ಅನುದಿನದ ಮನ್ನಾ
ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
Monday, 10th of June 2024
3
2
200
Categories :
ಪ್ರಾರ್ಥನೆ (prayer)
ಸಮಾಧಾನ(Peace)
ಪ್ರಾರ್ಥನೆ ಎಂಬುದು ಒಂದು ಪ್ರಾಕೃತ ಚಟುವಟಿಕೆಯಲ್ಲ. ಪ್ರಾಕೃತ ಮನುಷ್ಯನಿಗೆ ಪ್ರಾರ್ಥನೆಯು ಸುಲಭವಾಗಿ ಬರುವುದಿಲ್ಲ ಮತ್ತು ಅನೇಕರು ಈ ವಿಚಾರದಲ್ಲಿ ಬಹಳ ಪ್ರಯಾಸ ಪಡುತ್ತಾರೆ. ಇಂದಿನ ನಾಗಲೋಟದ ದಿನಮಾನಗಳಲ್ಲಿ ಎಲ್ಲಾ ಸಂಗತಿಗಳು ಬೇಗ ಬೇಗ ಆಗಬೇಕು ಎನ್ನುವ ಭರದಲ್ಲಿ ಓಡುತ್ತಿರುವ ಜನಗಳಿಗೆ ಪ್ರಾರ್ಥನೆ ಎಂಬುದು ಒಂದು ಕಿರಿಕಿರಿ ಎನಿಸುವ ಕಾರ್ಯವಾಗಿ ಬಿಟ್ಟಿದೆ. ಆದರೂ ಪ್ರತಿಯೊಬ್ಬ ಮನುಷ್ಯನು ತನ್ನ ಮೊಣಕಾಲುಗಳ ಮೇಲೆ ನಿಲ್ಲುವಂತಹ ಮತ್ತು ಕಣ್ಣಿಗೆ ಕಾಣುವ ಕಣ್ಣಿಗೆ ಕಾಣಿಸಿದಂತ ಸರ್ವವನ್ನೂ ಸೃಷ್ಟಿ ಮಾಡಿದವನಿಗೆ (ಯೋಹಾನ 3:3)ಕೂಗಿ ಮೊರೆ ಇಡುವಂಥ ಪರಿಸ್ಥಿತಿಗಳು ಪ್ರತಿಯೊಬ್ಬ ಮನುಷ್ಯನ ಜೀವಿತದಲ್ಲೂ ಬಂದೇ ಬರುತ್ತದೆ.
ನೀವು ಮನ ಮುರಿದ, ದುರಂತವನ್ನು ನೋಡಿದ ಅಥವಾ ವೈಫಲ್ಯ ಕಂಡ ವ್ಯಕ್ತಿಗೆ "ನೀವು ಮೊಣಕಾಲೂರಿ ಕರ್ತನಿಗೆ ಪ್ರಾರ್ಥಿಸಿ ನಿಮ್ಮ ಹೃದಯ ಭಾರವೆನೆಲ್ಲಾ ಒಪ್ಪಿಸಿದಾಗ ಏನಾಯಿತು" ಎಂದು ಕೇಳಿ ನೋಡಿ. ನಾನು ಈ ರೀತಿ ಕೇಳಿದಾಗ ಕೆಲವರು ನನಗೆ ಹೇಳಿದ್ದೇನೆಂದರೆ "ನಾನೊಂದು ರೀತಿಯ ಆಳವಾದ ಶಾತಿಯನ್ನು ಕಂಡುಕೊಂಡೆ, ಅದನ್ನು ಮಾತಿನಲ್ಲಿ ವಿವರಿಸಲಾಗದು" ಎನ್ನುವರು ಮತ್ತು ಕೆಲವರು "ನನ್ನ ಭಾರವನ್ನೆಲ್ಲಾ ಯಾರೋ ತೆಗೆದುಕೊಂಡಂತೆ ಅನಿಸುತ್ತದೆ, ನನಗೆ ಎಂದೂ ಈ ರೀತಿ ಆಗಿರಲಿಲ್ಲ." ಎನ್ನುವರು.
ನನ್ನ ತಾಯಿಯು ತೀರಿ ಹೋಗಿ ದೇವರ ಮಹಿಮೆಗೆ ಸೇರಿಕೊಂಡರು ಎಂಬ ಸುದ್ದಿಯನ್ನು ವೈದ್ಯರಿಂದ ನಾನು ಕೇಳಲ್ಪಟ್ಟಾಗ, ಒಂದು ದೊಡ್ಡ ದುಃಖವು ನನ್ನ ಹೃದಯವನ್ನು ಪ್ರವೇಶಿಸಿತು. ಆಗ ನನಗೆ ಅಳಲೂ ಸಹ ಆಗಲಿಲ್ಲ. ನನ್ನನ್ನು ಹೊರತುಪಡಿಸಿ ನನ್ನ ಸುತ್ತಲಿರುವವರೆಲ್ಲರೂ ಅಳುತ್ತಿದ್ದರೂ ನನಗೆ ಮಾತ್ರ ಅದು ಸಾಧ್ಯವಾಗಲಿಲ್ಲ. ನಾನು ಬಹಳ ದಿನಗಳವರೆಗೂ ನನ್ನ ಪ್ರಾರ್ಥನೆಯ ಸಮಯದಲ್ಲಿ ಪ್ರಯಾಸ ಪಟ್ಟೆ.
ಒಂದು ದಿನ ರಾತ್ರಿ ವೇಳೆಯಲ್ಲಿ ನಾನು ಪ್ರಾರ್ಥಿಸುವಾಗ ಒಂದು ಆಳವಾದ ಭರವಸೆಯು ನನ್ನ ಆತ್ಮದಲ್ಲಿ ತುಂಬಿಕೊಂಡಿತ್ತು. ನಾನದನ್ನು ವಿವರಿಸಲಾರೆ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ನಾನು ಬಾಹ್ಯ ಕಿವಿಗಳಿಂದ ದೇವರ ಸ್ವರವನ್ನು ಕೇಳಲಿಲ್ಲ. ಆದರೆ ನನ್ನ ಆಂತರ್ಯದ ವ್ಯಕ್ತಿಗೆ "ಈ ಎಲ್ಲಾ ಪರಿಸ್ಥಿತಿಗಳ ಮಧ್ಯದಲ್ಲೂ ನೀನು ನನ್ನನ್ನು ನಂಬುತ್ತೀಯ" ಎಂದು ಕರ್ತನು ಕೇಳುವಂಥದ್ದನ್ನು ಕೇಳಿಸಿಕೊಂಡಾಗ, ನನ್ನ ದುಃಖದ ಕಟ್ಟೆ ಹೊಡೆದು ಜೋರಾಗಿ ಅಳಲಾರಂಭಿಸಿದೆನು ಮತ್ತು "ಹೌದು ಕರ್ತನೇ" ಎಂದು ಹೇಳಿದೆನು. ಒಂದು ನಾನು ಹೇಳಲು ಅಶಕ್ಯವಾದಂತ ಆಳವಾದ ಶಾಂತಿಯು ನನ್ನಲ್ಲಿ ತುಂಬಲಾರಂಭಿಸಿತು. ನಿಜಕ್ಕೂ ನನ್ನ ಭಾರವನ್ನು ನನ್ನಿಂದ ತೆಗೆದುಕೊಂಡಂತೆ ಭಾಸವಾಯಿತು.
ಆ ದಿನದಲ್ಲಿಯೇ ನಾನು ಫಿಲಿಪ್ಪಿ 4:6-7ರಲ್ಲಿರುವ ಈ ಕೆಳಕಂಡ ವಾಕ್ಯದ ನೂತನ ತಿಳುವಳಿಕೆಯನ್ನು ಪಡೆದುಕೊಂಡೆ.
"ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು" (ಫಿಲಿಪ್ಪಿಯವರಿಗೆ 4:6-7)
ಈ ಒಂದು ದೈವೀಕ ಶಾಂತಿಯನ್ನು ಅನುಭವಿಸಬೇಕಾದರೆ ನೀವು ಯಾವುದೋ ಬೆಟ್ಟವನ್ನು ಹತ್ತಬೇಕಿಲ್ಲ ಅಥವಾ ಸಾವಿರಾರು ಮೈಲಿಗಳಷ್ಟು ಪ್ರಯಾಣ ಮಾಡಬೇಕಿಲ್ಲ. ನೀವು ಈ ಒಂದು ದೈವಿಕ ಶಾಂತಿಯನ್ನು ನೀವು ಇರುವಲ್ಲಿಯೇ ಅನುಭವಿಸಬಹುದು. ನೀವು ಪ್ರತಿನಿತ್ಯವೂ ಕರ್ತನ ಬಳಿಗೆ ಬರುವಾಗ ಮತ್ತು ಆತನೊಂದಿಗೆ ಆಳವಾದ ಅನ್ಯೂನತೆಯನ್ನು ಹೊಂದಿಕೊಳ್ಳುವಾಗ ಆತನಲ್ಲಿನ ಈ ಶಾಂತಿಯು ನಿಮ್ಮನ್ನು ಕಾಪಾಡಿ, ಎಲ್ಲಾ ಭಯಗಳನ್ನು ತೊಲಗಿಸಿ, ನಿಮಗೆ ಉಲ್ಲಾಸವನ್ನು ತರುತ್ತದೆ. ದೇವರ ಶಾಂತಿಯು ವಾಸ್ತವವಾದದ್ದು ಮತ್ತು ಈ ಒಂದು ವಾಸ್ತವಿಕವಾದ ಶಾಂತಿಯನ್ನು ನೀವು ಪ್ರತಿದಿನವೂ ಅನುಭವಿಸಬೇಕೆಂದು ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ.
ಪ್ರಾರ್ಥನೆಗಳು
ತಂದೆಯಾದ ಓ ದೇವರೇ, ನಿನ್ನ ನಂಬಿಗಸ್ತಿಕೆಯ ಪ್ರಕಾರ, ನಿನ್ನ ಪ್ರಾಮಾಣಿಕವಾದ ಪ್ರೀತಿಯ ಪ್ರಕಾರ, ನಿನ್ನ ಮಹತ್ತಾದ ಕರುಣೆಯ ಪ್ರಕಾರ ನನಗೆ ನಿನ್ನ ಕೃಪೆ ದೊರಕಲಿ. ನಾನು ನಿನ್ನ ಸಾನಿಧ್ಯಕ್ಕೆ ಬರುವಾಗಲೆಲ್ಲಾ ನಿನ್ನ ದೈವಿಕ ಶಾಂತಿಯನ್ನು ಇಂದು ಮತ್ತು ಎಂದೆಂದಿಗೂ ನನ್ನ ಜೀವಮಾನದಲ್ಲೆಲ್ಲಾ ಅನುಭವಿಸುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು.ಆಮೆನ್.
Join our WhatsApp Channel
Most Read
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ● ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ನಂಬಿಕೆ ಎಂದರೇನು ?
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ಕರ್ತನೊಂದಿಗೆ ನಡೆಯುವುದು
● ಯೇಸುವನ್ನು ನೋಡುವ ಬಯಕೆ
ಅನಿಸಿಕೆಗಳು