ಅನುದಿನದ ಮನ್ನಾ
2
1
129
ತಿರಸ್ಕಾರವನ್ನು ಜಯಿಸುವುದು
Saturday, 1st of November 2025
Categories :
ನಂಬಿಕೆ (Faith)
ತಿರಸ್ಕಾರವು ಮಾನವ ಅಸ್ತಿತ್ವದ ಅನಿವಾರ್ಯ ಭಾಗವಾಗಿದ್ದು ಮಿತಿಯಿಲ್ಲದ ಹೃದಯದ ಸಂಕಟವಾಗಿದೆ. ಆಟದ ಮೈದಾನದ ಆಟದಲ್ಲಿ ಕೊನೆಯದಾಗಿ ಆಯ್ಕೆಯಾದ ಚಿಕ್ಕ ಮಗುವಿನಿಂದ ಹಿಡಿದು ಕನಸಿನ ಅವಕಾಶದಿಂದ ದೂರ ಸರಿದ ವಯಸ್ಕನವರೆಗೆ, ಆಯ್ಕೆಯಾಗದಿರುವಿಕೆ ಎನ್ನುವಂತದ್ದು ಕುಟುಕು ಗಾಯಗಳನ್ನು ಬಿಡಬಹುದು. ಆದರೆ ಈ ನೋವನ್ನು ಯಾರಾದರೂಬಹು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ ಅದು ಯೇಸುಮಾತ್ರವೇ.
"ನನ್ನ ತಂದೆತಾಯಂದಿರು ನನ್ನನ್ನು ಬಿಟ್ಟುಬಿಟ್ಟರೂ, ಯೆಹೋವ ದೇವರು ನನ್ನನ್ನು ಸೇರಿಸಿಕೊಳ್ಳುವರು".(ಕೀರ್ತನೆ 27:10 NLT)
ಸುವಾರ್ತೆಗಳನ್ನು ನಾವು ನೋಡುವಾಗ ನಿರಾಕರಣೆಗೆ ಹೊರತಾಗದ ರಕ್ಷಕನನ್ನು ನಾವು ನೋಡುತ್ತೇವೆ. ಆತನು ತನ್ನ ತವರೂರಾದ ನಜರೆತ್‌ನಲ್ಲಿ, ಆತನನ್ನು ಚಿಕ್ಕಂದಿನಿಂದಲೂ ಬೆಳೆದಿದ್ದನ್ನು ನೋಡಿದವರು ಆತನಿಂದ ದೂರ ಸರಿದರು. ಆತನ ಸ್ವಂತ ಸಹೋದರರೇ ಆತನ ಧ್ಯೇಯವನ್ನು ಅನುಮಾನಿಸಿದರು. ಆತನು ತಾನು ಪ್ರೀತಿಸಿದ ಜನರ ಬಳಿಗೆ, ಇಸ್ರೇಲ್‌ನ ಅಂದರೆ ತಾನು ಆರಿಸಿಕೊಂಡಿದ್ದ ಜನರ ಬಳಿಗೆ ಬಂದನು ಆದರೆ ಅವರೇ ಆತನನ್ನು ತಿರಸ್ಕರಿಸಿದರು.
ಶಿಲುಬೆಯ ಮೇಲೆಯೂ ಸಹ, ಆತನ ಗಾಡ ಅಂಧಕಾರದ ಸಮಯದಲ್ಲಿ, ಆತನ ತಂದೆಯೂ ಆತನನ್ನು ತ್ಯಜಿಸಿದಂತೆ ತೋರುತ್ತಿತ್ತು. (ಮತ್ತಾಯ 27:46)
ಆದರೂ, ಯೇಸು ಭೂಮಿಗೆ ಬರುವ ನೂರಾರು ವರ್ಷಗಳ ಮೊದಲೇ ಪ್ರವಾದಿಯಾದ ಯೆಶಾಯನು ಆತನ ಕುರಿತು ಪ್ರವಾದನೆ ನುಡಿದಿದ್ದೇನೆಂದರೆ: "ಆತನು ತಿರಸ್ಕೃತನೂ ಮಾನವಕುಲದಿಂದ ನಿರಾಕರಿಸಲಾದವನೂ, ದುಃಖಿತ ಮನುಷ್ಯನೂ, ನೋವನ್ನು ಅನುಭವಿಸಿದವನೂ ಆಗಿದ್ದನು. ನಾವು ನಮ್ಮ ಮುಖಗಳನ್ನು ಆತನಿಂದ ಮರೆಮಾಡಿಕೊಂಡೆವು. ಆತನು ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಆತನನ್ನು ಅತ್ಯಲ್ಪವಾಗಿ ಎಣಿಸಿದೆವು." (ಯೆಶಾಯ 53:3)
ಆದಾಗ್ಯೂ, ತಿರಸ್ಕಾರಕ್ಕೆ ತನ್ನ ಮುಖವನ್ನು ಒಡ್ದುವಾಗಲೂ ಸಹ, ಯೇಸುವಿಗೆ ತಾನು ಯಾರೆಂದು ತಿಳಿದಿತ್ತು. ಆತನು ತನ್ನ ಉದ್ದೇಶ, ಧ್ಯೇಯ ಮರಿಯದೇ ಮತ್ತು ಮುಖ್ಯವಾಗಿ, ತಾನು ದೇವರ ಪ್ರೀತಿಯ ಮಗನಾಗಿ ತನ್ನ ಗುರುತನ್ನು ಅರ್ಥಮಾಡಿಕೊಂಡನು. ಮತ್ತು ಇದುವೇ ಆಳವಾದ ಜ್ಞಾನ
ಕರ್ತನಾದ ಯೇಸುವಿನಲ್ಲಿ ನಿಮ್ಮ ಗುರುತನ್ನು ನೀವು ಹೆಚ್ಚು ತಿಳಿದುಕೊಂಡಷ್ಟೂ, ನಿಮಗೆ ಹೆಚ್ಚಿನ ಶಾಂತಿ ಸಿಗುತ್ತದೆ.” ತಿರಸ್ಕಾರದ ಕುಟುಕುಗಳು ನಮ್ಮ ಹೃದಯಗಳನ್ನು ಚುಚ್ಚಬಹುದು, ಆದರೆ ನಮ್ಮ ಮೌಲ್ಯವು ಲೋಕದ ಕ್ಷಣಿಕ ಮಾನದಂಡಗಳಿಂದ ನಿರ್ಧರಿಸಲ್ಪಡುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ನಮ್ಮ ನಿಜವಾದ ಗುರುತು ದೇವರ ಮಕ್ಕಳಾಗುವುದರಲ್ಲಿದೆ. ಲೋಕವು ನಮ್ಮ ಕಡೆಗೆ ಬೆನ್ನು ತಿರುಗಿಸಿದಾಗ, ದೇವರ ಅಪ್ಪುಗೆಯು ಸ್ಥಿರವಾಗಿರುತ್ತದೆ.
"ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರ ಆತ್ಮರು ನಮ್ಮ ಆತ್ಮದೊಂದಿಗೆ ಸಾಕ್ಷಿಕೊಡುತ್ತಾರೆ. ನಾವು ಈಗ ಮಕ್ಕಳಾಗಿರುವುದಾದರೆ, ಬಾಧ್ಯರಾಗಿರುತ್ತೇವೆ; ದೇವರಿಗೆ ಬಾಧ್ಯರು ಮತ್ತು ಕ್ರಿಸ್ತ ಯೇಸುವಿನೊಂದಿಗೆ ಸಹಬಾಧ್ಯರಾಗಿದ್ದೇವೆ. ನಾವು ಕ್ರಿಸ್ತ ಯೇಸುವಿನ ಶ್ರಮೆಗಳಲ್ಲಿ ನಿಜವಾಗಿಯೂ ಪಾಲುಗಾರರಾಗಿದ್ದರೆ, ಅವರ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು." ಎಂದು ಅಪೊಸ್ತಲ ಪೌಲನು ರೋಮನ್ನರು 8:16-17 (NLT) ನಲ್ಲಿ ಬರೆದಿದ್ದಾನೆ.
ಅದನ್ನು ಊಹಿಸಿನೋಡಿ! ವಿಶ್ವಾಸಿಗಳಾಗಿ, ನಮ್ಮ ಗುರುತು ರಾಜಾಧಿರಾಜನ ಉತ್ತರಾಧಿಕಾರಿಗಳಾಗಿ ಇರುವುದರಲ್ಲಿ ಬೇರೂರಿದೆ. ಈ ಬೆಳಕಿನಲ್ಲಿ, ಲೋಕದ ತಿರಸ್ಕಾರವು ಅಪ್ರಸ್ತುತವಾಗುತ್ತದೆ.
ಹಾಗಾದರೆ, ನಾವು ತಿರಸ್ಕಾರವನ್ನು ಹೇಗೆ ಜಯಿಸಬಹುದು?
ದೇವರ ವಾಕ್ಯದಲ್ಲಿ ನಮ್ಮನ್ನು ನಾವು ಮುಳುಗಿಸಿಕೊಳ್ಳುವ ಮೂಲಕ, ಕ್ರಿಸ್ತನಲ್ಲಿ ನಾವು ಯಾರೆಂಬುದು ನಿರಂತರವಾಗಿ ನೆನಪಿಸಿಕೊಳ್ಳುವ ಮೂಲಕ ಮತ್ತು ಆತನು ನಮಗಾಗಿ ಹೊಂದಿರುವ ಬೇಷರತ್ತಾದ ಪ್ರೀತಿಯ ಸತ್ಯವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನಾವು ತಿರಸ್ಕಾರವನ್ನು ಜಯಿಸಬಹುದು.
ಯೇಸುವಿನ ಜೀವನದಿಂದ ಒಂದು ಎಲೆಯನ್ನು/ ಕಾರ್ಡನ್ನು ತೆಗೆದು ನೋಡಿ. ತಿರಸ್ಕಾರವನ್ನು ಎದುರಿಸಿದಾಗ, ಆತನಲ್ಲಿ ಕಹಿತನ ಉಂಟಾಗಲಿಲ್ಲ. ಬದಲಾಗಿ, ಆತನು ತನ್ನ ಸಂದೇಶವನ್ನು ಸ್ವಾಗತಿಸುವ ಮತ್ತು ಆಚರಿಸುವ ಸ್ಥಳಗಳನ್ನು ಹುಡುಕಿಹೋದನು. ಅನುಮೋದನೆಯನ್ನು ಪಡೆಯಲು ಆತನು ಸಮಯವನ್ನು ವ್ಯರ್ಥ ಮಾಡಲಿಲ್ಲ; ಅವನು ದೈವಿಕ ಕಾರ್ಯಾಚರಣೆಯಲ್ಲಿದ್ದನು. ಯಾವಾಗಲೂ ನೆನಪಿಡಿ, ನಿಮ್ಮ ಮೌಲ್ಯವು ಇಷ್ಟಗಳು ಮತ್ತು ಹಂಚಿಕೆಗಳ ಸಂಖ್ಯೆ ಅಥವಾ ಜನಸಮೂಹದ ಚಪ್ಪಾಳೆಯೊಂದಿಗೆ ಸಂಬಂಧ ಹೊಂದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ದೇವರ ಅನುಮೋದನೆಯನ್ನು ಪಡೆಯಿರಿ.
"ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ.(ಗಲಾತ್ಯ 1:10)
ತಿರಸ್ಕಾರವನ್ನು ಜಯಿಸುವಲ್ಲಿ, ನಿಮ್ಮ ಹೃದಯವು ನಿಮಗಾಗಿ ತಿರಸ್ಕರಿಸಲ್ಪಟ್ಟವನಲ್ಲಿ ಸಾಂತ್ವನವನ್ನು ಕಂಡುಕೊಳ್ಳಲಿ ಇದರಿಂದ ನೀವು ಶಾಶ್ವತವಾಗಿ ಸ್ವೀಕರಿಸಲ್ಪಡುತ್ತೀರಿ.
Bible Reading: Luke 10 - 11
ಪ್ರಾರ್ಥನೆಗಳು
ಪರಲೋಕದಲ್ಲಿರುವ ತಂದೆಯೇ, ತಿರಸ್ಕಾರವು ನಮ್ಮನ್ನು ಗಾಯಗೊಳಿಸಿದಾಗ, ನಿಮ್ಮಲ್ಲಿರುವ ನಮ್ಮ ನಿಜವಾದ ಮೌಲ್ಯವನ್ನು ನಮಗೆ ನೆನಪಿಸಿ. ನಮ್ಮ ಹೃದಯಗಳನ್ನು ಬಲಪಡಿಸಿ ಮತ್ತು ನಿಮ್ಮ ಮಗನಾದ ಕ್ರಿಸ್ತನಲ್ಲಿ ನಮ್ಮ ಗುರುತನ್ನು ಆಧಾರವಾಗಿಟ್ಟುಕೊಳ್ಳಿ. ಯೇಸುಕ್ತಿಸ್ತನ ಮೇಲಿನ ನಿಮ್ಮ ಪ್ರೀತಿ ನನ್ನ ಅಸ್ತಿತ್ವವನ್ನು ತುಂಬಲಿ. ಆಮೆನ್.
Join our WhatsApp Channel
Most Read
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮಗೆ ಮಾರ್ಗದರ್ಶಕರು ಏಕೆ ಅವಶ್ಯ?
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಸಹವಾಸದಲ್ಲಿರುವ ಅಭಿಷೇಕ
ಅನಿಸಿಕೆಗಳು
