ಅನುದಿನದ ಮನ್ನಾ
1
1
46
ದೇವರು ನಿಮ್ಮಿಂದ ದೂರವಾಗಿದ್ದಾನೆ ಎಂದು ಎನಿಸುವಾಗ ಹೇಗೆ ಪ್ರಾರ್ಥಿಸಬೇಕು?
Wednesday, 27th of August 2025
Categories :
ಪ್ರಾರ್ಥನೆ (prayer)
ನನ್ನ ಜೀವನದಲ್ಲಿ ಒಂದು ಸಮಯದಲ್ಲಿ ದೇವರು ನನ್ನಿಂದ ದೂರವಾಗಿಬಿಟ್ಟಿದ್ದಾನೆ ಅಥವಾ ನನ್ನ ಜೀವನದ ಕುರಿತು ಆತನಿಗೆ ಯಾವುದೇ ಕಾಳಜಿ ಇಲ್ಲ ಎಂದು ನನಗೆ ಅನಿಸಿತ್ತು.
ದೇವರೊಂದಿಗೆ ಸಂಪರ್ಕವಿಲ್ಲದಿರುವುದರಿಂದ ನೀವು ಪ್ರಾರ್ಥಿಸಲು ಹೆಣಗಾಡುತ್ತೀರಾ? ನಿಮ್ಮಲ್ಲಿ ಕೆಲವರು ಬಹುಶಃ ಅದೇ ರೀತಿ ಭಾವಿಸಬಹುದು, ದೇವರು ನಾವು ತಲುಪಲು ತುಂಬಾ ದೂರದಲ್ಲಿರುವವನು ಎಂದು ಭಾವಿಸಬಹುದು. ನಿಮ್ಮ ದೈನಂದಿನ ಜೀವನದಲ್ಲಿ ದೇವರ ಉಪಸ್ಥಿತಿಯನ್ನು ನೀವು ಅನುಭವಿಸದಿದ್ದರೂ ಸಹ, ಆತನು ಯಾವಾಗಲೂ ನಿಮಗಾಗಿ ಇರುತ್ತಾನೆ ಎಂದು ಇಷ್ಟು ವರ್ಷಗಳ ನನ್ನ ಅನುಭವದ ಮೂಲಕ ತಿಳಿದುಕೊಂಡಿದ್ದೇನೆ. ನೀವು ಆತನ ಕಡೆಗೆ ನಿಮ್ಮ ಬಾಹುಗಳನ್ನು ಚಾಚದೆ ಹೋಗಿದ್ದರೂ ಆತನು ನಮಗೆ ಹತ್ತಿರವಾಗಿಯೇ ಇದ್ದಾನೆ.
ಸತ್ಯ ಸರಳವಾಗಿದೆ. ನಿಮ್ಮ ಜೀವನದಲ್ಲಿ ದೇವರ ಕಡೆಯಿಂದ ಹೆಚ್ಚಿನ ಅನುಭವವನ್ನು ಪಡೆದುಕೊಳ್ಳಲು ನೀವು ಬಯಸುವುದಾದರೆ, ನೀವು ಬೇಡಿಕೊಳ್ಳಬೇಕು. ನೀವು ಬೈಬಲ್ ಓದುವಾಗ ಆತನು ನಿಮಗೆ ಏನು ಹೇಳುತ್ತಿದ್ದಾನೆಂದು ಕೇಳಿಸಿಕೊಳ್ಳಲು ಬಯಸುವುದಾದರೆ ಬೇಡಿಕೊಳ್ಳಿರಿ ಸಾಕು.
“ ಹಾಗೆಯೇ ನಾನು ನಿಮಗೆ ಹೇಳುವುದೇನಂದರೆ, ಬೇಡಿಕೊಳ್ಳುತ್ತಾ ಇರಿ, ನಿಮಗೆ ದೊರೆಯುವುದು; ಹುಡುಕುತ್ತಾ ಇರಿ ನಿಮಗೆ ಸಿಕ್ಕುವುದು; ತಟ್ಟುತ್ತಾ ಇರಿ, ನಿಮಗೆ ತೆರೆಯುವುದು. ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯುವುದು. (ಲೂಕ 11:9-10 )
ಆದ್ದರಿಂದ ನೀವು ದೇವರಿಂದ ದೂರವಿದ್ದೀರಿ ಎಂದು ಭಾವಿಸಿದರೆ, ಆತನ ಸಾನಿಧ್ಯದ ಕುರಿತು ಹೆಚ್ಚು ಜಾಗೃತರಾಗಲು ನಿಮಗೆ ಸಹಾಯ ಮಾಡುವಂತೆ ಆತನನ್ನು ಬೇಡಿಕೊಳ್ಳಿ. ಕರ್ತನು ತನ್ನ ಸ್ವಂತ ಮಗ ಮತ್ತು ಮಗಳಂತೆ ನಿಮ್ಮನ್ನು ಪ್ರೀತಿಸುತ್ತಾನೆ. ಆತನ ಸಾನಿಧ್ಯದಲ್ಲಿರಲು ನೀವು ಹಕ್ಕನ್ನು ಗಳಿಸುವ ಅಗತ್ಯವಿಲ್ಲ. ಯೇಸು ಈಗಾಗಲೇ ಬೆಲೆಯನ್ನು ಪಾವತಿಸಿ ನಿಮಗಾಗಿ ಮತ್ತು ನನಗಾಗಿ ಇದನ್ನು ಮಾಡಿ ಮುಗಿಸಿದ್ದಾನೆ!
ನಿಮ್ಮ ಮತ್ತು ದೇವರ ನಡುವಿನ ಅಂತರವನ್ನು ಕಡಿಮೆ ಮಾಡುವ ಒಂದು ಮಾರ್ಗವೆಂದರೆ ನೀವು ಹೇಗೆ ಭಾವಿಸುತ್ತಿದ್ದೀರಿ ಎಂಬುದನ್ನು ಆತನಿಗೆ ಹೇಳುವುದು. ಇದು ನಿಮ್ಮ ಮೇಲಿನ ಹೊರೆಯನ್ನು ತೆಗೆದು ಯೇಸುವಿಗೆ ಒಪ್ಪಿಸುತ್ತದೆ. ನಾವು ನಮ್ಮ ಸ್ವಂತ ಬಲದ ಬದಲಾಗಿ, ಆತನ ಬಲದ ಮೇಲೆ ಆಧಾರಗೊಳ್ಳಬೇಕು ಎಂದು ಆತನು ಬಯಸುವವನಾಗಿದ್ದಾನೆ (ಮತ್ತಾಯ 11:28–30)
Bible Reading: Jeremiah 46-48
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ನನ್ನ ಮುರಿದ ಮನಸ್ಸನ್ನು ಮತ್ತು ಹೃದಯದ ಎಲ್ಲಾ ನೋವುಗಳನ್ನು ನಿನಗೆ ಅರಿಕೆಮಾಡುತ್ತೇನೆ. ನನ್ನೊಳಗಿನ ಸರ್ವವೂ ನಿನ್ನನ್ನೇ, ನನ್ನ ದೇವರನ್ನೇ ಪ್ರಾರ್ಥಿಸುತ್ತದೆ. ದಯವಿಟ್ಟು ನನಗೆ ಸಹಾಯ ಮಾಡು!ಏಕೆಂದರೆ ನೀನು ಅದನ್ನು ಮಾಡಬಲ್ಲೆ ಎಂದು ನನಗೆ ತಿಳಿದಿದೆ; ಆದ್ದರಿಂದ ನಾನು ನಿನ್ನ ಬಳಿಗೆ ಬರುತ್ತೇನೆ. ಆಮೆನ್.
Join our WhatsApp Channel

Most Read
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ಮೂರು ಆಯಾಮಗಳು
● ಎಸ್ತರಳ ರಹಸ್ಯವೇನು?
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ಸಾಧನೆಯ ಪರೀಕ್ಷೆ.
ಅನಿಸಿಕೆಗಳು