ಅನುದಿನದ ಮನ್ನಾ
ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
Tuesday, 1st of October 2024
4
1
117
Categories :
ಗಮನ (Focus)
"ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆ ಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
ನಮ್ಮಲ್ಲಿ ಪ್ರವೀಣರಾದವರು ಇದೇ ಅಭಿಪ್ರಾಯವುಳ್ಳವರಾಗಿರೋಣ. ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು. ಆದರೆ ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ."(ಫಿಲಿಪ್ಪಿಯವರಿಗೆ 3:15-16)
ನಮ್ಮಲ್ಲಿ ಅನೇಕರು ಅಹಿತಕರ ಪರಿಸ್ಥಿತಿಗಳನ್ನು ಎದುರಿಸಿ ಬಂದವರೇ ಆಗಿದ್ದೇವೆ. ಅದು ಹಿಂದೆ ಗತಿಸಿ ಹೋಗಿರಬಹುದು ಅಥವಾ ಇತ್ತೀಚೆಗಷ್ಟೇ ಸಂಭವಿಸಿದ್ದಿರಬಹುದು. ದುಃಖಕರ ಸಂಗತಿ ಏನೆಂದರೆ ಇದರಿಂದ ಯಾರು ಕೂಡ ಹೊರತಾಗಿಲ್ಲ.
ಆದರೆ ಯಾರೇ ಆಗಲಿ ಇಂತಹ ಸಂಗತಿಗಳ ಮೇಲೆ ಲಕ್ಷ್ಯವಹಿಸಿಕೊಂಡು ಇರುವುದಾದರೆ ಮುಂದಿನ ಯಾವ ದಾರಿಯೂ ಅವರಿಗೆ ಕಾಣಿಸುವುದೇ ಇಲ್ಲ.
ಲಕ್ಷ್ಯ ಎನ್ನುವಂಥದ್ದು ಒಂದು ಮಹತ್ವದ ಸಂಗತಿಯಾಗಿದೆ. ಏಕೆಂದರೆ ನೀವು ಯಾವುದರ ಬಗ್ಗೆ ಮಾತ್ರ ಗಮನ ಹರಿಸುತ್ತಿರೋ ಅದು ಮಾತ್ರವೇ ನಿಮ್ಮ ಮುಂದೆ ಬೆಳೆಯುತ್ತಾ ಹೋಗುತ್ತದೆ.
ನಾನು ಬೋದಿಸುವಾಗಲೆಲ್ಲ ನನ್ನ ಮುಂದಿರುವ ಜನರ ಮುಖಭಾವವನ್ನು ಗಮನಿಸುತ್ತಲೇ ಇರುತ್ತೇನೆ. ಕೆಲವರು ಬಹಳ ಆಸಕ್ತಿಯಿಂದ ಸಂದೇಶಗಳನ್ನು ಸ್ವೀಕರಿಸಿಕೊಂಡು ಅಗ್ನಿಯಿಂದ ತುಂಬಿಸಲ್ಪಡುತ್ತಿರುತ್ತಾರೆ.ಇನ್ನು ಕೆಲವೇ ಮಂದಿ ಏನೋ ಬಲವಂತದಿಂದ ಸೇವೆಗೆ ಎಳೆದುಕೊಂಡು ಬಂದವರಂತೆ ಕಾಣುತ್ತಿರುತ್ತಾರೆ.ಅವರು ಹೆಚ್ಚಾಗಿ ಪ್ರತಿಕ್ರಿಸುವವರಲ್ಲ. ಅವರು ಸಾಮ್ಯದಲ್ಲಿ ಬರುವ ತಪ್ಪಿ ಹೋದ ಕುರಿಗಳಂತೆ ಕಾಣುತ್ತಿರುತ್ತಾರೆ.
ನನ್ನ ಸೇವೆಯ ಆರಂಭಿಕ ವರ್ಷಗಳಲ್ಲಿ ನಾನು ಕೇವಲ ಅಂತಹ ಜನರ ಮೇಲೆ ಮಾತ್ರ ನನ್ನ ಗಮನಕ್ಕೆ ಕೇಂದ್ರೀಕರಿಸಿ ಬಹಳ ಕಷ್ಟಪಟ್ಟು ಸೇವೆ ಮಾಡುತ್ತಿದ್ದೆ. ಆಮೇಲೆ ಅವರಿಗೆ ಸರಿಯಾಗಿ ಸಂದೇಶವನ್ನು ನಾನು ತಲುಪಿಸಲಾಗದೆ ಸೋತುಹೋಗುತ್ತಿದ್ದೆ. ಇದರಿಂದ ನಾನು ಯಾರಿಗೂ ನನ್ನ ಸಂದೇಶ ತಲುಪುತ್ತಿಲ್ಲ ಎಂದು ಭಾವಿಸಿ ಖಿನ್ನತೆಗೆ ಒಳಗಾಗುತ್ತಿದ್ದೆ. ಇದು ನಿಜಕ್ಕೂ ನನಗೆ ಕಹಿ ತುತ್ತಾಗಿತ್ತು.
ಹೀಗಿರುವಾಗ ನಾನೊಂದು ದಿನ ಫಿಲಿಪ್ಪಿ 3ರ ಅಧ್ಯಾಯವನ್ನು ಓದುತ್ತಿದ್ದೆ.ಅದರಲ್ಲಿ "ಸರಿಯಾದ ವ್ಯಕ್ತಿಗಳ ಮೇಲೆ ನಿಮ್ಮ ಲಕ್ಷ್ಯವಿಡಿರಿ" ಎಂಬ ಪದಗಳ ಮೇಲೆ ನನ್ನ ಗಮನ ಹರಿಯಿತು. ಆದ ನನಗೆ ನೂರು ಪ್ರತಿಶತದಲ್ಲಿ ಒಂದರಷ್ಟು ಜನ ಮಾತ್ರ ನಿರಾಸಕ್ತ ಜನನಿರಬಹುದು ನಾನು ಅಂತಹ ತಪ್ಪಾದ ಜನರ ಮೇಲೆಯೇ ನನ್ನ ಗಮನ ಹರಿಸುತ್ತಿದ್ದೆನೆ ಎಂಬ ಮನವರಿಕೆಯಾಯಿತು. ನಾನು ಇದರಿಂದ ಯೋಗ್ಯ ಜನರಿಗೆ ಮಾಡಬೇಕಾದ ಸೇವೆಯನ್ನು ಸರಿಯಾಗಿ ಮಾಡುವ ವಿಚಾರದಲ್ಲಿ ಅನ್ಯಾಯ ಮಾಡಿಕೊಳ್ಳುವುದು ಮಾತ್ರವಲ್ಲದೆ ಸ್ವತಃ ನನ್ನ ಆತ್ಮಿಕ ಮನುಷ್ಯನನ್ನು ಗಲಿಬಿಲಿಗೊಳಿಸುತ್ತಿದ್ದೇನೆ ಎಂಬ ಸತ್ಯವನ್ನು ಕಂಡುಕೊಂಡೆ.
ಪ್ರತಿದಿನವೂ ನಿಮ್ಮ ಸುತ್ತಮುತ್ತಲೂ ಧನಾತ್ಮಕ ಮತ್ತು ಋಣಾತ್ಮಕ ಎರಡು ಸಂಗತಿಗಳು ಜರುಗುತ್ತಿರುತ್ತವೆ. ನೀವು ಒಳ್ಳೆಯದಕ್ಕೆ ಹೆಚ್ಚು ಗಮನ ಕೊಡುವವರಾದರೆ ಧನಾತ್ಮಕತೆಯಿಂದ ತುಂಬಿಸಲ್ಪಡಲಾರಂಭಿಸುವಿರಿ. ನೀವು ಹೀಗೆ ಮಾಡುವಾಗ ನಿಮ್ಮ ಆತ್ಮಿಕ ಮನುಷ್ಯನಲ್ಲಿ ಆಸಕ್ತಿಕರ ಸಂಗತಿಗಳು ಜರುಗಲು ಆರಂಭಿಸುವುದನ್ನು ನೀವು ಕಾಣುವವರಾಗಿರುತ್ತೀರಿ. ನಿರೀಕ್ಷೆಯ ಕಿಚ್ಚು ಹೊತ್ತಿಕೊಂಡು- ದೇವರ ವಾಗ್ದಾನ ನಿಮ್ಮ ಮೂಲಕ ಸಾಕಾರಗೊಳ್ಳುವ ಅನುಭವವನ್ನು ಹೊಂದಿಕೊಳ್ಳುತ್ತೀರಿ.
ಇಂದು ನೀವು ಯಾವುದರ ಮೇಲೆ ನಿಮ್ಮ ಗಮನ ಹರಿಸುತ್ತಿದ್ದೀರಿ? ಅದು ಧನಾತ್ಮಕ ಸಂಗತಿಯೇ? ಅದು ನಿಮ್ಮಲ್ಲಿ ಭಕ್ತಿವೃದ್ಧಿ ಮಾಡುತ್ತಿದೆಯೇ? ಈ ಒಂದು ಪರಿಶೋಧನೆಯ ಕಾರ್ಯವನ್ನು ನೀವು ಲಕ್ಷ್ಯ ಕೊಡುವ ಸಂಗತಿಗಳಿಗೆ ಅನ್ವಯಿಸಿ ನೋಡಿರಿ.
ಪ್ರಾರ್ಥನೆಗಳು
1. ತಂದೆಯೇ, ನೀನು ನನಗಾಗಿ ಇಟ್ಟಿರುವ ಸಂಗತಿಗಳ ಮೇಲೆ ಮಾತ್ರ ನಾನು ಲಕ್ಷ್ಯ ವಿಡುವಂತೆ ಯೇಸು ನಾಮದಲ್ಲಿ ಸಹಾಯ ಮಾಡು.
2. ತಂದೆಯೇ, ಯೇಸು ನಾಮದಲ್ಲಿ ಎಲ್ಲಾ ಚಿತ್ತ ಚಂಚಲಗೊಳಿಸುವ ಸಂಗತಿಗಳನ್ನು ನಿರ್ಮೂಲ ಮಾಡಿ ಸರಿಯಾದವುಗಳ ಮೇಲೆ ಮಾತ್ರ ನನ್ನ ಗಮನ ಕೇಂದ್ರೀಕರಿಸುವಂತೆ ಸಹಾಯ ಮಾಡು.
3. ತಂದೆಯೇ, ನನ್ನ ದೃಷ್ಟಿಯನ್ನು ಯೇಸು ನಾಮದಲ್ಲಿ ಸ್ವಸ್ಥಪಡಿಸಿ. ಆಗ ನಾನು ಸರಿಯಾದವುಗಳನ್ನೇ ಕಾಣುವೆನು. ಆಮೇನ್
2. ತಂದೆಯೇ, ಯೇಸು ನಾಮದಲ್ಲಿ ಎಲ್ಲಾ ಚಿತ್ತ ಚಂಚಲಗೊಳಿಸುವ ಸಂಗತಿಗಳನ್ನು ನಿರ್ಮೂಲ ಮಾಡಿ ಸರಿಯಾದವುಗಳ ಮೇಲೆ ಮಾತ್ರ ನನ್ನ ಗಮನ ಕೇಂದ್ರೀಕರಿಸುವಂತೆ ಸಹಾಯ ಮಾಡು.
3. ತಂದೆಯೇ, ನನ್ನ ದೃಷ್ಟಿಯನ್ನು ಯೇಸು ನಾಮದಲ್ಲಿ ಸ್ವಸ್ಥಪಡಿಸಿ. ಆಗ ನಾನು ಸರಿಯಾದವುಗಳನ್ನೇ ಕಾಣುವೆನು. ಆಮೇನ್
Join our WhatsApp Channel
Most Read
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ● ಕೊಡುವ ಕೃಪೆ -2
● ದೇವರ ಕೃಪೆಯನ್ನು ಸೇದುವುದು
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಭಯದ ಆತ್ಮ
● ನಂಬಿಕೆ ಎಂದರೇನು ?
● ಬೀಜದಲ್ಲಿರುವ ಶಕ್ತಿ-1
ಅನಿಸಿಕೆಗಳು
Amen
Mr. Estaki Fernandes | 2 months ago 0