ಅನುದಿನದ ಮನ್ನಾ
2
0
105
ದೇವರ ವಾಕ್ಯವು ನಿಮ್ಮನ್ನು ಬೇಸರಗೊಳಿಸಬಹುದೇ?
Saturday, 27th of September 2025
Categories :
ಅಪರಾಧ (offence)
"ಯೇಸು ತನ್ನ ಶಿಷ್ಯರು ಇದಕ್ಕೆ ಗುಣುಗುಟ್ಟುತ್ತಾರೆಂದು ತನ್ನಲ್ಲಿ ತಿಳುಕೊಂಡು ಅವರಿಗೆ - ಈ ಮಾತಿನಿಂದ ನಿಮಗೆ ಬೇಸರವಾಯಿತೋ?.." ಎಂದು ಕೇಳಿದನು (ಯೋಹಾನ 6:61).
ಯಾಕೆಂದರೆ ಯೋಹಾನ 6 ರಲ್ಲಿ, ಯೇಸು ತಾನು ಪರಲೋಕದಿಂದ ಬಂದ ರೊಟ್ಟಿ ಎಂದು ಹೇಳಿ ತನ್ನ ಮಾಂಸ ಮತ್ತು ರಕ್ತವು ಒಬ್ಬ ವ್ಯಕ್ತಿಯನ್ನು ನಿತ್ಯಜೀವದಲ್ಲಿ ಜೀವಿಸುವಂತೆ ಪೋಷಿಸುತ್ತದೆ ಎಂದು ಆತನು ಹೇಳಿದ್ದನು.
ಫರಿಸಾಯರು ಮತ್ತು ಸದ್ದುಕಾಯರು ಇದನ್ನು ಕೇಳಿದಾಗ, ಅವರಿಗೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಬಹಳವಾಗಿ ಬೇಸರಗೊಂಡರು. ಅವರು ಯೇಸುವನ್ನು ತಪ್ಪಾಗಿ ಬೋಧಿಸುವ ಧರ್ಮನಿಂಧಕ ಎಂದು ಹಣೆಪಟ್ಟಿ ಕಟ್ಟಿದರು. ಈ ಹಂತದಲ್ಲಿ, ಆತನ ಅನೇಕ ಶಿಷ್ಯರು ಸಹ ಇದನ್ನು ಕೇಳಿದಾಗ, “ಇದು ಕಠಿಣವಾದ ಮಾತು; ಇದನ್ನು ಯಾರು ಅರ್ಥಮಾಡಿಕೊಳ್ಳಬಲ್ಲರು?” ಎಂದು ಹೇಳಿದರು.
ಆತನ ಅನೇಕ ಶಿಷ್ಯರು ಆತನೊಂದಿಗೆ ಇನ್ನು ಮುಂದೆ ಆತನನ್ನು ಹಿಂಬಾಲಿಸದೇ ಹೋದರು ಎಂದು ಧರ್ಮಗ್ರಂಥವು ದಾಖಲಿಸುತ್ತದೆ. (ಯೋಹಾನ 6:60,66) ಯೇಸು ಅವರನ್ನು , “ಇದು ನಿಮಗೂ ಸಹ ಬೇಸರವಾಯಿತೋ ?”ಎಂದು ಕೇಳುವಾಗ ಆತನ ಅತ್ಯಂತ ಆಪ್ತ ಶಿಷ್ಯರು ಸಹ ಬೇಸರಗೊಂಡಿದ್ದರು.
ಸತ್ಯವೇನೆಂದರೆ, ನೀವು ಮಾತನಾಡುವಾಗ ಯಾವಾಗಲೂ ನೋಯಿಸುವ ಏನಾದರೂ ಸಂಗತಿ ಇರುತ್ತದೆ. ಕ್ಷಮೆಯ ಕುರಿತು ಸಂದೇಶವನ್ನು ಬೋಧಿಸುತ್ತಿದ್ದಾಗ, ಸಭೆಯಲ್ಲಿ ಒಬ್ಬ ವ್ಯಕ್ತಿ ನನ್ನನ್ನು ಅಪಹಾಸ್ಯ ಮಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆದರೆ, ಆ ದಿನ ನಾನು ಬೋಧಿಸಿದ ಮಾತು ಅವನಿಗೆ ನಿರಂತರವಾಗಿ ನೋವುಂಟು ಮಾಡಿ, ಅಂದು ಅವನು ತನ್ನ ಜೀವನವನ್ನು ಕರ್ತನಿಗೆ ಒಪ್ಪಿಸಿದನು.
ಇಂದು, ಈ ಮನುಷ್ಯನು ನಮ್ಮ ಚರ್ಚ್‌ನ ಸದಸ್ಯನಾಗಿದ್ದಾನೆ. ಯಾರಾದರೂ ನಮ್ಮ ಸಂಪ್ರದಾಯಗಳು ಅಥವಾ ಭಾವನೆಗಳಿಗೆ ಹೊಂದಿಕೆಯಾಗದ ಸತ್ಯಗಳನ್ನು ಹಂಚಿಕೊಂಡಾಗ, ಅದು ನಮಗೆ ನೋವುಂಟು ಮಾಡಿ ಮನನೋಯಿಸುತ್ತದೆ. ಅದನ್ನು ದೇವರ ವಾಕ್ಯವೆಂದು ನೋಡುವ ಬದಲು ಅದರ ಕುರಿತು ಹೆಚ್ಚಿನ ತಿಳುವಳಿಕೆಯನ್ನು ನೀಡೆಂದು ಪವಿತ್ರಾತ್ಮನನ್ನು ಬೇಡುವ ಬದಲು, ನಾವು ಮನನೊಂದುಕೊಳ್ಳುವವರಾಗುತ್ತೇವೆ.
ಯೇಸು ಶರೀರಧಾರಿಯಾಗಿ ಬಂದ ವಾಕ್ಯವಾಗಿದ್ದನು, ಆತನೇ ಹೇಳಿದ್ದು ಇಲ್ಲಿದೆ, "ನನ್ನ ವಿಷಯದಲ್ಲಿ ಬೇಸರಗೊಳ್ಳದವನು ಧನ್ಯನು" (ಮತ್ತಾಯ 11:6) ಎಂದು. ವಾಕ್ಯವು ನಿಮ್ಮನ್ನು ಬೇಸರ ಗೊಳಿಸಲು ಬಿಟ್ಟು ಕೊಡದೆ, ವಾಕ್ಯವು ನಿಮ್ಮನ್ನು ರೂಪಿಸಲು ನೀವು ಅನುಮತಿಸುವಾಗ, ನೀವು ಧನ್ಯರಾಗುತ್ತೀರಿ.
ಅರಿಕೆಗಳು
1.ತಂದೆಯೇ, ನನ್ನ ಜೀವನದ ಎಲ್ಲಾ ದಿನಗಳಲ್ಲೂ ನಾನು ಆರೋಗ್ಯದಿಂದಲೂ ಮತ್ತು ಬಲದಿಂದಲೂ ನಡೆಯುವೆನು ಎಂದು ನಾನು ಯೇಸುನಾಮದಲ್ಲಿ ಘೋಷಿಸುತ್ತೇನೆ. ದೇವರು ನನ್ನನ್ನು ಸನ್ಮಾನಿಸಲು ಮತ್ತು ಗೌರವಿಸಲು ನಿಯೋಜಿಸಿರುವ ಎಲ್ಲವನ್ನೂ ನಾನು ಸಂತೋಷದಿಂದ ಯೇಸುನಾಮದಲ್ಲಿ ಸಾಧಿಸುತ್ತೇನೆ.
2.ನಾನು ಜೀವಂತರ ದೇಶದಲ್ಲಿ ಕರ್ತನ ಆಶೀರ್ವಾದವನ್ನೂ ಒಳ್ಳೆಯತನವನ್ನೂ ಅನುಭವಿಸುವೆನು. ನನ್ನ ಜೀವನದ ಎಲ್ಲಾ ದಿನಗಳಲ್ಲೂ ಅಪರಾಧವಿಲ್ಲದೆ ಕರ್ತನನ್ನು ಸೇವಿಸುವೆನು. (ಕೀರ್ತನೆಗಳು 118:17 ಮತ್ತು ಕೀರ್ತನೆಗಳು 91:16).
Join our WhatsApp Channel

Most Read
● ಯಾರ ಸಂದೇಶವನ್ನು ನೀವು ನಂಬುವಿರಿ?● ದೇವರಿಗೆ ಮೊದಲಸ್ಥಾನ ನೀಡುವುದು #3
● ನಂಬಿಕೆ ಎಂದರೇನು ?
● ಕ್ಷಮಿಸದಿರುವುದು
● ನಿಮ್ಮ ಹೋರಾಟಗಳೇ ನಿಮ್ಮ ಗುರುತಾಗಲು ಬಿಡಬೇಡಿ -2
● ಶುದ್ಧೀಕರಣದ ತೈಲ
● ಪುರುಷರು ಏಕೆ ಪತನಗೊಳ್ಳುವರು -3
ಅನಿಸಿಕೆಗಳು