮುರಿಯುವಿಕೆಯನ್ನು ಆತನ ಮುಂದೆ ತಂದಾಗ ಆರಾಧನೆಯು ಇನ್ನೂ ಹೆಚ್ಚು ಶಕ್ತಿಯುತವಾಗಿರುತ್ತದೆ. ನಾವು ಅಗತ್ಯಗಳ ಮಧ್ಯೆ ಆರಾಧಿಸುವಾಗ , ನಮ್ಮ ಹೃದಯವನ್ನು ನಿಜವಾಗಿಯೂ ತೃಪ್ತಿಪಡಿಸಲು ಸಾಕಾದವನು ದೇವರೊಬ್ಬನೇ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆತನ ಸಾನ್ನಿಧ್ಯವೇ ನಮ್ಮ ದೊಡ್ಡ ಐಶ್ವರ್ಯ ಎಂದು ಘೋಷಿಸುವವರಾಗುತ್ತೇವೆ.
ಇಂದು, ನಿಮ್ಮ ಮಾತಿನಿಂದ ಮಾತ್ರವಲ್ಲದೆ ನಿಮ್ಮ ಹೃದಯದಿಂದಲೂ ಸಹ ದೇವರನ್ನು ಆರಾಧಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಕೀರ್ತನೆ 95:6 ನಮ್ಮನ್ನು ಆಹ್ವಾನಿಸಿದಂತೆ, ನಿನ್ನ ಸೃಷ್ಟಿಕರ್ತನ ಮುಂದೆ ದೀನತೆಯಿಂದ ಅಡಬಿದ್ದು ನಿಮ್ಮ ಚಿಂತೆಗಳು, ನಿಮ್ಮ ಹೋರಾಟಗಳು ಮತ್ತು ನಿಮ್ಮ ಯೋಜನೆಗಳನ್ನು ಆತನಿಗೆ ಒಪ್ಪಿಸಿ. ನಿಮ್ಮ ಸಮಸ್ಯೆಗಳ ಕಡೆಯಿಂದ ದೇವರ ಶಕ್ತಿ ಮತ್ತು ನಂಬಿಗಸ್ಥಿಕೆ ಕಡೆಗೆ ನಿಮ್ಮ ಗಮನವನ್ನು ಬದಲಾಯಿಸಲು ಆರಾಧನೆಯ ಕಾರ್ಯಕ್ಕೆ ಅನುಮತಿಸಿ. ನೀವು ಚಂಡಮಾರುತದ ಮಧ್ಯದಲ್ಲಿರಲಿ ಅಥವಾ ವಿಜಯದ ಪರ್ವತದ ಮೇಲೆ ನಿಂತಿರಲಿ, ಆರಾಧನೆಯು ನಿಮ್ಮ ಸಮಾಧಾನದ ಕೀಲಿಕೈಯಾಗಿದೆ.
ಜೀವನವು ಅಗಾಧವೆಂದು ಭಾವಿಸಿದರೆ, ಈ ಸರಳ ಅಭ್ಯಾಸವನ್ನು ಪ್ರಯತ್ನಿಸಿ: ಆಳವಾದ ಉಸಿರನ್ನು ತೆಗೆದುಕೊಳ್ಳಿ, ನಿಮ್ಮ ಹೃದಯವನ್ನು ಶಾಂತಗೊಳಿಸಿ ಮತ್ತು ಕರ್ತನನ್ನು ಆರಾಧಿಸಲು ಪ್ರಾರಂಭಿಸಿ. ಇಲ್ಲಿ ಉದ್ದುದ್ದ ಪ್ರಾರ್ಥನೆಗಳ ಅಗತ್ಯವಿಲ್ಲ - ದೇವರಿಗೆ ಧನ್ಯವಾದ ಹೇಳುವ ಮೂಲಕ ಪ್ರಾರಂಭಿಸಿ. ನೀವು ಇದನ್ನು ಮಾಡುವಾಗ, ದೇವರ ಶಾಂತಿಯು ನಿಮ್ಮ ಆತ್ಮದ ಮೇಲೆ ನೆಲೆಗೊಳ್ಳಲು ಪ್ರಾರಂಭಿಸುತ್ತದೆ, ನಿಮ್ಮ ಆತಂಕಗಳು ಮತ್ತು ಭಯಗಳನ್ನು ಶಾಂತಗೊಳಿಸುತ್ತದೆ.
ಪ್ರತಿ ದಿನವೂ ಆರಾಧನೆಗಾಗಿ ಸಮಯ ಮೀಸಲಿಡಿ, ಅದು ಕೆಲವೇ ನಿಮಿಷಗಳಾದರೂ ಪರವಾಗಿಲ್ಲ . ದೇವರ ಶ್ರೇಷ್ಠತೆ ಮತ್ತು ನಂಬಿಗಸ್ಥಿಕೆಯ ಮೇಲೆ ಕೇಂದ್ರೀಕರಿಸುವ ಆರಾಧನಾ ಹಾಡುಗಳ ಪಟ್ಟಿಯನ್ನು ರಚಿಸಿ. ನೀವು ಕೇಳುತ್ತಿರುವಾಗ, ವಾಕ್ಯಗಳು ಮತ್ತು ಸಂಗೀತವು ನಿಮ್ಮ ಹೃದಯವನ್ನು ಶರಣಾಗತಿಯ ಸ್ಥಳಕ್ಕೆ ಕರೆದೊಯ್ಯಲಿ . ಆರಾಧನೆಯು ಕೇವಲ ಒಂದು ಕಾರ್ಯಕ್ರಮ ಎನ್ನುವುದಕ್ಕಿಂತಲೂ ಮಿಗಿಲಾದದಾಗಿದೆ - ಇದು ನಿಮ್ಮ ಜೀವನದ ಪ್ರತಿಯೊಂದು ಮೂಲೆಯಲ್ಲಿಯೂ ದೇವರ ಶಾಂತಿಯನ್ನು ಆಹ್ವಾನಿಸುವ ಜೀವನಶೈಲಿಯಾಗಿದೆ.
ಪ್ರಾರ್ಥನೆಗಳು
ತಂದೆಯೇ, ನಾನು ಆರಾಧಿಸಲು ನಿನ್ನ ಸಮ್ಮುಖಕ್ಕೆ ಬರುತ್ತೇನೆ. ನಿನ್ನ ಮಹಿಮೆಯ ಮುಂದೆ ನನ್ನ ಹೃದಯವನ್ನು ಅಡ್ಡಬೀಳಿಸುತ್ತೇನೆ. ನನ್ನ ಗಮನವನ್ನು ನನ್ನ ಸಮಸ್ಯೆಗಳಿಂದ ನಿಮ್ಮ ಶ್ರೇಷ್ಠತೆಯ ಕಡೆಗೆ ತಿರುಗಿಸಲು ನನಗೆ ಸಹಾಯ ಮಾಡಿ. ನಾನು ನನ್ನ ಪ್ರತಿ ಚಿಂತೆ ಮತ್ತು ಭಯವನ್ನು ನಿನ್ನ ಪಾದದಡಿ ಒಪ್ಪಿಸುತ್ತೇನೆ ಯೇಸುವಿನ ನಾಮದಲ್ಲಿ ನಿನ್ನ ಶಾಂತಿಯಿಂದ ನನ್ನನ್ನು ತುಂಬಿಸು. ಆಮೆನ್.
Join our WhatsApp Channel
Most Read
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಅನುಕರಣೆ
● ಕೃಪೆಯಿಂದಲೇ ರಕ್ಷಣೆ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ವಿವೇಚನೆ v/s ತೀರ್ಪು
ಅನಿಸಿಕೆಗಳು