english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಪ್ರಾರ್ಥನೆಯಿಲ್ಲದಿರುವುದು ದೇವದೂತರ ಚಟುವಟಿಕೆಗೆ ಅಡ್ಡಿಯಾಗುತ್ತದೆ
ಅನುದಿನದ ಮನ್ನಾ

ಪ್ರಾರ್ಥನೆಯಿಲ್ಲದಿರುವುದು ದೇವದೂತರ ಚಟುವಟಿಕೆಗೆ ಅಡ್ಡಿಯಾಗುತ್ತದೆ

Monday, 11th of August 2025
0 0 1
Categories : ಪ್ರಾರ್ಥನೆ (prayer) ಮಧ್ಯಸ್ತಿಕೆ ಪ್ರಾರ್ಥನೆ (Intercession)
ಪ್ರಾರ್ಥನೆಯಿಲ್ಲದಿರುವುದು, ಪ್ರಾರ್ಥನಾರಹಿತತೆಯ ಅತ್ಯಂತ ದೊಡ್ಡ ದುರಂತವೆಂದರೆ ಅದು ದೇವದೂತರಿಗೆ ಕೆಲಸವಿಲ್ಲದಂತೆ ಮಾಡುತ್ತದೆ. ನಾನು ಏನನ್ನು ಹೇಳಲು ಹೊರಟಿದ್ದೀನಿ? ನನಗೆ ವಿವರಿಸಲು ಅವಕಾಶ ಕೊಡಿ. 

ಸಿರಿಯಾದ ಬಲಿಷ್ಠ ಸೈನ್ಯವು ಪ್ರವಾದಿಯಾದ ಎಲೀಷ ಮತ್ತು ಅವನ ಸೇವಕನನ್ನು ಸೆರೆಹಿಡಿಯಲು ಸುತ್ತುವರೆದಾಗ, ಪ್ರವಾದಿ ದೈವಿಕ ಪ್ರಕಟಣೆಯಿಂದ ಹೀಗೆ ಹೇಳಿದನು, “ಭಯಪಡಬೇಡ, ನಮ್ಮೊಂದಿಗಿರುವವರು ಅವರೊಂದಿಗಿರುವವರಿಗಿಂತ ಹೆಚ್ಚಗಿದ್ದಾರೆ.” (2 ಅರಸುಗಳು 6:16) 

"ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು." (2 ಅರಸುಗಳು 6:17)

ದೇವದೂತರು ಪ್ರಾರ್ಥನೆಯ ಸ್ಥಳಕ್ಕೆ ಅಥವಾ ಪ್ರಾರ್ಥನೆಯ ವ್ಯಕ್ತಿಗೆ ಆಕರ್ಷಿತರಾಗುತ್ತಾರೆ. ದೇವರ ಮನುಷ್ಯನಾದ ಎಲೀಷನು ಪ್ರಾರ್ಥಿಸಿದ್ದರಿಂದ ದೇವದೂತರಲ್ಲಿ ಚಲನೆ ಉಂಟಾಯಿತು. ದೇವರ ಮನುಷ್ಯನಾದ ಎಲೀಷನು ಪ್ರಾರ್ಥಿಸದಿದ್ದರೆ ಏನಾಗುತ್ತಿತ್ತು ಎಂದು ತಿಳಿಯಲು ಹೆಚ್ಚಿನ ಕಲ್ಪನೆಯ ಅಗತ್ಯವಿಲ್ಲ. ಸ್ಪಷ್ಟವಾಗಿ, ಸಿರಿಯನ್ ಸೈನ್ಯವು ಅವರನ್ನು ಸೆರೆಹಿಡಿದು ಬಹುಶಃ ಅವರನ್ನು ಸಂಸೋನನ ಹಿಂಸಿಸಿದ ಹಾಗೆ ಹಿಂಸಿಸುತ್ತಿತ್ತು.

ಅಪೊಸ್ತಲರ ಕೃತ್ಯಗಳು 27 ರಲ್ಲಿ, ಅಪೊಸ್ತಲ ಪೌಲನು ಸಮುದ್ರದ ಮಧ್ಯದಲ್ಲಿ, ಇಡೀ ಹಡಗನ್ನು ನಾಶಮಾಡುವ ಬೆದರಿಕೆಯೊಡ್ಡುವ ಭೀಕರ ಬಿರುಗಾಳಿಯಲ್ಲಿ ಸಿಲುಕಿಕೊಂಡದ್ದನ್ನು ನಾವು ನೋಡುತ್ತೇವೆ. 

ಪೌಲನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಾಗಿ, ಕರ್ತನು ಅವನ ಸಹಾಯಕ್ಕೆ ನಿಲ್ಲಲು ದೇವದೂತನನ್ನು ಕಳುಹಿಸಿದನು. ಈ ಭೇಟಿಯ ಕುರಿತು ಅವನು ಅಪೊಸ್ತಲರ ಕೃತ್ಯಗಳು 27: 23 ರಲ್ಲಿ  ಪೌಲನು "ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು -  ಪೌಲನೇ, ಭಯಪಡಬೇಡ, ನೀನು ಚಕ್ರವರ್ತಿಯ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣ ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು ನನ್ನ ಸಂಗಡ ಹೇಳಿದನು". 

ಕರ್ತನ ಈ ದೂತನು ಪೌಲನನ್ನು ಮತ್ತು ನಾವಿಕರನ್ನು ಬಿರುಗಾಳಿಯಿಂದ ಹೊರತಂದನು. ಅವರ ಜೀವಗಳು ಅದ್ಭುತವಾಗಿ ಉಳಿಸಲ್ಪಟ್ಟವು. ಅದೇ ರೀತಿ, ನೀವು ಪ್ರಾರ್ಥಿಸಿದಾಗ, ದೇವರು ತನ್ನ ದೂತರನ್ನು ಬಿಡುಗಡೆ ಮಾಡಿ ನಿಮ್ಮನ್ನು ಪ್ರತಿಯೊಂದು ಬಿರುಗಾಳಿಯಿಂದ ಹೊರತರುತ್ತಾನೆ. 

ಅಪೊಸ್ತಲರ ಕೃತ್ಯಗಳು 12 ರಲ್ಲಿ, ರಾಜ ಹೆರೋದನು ಸಭೆಯನ್ನು ಹಿಂಸಿಸಲು ಪ್ರಾರಂಭಿಸಿದನು ಎಂದು ನಾವು ನೋಡುತ್ತೇವೆ. ಅವನು ಯೋಹಾನನ ಸಹೋದರನಾದ ಯಾಕೋಬನನ್ನು ಕೊಂದನು. ಈಗ ಹೆರೋದನು ಯೆಹೂದ್ಯರಲ್ಲಿ ತನ್ನ ಜನಪ್ರಿಯತೆಯ ರೇಟಿಂಗ್‌ಗಳನ್ನು ಎಷ್ಟು ಹೆಚ್ಚಿಸಿದೆ ಎಂದು ನೋಡಿದಾಗ, ಅವನನ್ನು ಗಲ್ಲಿಗೇರಿಸುವ ಯೋಜನೆಯೊಂದಿಗೆ ಪೇತ್ರನನ್ನೂ ಬಂಧಿಸಿದನು. ಸಾರ್ವಜನಿಕ ವಿಚಾರಣೆಗೆ ತರುವವರೆಗೆ ಪೇತ್ರನನ್ನು ಕಾವಲು ಕಾಯಲು ಹದಿನಾರು ಸೈನಿಕರನ್ನು ನಿಯೋಜಿಸಲಾಯಿತು.

ಇದನ್ನು ನೋಡಿದ ಸಭೆ, ಪೇತ್ರನನ್ನು ಬಿಡುಗಡೆ ಮಾಡುವಂತೆ ದೇವರನ್ನು ಬೇಡಿಕೊಳ್ಳುತ್ತಾ ತೀವ್ರವಾದ ಮಧ್ಯಸ್ಥಿಕೆಯ  ಪ್ರಾರ್ಥನಾ ಸಮಯಕ್ಕೆ ಹೋಯಿತು. ಈ ಪ್ರಾರ್ಥನೆಯ ಪರಿಣಾಮವೆಂದರೆ ಅದು ಪರಲೋಕವನ್ನು ಕಾರ್ಯರೂಪಕ್ಕೆ ತಂದಿತು. “ಇದ್ದಕ್ಕಿದ್ದಂತೆ, ಪೇತ್ರನ ಜೈಲಿನ ಕೋಣೆಯಲ್ಲಿ ಪ್ರಕಾಶಮಾನವಾದ ಬೆಳಕು ಕಾಣಿಸಿಕೊಂಡು ಕರ್ತನ ದೂತನು ಪೇತ್ರನ ಮುಂದೆ ನಿಂತನು. ದೇವದೂತನು ಅವನನ್ನು ಎಚ್ಚರಗೊಳಿಸಲು ಅವನ ಪಕ್ಕೆಯನ್ನು ಹೊಡೆದು, “ಬೇಗನೆ ಎದ್ದೇಳು! ಎದ್ದೇಳು!” ಎಂದು ಹೇಳಿದನು ಆಗ ಸರಪಳಿಗಳು ಅವನ ಕೈಗಳಿಂದ ಕಳಚಿ ಬಿದ್ದವು. (ಕಾಯಿದೆಗಳು 12:7)

ಸಭೆಯ ತೀವ್ರವಾದ ಮಧ್ಯಸ್ಥಿಕೆಯ ಪ್ರಾರ್ಥನೆಗಳು ದೇವ ದೂತನು ಪೇತ್ರನ ಪರವಾಗಿ ಕಾರ್ಯರೂಪಕ್ಕೆ ಬರುವಂತೆ ಮಾಡಿತು. ಅವನು ಅದ್ಭುತವಾಗಿ ಬಿಡುಗಡೆಯಾದನು.

ಒಂದು ವೇಳೆ ಸಭೆಯು ಪ್ರಾರ್ಥಿಸದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿ? ಪೇತ್ರನು ಖಂಡಿತವಾಗಿಯೂ ಕೊಲ್ಲಲ್ಪಡುತ್ತಿದ್ದನು. ದೇವದೂತರ ಚಟುವಟಿಕೆಯು ಅತ್ಯಾಸಕ್ತಿಯ ಪ್ರಾರ್ಥನೆಯ ಪರಿಣಾಮವಾಗಿದೆ. ಪ್ರಾರ್ಥನೆಯಿಲ್ಲದಿರುವುದು ದೇವದೂತರನ್ನು ಕೇವಲ ಮೂಕ ಪ್ರೇಕ್ಷಕರನ್ನಾಗಿ ಮಾಡುತ್ತದೆ. 

ಪ್ರಿಯ ದೇವ ಜನರೇ, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ಮತ್ತು ವಾದಗಳನ್ನು ಮಾಡುವ ಸಮಯವಲ್ಲ. ಪ್ರಾರ್ಥನೆಯು ಇಂದಿನ ಅಗತ್ಯವಾಗಿದೆ. ಪ್ರಾರ್ಥನೆಯಿಲ್ಲದ ವ್ಯಕ್ತಿಯು ಸೈತಾನನ ಕೈಗೊಂಬೆ. ಪ್ರಾರ್ಥನೆಯಿಲ್ಲದ ಕುಟುಂಬವು ಸಂದರ್ಭಗಳ ಕೈಗೊಂಬೆ ಯಾಗಿರುತ್ತದೆ. ಪ್ರಾರ್ಥನೆಯಿಲ್ಲದ ಸಭೆಯು ವಿಫಲವಾದ ಸಭೆ ಆಗಿರುತ್ತದೆ. ಎದ್ದೇಳಿ ಪ್ರಾರ್ಥಿಸಿ ಯಾಕಂದರೆ 

ಆತನು ತನ್ನ ದೂತರಿಗೆ ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡಲು ಆಜ್ಞಾಪಿಸುವನು. ನಿನ್ನ ಪಾದವು ಕಲ್ಲಿಗೆ ಬಡಿಯದಂತೆ ಅವರು ನಿನ್ನನ್ನು ಅವರ ಕೈಗಳಲ್ಲಿ ಎತ್ತಿಕೊಳ್ಳುವರು. (ಕೀರ್ತನೆ 91:11-12) 

Bible Reading: Jeremiah 2-4
ಅರಿಕೆಗಳು
1. ತಂದೆಯೇ, ನನ್ನ ಪ್ರಾರ್ಥನಾ ಜೀವನವನ್ನು ತಡೆಯಲು ತೆರೆದಿರುವ ಪ್ರತಿಯೊಂದು ದುರಾತ್ಮನ ಬಾಗಿಲನ್ನು ನಾನು ಯೇಸುನಾಮದಲ್ಲಿ ಬಂಧಿಸುತ್ತೇನೆ. 

2. ಪ್ರಾರ್ಥಿಸುವುದನ್ನು ತಡೆಯುವ ಪ್ರತಿಯೊಂದು ಗೊಂದಲವನ್ನು ಯೇಸುನಾಮದಲ್ಲಿ ಬಂಧಿಸುತ್ತೇನೆ. ನನ್ನ ಪ್ರಾರ್ಥನೆಗೆ

3. ಅಡ್ಡಿಯಾಗುವ ಪ್ರತಿಯೊಂದು ತಡೆಗೋಡೆ ಮತ್ತು ಅಡಚಣೆಯನ್ನು ಯೇಸನಾಮದಲ್ಲಿ ಬೇರುಸಮೇತ ಕಿತ್ತುಹಾಕಿ.

4. ಈ ಕ್ಷಣದಿಂದ, ನಾನು ನನ್ನ ಪ್ರಾರ್ಥನಾ ಜೀವನವನ್ನು ಯೇಸು ನಾಮದಲ್ಲಿ ಪವಿತ್ರಾತ್ಮನಿಗೆ ಒಪ್ಪಿಸಿ ಅರ್ಪಿಸುತ್ತೇನೆ. 

5. ತಂದೆಯೇ, ನನ್ನ ಜೀವನದ ಮೇಲೆ “ಪ್ರಾರ್ಥನಾ ಅಭಿಷೇಕ”ವನ್ನು ಯೇಸುನಾಮದಲ್ಲಿ ಬಿಡುಗಡೆ ಮಾಡು.

ವಿದೇಶಗಳ ವಿಚಾರದಲ್ಲಿ ಪ್ರಾರ್ಥಿಸಲು ಸ್ವಲ್ಪ ಸಮಯ ಕಳೆಯಿರಿ.


Join our WhatsApp Channel


Most Read
● ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು - 2
● ಕೃಪೆಯ ಮೇಲೆ ಕೃಪೆ
● ಮೂರು ಆಯಾಮಗಳು
● ಹಣಕಾಸಿನ ಅದ್ಭುತ ಬಿಡುಗಡೆ.
● ಯಹೂದವು ಮುಂದಾಗಿ ಹೊರಡಲಿ
● ನಂಬಿಕೆಯ ಜೀವಿತ
● ನಿಮ್ಮ ಆತ್ಮಗಳ ಪುನಃಸ್ಥಾಪನೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್