ಅನುದಿನದ ಮನ್ನಾ
ಶ್ರೇಷ್ಠತೆಯ ಬೆನ್ನಟ್ಟುವಿಕೆ.
Monday, 24th of June 2024
3
2
192
Categories :
ಶ್ರೇಷ್ಠತೆ (Excellence)
ಜನರು ನಿಮ್ಮನ್ನು ನೀವು ಏನನ್ನು ಮಾಡಿಕೊಂಡಿದ್ದೀರಾ? ಎಂದು ಸ್ವಲ್ಪ ವಿವರಿಸಿ. ಎಂದು ಕೇಳಿದರೆ ನೀವು ಹೇಗೆ ವಿವರಿಸುವಿರಿ? (ದಯವಿಟ್ಟು ಪ್ರಾಮಾಣಿಕವಾಗಿ ಉತ್ತರಿಸಿ)
(1) ಸುಮಾರು ಅಥವಾ ಮಧ್ಯಮ ಸ್ಥಿತಿ
(2) ಅತ್ಯುತ್ತಮ ಅಥವಾ ಶ್ರೇಷ್ಠ
"ಶ್ರೇಷ್ಠತೆ ಎಂಬುದು ಒಂದು ಆಕಸ್ಮಿಕ ವಲ್ಲ"ಎಂದು ಒಬ್ಬರು ಒಮ್ಮೆ ಹೇಳಿದ್ದಾರೆ. ನಿಮ್ಮ ಜೀವಿತದಲ್ಲಿ ಪ್ರತಿಯೊಂದು ಶ್ರೇಷ್ಠತೆಯಿಂದ ನಡೆಸುವಂಥದ್ದು ಒಮ್ಮಿಂದೊಮ್ಮೆಲೆ ಏನೋ ಒಂದು ಅದೃಷ್ಟದಿಂದ ಬರುವಂತದ್ದಲ್ಲ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಇದು ಕರ್ತವ್ಯ ದೃಷ್ಟಿಗಿಂತಲೂ ಹೆಚ್ಚಾಗಿ ಉನ್ನತವಾದ ಪ್ರಯತ್ನದಿಂದ ಬರುವಂತದ್ದಾಗಿದೆ. ಅವಿರತವಾದ ಪರಿಶ್ರಮದಿಂದ ಉಂಟಾಗುವಂತದ್ದಾಗಿದೆ.
"ಒಬ್ಬನು - ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು."(ಮತ್ತಾಯ 5:41)
"ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ."(ಕೊಲೊಸ್ಸೆಯವರಿಗೆ 3:17)
ನಿಮ್ಮ ಸುತ್ತಲಿರುವ ಜನರು ನಿಮ್ಮನ್ನು ನೋಡುತ್ತಲೇ ಇರುತ್ತಾರೆ. ಯಾವಾಗಲೂ ಜನರು ಸತ್ಯವೇದದಲ್ಲಿರುವ ನಾಲ್ಕು ಸುವಾರ್ತೆಗಳನ್ನು (ಮತ್ತಾಯ,ಮಾರ್ಕ, ಲೂಕ ಯೋಹಾna) ಓದುವ ಮೊದಲು ಐದನೇ ಸುವಾರ್ತೆಯಾಗಿರುವ ನಿಮ್ಮ ಸುವಾರ್ತೆಯನ್ನು (ನಿಮ್ಮ ಜೀವಿತವನ್ನು) ಓದುತ್ತಿರುತ್ತಾರೆ.
ಆದ್ದರಿಂದಲೇ ಸತ್ಯವೇದವು ನಮ್ಮನ್ನು ಹೀಗೆ ಒತ್ತಾಯ ಪಡಿಸುತ್ತದೆ.
"ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ; ಕರ್ತನಿಂದ ಪರಲೋಕ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವೆವೆಂದು ತಿಳಿದಿದ್ದೀರಲ್ಲಾ. ನೀವು ಕರ್ತನಾದ ಕ್ರಿಸ್ತನಿಗೇ ದಾಸರಾಗಿದ್ದೀರಿ."(ಕೊಲೊಸ್ಸೆಯವರಿಗೆ 3:23-24)
ನೀವು ಏನನ್ನು ಮಾಡುತ್ತಿದ್ದೀರೊ ಅದರಲ್ಲಿ ಶ್ರೇಷ್ಠತೆಯನ್ನು ಹೊಂದುವವರಾದರೆ ಅದು ಕರ್ತನಿಗೆ ಗೌರವವನ್ನು ಮಹಿಮೆಯನ್ನು ತರುತ್ತದೆ. ಜನರು ನೀವು ಹೇಗೆ ಇಂಥ ಶ್ರೇಷ್ಠವಾದ ಕಾರ್ಯವನ್ನು ಮಾಡುತ್ತೀರಿ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಆಗ ನೀವು ಇದೆಲ್ಲಾ ಕರ್ತನಿಂದ ಸಾಧ್ಯವಾಯಿತು ಎಂದು ನಿಮ್ಮ ಸಾಕ್ಷಿಯನ್ನು ಅವರೊಂದಿಗೆ ಹಂಚಿಕೊಳ್ಳಬಹುದು ಆಗ ಮಾತ್ರವೇ ಜನರು ನೀವು ಹೇಳುವಂಥದ್ದನ್ನು ಕೇಳುತ್ತಾರೆ.
ಪ್ರವಾದಿಯದ ದಾನಿಯೇಲನ ಜೀವಿತವನ್ನು ನೋಡಿರಿ. ಅವನು ತನ್ನ ಮನೆಯಿಂದಲೂ, ಮನೆಯವರಿಂದಲೂ ದೂರವಿದ್ದರೂ ಅವನು ತನಗೆ ನೇಮಿಸಿದ ಕಾರ್ಯದಲ್ಲಿ ಶ್ರೇಷ್ಠತೆಯನ್ನು ತರಲು ಬಯಸಿದನು. ಸತ್ಯವೇದವು
"ಈ ದಾನಿಯೇಲನಲ್ಲಿ ಪರಮಬುದ್ಧಿ ಇದ್ದದರಿಂದ ಅವನು ವಿುಕ್ಕ ಮುಖ್ಯಾಧಿಕಾರಿಗಳಿಗಿಂತಲೂ ದೇಶಾಧಿಪತಿಗಳಿಗಿಂತಲೂ ಅಧಿಕ ಸಮರ್ಥನೆನಿಸಿಕೊಂಡಿದ್ದನು; ಅವನನ್ನು ರಾಜನು ಪೂರ್ಣರಾಜ್ಯದ ಮೇಲೆ ನೇವಿುಸಲು ಉದ್ದೇಶಿಸಿದನು. ಹೀಗಿರಲು ಮುಖ್ಯಾಧಿಕಾರಿಗಳೂ ದೇಶಾಧಿಪತಿಗಳೂ ರಾಜ್ಯಭಾರದ ವಿಷಯವಾಗಿ ದಾನಿಯೇಲನ ಮೇಲೆ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು; ಆದರೆ ತಪ್ಪುಹೊರಿಸುವ ಯಾವ ಸಂದರ್ಭವನ್ನೂ ಯಾವ ತಪ್ಪನ್ನೂ ಕಾಣಲಾರದೆ ಹೋದರು; ಅವನು ನಂಬಿಗಸ್ತನೇ ಆಗಿದ್ದನು, ಅವನಲ್ಲಿ ಆಲಸ್ಯವಾಗಲಿ ಅಕ್ರಮವಾಗಲಿ ಸಿಕ್ಕಲಿಲ್ಲ." ಎಂದು ಹೇಳುತ್ತದೆ ("ದಾನಿಯೇಲನು 6:3-4)
ಶ್ರೇಷ್ಠತೆ ಎಂದ ಕೂಡಲೇ ಅಲ್ಲಿ ಒಂದಿಷ್ಟು ತಪ್ಪೇ ಆಗಿಲ್ಲ ಎಂದು ಅರ್ಥೈಸಿಕೊಳ್ಳಬೇಕಾದ ಅಗತ್ಯವಿಲ್ಲ. ಆದರೆ ಖಂಡಿತವಾಗಿಯೂ ನೀವು ಆ ತಪ್ಪುಗಳಿಂದ ಕಲಿತು ಮುಂದೆ ಅದು ಪುನರಾವರ್ತನೆ ಆಗದಂತೆ ತಡೆಯುತ್ತಿರುತ್ತೀರಿ.
ಪ್ರಾಯಶಃ ನೀವು ಆರಾಧನೆಯ ಕೂಟವನ್ನು ಮುನ್ನಡೆಸಲು ಇಲ್ಲವೇ ಭೋದಿಸಲು ಕರೆಯಲ್ಪಟ್ಟಿರಬಹುದು. ಅದಕ್ಕಾಗಿ ಸರಿಯಾಗಿ ತಯಾರಾಗಿರಿ. ಒಬ್ಬರ ಮೇಲೊಬ್ಬರು ತಪ್ಪು ಹೊರಿಸುತ್ತಾ ಕೂರಬೇಡಿರಿ. ಶ್ರೇಷ್ಟತೆ ಹೊಂದಲಿಕ್ಕೆ ಇರುವಂತ ಬದ್ಧತೆಯು ಎಂದಿಗೂ ಜನಪ್ರಿಯವಾದ ಸುಲಭವಾದ ಕಾರ್ಯವಂತೂ ಅಲ್ಲ.
ಅನೇಕ ಜನರು ನನಗೆ ಪತ್ರ ಬರೆದು ನನ್ನ ಜೀವಿತದ ಕರೆ ಏನು ಎಂದು ನಾನು ತಿಳಿದುಕೊಳ್ಳುವಂತೆ ನನಗಾಗಿ ಪ್ರಾರ್ಥಿಸಿ ಎಂದು ಕೇಳುತ್ತಾರೆ. ಇನ್ನು ಕೆಲವರಂತೂ ಇನ್ನೂ ಮುಂದೆ ಹೋಗಿ ತಮ್ಮ ಪದವಿ ಶೀರ್ಷಿಕೆ ಸಹ ಸಲಹೆ ಕೊಟ್ಟು "ನಾನು ಒಬ್ಬ ಅಪೋಸ್ತಲನಾ ಅಥವಾ ಪ್ರವಾದಿಯಾ ಅಥವಾ......" ಎಂಬುದಾಗಿ ಕೇಳುತ್ತಾರೆ.
ಅವರಿಗೆ ನಾನು ಏನು ಹೇಳಬಹುದೆಂದರೆ "ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;"ಎಂಬುದೇ (ಪ್ರಸಂಗಿ 9:10) ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಿಮ್ಮನ್ನು ನಂಬಿ ನಿಮಗೆ ಕೊಟ್ಟ ಕಾರ್ಯವನ್ನು ಶ್ರೇಷ್ಠತೆಯಿಂದ ಪೂರೈಸಿರಿ. ಯಾವುದೇ ಅವ್ಯವಸ್ಥೆಯಿಂದ ಮಾಡಬೇಡಿರಿ. ಹಾಗಿದ್ದಾಗಲೇ ನೀವು ದೇವರಿಗೆ ಮತ್ತು ಜನರಿಗೆ ನಿಮ್ಮ ನಂಬಿಗಸ್ತಿಕೆಯನ್ನು ಸಾಬೀತುಪಡಿಸಬಹುದು.
ಒಮ್ಮೆ ಒಬ್ಬ ಮಹಾನ್ ವ್ಯಕ್ತಿಯು ಹೀಗೆ ಹೇಳಿದ್ದಾರೆ "ಒಬ್ಬ ಸಾಮಾನ್ಯ ಮನುಷ್ಯನು ತನ್ನ ಶಕ್ತಿ ಮತ್ತು ಸಾಮರ್ಥ್ಯದ 25 ಪ್ರತಿಶತವನ್ನು ಕೆಲಸದಲ್ಲಿ ಹಾಕುತ್ತಾನೆ. ಐವತ್ತು ಪ್ರತಿಶತಕ್ಕಿಂತಲೂ ಹೆಚ್ಚು ಸಾಮರ್ಥ್ಯ ಹಾಕುವವರಿಗೆ ಈ ಲೋಕವು ಅವರ ತಲೆಯ ಮೇಲಿರುವ ಕಿರೀಟವನ್ನು ತೆಗೆದು 100 ರಷ್ಟು ಅದನ್ನು ವಿನಿಯೋಗಿಸುವಂತಹ ಆತ್ಮಗಳಿಂದ ಪ್ರತ್ಯೇಕವಾಗಿರುವ ಕೆಲವೇ ಕೆಲವರ ತಲೆಗೆ ಅದನ್ನು ತೊಡಿಸುತ್ತದೆ" ಎಂದು.
ಪ್ರತಿದಿನವೂ ನೀವು ಹೋಗುವ ಕಡೆಯಲ್ಲೆಲ್ಲಾ ಮಾಡುವ ಕಾರ್ಯದಲ್ಲೆಲ್ಲಾ ಶ್ರೇಷ್ಠತೆಯನ್ನು ತರಲೆತ್ನಿಸಲು ಕರ್ತನ ಸಹಾಯವನ್ನು ಬೇಡಿಕೊಳ್ಳಿರಿ. ಆಗ ನೀವು ಹೋಗುವಲ್ಲೆಲ್ಲ ಕ್ರಿಸ್ತನ ಪರಿಮಳವನ್ನು ಪ್ರಸರಿಸುವವರಾಗಿರುತ್ತೀರಿ.
ಪ್ರಾರ್ಥನೆಗಳು
1. ತಂದೆಯೇ, ನಾನು ನಂಬಿಕೆಯಲ್ಲಿಯೂ ನಡೆ-ನುಡಿಯಲ್ಲಿಯೂ ಜ್ಞಾನದಲ್ಲಿಯೂ ಶ್ರೇಷ್ಠವಾಗಿರುವಂತೆ ಯೇಸು ನಾಮದಲ್ಲಿ ಸಹಾಯ ಮಾಡು (2 ಕೊರಿಯಂತ 8:7)
2. ತಂದೆಯೇ, ನಾನು ತಿಂದರೂ, ಕುಡಿದರೂ ಏನೇ ಮಾಡಿದರೂ ನಿನ್ನ ನಾಮದ ಮಹಿಮೆಗಾಗಿ ಮಾಡುವಂತೆ ಯೇಸು ನಾಮದಲ್ಲಿ ಸಹಾಯ ಮಾಡು. (1ಕೊರಿಯಂತೆ 10:31)
Join our WhatsApp Channel
Most Read
● ನಂಬಿಕೆ- ನಿರೀಕ್ಷೆ -ಪ್ರೀತಿ● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅನುಕರಣೆ
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
ಅನಿಸಿಕೆಗಳು