ಅನುದಿನದ ಮನ್ನಾ
3
1
95
ಪ್ರಾಚೀನ ಇಸ್ರೇಲ್‌ನ ಮನೆಗಳಿಂದ ಕಲಿಯಬೇಕಾದ ಪಾಠಗಳು
Thursday, 24th of April 2025
Categories :
ಪ್ರಾರ್ಥನೆ (prayer)
ವಾತಾವರಣ (Atmosphere)
"ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ;.." (ಕೀರ್ತನೆ 127:1)
ಇಸ್ರೇಲ್‌ನ ಆದಿ ದಿನಗಳಲ್ಲಿ, ಹೆಚ್ಚಿನ ಮನೆಗಳನ್ನು ಅಡಿಪಾಯಕ್ಕಾಗಿ ಕಲ್ಲುಗಳು ಮತ್ತು ಗೋಡೆಗಳು ಮತ್ತು ಮಣ್ಣಿನ ನೆಲಗಳು ಇಂಥ ಸರಳ ವಸ್ತುಗಳಿಂದ ನಿರ್ಮಿಸಲಾಗುತ್ತಿತ್ತು. ಆದಾಗ್ಯೂ, ಈ ಮನೆಗಳ ಕೆಲವು ಮುಖ್ಯ ಕೋಣೆಗಳಲ್ಲಿ ಸುಂದರವಾದ ಮೊಸಾಯಿಕ್ ಅಂಚುಗಳು ಇರುತ್ತಿದ್ದದ್ದು ಪ್ರಾಚೀನ ಕಾಲದಲ್ಲಿಯೂ ಸಹ ಜನರು ತಮ್ಮ ಸುತ್ತಮುತ್ತಲಿರುವ ಪ್ರದೇಶಗಳನ್ನು ಸುಂದರವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂಬುದನ್ನು ತೋರಿಸುತ್ತದೆ.
ಆದರೆ ಒಂದು ಮನೆಯ ಯಾವುದೇ ಭೌತಿಕ ರಚನೆಯು ಅದನ್ನು ವಿಶೇಷವಾಗಿಸುವುದಿಲ್ಲ. "ಹೃದಯವಿರುವ ಸ್ಥಳವೇ ಮನೆ" ಎಂಬ ಮಾತಿನಂತೆ, ಆ ಮನೆಯು ಎಂತದ್ದಾಗಿದೆ ಎಂಬುದನ್ನು ಅದರ ವಾತಾವರಣವನ್ನು ಸೃಷ್ಟಿಸುವವರಾದ ಮನೆಯಲ್ಲಿ ವಾಸಿಸುವ ಜನರಿಂದ ನಿರ್ಧರಿಸಲ್ಪಡುತ್ತದೆ.
ಸತ್ಯವೇದದಲ್ಲಿ , ಬಲವಾದ ಅಡಿಪಾಯದ ಮೇಲೆ ನಮ್ಮ ಜೀವನವನ್ನು ನಿರ್ಮಿಸಿಕೊಳ್ಳಬೇಕಾದ ಅನೇಕ ಮಹತ್ವವಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಉದಾಹರಣೆಗೆ, ಇಬ್ಬರು ನಿರ್ಮಾಣಕಾರರು ಕುರಿತು ಹೇಳುವ ಸಾಮ್ಯವನ್ನು ಯೇಸು ಇದಾಗಿದೆ "ಆದದರಿಂದ, ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದದರಿಂದ ಅದು ಬೀಳಲಿಲ್ಲ. ಆದರೆ ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಅದು ಧಡಮ್ಮನೆ ಕಡುಕೊಂಡು ಬಿತ್ತು.” (ಮತ್ತಾಯ 7:24-27)
ಅದೇ ರೀತಿ, ಜ್ಞಾನೋಕ್ತಿ 14:1 ಹೇಳುತ್ತದೆ,"ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದು ಬಿಡುವಳು." ಈ ವಚನವು ನಮಗೆ ಮತ್ತು ನಮ್ಮ ಪ್ರೀತಿಪಾತ್ರರಿಗೆ ಪೋಷಣೆ ಮತ್ತು ಬೆಂಬಲ ನೀಡುವ ಮೂಲಕ ಮನೆಯ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂಬುದನ್ನು ನೆನಪಿಸುತ್ತದೆ. ಹಾಗಾದರೆ ನಮ್ಮ ಮನೆಗಳಲ್ಲಿ ಪೋಷಣೆ ಮತ್ತು ಬೆಂಬಲ ನೀಡುವ ಮನೆಯ ವಾತಾವರಣವನ್ನು ನಾವು ಹೇಗೆ ನಿರ್ಮಿಸಬಹುದು?
ಈ ಕುರಿತು ಪರಿಗಣಿಸಬೇಕಾದ ಕೆಲವು ಪ್ರಾಯೋಗಿಕ ತತ್ವಗಳು ಇಲ್ಲಿವೆ. ನೀವು ಅವುಗಳನ್ನು ಆಚರಣೆಗೆ ತಂದರೆ, ನಿಮ್ಮ ಮನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ನೀವು ನೋಡುವವರಾಗುತ್ತೀರಿ ಎಂದು ನಾನು ನಂಬುತ್ತೇನೆ.
1.ಸಂಬಂಧಗಳಿಗೆ ಆದ್ಯತೆ ನೀಡಿ
ನಮ್ಮ ಜೀವನದಲ್ಲಿ ವ್ಯಕ್ತಿಗಳೇ ಹೆಚ್ಚು ಮುಖ್ಯವಾದವರು ಎಂಬುದನ್ನು ನಮ್ಮ ಜೀವನದಲ ಕಡೇ ದಿನಗಳಲ್ಲಿ ನಾವು ಅರಿತು ಕೊಳ್ಳುತ್ತೇವೆ. ಆದ್ದರಿಂದ ನಮ್ಮ ಸಂಗಾತಿಗಳು, ಮಕ್ಕಳು ಮತ್ತು ಕುಟುಂಬ ಇತರ ಸದಸ್ಯರೊಂದಿಗಿನ ನಮ್ಮ ಸಂಬಂಧಗಳನ್ನು ಕಾದುಕೊಳ್ಳಲು ನಾವು ನಮ್ಮ ಸಮಯ ಮತ್ತು ಶಕ್ತಿಯನ್ನು ಹೂಡಿಕೆ ಮಾಡಬೇಕಾಗುತ್ತದೆ. " ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ ಆಧಾರ; ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ತಿಳುವಳಿಕೆಯೇ ಉಪಕರಣ."ಜ್ಞಾನೋಕ್ತಿ 24:3-4 ಹೇಳುತ್ತದೆ. ನಿಜವಾದ ಬುದ್ಧಿವಂತಿಕೆಯು ನಮ್ಮ ಸುತ್ತಲಿನ ಜನರಿಗೆ ನಾವು ಹೇಗೆ ಬೆಲೆಕೊಡುತ್ತೇವೆ ಎನ್ನುವುದರಿಂದ ಪ್ರಾರಂಭವಾಗುತ್ತದೆ.
2.ಪ್ರೀತಿ ಮತ್ತು ದಯೆಯ ವಾತಾವರಣವನ್ನು ಬೆಳೆಸಿಕೊಳ್ಳಿ
ಕ್ಷಮೆ, ತಾಳ್ಮೆ ಮತ್ತು ದಯೆ ಆರೋಗ್ಯಕರ ಮನೆ ನಿರ್ಮಿಸಲು ಬೇಕಾದ ಅತ್ಯಗತ್ಯ ಅಂಶಗಳಾಗಿವೆ. "ನೀವು ಪೂರ್ಣ ವಿನಯ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ." ಎಫೆಸ 4:2-3 ಹೇಳುತ್ತದೆ.ಈ ಗುಣಗಳನ್ನು ಅಭ್ಯಾಸ ಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಅವು ನಮ್ಮ ಮನೆಗಳನ್ನು ಸ್ವಸ್ಥಪಡಿಸುವ ಮತ್ತು ಪುನಃಸ್ಥಾಪನೆ ಮಾಡುವ ಸ್ಥಳಗಳಾಗಿ ಪರಿವರ್ತಿಸಬಲ್ಲದು.
3.ಸೌಂದರ್ಯ ಮತ್ತು ಕ್ರಮವನ್ನು ರಚಿಸಿ
ಇದು ಮನೆಯ ಪ್ರಮುಖ ಅಂಶವಲ್ಲದಿದ್ದರೂ, ಸೌಂದರ್ಯಾತ್ಮಕವಾಗಿ ಆಹ್ಲಾದಕರವಾದ ಮತ್ತು ಸುಸಂಘಟಿತವಾದ ಜಾಗವನ್ನು ಸೃಷ್ಟಿಸುವುದಕ್ಕೆ ಏನಾದರೂ ಇರಬೇಕು . ಇದು ತಾಜಾ ಹೂವುಗಳು ಅಥವಾ ಕಲಾಕೃತಿಗಳಂತಹ ಸರಳ ಸ್ಪರ್ಶಗಳು ಅಥವಾ ನಿಮ್ಮ ಮನೆಯನ್ನು ಆವರಿಸಿರುವ ಅನಗತ್ಯ ಕಸವನ್ನು ತೊಡೆದುಹಾಕುವಂತಹ ಸ್ವಲ್ಪ ದೊಡ್ಡ ಯೋಜನೆಗಳನ್ನು ಅದು ಒಳಗೊಂಡಿರಬಹುದು. "ದೇವರು ಪ್ರತಿಯೊಂದನ್ನು ತನ್ನ ಸೂಕ್ತ ಸಮಯದಲ್ಲಿ ಸುಂದರವಾಗಿ ನಿರ್ಮಿಸಿದ್ದಾನೆ." ಪ್ರಸಂಗಿ 3:11 ಹೇಳುತ್ತದೆ. ಮನೆಗಳಲ್ಲಿ ಸೌಂದರ್ಯವನ್ನು ಹೆಚ್ಚಿಸುವ ಮೂಲಕ, ನಾವು ದೇವರ ಸೃಜನಶೀಲತೆ ಮತ್ತು ಸೌಂದರ್ಯದ ಪ್ರೀತಿಯನ್ನು ಪ್ರತಿಬಿಂಬಿಸಬಹುದು.
4.ನಂಬಿಕೆಯ ಸಂಸ್ಕಾರವನ್ನು ನಿರ್ಮಿಸಿ.
ನಿಯಮಿತ ಕುಟುಂಬ ಪ್ರಾರ್ಥನೆ, ವೈಯಕ್ತಿಕ ಆರಾಧನಾ ಸಮಯ ಮತ್ತು ದೇವರ ವಾಕ್ಯದ ಅಧ್ಯಯನವು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದೇವರೊಡನೆ ಅನ್ಯೋನ್ಯತೆ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ." ಆದರೆ ನಾನೂ ನನ್ನ ಮನೆಯವರು ಯೆಹೋವನನ್ನೇ ಸೇವಿಸುವೆವು " ಎಂದು ಯೆಹೋಶುವ 24:15 ರಲ್ಲಿ ಹೇಳುತ್ತಾನೆ . ನಿಮ್ಮ ಮನೆಯಲ್ಲಿ ನಂಬಿಕೆಯನ್ನು ಆದ್ಯತೆಯನ್ನಾಗಿ ಮಾಡುವ ಮೂಲಕ, ಈ ಜೀವಿತಾವಧಿಯನ್ನು ಮೀರಿಯೂ ರಕ್ಷಿಸಲ್ಪಡುವ ಅಡಿಪಾಯವನ್ನು ನೀವು ನಿರ್ಮಿಸಿಕೊಳ್ಳಬಹುದು. ಈ ಸರಳ ಆದರೆ ಪ್ರಾಯೋಗಿಕ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ನಮಗಾಗಿ ಮತ್ತು ಇತರರಿಗಾಗಿಯೂ ನಿಜವಾದ ಪವಿತ್ರವಾದ ಮನೆಯನ್ನು ರಚಿಸಬಹುದು.
Bible Reading: 1 Kings 5-7
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಮನೆಯ ಪ್ರತಿಯೊಂದು ಮೂಲೆ ಮೂಲೆಗೂ ನಿನ್ನ ಪ್ರಸನ್ನತೆಯನ್ನು ನಾವು ಆಹ್ವಾನಿಸುತ್ತೇವೆ. ನಮ್ಮ ಮನೆಯ ಸುತ್ತಲೂ ನೀವೇ ಅಗ್ನಿ ಪ್ರಾಕಾರವಾಗಿದ್ದು ನೀವೇ ಮಹಿಮೆ ಹೊಂದಿರಿ ಎಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್
Join our WhatsApp Channel

Most Read
● ಧೈರ್ಯವಾಗಿರಿ.!● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ದೇವರು ಹೇಗೆ ಒದಗಿಸುತ್ತಾನೆ #2
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ನೀವು ಎಷ್ಟು ವಿಶ್ವಾಸಾರ್ಹರು?
ಅನಿಸಿಕೆಗಳು