ಅನುದಿನದ ಮನ್ನಾ
ಕರ್ತನೊಂದಿಗೆ ನಡೆಯುವುದು
Saturday, 24th of August 2024
1
1
148
Categories :
ಶಿಷ್ಯತ್ವ (Discipleship)
"ದೇವರು ಕೇವಲ ತನಗೆ ಜೋತುಬೀಳುವ ಮದಲ ಗಿತ್ತಿಯನ್ನು ಹುಡುಕದೇ ತನ್ನೊಂದಿಗೆ ನಡೆಯುವ ಸಂಗಾತಿಯನ್ನು ಎದುರು ನೋಡುತ್ತಿದ್ದಾನೆ"ಎಂದು ಒಬ್ಬರು ಹೇಳಿದ್ದಾರೆ. ಆದಿಯಲ್ಲಿ ದೇವರು ಆದಾಮ ಹವ್ವರೊಂದಿಗೆ ಅಂತಹ ಒಂದು ಬಾಂದವ್ಯವನ್ನು ಹೊಂದಿದ್ದನು.
"ತರುವಾಯ ಯೆಹೋವದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ ಆ ಸ್ತ್ರೀಪುರುಷರು..."(ಆದಿಕಾಂಡ 3:8)
ಹನೋಕನೇ ದೇವರೊಂದಿಗೆ ನಡೆಯುವುದರಲ್ಲಿರುವ ನಿಜವಾದ ಆನಂದವನ್ನು ಪ್ರಕಟಿಸಿದ ಮೊದಲ ವ್ಯಕ್ತಿಯಾಗಿದ್ದಾನೆ.
"ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ಗಂಡು ಹೆಣ್ಣು ಮಕ್ಕಳನ್ನು ಪಡೆದು ದೇವರ ಅನ್ಯೋನ್ಯತೆಯಲ್ಲಿ ಮುನ್ನೂರು ವರುಷ ಬದುಕಿದನು. ಅವನು ಬದುಕಿದ ಕಾಲವೆಲ್ಲಾ ಮುನ್ನೂರ ಅರುವತ್ತೈದು ವರುಷ. ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡದ್ದರಿಂದ ಕಾಣದೆ ಹೋದನು."(ಆದಿಕಾಂಡ 5:22-24 )
ಈಗ ಅಷ್ಟೇ ವೇಗವಾಗಿ ಹೊಸ ಒಡಂಬಡಿಕೆಯನ್ನು ನೋಡಿದಾಗ ಕರ್ತನಾದ ಯೇಸು ನೀರಿನ ಮೇಲೆ ನಡೆದುದ್ದನ್ನು ನಾವು ಕಂಡುಕೊಳ್ಳುತ್ತೇವೆ. "ಅದಕ್ಕೆ ಪೇತ್ರನು - ಸ್ವಾಮೀ, ನೀನೇಯಾದರೆ ನನಗೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವದಕ್ಕೆ ಅಪ್ಪಣೆಕೊಡು ಅನ್ನಲು ಆತನು - ಬಾ ಅಂದನು."(ಮತ್ತಾಯ 14:28)
"ಪೇತ್ರನು ನೀರಿನ ಮೇಲೆ ನಡೆಯಲು ಪ್ರಯತ್ನಿಸಬಾರದಾಗಿತ್ತು" ಎಂದು ಅನೇಕರು ಪೇತ್ರನನ್ನು ಟೀಕಿಸುತ್ತಾರೆ. ಒಂದು ಕಾಲದಲ್ಲಿ ಬಹಳ ಬಲವಾಗಿ ದೇವರಿಂದ ಉಪಯೋಗಿಸಲ್ಪಟ್ಟ ವಿಲಿಯಂ ಕೇರಿಯವರು ಒಮ್ಮೆ ಹೀಗೆ ಹೇಳಿದ್ದಾರೆ " ದೇವರ ಮಹಾನ್ ಕಾರ್ಯಗಳನ್ನು ನಿರೀಕ್ಷಿಸಿ ಮತ್ತು ದೇವರಿಗಾಗಿ ಮಹತ್ತರ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ ಎಂದು "
ನೋಡಿರಿ ನಾವು ದೇವರೊಂದಿಗೆ ನಡೆಯಬೇಕೆಂಬುದು ದೇವರ ಬಯಕೆಯಾಗಿದ್ದು ಆತನೊಂದಿಗೆ ನಡೆಯಬೇಕೆಂಬ ಬಯಕೆಯನ್ನು ಆತನೇ ನಮ್ಮೊಳಗೆ ಇಟ್ಟಿದ್ದಾನೆ.ಈ ಕಾರಣದಿಂದಲೇ ಪೇತ್ರನು ನೀರಿನ ಮೇಲೆ ನಡೆಯಲು ಆಸೆ ಪಟ್ಟನೆಂದು ನಾನು ನಂಬುತ್ತೇನೆ.
ಒಂದು ದೊಡ್ಡ ಪ್ರಶ್ನೆ,: ಕರ್ತನೊಂದಿಗೆ ನಾನು ಹೇಗೆ ನಡೆಯಬಲ್ಲೆ?
ಇಲ್ಲಿ ಪೇತ್ರನು ಏನೆಂದು ಹೇಳಿದೆನೆಂದು ಗಮನಿಸಿ ನೋಡಿ " ಕರ್ತನೇ ನೀರಿನ ಮೇಲೆ ನಾನು ನಡೆದು ಬರುವಂತೆ ಆಜ್ಞಾಪಿಸು "ಎಂದನು. ಇನ್ನೊಂದು ವಿಧದಲ್ಲಿ ಹೇಳುವುದಾದರೆ "ಕರ್ತನೆ ನಾನು ನೀರಿನ ಮೇಲೆ ನಡೆದು ಬರುವಂತೆ ಒಂದು ಮಾತನ್ನು ಹೇಳು ಸಾಕು "ಎಂದು. ಯೇಸು ಒಂದು ಮಾತು ಹೇಳಿದರೆ ಅದು ಖಂಡಿತವಾಗಿ ನೆರವೇರುತ್ತದೆ ಎಂಬುದನ್ನು ಪೇತ್ರನು ತನ್ನ ಅನುಭವದಿಂದ ತಿಳಿದುಕೊಂಡಿದ್ದನು.
"ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು. "(ಮತ್ತಾಯ 14:29)
ನೀರಿನ ಮೇಲೆ ನಡೆಯುವಂತಹದ್ದು ಒಂದು ಕಷ್ಟಕರವಾದ ಪ್ರತಿಪಾದನೆಯಂತೆ ತೋರುತ್ತದೆ. ಆದರೆ ದೇವರ ವಾಕ್ಯಕ್ಕೆ ಅನುಸಾರವಾಗಿ ನಡೆಯುವಂತಹದು ಹೆಚ್ಚು ಕಡಿಮೆ ನೀರಿನ ಮೇಲೆ ನಡೆಯುವಂತದ್ದೇ ಆಗಿದೆ. ನಾನೀಗ ನಿಮ್ಮನ್ನು ನಿಜವಾಗಿಯೂ ನೀವು ನೀರಿನ ಮೇಲೆ ನಡೆಯಬೇಕು ಎಂದು ಹೇಳುತ್ತಿಲ್ಲ. ಆದರೆ ನಾನು ಮತ್ತು ನೀವು ಕರ್ತನೊಂದಿಗೆ ನಡೆಯಬೇಕು ಎಂದರೆ ಕರ್ತನ ವಾಕ್ಯದ ಆಧಾರದಲ್ಲಿ ನಡೆಯಬೇಕೆಂಬುದಾಗಿದೆ.ನಮ್ಮ ಆಯ್ಕೆಗಳು ನಮ್ಮ ನಿರ್ಧಾರಗಳು ನಮ್ಮ ಆಸೆಗಳೆಲ್ಲಾ ದೇವರ ವಾಕ್ಯದ ತತ್ವದ ಆಧಾರದಲ್ಲಿ ಇರುವಂತದಾದರೆ ನಾವು ಎಂದಿಗೂ ಮುಳುಗುವುದಿಲ್ಲ. ಬದಲಾಗಿ ನಾವು ಕರ್ತನೊಂದಿಗೆ ನಡೆದು ಇತಿಹಾಸ ಸೃಷ್ಟಿಸುತ್ತೇವೆ. ನಂಬಿಕೆ ಎಂದರೆ ಕತ್ತಲಿನ ಜಿಗಿತವಲ್ಲ. ಬದಲಾಗಿ ದೇವರ ವಾಕ್ಯದ ಆಧಾರದ ಮೇಲಿನ ಜಿಗಿತವಾಗಿದೆ.. ಜಯಶಾಲಿಗಳ ಅಪರೂಪವಾದಂತಹ ಗುಂಪನ್ನು ನಾನು ಮತ್ತು ನೀವು ಸೇರಬೇಕಾದರೆ ನಮ್ಮ ಜೀವಿತವು ಸಂಪೂರ್ಣವಾಗಿ ದೇವರ ವಾಕ್ಯದ ಮೇಲೆಯೇ ಆಧಾರ ಗೊಂಡಿರಬೇಕು.
ದಾವೀದನು ತನ್ನ ಜೀವನವನ್ನು ಏಕೆ ದೇವರ ವಾಕ್ಯದ ಮೇಲೆ ಆಧಾರ ಗೊಳಿಸಬೇಕು ಎಂಬ ರಹಸ್ಯವನ್ನು ಅರ್ಥ ಮಾಡಿಕೊಂಡಿದ್ದನು. ಇದುವೇ ಅವನನ್ನು ಕರ್ತನೊಂದಿಗೆ ನಿಕಟವಾಗಿ ನಡೆಯುವಂತೆ ಸಾಧ್ಯ ಮಾಡಿದ ಒಂದು ರಹಸ್ಯವಾಗಿದೆ. ಅಷ್ಟು ಮಾತ್ರವಲ್ಲದೆ ಇದುವೇ ಅವನನ್ನು ಇಸ್ರಾಯೆಲ್ಯಾರ ಅರಸನನ್ನಾಗಿ ಮಾಡಿತು.
"ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ. ನಿನ್ನ ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ; ಅದನ್ನು ನೆರವೇರಿಸುವೆನು. ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ; ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು. ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು ದಯವಿಟ್ಟು ಅಂಗೀಕರಿಸು; ನಿನ್ನ ವಿಧಿಗಳನ್ನು ನನಗೆ ಕಲಿಸು. ನಾನು ಯಾವಾಗಲೂ ಕೈಯಲ್ಲಿ ಜೀವ ಹಿಡಿದಿದ್ದೇನೆ; ಆದರೂ ನಿನ್ನ ಧರ್ಮಶಾಸ್ತ್ರವನ್ನು ಮರೆಯುವದಿಲ್ಲ."(ಕೀರ್ತನೆಗಳು 119:105-109)
ದಾವಿದನು ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ಎದುರಿಸುವಾಗ ತನ್ನ ನಿರ್ಧಾರಗಳ ಪ್ರಕ್ರಿಯೆಯು ದೇವರ ವಾಕ್ಯದಿಂದ ಪ್ರಭಾವಕ್ಕೆ ಒಳಗಾಗಬೇಕೆಂದು ಒಪ್ಪಿಸಿಕೊಟ್ಟನು. ಅವನು ಕೆಲವೊಂದು ಸಮಯದಲ್ಲಿ ದೇವರ ವಾಕ್ಯದೊಂದಿಗೆ ರಾಜೀ ಮಾಡಿಕೊಂಡು ಶೀಘ್ರ ಪರಿಹಾರಗಳನ್ನು ಕಂಡುಕೊಂಡರೂ, ಅವನು ಯಾವಾಗಲೂ ದೇವರ ವಾಕ್ಯದ ಮೇಲೆಯೇ ನೆಲೆಗೊಂಡಿದ್ದನು.
ಕರ್ತನು ದಾವೀದನನ್ನು ತನ್ನ ಹೃದಯಕ್ಕೆ ಒಪ್ಪುವ ಮನುಷ್ಯ ಎಂದು ಕರೆದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. (ಅ. ಕೃ 13:22)
ಪ್ರಾರ್ಥನೆಗಳು
ತಂದೆಯೇ ನನ್ನ ಜೀವಿತವನ್ನು ನಿನ ವಾಕ್ಯದ ಆಧಾರದ ಮೇಲೆ ನಡೆಸುವಂತೆ ನನಗೆ ಸಹಾಯ ಮಾಡು. ನಾನು ಸತ್ಯ ವೇದವನ್ನು ಓದುವಾಗ ದಯಮಾಡಿ ನನ್ನೊಡನೆ ಮಾತನಾಡು. ನನ್ನನ್ನು ವಿಚಲಿತಗೊಳಿಸುವ ಎಲ್ಲಾ ಇತರೆ ಸ್ವರಗಳನ್ನು ಯೇಸು ನಾಮದಲ್ಲಿ ತೆಗೆದುಹಾಕು ಆಮೆನ್
Join our WhatsApp Channel
Most Read
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಸಹವಾಸದಲ್ಲಿರುವ ಅಭಿಷೇಕ
● ಆತನ ಬಲದ ಉದ್ದೇಶ.
● ಯೇಸುವಿನ ಹೆಸರು.
● ನೀವು ಎಷ್ಟು ವಿಶ್ವಾಸಾರ್ಹರು?
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
ಅನಿಸಿಕೆಗಳು