ಅನುದಿನದ ಮನ್ನಾ
1
1
55
ಮಧ್ಯಸ್ಥಿಕೆಯ ಕುರಿತ ಪ್ರವಾದನಾ ಪಾಠ - 2
Wednesday, 13th of August 2025
Categories :
ಪ್ರಾರ್ಥನೆ (prayer)
ಯಾಕೋಬನ ಮಕ್ಕಳು ಈಗ ಈಜಿಪ್ಟ್ ತಲುಪಿದ್ದಾರೆ ಎಂಬುದು ದೃಶ್ಯ. ಅವರು ತಮ್ಮ ಸಹೋದರನಾದ ಯೋಸೇಫನನ್ನು ಭೇಟಿಯಾಗಿದ್ದಾರೆ, ಆದರೆ ಅವನು ಇನ್ನೂ ಅವರಿಗೆ ತನ್ನನ್ನು ಪ್ರಕಟಪಡಿಸಿಕೊಂಡಿಲ್ಲ. ತನ್ನ ಸಹೋದರರ ಹೃದಯಗಳು ನಿಜವಾಗಿಯೂ ಬದಲಾಗಿವೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಯೋಸೇಫನು ಮತ್ತೊಂದು ಪರೀಕ್ಷೆಯನ್ನು ಕಾರ್ಯರೂಪಕ್ಕೆ ಇಲ್ಲಿ ತಂದನು.
ತನ್ನ ಬೆಳ್ಳಿಯ ಬಟ್ಟಲನ್ನು ಬೆನ್ಯಾಮೀನನ ಚೀಲದಲ್ಲಿ ಇಡಬೇಕೆಂದು ಯೋಸೇಫನು ತನ್ನ ವ್ಯವಸ್ಥಾಪಕನಿಗೆ ಹೇಳುತ್ತಾನೆ ತಪಾಸಣೆ ಪ್ರಕ್ರಿಯೆಯಲ್ಲಿ, ಬೆಳ್ಳಿಯ ಬಟ್ಟಲು ಬೆನ್ಯಾಮೀನನ ಬಳಿ ಸಿಕ್ಕಿ ಬೀಳುತ್ತದೆ, ಆಗ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.
ಸಹೋದರರು ಈಜಿಫ್ಟಿಗೆ ಹಿಂತಿರುಗುತ್ತಾರೆ. ಈಗ ಮತ್ತೆ, ಎಲ್ಲಾ ಸಹೋದರರು ಮೌನವಾಗಿದ್ದಾರೆ (ಬಹುಶಃ, ಅವರು ಮಾತನಾಡಲು ಆಗದಷ್ಟು ಆಘಾತಕ್ಕೊಳಗಾಗಿದ್ದಾರೆ). ಆದಾಗ್ಯೂ, ಯೆಹೂದನು ತನ್ನ ಸಹೋದರನಾದ ಬೆನ್ಯಾಮೀನನ ಪರವಾಗಿ ಮಧ್ಯಸ್ಥಿಕೆ ವಹಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದನು.
ಆದಿಕಾಂಡ 44:32-33 ರಲ್ಲಿ ನಾವು ಇದನ್ನು ನೋಡಬಹುದು “ ಸೇವಕನಾದ ನಾನು ನನ್ನ ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿ - ನಾನು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಾರದಿದ್ದರೆ ತಂದೆಗೆ ತಪ್ಪಿದವನ ದೋಷ ಎಂದೆಂದಿಗೂ ನನಗಿರಲಿ ಎಂದು ಮಾತು ಕೊಟ್ಟೆನು. ಆದದರಿಂದ ಸೇವಕನಾದ ನಾನು ಈ ಹುಡುಗನಿಗೆ ಬದಲಾಗಿ ಸ್ವಾವಿುಗೆ ಗುಲಾಮನಾಗುವಂತೆಯೂ ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆಯೂ ಅನುಗ್ರಹ ಮಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗುವದಕ್ಕಾದೀತು? ತಂದೆಗೆ ಮಹಾ ಶೋಕವುಂಟಾಗುವದನ್ನು ನಾನು ನೋಡಕೂಡದು" ಎನ್ನುತ್ತಾ ಯೋಸೆಫನ ಬಳಿ ಯೂದ ಬೇಡಿಕೊಳ್ಳುವುದನ್ನು ನೋಡುತ್ತೇವೆ. (ಆದಿಕಾಂಡ 44:32-33)
ಅವರು ಯಾರಿಗಾಗಿ ಮಧ್ಯಸ್ಥಿಕೆ ವಹಿಸುತ್ತಿದ್ದರೋ ಅವರ ಸ್ಥಾನವನ್ನು ಒಬ್ಬ ಮಧ್ಯಸ್ಥಗಾರ ಆಕ್ರಮಿಸಿಕೊಳ್ಳುತ್ತಾನೆ.
ಯೋಸೇಫನು ಇದನ್ನು ನೋಡುತ್ತಾನೆ; ಮೊದಲು ಅವನ ಸಹೋದರರು ವೈಯಕ್ತಿಕ ಲಾಭಕ್ಕಾಗಿ ತಮ್ಮ ಸ್ವಂತ ಸಹೋದರನನ್ನು ಕೊಲ್ಲಲು ಸಿದ್ಧರಾಗಿದ್ದರು. ಆದರೆ ಈಗ, ಅವನು ಅವರಲ್ಲಿ ತೀವ್ರ ಬದಲಾವಣೆಯನ್ನು ನೋಡುತ್ತಾನೆ.
ಒಬ್ಬನು ಇನ್ನೊಬ್ಬನಿಗಾಗಿ ತನ್ನನ್ನು ತ್ಯಾಗಮಾಡಲು ಸಿದ್ಧನಾಗಿದ್ದಾನೆ. ಸೆರೆಯಲ್ಲಿ ಬೆನ್ಯಮೀನನ ಸ್ಥಾನವನ್ನು ತೆಗೆದುಕೊಳ್ಳಲು ಈಗ ಯೂದನು ಸಿದ್ಧನಾಗಿದ್ದನು. ಯೋಸೇಫನು ತನ್ನ ಸಹೋದರರಲ್ಲಿ ಈ ಬದಲಾವಣೆಯನ್ನು ನೋಡಿ ಅವರಿಗೆ ತನ್ನನ್ನು ತಾನು ಪ್ರಕಟ ಪಡಿಸಿಕೊಳ್ಳುತ್ತಾನೆ. (ಆದಿಕಾಂಡ 45:1-3 ಓದಿ)
ಇದು ಬಹಳ ಅಗಾಧವಾದ ಪ್ರವಾದನೆಯೆಂದು ನಾನು ನಂಬುತ್ತೇನೆ. ಇಂದು, ಪ್ರತಿಯೊಬ್ಬ ಕ್ರೈಸ್ತನು ತನ್ನ ಆಶೀರ್ವಾದ, ಅವನ ಕುಟುಂಬ, ಅವನ ಸಭೆ, ಅವನ ಸೇವೆ ಇತ್ಯಾದಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದಾನೆ. ಇದೆಲ್ಲವೂ ನಾನು, ನನ್ನ ಬಗ್ಗೆ ಮತ್ತು ನನ್ನನ್ನೂ ಒಳಗೊಂಡು ಹೇಳುತ್ತಿದ್ದೇನೆ. ನಾವು ತ್ಯಾಗಪೂರ್ವಕವಾದ ಮಧ್ಯಸ್ಥಿಕೆಗೆ ಪ್ರವೇಶಿಸಿದಾಗ, ಒಬ್ಬರಿಗೊಬ್ಬರು ಮಧ್ಯಸ್ಥಿಕೆ ವಹಿಸಿದಾಗ ಮಾತ್ರ, ಕರ್ತನು ನಮಗೆ ಗ್ರಹಿಸಲಾಗದ ರೀತಿಯಲ್ಲಿ ತನ್ನನ್ನು ಪ್ರಕಟ ಪಡಿಸಿಕೊಳ್ಳುತ್ತಾನೆ.
ಪವಿತ್ರಾತ್ಮನು ಇದನ್ನು ನನ್ನ ಹೃದಯದಲ್ಲಿ ಬಹಳ ಬಲವಾಗಿ ಪ್ರಭಾವಿಸಿದನು. ಯೂದನ ಮಧ್ಯಸ್ಥಿಕೆಯು ಯೋಸೇಫನನ್ನು ಅವನ ಸಹೋದರರಿಗೆ ಪ್ರಕಟ ಪಡಿಸಿತು. ನಿಮ್ಮ ಮಧ್ಯಸ್ಥಿಕೆಯು ಇಂದು ತಪ್ಪಿಹೋಗಿರುವ ಅನೇಕರಿಗೆ ಕ್ರಿಸ್ತನನ್ನು ಪ್ರಕಟ ಪಡಿಸುತ್ತದೆ.
Bible Reading: Jeremiah 7-9
ಅರಿಕೆಗಳು
1. ನಾನು ಕರ್ತನಾದ ಯೇಸು ಕ್ರಿಸ್ತನನ್ನು ನನ್ನ ಕರ್ತನು, ನನ್ನ ದೇವರು ಮತ್ತು ರಕ್ಷಕನೆಂದು ನಂಬುವುದರಿಂದ, ನಾನು ಮತ್ತು ನನ್ನ ಮನೆಯವರೆಲ್ಲರೂ ರಕ್ಷಿಸಲ್ಪಟ್ಟಿದ್ದೇವೆ ಎಂದು ನಾನು ಘೋಷಿಸುತ್ತೇನೆ! (ಅ. ಕೃ 16:31, ಯೋಬ 22:28)
2. ನನ್ನ ಮಕ್ಕಳು (ನಿಮ್ಮ ಮಕ್ಕಳ ಹೆಸರುಗಳನ್ನು ಉಲ್ಲೇಖಿಸಿ) ಸುರಕ್ಷಿತವಾಗಿ ವಾಸಿಸುತ್ತಾ ಅಭಿವೃದ್ಧಿ ಹೊಂದಿ ಅವರ ವಂಶಸ್ಥರು ಸಹ ನಮ್ಮ ಮುಂದೆ ಸ್ಥಾಪಿಸಲ್ಪಡುತ್ತಾರೆ. (ಕೀರ್ತನೆಗಳು 102:28)
3. ತಂದೆಯೇ, ನನ್ನ ಕುಟುಂಬ ಸದಸ್ಯರನ್ನು (ಅವರ ಹೆಸರುಗಳನ್ನು ಉಲ್ಲೇಖಿಸಿ) ನಿಮ್ಮ ಕೈಯಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಯೇಸುನಾಮದಲ್ಲಿ ಅರಿಕೆ ಮಾಡುತ್ತೇನೆ. (ಯೋಹಾನ 10:29)
Join our WhatsApp Channel

Most Read
● ಗೌರವಿಸುವ ಜೀವಿತ ಜೀವಿಸಿ● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
● ರೂಪಾಂತರ ಹೊಂದಲು ಇರುವ ಸಾಮರ್ಥ್ಯ.
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಸಮಯದ ಸೂಚನೆಗಳ ವಿವೇಚನೆ.
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
ಅನಿಸಿಕೆಗಳು