ಅನುದಿನದ ಮನ್ನಾ
1
1
62
ಅಗಾಪೆ ಪ್ರೀತಿಯಲ್ಲಿ ಬೆಳೆಯುವುದು
Saturday, 16th of August 2025
Categories :
ಪ್ರೀತಿ (Love)
ಪೇತ್ರನು ಆತನಿಗೆ - ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ ಎಂದು ಉತ್ತರಕೊಡಲು (ಮತ್ತಾಯ 26:33)
ಆದರೆ ಕೆಲವೇ ದಿನಗಳ ನಂತರ, ಪೇತ್ರನು ತನ್ನ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋಗಿ ಕರ್ತನನ್ನು ನಿರಾಕರಿಸಿದನು.
ಪೇತ್ರನಂತೆ, ನಮ್ಮಲ್ಲಿ ಅನೇಕರು ಕರ್ತನಾದ ಯೇಸುವಿಗೆ ಪ್ರಾಮಾಣಿಕವಾದ ಪ್ರಮಾಣವನ್ನು ಮಾಡಿದ್ದೇವೆ ಆದರೆ ಈ ಪ್ರಮಾಣಗಳನ್ನು ನಿಜವಾಗಿಯೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ನಾನು ಪ್ರತಿದಿನ ಬೆಳಿಗ್ಗೆ ಮೊದಲು ಕರ್ತನಿಗೆ ಪ್ರಾರ್ಥಿಸುತ್ತೇನೆ.
ಕರ್ತನೇ, ನಾನು ಹೀಗೆ ಹಲವರು ಬಹಳ ಸೇವೆಯಲ್ಲಿ ನಿನ್ನನ್ನು ಸೇವಿಸುತ್ತೇನೆ ಎಂದು ಭರವಸೆ ನೀಡುತ್ತಾರೆ ಆದರೂ ಅನೇಕರು ತಮ್ಮ ಪ್ರಮಾಣಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆ?
ಕ್ರೈಸ್ತರು ಅರ್ಥಮಾಡಿಕೊಳ್ಳಬೇಕಾದ ಪ್ರೀತಿಗೆ ಮುಖ್ಯವಾಗಿ ನಾಲ್ಕು ಗ್ರೀಕ್ ಪದಗಳಿವೆ. ಅವು ಎರೋಸ್, ಅಗಾಪೆ, ಫಿಲಿಯೊ ಮತ್ತು ಸ್ಟೋರ್ಜ್. ಅವುಗಳಲ್ಲಿ ಮೂರು ಹೆಚ್ಚಾಗಿ ಸತ್ಯವೇದದಲ್ಲಿ ಕಾಣಿಸಿಕೊಳ್ಳುತ್ತವೆ - ಎರೋಸ್, ಅಗಾಪೆ ಮತ್ತು ಫಿಲಿಯೊ. ಸ್ಟೋರ್ಜ್ ರೋಮ 12:10 ರಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಳ್ಳುತ್ತದೆ.
ಈ ಪದಗಳನ್ನು ನೋಡೋಣ.
ಇರೋಸ್:- ಲೈಂಗಿಕ ಪ್ರೀತಿ ಅಥವಾ ಉತ್ಕಟ ಪ್ರೀತಿಗೆ ಗ್ರೀಕ್ ಪದ ಎರೋಸ್, ಅಲ್ಲಿಂದ ನಾವು "ಕಾಮಪ್ರಚೋದಕ" ದಂತಹ ಇಂಗ್ಲಿಷ್ ಪದಗಳನ್ನು ಪಡೆಯುತ್ತೇವೆ. ಇತ್ಯಾದಿ.
ಅಗಾಪೆ:- ದೇವರ ಪ್ರೀತಿಯನ್ನು ಸೂಚಿಸುವ ಗ್ರೀಕ್ ಪದ ಅಗಾಪೆ. ಅಗಾಪೆ ದೇವರ ಸ್ವಭಾವವೇ, ಏಕೆಂದರೆ ದೇವರು ಪ್ರೀತಿಯಾಗಿದ್ದಾನೆ (1 ಯೋಹಾನ 4:7-12, 16b).
ಅಗಾಪೆ ಪ್ರೀತಿ ಎಂದರೆ ಅದು ಏನನ್ನು ಮಾಡುತ್ತದೆ ಎಂಬುದಾಗಿದೆಯೇ ಹೊರತು, ಅದು ಹೇಗೆ ಭಾವಿಸುತ್ತದೆ ಎಂಬುದರಿಂದಲ್ಲ. ದೇವರು ತನ್ನ ಮಗನನ್ನು ಎಷ್ಟೋ"ಪ್ರೀತಿಸಿ" ತನ್ನ ಮಗನನ್ನು ಕೊಟ್ಟನು( ಅಗಾಪೆ). ಹಾಗೆ ಮಾಡುವುದು ದೇವರಿಗೆ ಒಳ್ಳೆಯದೆನಿಸಲಿಲ್ಲ, ಆದರೆ ಅದು ಮಾಡುವುದು ಆತನಿಗೆ ಅತ್ಯಂತ ಪ್ರೀತಿಯ ಕೆಲಸವಾಗಿತ್ತು.
ಫಿಲಿಯೋ:- ನಾವು ಪರಿಶೀಲಿಸಬೇಕಾದ "ಪ್ರೀತಿ" ಎಂಬ ಪದದ ಮೂರನೇ ಪದ ಫಿಲಿಯೋ, ಇದರ ಅರ್ಥ "ಯಾರಾದರೂ ಅಥವಾ ಯಾವುದಾದರೂ ಒಂದು ವಿಷಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವುದು, ಆಗಾಗ್ಗೆ ನಿಕಟ ಸಂಬಂಧದ ಮೇಲೆ ಕೇಂದ್ರೀಕರಿಸುವುದು; ಪ್ರೀತಿಯನ್ನು ಹೊಂದಿರುವುದು, ಉದಾಹರಣೆಗೆ, ಯಾರನ್ನಾದರೂ ಸ್ನೇಹಿತ ಎಂದು ಪರಿಗಣಿಸುವುದು."
ಅಗಾಪೆ ಮತ್ತು ಫಿಲಿಯೊ ನಡುವಿನ ವ್ಯತ್ಯಾಸವು ಯೋಹಾನ 21 ರಲ್ಲಿ ಬಹಳ ಸ್ಪಷ್ಟವಾಗುತ್ತದೆ, ಆದರೆ ದುರದೃಷ್ಟವಶಾತ್, ಬಹುತೇಕ ಎಲ್ಲಾ ಇಂಗ್ಲಿಷ್ ಭಾಷಾಂತರಗಳಲ್ಲಿ ಅದು ಅಸ್ಪಷ್ಟವಾಗಿದೆ.
ಸತ್ತವರೊಳಗಿಂದ ಎದ್ದ ನಂತರ, ಯೇಸು ಪೇತ್ರನನ್ನು ಭೇಟಿಯಾದನು. ಅವರ ಸಂಭಾಷಣೆಯ ಸಂಕ್ಷಿಪ್ತ ಆವೃತ್ತಿ ಇಲ್ಲಿದೆ. ಆದ್ದರಿಂದ ಅವರು ಉಪಾಹಾರ ಸೇವಿಸಿದ ನಂತರ, ಯೇಸು ಸೀಮೋನಾ ಪೇತ್ರನಿಗೆ, “ಯೋನನ ಮಗನಾದ ಸಿಮೋನನೇ, ನೀನು ಇವುಗಳಿಗಿಂತ ನನ್ನನ್ನು ಹೆಚ್ಚಾಗಿ (ಅಗಾಪೆ) ಪ್ರೀತಿಸುತ್ತೀಯಾ(ಫಿಲಿಯೊ)?” ಎಂದು ಕೇಳಿದನು. ಪೇತ್ರನು ಅವನಿಗೆ, “ಹೌದು, ಕರ್ತನೇ; ನಾನು ನಿನ್ನನ್ನು ಪ್ರೀತಿಸುತ್ತೇನೆಂದು ನಿನಗೆ ತಿಳಿದಿದೆ” ಎಂದು ಹೇಳಿದನು. ಕರ್ತನಾದ ಯೇಸು ಅವನಿಗೆ, “ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ(ಅಗಾಪೆ) ?” ಎಂದು ಹೇಳಿದನು. ಪೇತ್ರನು ಅವನಿಗೆ, “ಹೌದು, ಕರ್ತನೇ; ನಾನುನಿನ್ನನ್ನು ಪ್ರೀತಿಸುತ್ತೇನೆಂದು (ಫಿಲಿಯೊ) ನಿನಗೆ ತಿಳಿದಿದೆ” ಎಂದು ಹೇಳಿದನು.
ಕರ್ತನಾದ ಯೇಸು ಮೂರನೆಯ ಬಾರಿ ಪೇತ್ರನಿಗೆ, “ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು (ಫಿಲಿಯೋ) ಪ್ರೀತಿಸುತ್ತೀಯಾ?” ಎಂದು ಕೇಳಿದನು. ಆತನು ಮೂರನೆಯ ಬಾರಿ ಅವನಿಗೆ, “ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದ್ದರಿಂದ ಪೇತ್ರನು ದುಃಖಿತನಾದನು. ಅವನು ಆತನಿಗೆ, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ; ನಾನು ನಿನ್ನನ್ನು (ಫಿಲಿಯೋ) ಪ್ರೀತಿಸುತ್ತೇನೆಂದು ನಿನಗೆ ತಿಳಿದಿದೆ” ಎಂದು ಹೇಳಿದನು. (ಯೋಹಾನ 21:15-17)
ಪೇತ್ರನ ಬದ್ಧತೆಯು ಹೃದಯಸ್ಪರ್ಶಿ ಮತ್ತು ಸಿಹಿಯಾಗಿತ್ತು, ಆದರೂ ಅದು ಅಗಾಪೆ ಪ್ರೀತಿಯನ್ನು ಆಧರಿಸಿರಲಿಲ್ಲ. ಕೇವಲ 'ಫಿಲಿಯೋ' ಪ್ರೀತಿ (ಸ್ನೇಹ ಪ್ರೀತಿ) ಈ ಪ್ರೀತಿ ಕರ್ತನಿಗಾಗಿ ಸಾಯುವುದಕ್ಕೆ ಸಾಕಾಗಲಿಲ್ಲ. ಆದ್ದರಿಂದ ಪೇತ್ರನು ಕರ್ತನನ್ನು ತೊರೆದಿದ್ದರಲ್ಲಿ ಆಶ್ಚರ್ಯವಿಲ್ಲ.
ಪೇತ್ರನಿಗೆ ಅಗಾಪೆಯ ಅಗತ್ಯವಿತ್ತು, ಮತ್ತು ನಿಮಗೂ ಮತ್ತು ನನಗೂ ಕೂಡ. ಅಗಾಪೆ ಪ್ರೀತಿಯು ಮಕ್ಕಳ ಪ್ರೀತಿಗಿಂತ ಉನ್ನತವಾದದ್ದೂ ಮತ್ತು ಶುದ್ಧವೂ ಆಗಿದೆ. ನೀವು ಮತ್ತು ನಾನು ಬೆಳೆಸಿಕೊಳ್ಳಬೇಕಾದ ಪ್ರೀತಿ ಅಗಾಪೆಯಾಗಿದೆ.
ಈ ಅಗಾಪೆ ಪ್ರೀತಿಯಲ್ಲಿ ನಾವು ಬೆಳೆಯುವುದು ಹೇಗೆ? ಇದರ ಕೀಲಿಕೈ ರೋಮ 5:5 ರಲ್ಲಿ ಕಂಡುಬರುತ್ತದೆ "....ನಮಗೆ ಕೊಡಲ್ಪಟ್ಟ ಪವಿತ್ರಾತ್ಮನಿಂದ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಲ್ಪಟ್ಟಿದೆ" (ರೋಮನ್ನರು 5:5)
ಪವಿತ್ರಾತ್ಮನೊಂದಿಗೆ ನಾವು ಹೆಚ್ಚು ಸಹಭಾಗಿತ್ವವನ್ನು ಹೊಂದಿದಷ್ಟೂ, ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳಾವಾಗಿ ಸುರಿಯಲ್ಪಡುತ್ತದೆ. ಜೀವ ನೀಡುವ ನದಿಯು ನಮ್ಮ ಆತ್ಮಗಳ ಆಳವಾದ ಅಂತರಂಗಕ್ಕೆ ಹರಿಯುತ್ತಿದ್ದಂತೆ ಗಾಯಗಳು ಮತ್ತು ನೋವುಗಳು ವಾಸಿಯಾಗುತ್ತವೆ.
Bible Reading: Jeremiah 16-18
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿನ್ನ ಬೇಷರತ್ತಾದ ಪ್ರೀತಿಗಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನಿನ್ನ ಅಗಾಪೆ ಪ್ರೀತಿಯನ್ನು ಯೇಸುನಾಮದಲ್ಲಿ ನನ್ನ ಹೃದಯದಲ್ಲಿ ಸುರಿಯಿರಿ ಆಗ ನಾನು ನಿನ್ನನ್ನು ಮತ್ತು ನನ್ನ ಸುತ್ತಲಿನ ಇತರರನ್ನು ಪೂರ್ಣ ಹೃದಯದಿಂದ ಪ್ರೀತಿಸಬಹುದು. ಆಮೆನ್.
Join our WhatsApp Channel

Most Read
● ಅಶ್ಲೀಲ ಸಾಹಿತ್ಯ● ಆತ್ಮದಲ್ಲಿ ಉರಿಯುತ್ತಿರ್ರಿ.
● ಆತಂಕದಿಂದ ಕಾಯುವುದು
● ವ್ಯರ್ಥವಾದದಕ್ಕೆ ಹಣ
● ಆತ್ಮೀಕ ನಿಯಮ : ಸಹವಾಸ ನಿಯಮ
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
ಅನಿಸಿಕೆಗಳು