"ಯಜ್ಞವೇದಿಯ ಮೇಲಣ ಬೆಂಕಿ ಸರ್ವಾಂಗಹೋಮದ್ರವ್ಯದಿಂದ ಉರಿಯುತ್ತಲೇ ಇರಬೇಕು; ಅದು ಆರಿಹೋಗಬಾರದು. ಪ್ರತಿದಿನವೂ ಹೊತ್ತಾರೆಯಲ್ಲಿ ಯಾಜಕನು ಕಟ್ಟಿಗೆಯನ್ನು ತಂದುಹಾಕಿ ಬೆಂಕಿ ಉರಿಸಿ ಅದರ ಮೇಲೆ ಹೋಮದ್ರವ್ಯವನ್ನು ಕ್ರಮಪಡಿಸಿ ಸಮಾಧಾನಯಜ್ಞಪಶುಗಳ ಕೊಬ್ಬನ್ನು ಅದರ ಮೇಲೆ ಹೋಮಮಾಡಬೇಕು. ಬೆಂಕಿಯು ಯಜ್ಞವೇದಿಯ ಮೇಲೆ ಯಾವಾಗಲೂ ಉರಿಯುತ್ತಿರಬೇಕು; ಆರಿಹೋಗಬಾರದು."(ಯಾಜಕಕಾಂಡ 6:12-13)
ಯಜ್ಞವೇದಿ ಎಂದರೇನು?
ಯಜ್ಞವೇದಿ ಎಂಬುದು ಒಂದು ವಿನಿಮಯದ ಸ್ಥಳವಾಗಿದೆ. ಅದೊಂದು ಪ್ರಾಕೃತಿಕ ಹಾಗೂ ಆತ್ಮಿಕವಾದವುಗಳ ಭೇಟಿಯ ಕೇಂದ್ರವಾಗಿದೆ. ಅದೊಂದು ದೈವಿಕ ಹಾಗೂ ಮನುಷ್ಯನ ಸಂದರ್ಶನದ ಕೇಂದ್ರ ಸ್ಥಳವಾಗಿದೆ. ದೇವರು ಮನುಷ್ಯನನ್ನು ಸಂಧಿಸುವ ಸ್ಥಳವೇ ಯಜ್ಞ ವೇದಿಯಾಗಿದೆ.
ನಮ್ಮ ಗತಿಯನ್ನು ಬದಲಾವಣೆ ಮಾಡಲು ಶಕ್ತವಾದ ಸ್ಥಳವೇ ಯಜ್ಞವೇದಿಯಾಗಿದೆ.
ಹಳೆಯ ಒಡಂಬಡಿಕೆಯಲ್ಲಿ ಯಜ್ಞವೇದಿಯು ಬೌತಿಕ ರೂಪದಲ್ಲಿತ್ತು. ನೀವು ದೇವರನ್ನು ಸಂಧಿಸಬೇಕಾದರೆ ಎಲ್ಲೆಂದರಲ್ಲಿ ಸಂಧಿಸುವ ಹಾಗಿರಲಿಲ್ಲ. ಅದಕ್ಕಾಗಿ ನಿರ್ದಿಷ್ಟವಾದ ಸ್ಥಳವನ್ನು ನಿಗದಿಪಡಿಸಲಾಗುತ್ತಿತ್ತು. ನೀವು ಅಲ್ಲಿಗೆ ಹೋಗಿಯೇ ಆ ನಿರ್ದಿಷ್ಟ ಸ್ಥಳದಲ್ಲಿಯೇ ಯಜ್ಞವನ್ನು ಮಾಡಬೇಕಿತ್ತು.
ಹೇಗೂ ಹೊಸ ಒಡಂಬಡಿಕೆಯಲ್ಲಿ ಯಜ್ಞವೇದಿ ಎಂಬುದು ಒಂದು ಆತ್ಮಿಕ ಸ್ಥಳವಾಗಿದೆ. ಅದುವೇ ಮನುಷ್ಯನ ಆತ್ಮವು ದೇವರ ಆತ್ಮವನ್ನು ಸಂಧಿಸುವಂತಹ ಸ್ಥಳವಾಗಿದೆ. ಮತ್ತಾಯ 18:20 ರಲ್ಲಿ ಈ ರೀತಿಯ ಯಜ್ಞವೇದಿ ಹೇಗಿರುತ್ತದೆ ಎಂಬುದನ್ನು ಕುರಿತು
ಕರ್ತನಾದ ಯೇಸುವು ಸ್ಪಷ್ಟವಾಗಿ ಹೇಳುತ್ತಾನೆ. "ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ".ನೀವು ದೇವರ ಹೆಸರನ್ನು ಹೇಳಿಕೊಂಡು ಪ್ರಾರ್ಥಿಸುವ ಸ್ಥಳವೆಲ್ಲ ಯಜ್ಞವೇದಿಯಾಗಿ ಬದಲಾಗುತ್ತದೆ.
ಯಜ್ಞವೇದಿ ಎನ್ನುವುದನ್ನು ಪೂರೈಸಲು ಬೇಕಾದ ಇನ್ನೊಂದು ಅಂಶವಿದೆ. "ಯಜ್ಞವೇದಿಯಲ್ಲಿ ಯಾವಾಗಲೂ ಬೆಂಕಿಯು ಉರಿಯುತ್ತಿರಬೇಕು" ದೇವರು ಹೇಳಿದ್ದಾನೆ. ಅಗ್ನಿಯನ್ನು ಉರಿಸದ ಯಜ್ಞವೇದಿಯು ದೇವರನ್ನು ದೂಷಿಸುವಂತಹದ್ದಾಗಿದೆ.
ಇಸ್ರಾಯೆಲ್ಯಾರು ಕರ್ತನನ್ನು ಬಿಟ್ಟು ಹಿಂಜಾರಿದಾಗ ಯಜ್ಞ ವೇದಿಯು ನಿರ್ಲಕ್ಷಿಸಲ್ಪಟ್ಟು ಮುರಿದು ಬೀಳುತಿತ್ತು.
ಆಗ ದೇವರ ಯಜ್ಞವೇದಿಯಲ್ಲಿ ಯಾವುದೇ ನೂತನ ಅಗ್ನಿಯೂ ಉರಿಯುತ್ತಿರಲಿಲ್ಲ..ಇದರ ಪರಿಣಾಮವಾಗಿ ಇಡೀ ಜನಾಂಗವೇ ಪಾಪಕ್ಕೆ ಬಿದ್ದಿತು.
ಈ ಕಾರಣದಿಂದಲೇ ದೇವರು ಮತ್ತೊಮ್ಮೆ ಅವರೊಡನೆ ಬೆಂಕಿಯ ಮೂಲಕ ಮಾತನಾಡಬೇಕಿದ್ದರೆ ಮೊದಲು ಇಸ್ರೇಲ್ ಜನಾಂಗವು ಆತನ ಕಡೆಗೆ ತಿರುಗಿಕೊಂಡು ಯಜ್ಞವೇದಿಯನ್ನು ಪುನಃ ಕಟ್ಟಬೇಕಿತ್ತು. "ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿನ ಯೆಹೋವವೇದಿಯನ್ನು ತಿರಿಗಿ ಕಟ್ಟಿಸಿದನು."(1 ಅರಸುಗಳು 18:30) ಮುರಿದು ಬಿದ್ದ ಹಾಳು ಪಾಳಾದ ಯಜ್ಞವೇದಿಯಲ್ಲಿ ಎಂದಿಗೂ ದೇವರಾಗ್ನಿಯು ಇಳಿಯುವುದಿಲ್ಲ.
ಯಜ್ಞವೇದಿಯನ್ನು ದುರಸ್ತಿ ಮಾಡುವುದು ಎನ್ನುವಂಥದ್ದು ದೇವರೊಟ್ಟಿಗೆ ನಮ್ಮ ಸಂಬಂಧವನ್ನು ತಿರುಗಿ ಸರಿಪಡಿಸಿಕೊಳ್ಳುವುದನ್ನು ಸೂಚಿಸುತ್ತದೆ. ಕರ್ತನೊಟ್ಟಿಗೆ ನಮ್ಮ ಸಂಬಂಧವನ್ನು ದೇವರ ವಾಕ್ಯಧ್ಯಾನಿಸುವ ಹಾಗೂ ಪ್ರಾರ್ಥನೆಯ ಮೂಲಕ ತಿರುಗಿ ಕಟ್ಟಿಕೊಳ್ಳಬಹುದು.
ಯಜ್ಞವೇಧಿಯನ್ನು ದುರಸ್ತಿ ಮಾಡುವಂತದ್ದು ನಮ್ಮ ಜೀವನ, ಕುಟುಂಬಗಳು ಮತ್ತು ಸಭೆಗಳಲ್ಲಿ ನಾವು ಲೋಕದೊಟ್ಟಿಗೆ ಮಾಡಿಕೊಂಡಿರುವ ಎಲ್ಲ ರಾಜಿ ಸೂತ್ರಗಳನ್ನು ಬಿಟ್ಟು ಶುದ್ಧರಾಗಿ ಕರ್ತನಾದ ಯೇಸುವಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಸತ್ಯವಾದ ಆರಾಧನೆಯ ಮೂಲಕ ಆಗುವ ಮರುಸ್ಥಾಪನೆಯನ್ನು ಒಳಗೊಂಡಿರುತ್ತದೆ. "ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು."ಎಂದು ಹೋಶೇಯ 6:1 ನಮ್ಮನ್ನು ಉತ್ತೇಜಿಸುತ್ತದೆ
ಪ್ರಾರ್ಥನೆಗಳು
ತಂದೆಯೇ, ಯೇಸು ನಾಮದಲ್ಲಿ ನಿನ್ನ ಅಗ್ನಿಯು ನನ್ನ ಮೇಲೆ ಸುರಿಯಲಿ. ನನ್ನ ಜೀವಿತದಲ್ಲಿರುವ ನಿನಗೆ ಬೇಡವಾದ ಎಲ್ಲವನ್ನು ಸುಟ್ಟು ಬೂದಿ ಮಾಡಲಿ. ದೇವರ ಮಹಿಮೆಯು ಯೇಸು ನಾಮದಲ್ಲಿ ಈಗಲೇ ಪ್ರಕಟವಾಗಲಿ
ತಂದೆಯೇ ನನ್ನ ಪ್ರಾರ್ಥನಾ ಯಜ್ಞವೇದಿಯು ಯೇಸು ನಾಮದಲ್ಲಿ ನಿನ್ನ ಪವಿತ್ರಾತ್ಮನ ಅಗ್ನಿಯ ಮೂಲಕ ಉರಿಯಲಿ. ಪವಿತ್ರಾತ್ಮನ ಅಗ್ನಿಯೇ, ನನ್ನ ಜೀವನದ ಮೇಲಿರುವ ಎಲ್ಲಾ ಅಂಧಕಾರದ ಬಲಗಳನ್ನು ಸರಪಳಿಗಳನ್ನು ಯೇಸುನಾಮದಲ್ಲಿ ನಾಶಪಡಿಸು.
ಪವಿತ್ರಾತ್ಮನ ಅಗ್ನಿಯೇ ನನ್ನ ವಿರುದ್ಧವಾಗಿ ಏಳುವಂತ ಸೈತಾನನ
ಪ್ರತಿಯೊಂದು ವಿರೋಧಗಳು ಯೇಸು ನಾಮದಲ್ಲಿ ಸುಟ್ಟು ಬೂದಿಯಾಗಲಿ.
Join our WhatsApp Channel
Most Read
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರು ಹೇಗೆ ಒದಗಿಸುತ್ತಾನೆ #2
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ದೇವರಿಗಾಗಿ ಮತ್ತು ದೇವರೊಂದಿಗೆ.
● ಆಟ ಬದಲಿಸುವವ
ಅನಿಸಿಕೆಗಳು