ಅನುದಿನದ ಮನ್ನಾ
ಭಯದ ಆತ್ಮ
Thursday, 17th of October 2024
3
1
104
Categories :
ಮಾನಸಿಕ ಆರೋಗ್ಯ (Mental Health)
"ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ."(ಯೆಶಾ 41:10)
ಭಯ ಎನ್ನುವಂಥದ್ದು ಪ್ರಪಂಚದಾದ್ಯಂತ ವ್ಯಾಪಿಸಿರುವ ವಿನಾಶಕರಿ ಶಕ್ತಿಗಳಲ್ಲಿ ಒಂದಾಗಿದೆ. ಕೆಲಸ ಕಳೆದುಕೊಳ್ಳುವ ಭಯವಾಗಿರಲಿ, ಅನಾರೋಗ್ಯದ ಭಯವಾಗಿರಲಿ ಅಥವಾ ವೈಫಲ್ಯದ ಭಯವಾಗಿರಲಿ, ಭಯವು ನಮ್ಮ ಜೀವಿತದಲ್ಲಿ ನಿಧಾನವಾಗಿ ನುಸುಳಿ ನಮ್ಮನ್ನೇ ನಿಧಾನವಾಗಿ ತಿಂದು ಹಾಕುವ ರೀತಿಯದ್ದಾಗಿದೆ. ಭಯದ ಒಂದು ವಿಶೇಷವಾದ ಅಪಾಯಕಾರಿ ಕೆಲಸವೆಂದರೆ ನಮ್ಮನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಅದಕ್ಕಿದೆ. ಇದು ನಮ್ಮನ್ನು ಶಕ್ತಿಹೀನರನ್ನಾಗಿ ಮಾಡಿ ದೇವರ ವಾಗ್ದಾನಗಳಿಂದ ವಂಚಿತವಾಗುವಂತೆ ಮಾಡುತ್ತದೆ. ಆದಾಗಿಯೂ ಭಯ ಎನ್ನುವಂತದು ದೇವರಿಂದ ಬರುವಂತದ್ದಲ್ಲ ಎಂದು ಸತ್ಯವೇದ ಪದೇ ಪದೇ ಹೇಳುತ್ತದೆ. ವಾಸ್ತವವಾಗಿ ಸತ್ಯವೇದವು ಭಯಪಡಬೇಡ ಎಂದು ಮತ್ತೆ ಮತ್ತೆ ಆಜ್ಞಾಪಿಸುತ್ತದೆ.
ಭಯ ಎನ್ನುವಂತದು ಒಂದು ಭಾವನೆ ಎನ್ನುವುದಕ್ಕಿಂತಲೂ ಹೆಚ್ಚಿನದಾಗಿದ್ದು, ಇದೊಂದು ಆತ್ಮಿಕ ಹೋರಾಟವಾಗಿರುತ್ತದೆ. ಇದು ನಮ್ಮ ವಿರುದ್ಧ ಶತ್ರು ಹೂಡುವ ಮೊದಲ ಅಸ್ತ್ರವಾಗಿದೆ ಮತ್ತು ನಾವು ಈ ವಿಚಾರದಲ್ಲಿ ಜಾಗರೂಕತೆಯಿಂದ ಇರದಿದ್ದರೆ ಅವು ನಮ್ಮ ನಿರ್ಧಾರಗಳನ್ನು ನಿಯಂತ್ರಿಸಲು ಆರಂಭಿಸುತ್ತದೆ ನಮ್ಮ ಮನಸ್ಸನ್ನು ಕವಿದು ದೇವರು ನಮಗಾಗಿ ಇಟ್ಟಿರುವ ಸಂತೋಷವನ್ನು ಅದು ಕಸಿದುಕೊಳ್ಳಬಹುದು. ಆದರೆ ನಮಗೊಂದು ನಿರೀಕ್ಷೆ ಇದೆ. ನಾವು ಭಯದಲ್ಲಿ ಜೀವಿಸಬೇಕೆಂದು ದೇವರು ಬಯಸದೆ ಅದನ್ನು ಜಯಿಸಲು ಬೇಕಾದ ಎಲ್ಲವನ್ನು ಆತನು ನಮಗೆ ಈಗಾಗಲೇ ಅನುಗ್ರಹಿಸಿದ್ದಾನೆ.
ಭಯವು ಅನೇಕ ರೂಪಗಳಲ್ಲಿ ಪ್ರಕಟವಾಗಬಹುದು ವೈಫಲ್ಯ ಹೊಂದಿಬಿಡುವ ಭಯದಲ್ಲಿ ನಾವೆಲ್ಲಿ ತಪ್ಪು ಮಾಡಿಬಿಡುತ್ತೇವೆ ಎಂದುಕೊಂಡು ಅಪಾಯಗಳನ್ನು ಎದುರಿಸುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತೇವೆ. ಇನ್ನೂ ಕೆಲವೊಮ್ಮೆ ಭಯವು ಮುಂದೇನಾಗುತ್ತದೆ ಎನ್ನುವುದರಿಂದ ಆಗುತ್ತದೆ. ಅಂದರೆ ನಮ್ಮ ಭವಿಷ್ಯದ ದಿನಗಳ ಚಿಂತೆಯಿಂದ ಉಂಟಾಗುತ್ತದೆ ಮತ್ತು ಅದರ ಫಲವಾಗಿ ನಾವು ದೇವರ ಯೋಜನೆಯ ಮೇಲೆ ಭರವಸೆ ಇಡಲು ಹೆಣಗಾಡುತ್ತೇವೆ. ಭಯವು ಅಭದ್ರತೆಯ ರೂಪವನ್ನು ಸಹ ಪಡೆದುಕೊಳ್ಳುತ್ತದೆ. ಇದರಲ್ಲಿ ಯಶಸ್ಸು ಗಳಿಸಲು ನಾವಷ್ಟು ಒಳ್ಳೆಯವರಲ್ಲ, ಯೋಗ್ಯರಲ್ಲ, ಚಾಣಾಕ್ಷರಲ್ಲ ಎಂದು ನಿರಂತರವಾಗಿ ಅನಿಸುತ್ತಿರುತ್ತದೆ.
ಆದರೆ 2 ತಿಮೋತಿ 1:7 ಬಲವಾದ ಮಾತೊಂದನ್ನು ನಮಗೆ ಹೇಳುತ್ತದೆ. "ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ." ಎಂದು. ಇದರ ಅರ್ಥ ಭಯ ಎಂಬುದು ದೇವರಿಂದ ಬರುವಂತಹ ಸಂಗತಿಯಲ್ಲ ಬದಲಾಗಿ ಅದೊಂದು ಶತ್ರುವಿನ ತಂತ್ರಗಾರಿಕೆ ಯಾಗಿದೆ. ಸೈತಾನನು ಭಯವನ್ನು ನಮ್ಮನ್ನು ಗಲಿಬಿಲಿಗೊಳಿಸಲೆಂದೇ, ನಮ್ಮನ್ನು ನಾವೇ ಅನುಮಾನಿಸಿಕೊಳ್ಳುವಂತೆ ಮತ್ತು ಮುಖ್ಯವಾಗಿ ದೇವರ ಪ್ರೀತಿಯ ಕುರಿತು ಮತ್ತು ನಮ್ಮ ಜೀವಿತದ ಕುರಿತು ಆತನಿಗಿರುವ ವಾಗ್ದಾನಗಳ ಕುರಿತು ನಾವು ಸಂದೇಹ ಪಡುವಂತೆ ಮಾಡಲು ಬಳಸಿಕೊಳ್ಳುತ್ತಾನೆ.
ನಾವು ಭಯದಲ್ಲಿ ಜೀವಿಸುವಾಗ ಸೈತಾನನು ಇನ್ನೂ ವೃದ್ಧಿಗೊಳ್ಳುತ್ತಾನೆ. ಏಕೆಂದರೆ ಭಯವು ನಮ್ಮನ್ನು ನಿಷ್ಕ್ರಿಯೆಗೊಳಿಸುತ್ತದೆ. ನಾವು ಭಯಗ್ರಸ್ಥರಾದಾಗ ನಮ್ಮಿಂದ ಯಾವುದನ್ನು ಕೂಡ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ನಂಬಿಕೆಯಲ್ಲಿ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ದೇವರು ನಮ್ಮನ್ನು ಮುನ್ನಡೆಸಬೇಕೆಂದು ತೋರುವ ಮಾರ್ಗದಲ್ಲಿಯೂ ನಾವು ಮುಂದುವರಿಯದಂತೆ ಅದು ಮಾಡುತ್ತದೆ. ಭಯವು ನಮ್ಮ ತೀರ್ಮಾನಗಳನ್ನು ಮಂಕುಗೊಳಿಸಿ ದೇವರು ನಮಗಾಗಿ ಇಟ್ಟಿರುವ ವಿಸ್ತಾರ ಚಿತ್ರಣವನ್ನು ನೋಡಲಾಗದಂತೆ ತಡೆಯುತ್ತದೆ. ದೇವರು ನಮಗಾಗಿ ಇಟ್ಟಿರುವ ಸೌಲಭ್ಯಗಳನ್ನು ಸಂರಕ್ಷಣೆಯನ್ನು ನಾವು ನೋಡುವುದನ್ನು ಬಿಟ್ಟು ಯಾವ ಪ್ರಮಾದ ಆಗಿಬಿಡುತ್ತದೋ ಎಂದು ಚಿಂತಿಸುವಂತೆ ಭಯವು ಮಾಡುತ್ತದೆ.
ಆದರೆ ನಮಗಿಲ್ಲೊಂದು ಶುಭ ಸಂದೇಶವಿದೆ. ದೇವರು ನಮ್ಮೊಂದಿಗೆ ಇರುತ್ತೇನೆಂದು ವಾಗ್ದಾನ ಮಾಡಿದ್ದಾನೆ. ಯೇಶಾಯ 41:10 ರಲ್ಲಿ ಆತನು "ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ." ಎಂದು ತಾನೇ ವಾಗ್ದಾನ ಮಾಡಿದ್ದಾನೆ.
ಈ ಒಂದು ಬಲವಾದ ಸತ್ಯವು ನಾವು ಭಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಬಲ್ಲದು. ನಮ್ಮೆಲ್ಲ ಸಂಕಟಗಳಲ್ಲಿ ನಾವು ಏಕಾಂಗಿಗಳಲ್ಲ, ದೇವರು ನಮ್ಮ ಜೊತೆಗಿರುವನು. ಯಾವುದೇ ಸವಾಲುಗಳು, ಸಮಸ್ಯೆಗಳು ಶೋಧನೆಗಳು ಮತ್ತು ಅನಿರೀಕ್ಷಿತ ಪರಿಸ್ಥಿತಿಯಲ್ಲಾಗಲಿ ಆತನು ನಮ್ಮ ಜೊತೆಯಲ್ಲಿರುವನು. ಆತನ ಪ್ರಸನ್ನತೆಯೇ ಭಯಕ್ಕೆ ನಿರೋಧಕ ಮದ್ದಾಗಿದೆ.
ಭಯವನ್ನು ಎದುರಿಸಲು ಇರುವ ಒಂದು ಪ್ರಮುಖ ಮಾರ್ಗವೆಂದರೆ ಅದನ್ನು ಒಪ್ಪಿಕೊಂಡು ಕರ್ತನ ಮುಂದೆ ತರುವಂತದ್ದಾಗಿದೆ. ಸಾಮಾನ್ಯವಾಗಿ ಅಂಧಕಾರದಲ್ಲಿ ಭಯವು ಇಮ್ಮಡಿಸುತ್ತದೆ ನಾವು ಅದನ್ನು ಅಲಕ್ಷ ಮಾಡಿದರೆ ಅದು ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ ಅಥವಾ ಅಂತರಾಳದಲ್ಲಿ ಹುದುಗಿರುತ್ತದೆ. ಆದರೆ ನಾವು ನಮ್ಮ ಭಯವನ್ನು ಕರ್ತನ ಸಮ್ಮುಖಕ್ಕೆ ತೆಗೆದುಕೊಂಡು ಹೋದಾಗ ಆತನು ಆ ಭಯವನ್ನು ತೆಗೆದು ಆ ಸ್ಥಳವನ್ನು ಶಾಂತಿಯಿಂದಲೂ ಭರವಸೆಯಿಂದಲೂ ತುಂಬಿಸುತ್ತಾನೆ. ಯೇಶಾಯ 41:10 ನಾವು ಭಯಪಡಬಾರದೆಂದು ಮಾತ್ರ ಹೇಳಿಲ್ಲ. ನಾವು ಏಕೆ ಭಯಪಡಬಾರದು ಎಂದೂ ಸಹ ಹೇಳಿದೆ. ಏಕೆಂದರೆ ದೇವರು ನಮ್ಮ ಸಂಗಡ ಇದ್ದಾನೆ. ಆತನ ಉಪಸ್ಥಿತಿಯು ಎಂತಹ ಕಷ್ಟಗಳ ಮಧ್ಯದಲ್ಲೂ ಶಾಂತಿಯನ್ನು ಬಲವನ್ನು ಮತ್ತು ಸ್ಪಷ್ಟತೆಯನ್ನು ತಂದುಕೊಡುತ್ತದೆ.
ನಿಮ್ಮ ಜೀವಿತದಲ್ಲಿ ಭಯವು ಬೇರು ಬಿಟ್ಟಿರುವ ಕ್ಷೇತ್ರಗಳು
ಯಾವುವು ಎಂದು ಗುರುತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅದು ವೈಫಲ್ಯ ಹೊಂದಬಹುದೆಂಬ ಭಯವಿರಬಹುದು, ಭವಿಷ್ಯದಲ್ಲಿ ಏನಾಗುವುದು ಎಂಬ ಭಯವಿರಬಹುದು ಅಥವಾ ಮುಂದೆ ಕೊರತೆ ಉಂಟಾಗಬಹುದೇನೋ ಎಂಬ ಭಯವಿರಬಹುದು. ನೀವು ಪ್ರಾರ್ಥಿಸುವಾಗ ನಿಮ್ಮ ಜೀವಿತದ ಮೇಲೆ ದೇವರ ವಾಗ್ದಾನಗಳನ್ನು ನೀವು ದೇವರಿಂದ ಬಲ ಪ್ರೀತಿ ಮತ್ತು ಸಂಯಮದ ಆತ್ಮವನ್ನು ಹೊಂದಿಕೊಂಡಿದ್ದೀರಿ ಎಂದು ತಿಳಿದವರಾಗಿ ಘೋಷಿಸಿರಿ.
ನೆನಪಿಡಿ : ನೀವು ಭಯವನ್ನು ಸತ್ಯದ ಬೆಳಕಿಗೆ ತಂದಾಗ ಆ ಭಯವು ತನ್ನ ಹಿಡಿತವನ್ನು ಕಳೆದುಕೊಳ್ಳುತ್ತದೆ.
ಯೇಶಾಯ 41:10 ಮತ್ತು 2ತಿಮೋತಿ 1:7ರ ವಾಕ್ಯವನ್ನು ಕಂಠಪಾಠ ಮಾಡಿ ನಿಮಗೆ ಭಯ ಉಂಟಾಗುವ ಎಲ್ಲಾ ನೀವು ಈ ವಾಕ್ಯಗಳನ್ನು ಜೋರಾಗಿ ಹೇಳಿಕೊಳ್ಳಿ ಮತ್ತು ದೇವರ ವಾಗ್ದಾನಗಳನ್ನು ನಿಮಗೆ ನೀವೇ ನೆನಪಿಸಿ. ಆತನ ವಾಕ್ಯಕ್ಕೆ ನಿಮ್ಮ ಹೃದಯ ಮತ್ತು ಮನಸ್ಸನ್ನು ಬಲಗೊಳಿಸಲು ಅನುವು ಮಾಡಿಕೊಡಿ.
ಪ್ರಾರ್ಥನೆಗಳು
ಯೇಸು ನಾಮದಲ್ಲಿ ನನ್ನ ಜೀವನದಲ್ಲಿರುವ ಭಯದ ಆತ್ಮವನ್ನು ನಿರಾಕರಿಸುತ್ತೇನೆ. ತಂದೆಯೇ ನೀನು ಅನುಗ್ರಹಿಸಿರುವ ಬಲ ಪ್ರೀತಿ ಮತ್ತು ಸಂಯಮದ ಆತ್ಮದಲ್ಲಿಯೂ ನಿನ್ನ ಪ್ರಸನ್ನತೆಯಲ್ಲಿಯೂ ಭರವಸದಿಂದ ಇರುವಂತೆ ಸಹಾಯ ಮಾಡು. ನನ್ನ ಭಯವನ್ನು ತೆಗೆದು ನಂಬಿಕೆಯಿಂದ ತುಂಬಿಸು ಮತ್ತು ನಿನ್ನ ವಾಗ್ದಾನಗಳ ಸಂಪೂರ್ಣತೆಗೆ ಒಳಗಾಗುವಂತೆ ಯೇಸು ನಾಮದಲ್ಲಿ ನನ್ನನ್ನು ಮಾರ್ಗದರ್ಶಿಸು. ಆಮೆನ್.
Join our WhatsApp Channel
Most Read
● ಆಳವಾದ ನೀರಿನೊಳಗೆ● ಕೊಡುವ ಕೃಪೆ - 1
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ಬೀಜದಲ್ಲಿರುವ ಶಕ್ತಿ-1
● ನಡೆಯುವುದನ್ನು ಕಲಿಯುವುದು
● ಕೆಂಪು ದೀಪದ ಎಚ್ಚರಿಕೆ ಗಂಟೆ
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
ಅನಿಸಿಕೆಗಳು