ಅನುದಿನದ ಮನ್ನಾ
ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
Sunday, 22nd of September 2024
2
0
122
Categories :
ಪ್ರಾರ್ಥನೆ (prayer)
ಶಿಷ್ಯತ್ವ (Discipleship)
"ದೇವರೇ, ನೀನೇ ನನ್ನ ದೇವರು; ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ."(ಕೀರ್ತನೆಗಳು 63:1)
ಬೆಳಗ್ಗೆ ಎದ್ದ ಕೂಡಲೇ ದೇವರಿಗೆ ದಿನದ ನಿಮ್ಮ ಮೊದಲ ಸಮಯವನ್ನು ನೀಡಿರಿ.
ಉದಾಹರಣೆಗೆ: ನೀವು ಮುಂಜಾನೆ ಆರು ಗಂಟೆಗೆ ಏಳುವಿರಾದರೆ ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸಿದ ನಂತರ ಕೆಲ ಸಮಯವನ್ನು ಪ್ರಾರ್ಥನೆ ಮತ್ತು ವಾಕ್ಯ ಧ್ಯಾನಕ್ಕಾಗಿ ನೀಡಿರಿ. ನಿಮ್ಮ ಮೊಬೈಲ್ ಫೋನ್ನಲ್ಲಿರುವ ಸೂಚನೆಗಳನ್ನು ನೋಡುತ್ತಾ ಕಳೆಯಬೇಡಿರಿ ಈ ಸಮಯವು ಪವಿತ್ರವಾಗಿದ್ದಾದದ್ದು ಮತ್ತು ಆತನಿಗಾಗಿ ಮಾತ್ರ ಮೀಸಲಾದದ್ದು.
ದಾವಿದನ ಮುಂಜಾನೆಯ ದಿನಚರಿಯು ಮುಂಜಾನೆ ಎದ್ದ ಕೂಡಲೇ ಕರ್ತನನ್ನು ಎದುರು ನೋಡುವುದಾಗಿತ್ತು. ಇದರಲ್ಲಿಯೇ ಒಬ್ಬ ಕುರಿಗಾಹಿ ಹುಡುಗನಾಗಿದ್ದ ದಾವೀದನನ್ನು ಇಸ್ರೇಲಿನ ಗೌರವಾನ್ವಿತ ಅರಸರನ್ನಾಗಿ ಮಾಡಿದ ರಹಸ್ಯ ಅಡಗಿರುವುದು. ನಿಮ್ಮ ಜೀವಿತದಲ್ಲಿರುವ ಎಲ್ಲಾ ಕ್ಷೇತ್ರದಲ್ಲಿಯೂ ಉನ್ನತೀಕರಣದ ರಹಸ್ಯ ಕೂಡ ಇದುವೇ ಆಗಬಹುದು.
"ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು".
(ಮಾರ್ಕ 1:35)
ನಮ್ಮ ಕರ್ತನಾದ ಯೇಸು ಇದಕ್ಕೆ ನಮಗೆ ಪರಿಪೂರ್ಣವಾದಂತಹ ಮಾದರಿಯಾಗಿದ್ದಾನೆ. ಬೆಳಗ್ಗೆ ಮೊಬ್ಬಿರುವಾಗಲೇ ಆತನು ಮಾಡುತ್ತಿದ್ದ ಮೊದಲ ಕಾರ್ಯವೆಂದರೆ ತನ್ನ ತಂದೆಯೊಡನೆ ಕಾಲ ಕಳೆಯುತ್ತಿದ್ದದ್ದು. ಆತನು ತನ್ನ ತಂದೆಗಾಗಿ ತನ್ನ ಪ್ರೀತಿಯನ್ನು ಭಕ್ತಿಯನ್ನು ಬೇರೆ ಎಲ್ಲಕ್ಕಿಂತ ಮೇಲಾಗಿ ಇರಿಸಿದ್ದನು. ಈ ರೀತಿಯ ಭಾಂದವ್ಯ ದಿಂದಲೇ ಬಹುಜನರಿಗೆ ಆತನಲ್ಲಿನ ಬಲವು ಅಡೆತಡೆ ಇಲ್ಲದೆ ಹರಿಯುತ್ತಿತ್ತು.
ನಾವು ನಮ್ಮ ದಿನದಲ್ಲಿ ನಮ್ಮ ಆದ್ಯತೆಯನ್ನು ದೇವರಿಗೆ ನೀಡಿದಾಗ ನಮ್ಮ ಮನಸ್ಸಿನ ಮನುಷ್ಯನು ನವೀಕರಿಸಲ್ಪಡುತ್ತಾನೆ ಮತ್ತು ಆ ದಿನದಲ್ಲಿ ಬರುವಂತಹ ಸವಾಲುಗಳನ್ನು ಎದುರಿಸಲು ನಾವು ಆಂತರಿಕ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ.
ಆದರೆ ದಿನದಲ್ಲಿ ಮೊದಲ ಸ್ಥಾನವನ್ನು ಪ್ರತಿದಿನವೂ ನೀಡುವಂಥದ್ದು ಎಲ್ಲರಿಗೂ ಸುಲಭವಲ್ಲ. ನಿಮ್ಮ ಶಾರೀರಿಕ ಭಾವವು ಮತ್ತು ಸೈತಾನನು ನಿಮ್ಮ ವಿರುದ್ಧ ಹೋರಾಡಲೆಂದೇ ತಂಡವನ್ನು ಕಟ್ಟಿಕೊಳ್ಳುವುದರಿಂದ ನೀವು ದೇವರಿಗೆ ಆದ್ಯತೆ ಕೊಡುವುದನ್ನು ಕಡಿಮೆ ಮಾಡಿಕೊಳ್ಳಲೂ ಬಹುದು. ಆದರೆ ನೀವು ಹಾಗೆ ಮಾಡದೇ ಅದರ ವಿರುದ್ಧ ಹೋರಾಡಬೇಕು. ಒಂದು ದಿನ ನಿಮ್ಮ ಪ್ರಯತ್ನ ವಿಫಲವರಾದರೆ ನೀವು ಬಿಟ್ಟುಬಿಡಬೇಡಿರಿ. ನೀವೇ ಕೊಡವಿಕೊಂಡು ಮತ್ತೊಮ್ಮೆ ಎದ್ದು ಪ್ರಯತ್ನಿಸಿ. ನಿಮ್ಮನ್ನು ಈ ವಿಚಾರದಲ್ಲಿ ಬಲಪಡಿಸಬೇಕೆಂದು ದೇವರಲ್ಲಿ ಇದಕ್ಕಾಗಿ ಸಹಾಯವನ್ನು ಯಾಚಿಸಿರಿ.
"ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ" ಎಂದು ಕರ್ತನು ತಾನೇ ಹೇಳಿದ್ದಾನೆ. (2 ಕೊರಿಂಥದವರಿಗೆ 12:9)
ಅನೇಕರು ದೇವರಿಗೆ ತನ್ನ ಸಮಯ ಕೊಡಲು ಸಂಜೆಯವರೆಗೂ ಕಾಯುವ ತಪ್ಪನ್ನು ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್ ಆ ಹೊತ್ತಿಗೆ ನೀವು ಆಗಲೇ ಸುಸ್ತಾಗಿ ದಣಿದು ಹೋಗಿರುತ್ತೀರಿ.
ಲೋಕದಲ್ಲಿ ಸಮಯವು ಅತ್ಯಮೂಲ್ಯ ವಸ್ತುವಾಗಿದೆ ಸಮಯವೂ ಎಷ್ಟು ಅತ್ಯಮೂಲ್ಯವಾದದ್ದು ಎಂಬುದು ನಮ್ಮವರಲ್ಲಿ ಅನೇಕರಿಗೆ ಅರಿವೇ ಇಲ್ಲ.
ಒಂದು ವರ್ಷದ ಮೌಲ್ಯ ತಿಳಿಯಲು
ಉನ್ನತ ಶ್ರೇಣಿಗಾಗಿ ವಿಫಲನಾದ ವಿದ್ಯಾರ್ಥಿಯನ್ನು ಕೇಳಿನೋಡಿ
ಒಂದು ಗಂಟೆಯ ಮೌಲ್ಯ ತಿಳಿಯಲು
ಒಂದು ಗಂಟೆ ಸಾವಕಾಶ ಮಾಡಿ ವಿಮಾನ ಪ್ರಯಾಣದಿಂದ ವಂಚಿತರಾದ ಪ್ರಯಾಣಿಕನನ್ನು ಕೇಳಿ ನೋಡಿ
ಒಂದು ಸೆಕೆಂಡಿನ ಮೌಲ್ಯ ತಿಳಿಯಲು
ಒಂದು ಸೆಕೆಂಡ್ ಸಾವಕಾಶದಿಂದ ಪದಕವನ್ನು ಕಳೆದುಕೊಂಡ ಒಲಂಪಿಕ್ ಓಟಗಾರನನ್ನು ಕೇಳಿ ನೋಡಿ.
ಹೀಗೆ ಸಮಯವೋ ಬಹಳ ಪ್ರಾಮುಖ್ಯವಾಗಿದೆ. ನಾವು ನಮ್ಮ ದಿನದ ಮೊದಲ ನಿಮಿಷಗಳನ್ನು ದೇವರಿಗೆ ಕೊಟ್ಟಾಗ ನಾವು ನಮ್ಮಲ್ಲಿರುವ ಅತ್ಯುತ್ತಮವಾದದನ್ನು ದೇವರಿಗೆ ಕೊಡುವವರಾಗಿರುತ್ತೇವೆ. ಈಗ ನಾವು ಆತನಿಗೆ ಮೊದಲ ಸ್ಥಾನ ಕೊಡುವವರಾಗಿರುತ್ತೇವೆ.
ದೇವರು ನಮಗೆಲ್ಲರಿಗೂ ಒಂದೇ ರೀತಿಯ ವರಗಳನ್ನು ಮತ್ತು ಸಾಮರ್ಥ್ಯಗಳನ್ನು ಕೊಟ್ಟಿಲ್ಲ ಅಥವಾ ಒಂದೇ ರೀತಿ ಸಂಪತ್ತನ್ನು ಕೊಟ್ಟಿಲ್ಲ. ಆದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದೇ ಪರಿಮಾಣದ ಸಮಯವನ್ನು ಕೊಟ್ಟಿದ್ದಾನೆ.
ಪ್ರಾರ್ಥನೆಗಳು
ತಂದೆಯೇ, ಪ್ರತಿದಿನವೂ ಮೊಟ್ಟಮೊದಲಾಗಿ ನಿನ್ನನ್ನೇ ಎದುರು ನೋಡುತ್ತೇನೆ. ಇದಕ್ಕಾಗಿ ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ಬೇಡುತ್ತೇನೆ ಆಮೇನ್.
Join our WhatsApp Channel
Most Read
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
● ದೇವರ ಪ್ರೀತಿಯನ್ನು ಅನುಭವಿಸುವುದು
ಅನಿಸಿಕೆಗಳು