ಅನುದಿನದ ಮನ್ನಾ
ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
Friday, 15th of March 2024
3
2
340
Categories :
ಚಿತ್ತಚಂಚಲತೆ(Distraction)
"ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ. ನಾನು ನಿಮಗೆ ಉರ್ಲು ಹಾಕಬೇಕೆಂದು ಇದನ್ನು ಹೇಳುವದಿಲ್ಲ, ನೀವು ಸಜ್ಜನರಿಗೆ ತಕ್ಕ ಹಾಗೆ ನಡೆದು ಭಿನ್ನಭಾವವಿಲ್ಲದೆ ಕರ್ತನಿಗೆ ಪಾದಸೇವೆಯನ್ನು ಮಾಡುವವರಾಗಬೇಕೆಂದು ನಿಮ್ಮ ಹಿತಕ್ಕೋಸ್ಕರವೇ ಹೇಳುತ್ತೇನೆ."(1 ಕೊರಿಂಥದವರಿಗೆ 7:35)
ನಾವಿಂದು ಹಿಂದೆಂದೂ ಕಂಡಿರದಂತ ಚಿತ್ತ ಚಂಚಲಗೊಳಿಸುವ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಕಳೆದುಹೋದ ದಿನಗಳಲ್ಲಿ ಅನೇಕರು ತಮ್ಮ ದಿನಗಳನ್ನು ಪ್ರಾರ್ಥನೆಯ ಮೂಲಕ-ವಾಕ್ಯವನ್ನು ಧ್ಯಾನಿಸುವ ಮೂಲಕ ಆರಂಭಿಸುವ ವಾಡಿಕೆ ಹೊಂದಿದ್ದರು. ಆದರೆ ಈಗಂತೂ ಬಹುತೇಕ ಜನರು ದಿನ ಆರಂಭಿಸುವುದೇ ತಮ್ಮ ಇ- ಮೇಲ್ ಗಳನ್ನು, ಸಾಮಾಜಿಕ ಜಾಲತಾಣಗಳ ಹೊಸ ಪ್ರಕಟಣೆಗಳನ್ನು ಪರಿಶೀಲಿಸಿಸುವ ಮೂಲಕ.
ಸಭಾ ಸೇವೆಯ ಸಮಯದಲ್ಲಿ ನಮ್ಮ ಕ್ಯಾಮರಾಗಳು ಅತ್ತಿತ್ತ ಚಲಿಸುತ್ತಾ ಸಭಿಕರನ್ನು ನೋಡುವಾಗ ನಮ್ಮ ಮಾಧ್ಯಮ ತಂಡದವರು ಯಾವಾಗಲೂ ಹೇಳುವುದು ಒಂದೇ. ಕೆಲವರು ಆರಾಧನೆಯ ಸಮಯದಲ್ಲಿಯೂ ತಮ್ಮ ಮೊಬೈಲ್ಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ ಎಂದು. ಒಮ್ಮೆ ನಮ್ಮ ಮಾಧ್ಯಮ ತಂಡದವರು ವಿಡಿಯೋವನ್ನು ಸೆರೆ ಹಿಡಿಯುವಾಗ ಒಬ್ಬ ಮಹಿಳೆಯು ಒಂದು ಕೈಯಲ್ಲಿ ಸಂದೇಶವನ್ನು ಟೈಪ್ ಮಾಡುತ್ತಾ ಇನ್ನೊಂದು ಕೈಯನ್ನು ಮೇಲೆತ್ತಿ ಆರಾಧಿಸುವಂಥ ಚಿತ್ರಣವನ್ನು ಸೆರೆಹಿಡಿದು ನನಗೆ ವರದಿ ಸಲ್ಲಿಸಿದರು. ಇದನ್ನು ಕೇಳಲು ಹಾಸ್ಯಾಸ್ಪದ ಎನಿಸಿದರೂ ಇಂದಿನ ಪೀಳಿಗೆಯ ಚಿತ್ತ ಚಂಚಲಗೊಳಿಸುವ ಕಾರ್ಯಗಳಿಗೆ ದಾಸರಾಗಿರುವುದಂತೂ ಸತ್ಯವೇ.
ಚಿತ್ತ ಚಂಚಲತೆಯ ಸಮಸ್ಯೆಯು ನಾವು ಯಾರಾದರೂ ನಮ್ಮ ಬಳಿ ಏನನ್ನಾದರೂ ಹೇಳುತ್ತಿದ್ದಾಗ ಅದನ್ನು ಕೇಳಿಸಿಕೊಳ್ಳುವಂತ ಸಾಮರ್ಥ್ಯಕ್ಕೆ ಕೇಡನ್ನುಂಟು ಮಾಡುತ್ತದೆ. ಇದು ಭೌತಿಕವಾಗಿಯೂ ಆತ್ಮೀಕವಾಗಿಯೂ ಇಬ್ಬರ ಸಂಬಂಧಗಳನ್ನು ಹಾಳು ಮಾಡುತ್ತದೆ. ಅಷ್ಟೇ ಅಲ್ಲದೆ ಇದು ನಮ್ಮಲ್ಲಿರುವ ಏಕಾಗ್ರತೆಯನ್ನು, ಆಲೋಚಿಸುವ ಸಾಮರ್ಥ್ಯವನ್ನು ಹದಗೆಡಿಸುತ್ತದೆ.
ಈ ಚಿತ್ತ- ಚಂಚಲತೆಯ ಸಮಸ್ಯೆಯಿಂದಾಗಿ ಇಂದು ಅನೇಕರಿಗೆ ಸುಮ್ಮನಿರಲು, ಪ್ರಾರ್ಥಿಸಲು ಮತ್ತು ಧ್ಯಾನಿಸಲು ಅಸಾಧ್ಯವೆನಿಸುತ್ತದೆ. ಅಂದರೆ ಅದೊಂದು ಆತ್ಮೀಕತೆಯ ಅಪಾಯದ ಅಂಚಾಗಿದ್ದು ಈ ದುಷ್ಟತೆಯಿಂದ ತಪ್ಪಿಸಬೇಕೆಂದು ದೇವರಿಗೆ ಮೊರೆ ಇಡಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಚಿತ್ತ ಚಂಚಲತೆಯನ್ನು ಹೇಗೆ ವ್ಯಾಖ್ಯಾನಿಸಬಹುದು?
ಚಿತ್ತ ಚಂಚಲತೆ ಎಂಬುದಕ್ಕೆ ನಾನು ಕೊಡುವ ವ್ಯಾಖ್ಯಾನವೇನೆಂದರೆ 'ನಮ್ಮ ಗಮನವನ್ನು ನಾವು ಹೆಚ್ಚು ಮುಖ್ಯತ್ವ ಕೊಡಬೇಕಾಗಿರುವ ಸಂಗತಿಗಳಿಗಿಂತ ಕಡಿಮೆ ಮುಖ್ಯತ್ವ ಕೊಡುವ ಸಂಗತಿಗಳ ಕಡೆಗೆ ವರ್ಗಾಯಿಸುವುದು' ಎಂದು.
ಈ ಚಿತ್ತ ಚಂಚಲತೆಯು ಏಕಿಷ್ಟು ಅಪಾಯಕಾರಿಯಾಗಿದೆ?
ಈ ಚಿತ್ತ ಚಂಚಲತೆಯಿಂದ ಆಗಬಹುದಾದ ಬಹುದೊಡ್ಡ ಅಪಾಯವೆಂದರೆ ಅದು ಕರ್ತನನ್ನೇ ಕಡೆಗಣಿಸುವುದಾಗಿದೆ. ನಮಗಿರುವ ಗಮನ ವರ್ಗಾಯಿಸುವ ನಡವಳಿಕೆಯು ನಾವು ಬಹು ಮುಖ್ಯವಾಗಿ ಪ್ರಾಶಾಸ್ತ್ಯ ಕೊಡಬೇಕಾದ ವ್ಯಕ್ತಿಯನ್ನು ಅಂದರೆ ಕರ್ತನನ್ನು ಬಿಟ್ಟು ಮುಖ್ಯವಲ್ಲದ ವಿಚಾರಗಳ ಕಡೆಗೆ ತಿರುಗಿಕೊಳ್ಳುವಂತದ್ದೇ ಆಗಿದೆ. ಇದನ್ನೇ ಸತ್ಯವೇದವು ವಿಗ್ರಹಾರಾಧನೆ ಎನ್ನುತ್ತದೆ.
"ಆದರೆ ಮಾರ್ಥಳು ಬಹಳ ಸೇವೆಯ ವಿಷಯವಾಗಿ ಬೇಸತ್ತು ಆತನ ಬಳಿಗೆ ಬಂದು - ಸ್ವಾಮೀ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು ಅಂದಳು."(ಲೂಕ 10:40)
ಗಮನಿಸಿ. ಇಲ್ಲಿ ಮಾರ್ತಾಳ ಚಿತ್ತವು ಚಂಚಲವಾಗಿತ್ತು.ಆದರೆ ಕೆಟ್ಟದ್ದಕ್ಕಾಗಿ ಅಲ್ಲ. ಅವಳು ಅತ್ಯುತ್ತಮವಾದ ಯೇಸುವಿನ ಮೇಲೆ ತನ್ನ ಗಮನಹರಿಸುವ ಬದಲು ಉತ್ತಮವಾದ ಕಾರ್ಯಗಳ ಮೇಲೆ ತನ್ನ ಗಮನವಿಟ್ಟಳು. ಮತ್ತೊಮ್ಮೆ ಇನ್ನೊಂದು ವ್ಯಾಖ್ಯಾನವನ್ನು ಈ ಚಿತ್ತ ಚಂಚಲತೆಗೆ ಕೊಡಬಹುದಾದರೆ "ಯಾವುದು ನಿಮ್ಮನ್ನು ಅತ್ಯುತ್ತಮವಾದದರಿಂದ ಬೇರ್ಪಡಿಸಿ ಉತ್ತಮ ಮಾತ್ರವಾದವುಗಳ ಕಡೆಗೆ ನಿಮ್ಮನ್ನು ಕರೆದೊಯ್ಯುತ್ತದೋ ಅದೇ ಚಿತ್ತ - ಚಂಚಲತೆ."
ಬೇಡದ ಅನೇಕ ಕಾರ್ಯಗಳಲ್ಲಿ ನೀವು ಮಗ್ನರಾಗುವಂತದ್ದು ಕರ್ತನು ನೀವು ಮಾಡಬೇಕೆಂದು ಕರೆದ ಕಾರ್ಯಗಳಿಂದ ನಿಮ್ಮನ್ನು ದೂರ ಮಾಡುತ್ತದೆ. ಈ ವಿಚಾರದಲ್ಲಿ ನಾನು ಕೂಡ ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಆದರೆ ಕರ್ತನು ತನ್ನ ಮಹಾ ಕೃಪೆಯಿಂದ ನನಗೆ ಸಹಾಯ ಮಾಡಿದನು. ನನ್ನ ಮುಂಚಿನ ದಿನಗಳಲ್ಲಿ ನನಗೆ ಎಲ್ಲವನ್ನು ಮಾಡುವ ಬಯಕೆ ಇತ್ತು
ಯಾರೋ ಏನನ್ನೋ ಮಾಡುತ್ತಿದ್ದಾರೆ ಅನ್ನುವುದಕ್ಕೋಸ್ಕರ ಅದನ್ನು ನೀವು ಮಾಡಬೇಡಿರಿ. ಕರ್ತನು ಏನನ್ನು ಹೇಳುತ್ತಾನೋ ಅದನ್ನೇ ನೀವು ಮಾಡಿರಿ ಅಷ್ಟೇ. ಕೆಲವೊಮ್ಮೆ ದೇವರು ನಿಮ್ಮನ್ನು ಏನನ್ನು ಮಾಡಲು ಕರೆದಿದ್ದಾನೋ ಅದರ ಮೇಲೆ ಗಮನ ಕೇಂದ್ರೀಕರಿಸುವುದೇ ನಿಮಗೆ ಬಹು ಕಷ್ಟ ಸಂಗತಿಯಾಗಿ ಬಿಟ್ಟಿರುತ್ತದೆ.
"ಸ್ವಾವಿುಯು ಆಕೆಗೆ - ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಎಂದು ಉತ್ತರಕೊಟ್ಟನು."(ಲೂಕ 10:41-42)
ನಾವು ಪದೇ ಪದೇ ಈ ರೀತಿ ಚಿತ್ತ ಚಂಚಲತೆಯ ಸಮಸ್ಯೆಗೆ ಒಳಗಾಗುತ್ತಿದ್ದರೆ ನಮ್ಮ ಅಂತರಾತ್ಮದ ಸ್ಥಿತಿಗತಿಯ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದರ್ಥ
ನೆನಪಿಡಿ ಚಿತ್ತ ಚಂಚಲತೆಯೇ ಅಭಿಷೇಕಕ್ಕಿರುವ ಪ್ರಪ್ರಥಮ ಶತ್ರು ಹಾಗೆಯೇ ಏಕಾಗ್ರತೆಯೇ ಬಲಕ್ಕಿರುವ ಕೀಲಿ ಕೈಯಾಗಿದೆ.
ಪ್ರಾರ್ಥನೆಗಳು
ತಂದೆಯೇ ನೀನು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ನಿನ್ನ ಪ್ರಿಯ ಕುಮಾರನಾದ ಕರ್ತನಾದ ಯೇಸುಕ್ರಿಸ್ತನ ರಾಜ್ಯಕ್ಕೆ ಸೇರಿಸಿದ್ದಕ್ಕಾಗಿ ನಿನಗೆ ವಂದನೆ ಸಲ್ಲಿಸುತ್ತೇನೆ.ನನ್ನ ಚಿತ್ತವನ್ನು ಚಂಚಲಗೊಳಿಸುವ ಎಲ್ಲಾ ಬಲಗಳು ಯೇಸು ನಾಮದಲ್ಲಿ ಮುರಿದು ಬೀಳಲಿ.
ವರಪ್ರದನಾದ ಪವಿತ್ರಾತ್ಮ ದೇವನೇ, ದೇವರು ನನ್ನನ್ನು ಏತಕ್ಕಾಗಿ ಕರೆದಿದ್ದಾನೋ ಅದರ ಮೇಲೆ ಮಾತ್ರ ನನ್ನ ಗಮನವನ್ನು ಕೇಂದ್ರೀಕರಿಸುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೇನ್
ವರಪ್ರದನಾದ ಪವಿತ್ರಾತ್ಮ ದೇವನೇ, ದೇವರು ನನ್ನನ್ನು ಏತಕ್ಕಾಗಿ ಕರೆದಿದ್ದಾನೋ ಅದರ ಮೇಲೆ ಮಾತ್ರ ನನ್ನ ಗಮನವನ್ನು ಕೇಂದ್ರೀಕರಿಸುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೇನ್
Join our WhatsApp Channel
Most Read
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಬೀಜದಲ್ಲಿರುವ ಶಕ್ತಿ -2
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
ಅನಿಸಿಕೆಗಳು