ಅನುದಿನದ ಮನ್ನಾ
ಬೀಜದಲ್ಲಿರುವ ಶಕ್ತಿ-1
Thursday, 16th of May 2024
3
0
202
Categories :
ಬೀಜದಲ್ಲಿರುವ ಶಕ್ತಿ ( power of the Seed)
ನಿಮ್ಮ ಜೀವಿತದಲ್ಲಿ ನಡೆಯುವ ಎಲ್ಲಾ ಸಂಗತಿಗಳ ಮೇಲೂ ಪ್ರಭಾವ ಬೀರುವಂತಹ ಶಕ್ತಿ ಸಾಮರ್ಥ್ಯವನ್ನು ಒಂದು ಬೀಜವು ಹೊಂದಿರುತ್ತದೆ- ನಿಮ್ಮ ಆತ್ಮಿಕ, ಭೌತಿಕ ಭಾವನಾತ್ಮಕ ಆರ್ಥಿಕ ಹಾಗೂ ಸಾಮಾಜಿಕ ಜೀವನವೆಲ್ಲವೂ ನೀವು ಹಿಂದಿನ ಕಾಲದಲ್ಲಿ ಯಾವ ಬೀಜವನ್ನು ಬಿತ್ತಿದೀರೋ ಅದರ ಫಲವಾಗಿದೆ. ತಂದೆ ತಾಯಿಗಳು ಬಿತ್ತಿದ ಬೀಜದ ಫಲವಾಗಿ ಮಕ್ಕಳು ಅದರ ಬಾಧೆಗೊಳಗಾಗುವುದು ಪ್ರಭಾವ ಕೊಳಗಾಗುವುದು ಅದರ ಪರಿಣಾಮಗಳನ್ನು ಎದುರಿಸುವ ಕಾರ್ಯಗಳು ಉಂಟಾಗುತ್ತವೆ.
ನೋಹನ ಕಾಲದಲ್ಲಿ ದೇವರು ಭೂಮಿಯ ಮೇಲೆ ಕಳುಹಿಸಿದ ಜಲಪ್ರಳಯದ ನಂತರ ದೇವರು ಆಡಿದ ಮೊದಲ ಮಾತು "ಭೂವಿುಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಹಗಲೂ ಇರುಳೂ ಇವುಗಳ ಕ್ರಮ ತಪ್ಪುವದೇ ಇಲ್ಲ..."ಎಂದು (ಆದಿಕಾಂಡ 8:22 ).
ದೇವರ ಆಳ್ವಿಕೆಯಲ್ಲಿ ಭೂಮಿಯ ಮೇಲೆ ನಡೆಯುವಂತಹ ಒಂದು ಮುಖ್ಯ ನಿಯಮವೆಂದರೆ ಅದು "ಬಿತ್ತುವ ಕಾಲ ಮತ್ತು ಕೊಯ್ಯುವ" ಕಾಲದ ನಿಯಮ. ಲೋಕದ ಜನರು ಇದನ್ನು "ಕಾರಣ ಮತ್ತು ಪರಿಣಾಮ" ನಿಯಮ ಎಂದು ಕರೆಯುತ್ತಾರೆ. ಕೆಲವರು ಇದನ್ನು "ಬಿತ್ತುವ ಮತ್ತು ಕೊಯ್ಯುವ" ನಿಯಮ ಎನ್ನುತ್ತಾರೆ. ನೀವು ಯಾವುದೇ ಹೆಸರನ್ನು ಇದಕ್ಕೆ ಕೊಟ್ಟರು ತತ್ವ ಮಾತ್ರ ಅದೇ ಆಗಿದೆ.
ಬೀಜದಲ್ಲಿರುವ ಮೂಲಸಾರವೇನು?
ಬೀಜವು ಹೆಚ್ಚಳ, ಸುಸ್ಥಿರತೆ ಮತ್ತು ವೃದ್ಧಿಯನ್ನು ಖಾತ್ರಿಪಡಿಸುವಂತಹ ಸಾಧನವಾಗಿ ದೇವರಿಂದ ನೇಮಕಗೊಂಡಿದೆ. ಮರಗಳು ಹಣ್ಣಿಗಾಗಿ ಸೃಷ್ಟಿಸಲ್ಪಟ್ಟಿದೆ ಆದರೆ ಆ ಹಣ್ಣಿನಲ್ಲಿಯೇ ಮತ್ತೊಂದು ಮರವನ್ನು ಉಂಟುಮಾಡುವಂತಹ ಬೀಜವಿದೆ. ದೇವರ ಯೋಜನೆ ಏನೆಂದರೆ ಆತನು ಒಮ್ಮೆ ಏನನ್ನಾದರೂ ಸೃಷ್ಟಿಸಿದಾಗ ಆ ವಸ್ತುವು ಅದರಲ್ಲಿಯೇ ತನ್ನ ಬೀಜದ ಶಕ್ತಿಯ ಮೂಲಕ ಪುನರುತ್ಪಾದಿಸುವ ಕಾರ್ಯವನ್ನು ಆರಂಭಿಸುತ್ತದೆ.
ಐದು ವಿಧದ ಬೀಜಗಳು.
ನೀವು ನಿಜವಾಗಿ ಒಮ್ಮೆ ಆಳವಾಗಿ ನೋಡಿದರೆ ಭೂಮಿಯ ಮೇಲಿರುವಂತ ಎಲ್ಲವೂ ಕೂಡ ಬೀಜವೇ ಆಗಿದೆ.
1) ಕೇಳಿಸಿಕೊಳ್ಳುವಂತದ್ದು ಜ್ಞಾನಕ್ಕಾಗಿ ಇರುವ ನನ್ನ ಬೀಜವಾಗಿದೆ.
2) ಜ್ಞಾನ ಬದಲಾವಣೆಗಾಗಿ ಇರುವ ನನ್ನ ಬೀಜವಾಗಿದೆ.
3) ಕ್ಷಮೆಯು ಕರುಣೆ ಹೊಂದಲು ಇರುವ ನನ್ನ ಬೀಜವಾಗಿದೆ.
4) ಮಾನಸಾಂತರವು ನನ್ನನ್ನು ಪುನಸ್ತಾಪಿಸಲು ಇರುವ ನನ್ನ ಬೀಜವಾಗಿದೆ.
ತಪ್ಪಿ ಹೋದ ಮಗನು ಮಾನಸಾಂತರ ಪಟ್ಟನು ಮತ್ತಲ್ಲಿ ಅದರಿಂದ ಅವನ ಜೀವಿತ ಪುನಃ ಸ್ಥಾಪನೆಯಾಯಿತು.
5) ನನ್ನ ಮಾತುಗಳು ಸೃಜನಶೀಲತೆಗೆ ಬೀಜವಾಗಿವೆ.
ನೀವು ಮಾತುಗಳನ್ನು ಆಡುವಾಗ ಅವು ಜೀವನ್ಮಣದ ಶಕ್ತಿಯನ್ನು ಹೊಂದಿರುತ್ತವೆ ಮತ್ತು ನಿಮ್ಮ ಮಾತುಗಳಲ್ಲಿ ಸೃಜನಶೀಲತೆಯ ಬಲವಿರುವುದನ್ನು ನೀವು ಕಾಣಬಹುದು.
'ನಿಮ್ಮ ಬಳಿ ಏನೂ ಇಲ್ಲ ಎಂದು' ಎಂದಿಗೂ ಹೇಳಬೇಡಿರಿ. ಈ ಭೂಮಿ ಮೇಲೆ ತನ್ನ ಬಳಿ ಒಂದಾದರೂ ಬೀಜ ಕೂಡ ಇಲ್ಲ ಎನ್ನುವ ಕಡುಬಡವ ಅಥವಾ ಕಡುಬಡವಿಯಾದ ಒಬ್ಬ ವ್ಯಕ್ತಿಯೂ ಸಹ ಇಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ.
ರೋಮ 12:3 ಹೇಳುತ್ತದೆ, ದೇವರು ಪ್ರತಿಯೊಬ್ಬರಿಗೂ ಒಂದೊಂದು ಅಳತೆಯಲ್ಲಿ ತನ್ನ ಕೃಪೆಯನ್ನು ಕೊಟ್ಟಿದ್ದಾನೆ ಎಂದು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಏನೋ ಒಂದನ್ನು ದೇವರು ಸಂಚಯನವಾಗಿ ಇಟ್ಟಿದ್ದಾನೆ.
ಪ್ರವಾದಿಯಾದ ಎಲೀಷನು ಆ ವಿಧವೆಯ ಬಳಿಗೆ ಹೋಗಿ ಒಂದು ಪ್ರಶ್ನೆಯನ್ನು ಕೇಳಿದನು. ಅದೇನಂದರೆ "ನಿನ್ನ ಮನೆಯಲ್ಲಿ ಏನಿದೆ?" ಎಂದು ಅದಕ್ಕೆ ಆಕೆ "ನನ್ನ ಮನೆಯಲ್ಲಿ ಮೊಗೆ ಎಣ್ಣೆ ಹೊರತಾಗಿ ಬೇರೇನೂ ಇಲ್ಲ" ಎಂದು ಪ್ರತ್ಯುತ್ತರ ಕೊಟ್ಟಳು. (1ಅರಸು 4:1-7) "ನಿಮ್ಮಲ್ಲಿ ಅನೇಕರು ನಮ್ಮ ಬಳಿ ಏನೂ ಇಲ್ಲ. ಏನು ಮಾಡುವುದೆಂದು ತಿಳಿಯುತ್ತಿಲ್ಲ" ಎಂದು ಹೇಳುತ್ತೀರಿ. ದೇವರು ನಿಮಗಾಗಿಯೇ ಇಟ್ಟಿರುವ ಬೀಜವು ನಿಮ್ಮ ಜೀವಿತದಲ್ಲಿದೆ ನೀವು ಅದನ್ನು ಹೊರ ತರಲು ಶಕ್ತರ ಆದರೆ ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ ನಿಮ್ಮ ಜೀವಿತದಲ್ಲಿ ದೊಡ್ಡ ಫಸಲನ್ನು ಕಾಣುವಿರಿ.
ಹೀಗೆ ಪ್ರಾರ್ಥಿಸಿ, ಕರ್ತನೇ ನೀನು ನನ್ನ ಜೀವಿತಕ್ಕಾಗಿ ಇಟ್ಟಿರುವ ಬೀಜವನ್ನು ಕಂಡುಕೊಳ್ಳುವಂತೆ ನನ್ನ ಕಣ್ಣುಗಳನ್ನು ತೆರೆ ಮಾಡು (ಮೂರು ನಿಮಿಷಗಳವರೆಗೆ ಕಣ್ಣು ಮುಚ್ಚಿ ಪ್ರಾರ್ಥಿಸಿ)
1) ಸೃಷ್ಟಿಯಲ್ಲಿ ಸಾಕಾರಗೊಂಡ ಬೀಜಗಳು
"ತರುವಾಯ ದೇವರು - ಭೂವಿುಯು ಹುಲ್ಲನ್ನೂ ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಸಲಿ; ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನೂ ಅವುಗಳ ಜಾತಿಗನುಸಾರವಾಗಿ ಹುಟ್ಟಿಸಲಿ ಎಂದು ಹೇಳಿದನು; ಹಾಗೆಯೇ ಆಯಿತು.12ಭೂವಿುಯಲ್ಲಿ ಹುಲ್ಲು ಬೆಳೆಯಿತು; ತಮ್ಮತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು; ತಮ್ಮತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಕಾಣಿಸಿದವು. ದೇವರು ಅದನ್ನು ಒಳ್ಳೇದೆಂದು ನೋಡಿದನು."(ಆದಿಕಾಂಡ 1:11-12 )
ದೇವರು ತನ್ನ ಸೃಷ್ಟಿಯ ಸಮಯದಲ್ಲಿ ಸೃಷ್ಟಿಸಿದಂತಹ ಮರಗಳು ಮತ್ತು ಇತರ ಜೀವಿಗಳು ಬೀಜದ ಶಕ್ತಿಯನ್ನು ಹೊಂದಿವೆ ಎಂದು ಖಚಿತಪಡಿಸಿದ್ದಾನೆ ಬೀಜವು ಪ್ರತಿ ಜೀವಿಗಳಿಗೆ ತನ್ನದೇ ಪ್ರಕಾರವನ್ನು ಹುಟ್ಟಿಸುವಂತಹ ಅಧಿಕಾರವನ್ನು ಕೊಟ್ಟಿದೆ. ದೇವರು ಸೃಷ್ಟಿಸಿದ ಪ್ರತಿಯೊಂದು ಜೀವಿಯಲ್ಲೂ ಬೀಜವಿತ್ತು ಆತನು ಪ್ರತಿ ಬೀಜದಲ್ಲಿಯೂ ಫಸಲನ್ನು ಉತ್ಪಾದಿಸುವ- ತನ್ನಂತೆ ನಕಲು ಮಾಡುವ- ಮಹತ್ತರವಾಗಿ ಸಂಖ್ಯಾಭಿವೃದ್ಧಿ ಮಾಡುವ ಶಕ್ತಿಯನ್ನು ಅದರೊಳಗೆ ಇಟ್ಟನು.
ದೇವರು ಸಸ್ಯ ಪ್ರಭೇದಗಳನ್ನು ತಾವೇ ತಮ್ಮ ಸಂತಾನವನ್ನು ಸೃಷ್ಟಿ ಮಾಡಿಕೊಳ್ಳುವಂತೆ ಸೃಷ್ಟಿಸಿದನು. ಸಂತಾನೋತ್ಪತ್ತಿ ಸಾಮರ್ಥ್ಯವಿಲ್ಲದಂತ ಸೃಷ್ಟಿ ಮಾಡಿದ ಹಣ್ಣುಗಳೇನಾದರೂ ಇದ್ದಿದ್ದರೆ ಅವು ದೇವರ ಸೃಷ್ಟಿ ಕಾರ್ಯ ಮುಗಿದ ಕೂಡಲೇ ಕಣ್ಮರೆಯಾಗಿ ಬಿಡುತ್ತಿದ್ದವು.
ದೇವರು ಪ್ರಾಣಿಗಳನ್ನು ಉಂಟುಮಾಡಿದಾಗ ಆತನು ಅವುಗಳಿಗೆ ಸಂತಾನೋತ್ಪತ್ತಿ ಮಾಡುವ ಶಕ್ತಿಯನ್ನು ಕೊಟ್ಟನು. ಈ ಕಾರಣದಿಂದಾಗಿಯೇ ಪ್ರಾಣಿಗಳು ಹೆಚ್ಚಿನ ಪ್ರಮಾಣದಲ್ಲಿ ಸಂಖ್ಯಾಭಿವೃದ್ಧಿ ಆಗುತ್ತವೆ. ಪ್ರಾಣಿಗಳೂ ತಮ್ಮದೇ ತದ್ರೂಪದಲ್ಲಿ ಸಂತಾನೋತ್ಪತ್ತಿಯನ್ನು ಮಾಡಿಕೊಳ್ಳುವಂತೆ ಸೃಷ್ಟಿಸಲಾಗಿದೆ.
2).ಸಂತಾನೋತ್ಪತ್ತಿಯ ಬೀಜ
"ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ. ಎಂದು ಆದಿಕಾಂಡ 3:15 ರಲ್ಲಿ ದೇವರು ಹೇಳುತ್ತಾನೆ.
ಇದು ಸತ್ಯವೇದದಲ್ಲಿರುವ ಮೆಸ್ಸಿಯನ್ನು ಕುರಿತ ಮೊದಲ ಪ್ರವಾದನೆಯಾಗಿದೆ. ಈ ಪ್ರವಾದನೆಯು ಮುಂದೆ ಬರಲಿರುವ ಕರ್ತನಾದ ಯೇಸುಕ್ರಿಸ್ತನಿಗೆ ಸಂಬಂಧಿಸಿದ ಪ್ರವಾದನೆಯಾಗಿದೆ. ಈ ಪ್ರವಾದನೆಯು ಬರುವಂತಹ ಮೆಸ್ಸಿಯನು ಏನನ್ನು ಸಾಧಿಸಲು ಹೋಗಲಿದ್ದಾನೆ ಎಂಬುದನ್ನು ಪ್ರಕಟಿಸುತ್ತದೆ.
ಇಲ್ಲಿ "ಸಂತಾನ" ಎಂಬ ಪದವನ್ನು ಗಮನಿಸಿ. ದೇವರು ಮನುಷ್ಯರಿಗೆ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ನಮ್ಮ ಸಂತತಿಯನ್ನು "ಬೀಜಗಳೂ" ಎಂದು ಕರೆಯಬಹುದು. ನಮ್ಮ ಮಕ್ಕಳನ್ನು ನಮ್ಮ "ಬೀಜ" ಎಂದು ಕರೆಯಬಹುದು. ಬೀಜಗಳ ಮೂಲಕ ನಾವು ಭೂಮಿಯಲ್ಲಿ ಸಂಖ್ಯಾಭಿವೃದ್ಧಿ ಮಾಡುತ್ತಾ ಹೋಗುತ್ತೇವೆ. ಪ್ರತಿಯೊಂದು ಜೀವಿಯು ತನ್ನ ಸಂತಾನೋತ್ಪತ್ತಿಯ ಬೀಜವನ್ನು ತನ್ನೊಳಗೆ ಹೊಂದಿದೆ.
ಪ್ರಾರ್ಥನೆಗಳು
ತಂದೆಯೇ, ನನ್ನೊಳಗೆ ನೀನು ಹುದುಗಿಸಿಟ್ಟಿರುವ "ಬೀಜದ ಶಕ್ತಿಯ" ಪ್ರಕಟಣೆಗಾಗಿ ನಿನಗೆ ಸ್ತೋತ್ರ. ನಾನು ನಂಬಿಕೆಯ ಬೀಜವನ್ನು ಮೇಲಿಂದ ಮೇಲೆ ಬಿತ್ತುತ್ತಾ ಹೋಗುವೆನು. ಇದರಿಂದ ಬಹಳವಾದ ಫಲವನ್ನು ಈ ಲೋಕದಲ್ಲಿಯೂ ನಿತ್ಯ ಲೋಕದಲ್ಲಿಯೂ ಹೊಂದುವೆನು ಎಂದು ಯೇಸು ನಾಮದಲ್ಲಿ ನಂಬುತ್ತೇನೆ. ಆಮೇನ್.
Join our WhatsApp Channel
Most Read
● ಎರಡು ಸಾರಿ ಸಾಯಬೇಡಿರಿ● ನಂಬಿಕೆಯ ಶಾಲೆ
● ಆಟ ಬದಲಿಸುವವ
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು