english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಆತ್ಮೀಕ ಬೆಳವಣಿಗೆಯ ಮೌನ ನಿಗ್ರಹಕರು
ಅನುದಿನದ ಮನ್ನಾ

ಆತ್ಮೀಕ ಬೆಳವಣಿಗೆಯ ಮೌನ ನಿಗ್ರಹಕರು

Monday, 27th of October 2025
1 1 121
Categories : ಚಿತ್ತಚಂಚಲತೆ(Distraction)
ಮಾರ್ಕ 4:13-20 ರಲ್ಲಿ, ಯೇಸು ದೇವರ ವಾಕ್ಯಕ್ಕೆ ವಿವಿಧ ಪ್ರತಿಕ್ರಿಯೆಗಳನ್ನು ವಿವರಿಸುವ ಒಂದು ಆಳವಾದ ದೃಷ್ಟಾಂತವನ್ನು ಹಂಚಿಕೊಳ್ಳುತ್ತಾನೆ. ನಾವು ಈ ವಾಕ್ಯವನ್ನು ಪರಿಶೀಲಿಸಿದಾಗ, ವಿಭಿನ್ನ ರೂಪಗಳಲ್ಲಿರುವ ಗೊಂದಲಗಳು ನಮ್ಮ ಆತ್ಮೀಕ ಬೆಳವಣಿಗೆಗೆ ಅಡ್ಡಿಯಾಗುವ ಪ್ರಮುಖ ಅಪರಾಧಿಗಳಲ್ಲಿ ಒಂದಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಕರ್ತನಾದ ಯೇಸು "ಬಿತ್ತುವವನು ವಾಕ್ಯವನ್ನು ಬಿತ್ತಲು ಹೊರಡುವಾಗ" (ಮಾರ್ಕ 4:14) ಎಂದು ವಿವರಿಸುವ ಮೂಲಕ ಪ್ರಾರಂಭಿಸುತ್ತಾನೆ. ಈ ವಾಕ್ಯವೇ ಸತ್ಯ, ಸುವಾರ್ತೆ, ದೇವರ ಜೀವ-ಸಂತಾನೋತ್ಪತ್ತಿ ಮಾಡುವ ವಾಗ್ದಾನವಾಗಿದೆ. ಆದಾಗ್ಯೂ, ಈ ಬಿತ್ತನೆಯ ಫಲಿತಾಂಶವು ಯಾವಾಗಲೂ ನಾವು ನಿರೀಕ್ಷಿಸಬಹುದಾದ ಫಲಪ್ರದ ಸುಗ್ಗಿಯಾಗಿರುವುದಿಲ್ಲ.

ಕಸಿದುಕೊಂಡ ವಾಕ್ಯ:
"ಕೆಲವರು ದಾರಿಯ ಪಕ್ಕದಲ್ಲಿ ಬಿದ್ದ ಬೀಜದಂತಿದ್ದಾರೆ. ಅವರು ವಾಕ್ಯ ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ದೇವರ ವಾಕ್ಯವನ್ನು ತೆಗೆದುಬಿಡುತ್ತಾನೆ." (ಮಾರ್ಕ 4:15). ನಾವು ಎಷ್ಟೋ ಬಾರಿ ಧರ್ಮೋಪದೇಶವನ್ನು ಕೇಳುತ್ತೇವೆ, ನಮ್ಮ ಹೃದಯದಲ್ಲಿ ಸೆಳೆತವನ್ನು ಅನುಭವಿಸುತ್ತೇವೆ, ಆದರೂ ನಾವು ಮನೆಗೆ ತಲುಪುವ ಹೊತ್ತಿಗೆ ಅದರ ಸಾರವನ್ನು ಮರೆತೇ ಬಿಡುತ್ತೇವೆ ಶತ್ರು ಸದಾ ಜಾಗರೂಕನಾಗಿದ್ದು, ನಮ್ಮ ಹೃದಯಕ್ಕೆ ಹೋಗುವ ಯಾವುದೇ ಸತ್ಯದ ನೋಟವನ್ನು ಕಸಿದುಕೊಳ್ಳಲು ಕಾಯುತ್ತಿರುತ್ತಾನೆ.

ಮಟ್ಟನೆಲದ ಮೆಲ್ಮೈ ವಾಕ್ಯ
"ಇನ್ನೂ ಕೆಲವರು ಕಲ್ಲು ನೆಲದ ಮೇಲೆ ಬಿದ್ದ ಬೀಜದಂತಿರುವರು. ಅವರು ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.  ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ. "(ಮಾರ್ಕ 4:16-17) 

ಆರಾಧನಾ ಅವಧಿ ಅಥವಾ ಆತ್ಮೀಕ ಕೂಟದ ಸಮಯದಲ್ಲಿ ಭಾವನಾತ್ಮಕ ಉತ್ತುಂಗವನ್ನು ಅನುಭವಿಸುವುದು ಅಸಾಮಾನ್ಯವೇನಲ್ಲ. ಆದರೆ, ಕ್ರಿಸ್ತನಲ್ಲಿ ಆಳವಾದ ಬೇರುಗಳಿಲ್ಲದೆ ಹೋದಾಗ, ಈ ಸಂತೋಷವು ಕ್ಷಣಿಕವಾಗಬಹುದು. 
ಸವಾಲುಗಳನ್ನು ಎದುರಾದಾಗ, ನಮ್ಮ ನಂಬಿಕೆಯು ಅಲುಗಾಡಬಹುದು. ಯೆಶಾಯ 40:8 ಹೇಳುವಂತೆ, "
ಹುಲ್ಲು ಒಣಗಿಹೋಗುವುದು, ಹೂವು ಬಾಡಿಹೋಗುವುದು. ಆದರೆ ನಮ್ಮ ದೇವರ ವಾಕ್ಯವಾದರೋ ಸದಾಕಾಲ ಇರುವುದು,”  ದೃಢವಾಗಿ ನಿಲ್ಲುವ ನಂಬಿಕೆಯು ದೇವರ ನಿತ್ಯಾಸತ್ಯವಾದ ವಾಕ್ಯದಲ್ಲಿ ಆಳವಾಗಿ ಬೇರೂರಿರುವ ನಂಬಿಕೆಯಾಗಿದೆ. 

ಉಸಿರುಗಟ್ಟಿದ ವಾಕ್ಯ: 
ಇಲ್ಲಿಯೇ ಗೊಂದಲಗಳು ತಮ್ಮ ಅತ್ಯಂತ ಕುತಂತ್ರದ ಪಾತ್ರವನ್ನು ವಹಿಸುತ್ತವೆ. "...ಈ ಜೀವನದ ಚಿಂತೆಗಳು, ಸಂಪತ್ತಿನ ಮೋಸ ಮತ್ತು ಇತರ ವಿಷಯಗಳ ಬಯಕೆಗಳು ಒಳಗೆ ಬಂದು ವಾಕ್ಯವನ್ನು ಅಡಗಿಸಿ, ಅದನ್ನು ನಿಷ್ಫಲವಾಗಿಸುತ್ತದೆ." (ಮಾರ್ಕ 4:19). 
ಗೊಂದಲಗಳು ಯಾವಾಗಲೂ ಭವ್ಯವಾಗಿ ಅಥವಾ ಎದ್ದುಕಾಣುವಂಥವುಗಳಲ್ಲ. ಅವು "ಈ ಲೋಕದ ಚಿಂತೆಗಳು" ಅಥವಾ "ಐಶ್ವರ್ಯದ ಮೋಸ" ದಂತೆ ಸೂಕ್ಷ್ಮವಾಗಿರಬಹುದು.

ಅದು ದೇವರ ಅನುಮೋದನೆಯ ಮೇಲೆ ಲೌಕಿಕ ದೃಢೀಕರಣಗಳ ಮೌನ ಅನ್ವೇಷಣೆಯಾಗಿರಬಹುದು. "ದುಡ್ಡಿನಾಸೆಗಾಗಿಯೆ ದುಡಿಯಬೇಡ; ಬುದ್ಧಿಯನ್ನೆಲ್ಲಾ ಅದಕ್ಕಾಗಿಯೇ ವ್ಯಯಮಾಡಬೇಡ." ಎಂದು ಜ್ಞಾನೋಕ್ತಿ 23:4 ಎಚ್ಚರಿಸುತ್ತದೆ, " ಆಂಪ್ಲಿಫೈಡ್ ಬೈಬಲ್ ಮತ್ತಷ್ಟು ವಿವರಿಸುವುದು ಹೇಗೆಂದರೆ " ಮತ್ತು ಲೋಕದ ಚಿಂತೆಗಳು, ಆತಂಕಗಳು, ಯುಗದ ಗೊಂದಲಗಳು, ಸುಖ, ಆನಂದ, ಸುಳ್ಳು ಮೋಹ, ಐಶ್ವರ್ಯದ ಮೋಸ, ಮತ್ತು ಇತರ ವಿಷಯಗಳ ಮೇಲಿನ ಹಂಬಲ ಮತ್ತು ಉತ್ಕಟವಾದ ಬಯಕೆಗಳು ವಾಕ್ಯದ ಜೊತೆಗೆ ಒಳಗೆ ನುಸುಳಿ, ಅದನ್ನು ಉಸಿರುಗಟ್ಟಿಸಿ, ಇಕ್ಕಟ್ಟಾಗಿಸಿ ಅದು ನಿಷ್ಫಲವಾಗು ವಂತೆ ಮಾಡುತ್ತದೆ." (ಮಾರ್ಕ್ 4:19 AMP) ಎಂದು ಗೊಂದಲಗಳನ್ನು ತೋರಿಸುತ್ತದೆ. ಈ ಆಸೆಗಳು ಒಳಗೆ ನುಸುಳಿದಾಗ, ಅವು ನಮ್ಮ ಆತ್ಮೀಕ ಬೆಳವಣಿಗೆಯನ್ನು ಉಸಿರುಗಟ್ಟಿಸುತ್ತದೆ.

" ಲೋಕವನ್ನಾಗಲಿ, ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ. ಏಕೆಂದರೆ ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಯಿಂದ ಬಂದವುಗಳಲ್ಲ, ಲೋಕದಿಂದ ಬಂದವುಗಳಾಗಿವೆ.  ಲೋಕವೂ ಲೋಕದ ಆಶೆಗಳೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಜೀವಿಸುವನು."1 ಯೋಹಾನ 2:15-17 ರಲ್ಲಿ ನಮಗೆ ನೆನಪಿಸಲಾಗಿದೆ,


ಫಲಪ್ರದ ವಾಕ್ಯ: 
ಆದರೂ, ಎಲ್ಲಾ ಭರವಸೆ ಕಳೆದುಹೋಗಿಲ್ಲ. "ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ ಬೀಜದಂತೆ, ವಾಕ್ಯವನ್ನು ಕೇಳಿ, ಅದನ್ನು ಸ್ವೀಕರಿಸಿ, ಬಿತ್ತಿದಕ್ಕಿಂತ ಮೂವತ್ತರಷ್ಟು, ಅರವತ್ತರಷ್ಟು ಅಥವಾ ನೂರು ಪಟ್ಟು ಬೆಳೆಯನ್ನು" ನೀಡುವವರ ಕುರಿತೂ ಯೇಸು ಮಾತನಾಡುತ್ತಾನೆ. (ಮಾರ್ಕ 4:20). 

ಇಲ್ಲಿ ಕೀಲಿಯು ಒಳ್ಳೆಯ ನೆಲವಾಗಿದೆ. ಅಂದರೆ ಸಿದ್ಧವಾದ ಹೃದಯ, ದೀನತೆ ಮತ್ತು ಪ್ರಾರ್ಥನೆಯಿಂದ ಉಳುಮೆ ಮಾಡಲ್ಪಟ್ಟ, ಕೇಳಲು ಮಾತ್ರವಲ್ಲದೆ ವಾಕ್ಯವನ್ನು ಸ್ವೀಕರಿಸಿ  ಅದರಂತೆ ಕಾರ್ಯನಿರ್ವಹಿಸಲು ಅದು ಸಿದ್ಧವಾಗಿರುತ್ತದೆ.

ಗೊಂದಲಗಳನ್ನು ನಿವಾರಿಸುವುದು: 
ಯಾಕೋಬ 4:7-8, "ಹಾಗಾದರೆ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿ aaga, ಅವನು ನಿಮ್ಮಿಂದ ಓಡಿಹೋಗುವನು. ನೀವು ದೇವರ ಬಳಿಗೆ ಬನ್ನಿ, ಆಗ ಆತನೂ ನಿಮ್ಮ ಬಳಿಗೆ ಬರುವನು" ಎಂದು ಸೂಚಿಸುತ್ತದೆ. ಇದು ನಂಬಿಕೆಗೆ ಪೂರ್ವಭಾವಿ ವಿಧಾನವಾಗಿದೆ. ಗೊಂದಲಗಳನ್ನು ಗುರುತಿಸಿ ಎದುರಿಸಿ ಮತ್ತು ದೇವರ ಬಳಿಗೆ ಬರುವ ಮೂಲಕ, ನಾವು ಫಲವತ್ತಾದ ಮತ್ತು ಫಲ ನೀಡಲು ಸಿದ್ಧರಾಗಿರುವ ಒಳ್ಳೆಯ ಮಣ್ಣಿನಂತೆ ಆಗುತ್ತೇವೆ. 

ಇಬ್ರಿಯ 12:2 ರಲ್ಲಿನ "ನಂಬಿಕೆಯನ್ನು ಹುಟ್ಟಿಸುವವನೂ ಮತ್ತು ಪೂರೈಸುವವನಾದ ಯೇಸುವಿನ ಮೇಲೆ ನಮ್ಮ ದೃಷ್ಟಿಯನನ್ನಿಡಬೇಕು " ಎಂಬ ಮಾತುಗಳನ್ನು ನಾವು ಗಮನಿಸೋಣ. ಗೊಂದಲಗಳಿಂದ ತುಂಬಿರುವ ಲೋಕದಲ್ಲಿ, ನಮ್ಮ ಶಾಶ್ವತ ಭರವಸೆ ಮತ್ತು ರಕ್ಷಣಾ ಕರ್ತನಾದ ಕ್ರಿಸ್ತನ ಮೇಲೆ ನಮ್ಮ ನೋಟವು ಸ್ಥಿರವಾಗಿರಲಿ.

Bible Reading: Luke 1-2
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಜೀವನದ ಗೊಂದಲಗಳ ನಡುವೆಯೂ ನಮ್ಮ ಹೃದಯಗಳು ನಿನ್ನ ಮೇಲೆ ಕೇಂದ್ರೀಕರಿಸುವಂತೆ ಮಾರ್ಗದರ್ಶನ ನೀಡು. ನಮ್ಮ ಸಂಕಲ್ಪವನ್ನು ಬಲಪಡಿಸಿ, ಎಲ್ಲಾ ಗೊಂದಲಗಳನ್ನು ಬೇರುಸಹಿತ ಕಿತ್ತುಹಾಕಿ,  ನಾವು ನಿನ್ನಲ್ಲಿ ನಮ್ಮ ನಿಜವಾದ ಉದ್ದೇಶವನ್ನು ಕಂಡುಕೊಳುವಂತೆ ಯೇಸುನಾಮದಲ್ಲಿ ಮಾಡು. ಆಮೆನ್.

Join our WhatsApp Channel


Most Read
● ಬೀಜದಲ್ಲಿರುವ ಶಕ್ತಿ -2
● ನೀವು ನಿಜವಾದ ಆರಾಧಕರೇ?
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ನಿಮ್ಮ ಮಾನದಂಡಗಳನ್ನು ಹೆಚ್ಚಿಸಿ
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ವರ್ಗಗಳು : ದೇವರ ಹೆಸರುಗಳು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್