ಅನುದಿನದ ಮನ್ನಾ
ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
Saturday, 27th of April 2024
5
2
237
Categories :
ವಾತಾವರಣ (Atmosphere)
ಒಂದು ಸಭೆಯಲ್ಲಿನ ಆತ್ಮಿಕ ವಾತಾವರಣ ಹೇಗಿದೆ ಎಂಬುದು ಸಂಪೂರ್ಣವಾಗಿ ಸಭೆಯನ್ನು ನಡೆಸುವವರ ಹೆಗಲ ಮೇಲೆ ಮಾತ್ರ ಇರುವಂತದ್ದು ಎಂಬುದು ಅನೇಕರ ಅಭಿಪ್ರಾಯ.
ಕರ್ತನಾದ ಯೇಸು ಸ್ವಾಮಿಯು ತನ್ನ ಭೂ ಯಾತ್ರೆಯ ಸಮಯದಲ್ಲಿ ಅತ್ಯದ್ಭುತವಾದ ಅಸಾಮಾನ್ಯವಾದ ಮಹತ್ಕಾರ್ಯಗಳನ್ನು ನಡೆಸಿದನು. ಆದಾಗಿಯೂ ಆತನು ತನ್ನ ಸ್ವಂತ ಊರಾದ ನಜರೇತಿಗೆ ಹಿಂದಿರುಗಿ ಬಂದಾಗ ಮಹತ್ಕಾರ್ಯಗಳನ್ನು ಮಾಡಲು ಆತನಿಗೆ ಸಾಧ್ಯವಾಗಲಿಲ್ಲ. ಸ್ವಲ್ಪ ಯೋಚಿಸಿರಿ, ಕರ್ತನಾದ ಯೇಸು ಕ್ರಿಸ್ತನೇ- ದೇವಾದಿ ದೇವನಾದ ಸರ್ವಶಕ್ತನ ಮಗನಿಗೇ ಅಲ್ಲಿ ಫಲಪ್ರದವಾಗಲಿಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿ ಆತನಿಗೆ ಸೂಚಕ ಕಾರ್ಯ ಮಾಡಲು ಅಭಿಷೇಕದ ಕೊರತೆ ಏನೂ ಇರಲಿಲ್ಲ. ಆದರೆ ಆ ಪ್ರದೇಶದಲ್ಲಿ ಹರಡಿಕೊಂಡಿದ್ದ ಅಪನಂಬಿಕೆಯ ವಾತಾವರಣದ ಕಾರಣದಿಂದಾಗಿ ಆತನಿಗೆ ಅಲ್ಲಿ ಮಹತ್ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ.
"ಅವರು ಆತನನ್ನು ನಂಬದೆ ಹೋದದರಿಂದ ಆತನು ಅಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲ."(ಮತ್ತಾಯ 13:58)
ನಾವು ನಿಜವಾಗಿಯೂ ನಮ್ಮ ಸಭೆಗಳಲ್ಲಿ ಆತ್ಮಿಕ ವಾತಾವರಣವನ್ನು ಅಭಿವೃದ್ಧಿಪಡಿಸುವ ಆಸಕ್ತಿಯಲ್ಲಿದ್ದರೆ ನಾವೆಲ್ಲರೂ ಒಂದೇ ಗುಂಪಾಗಿ ಕೂಡಿಬಂದು ಅದಕ್ಕಾಗಿ ನಿಯಮಿತವಾಗಿ ಮಧ್ಯಸ್ಥಿಕೆ ಪ್ರಾರ್ಥನೆಯನ್ನು ಮಾಡಬೇಕು. ಇದು ನಮ್ಮ ನಂಬಿಕೆಯನ್ನು ಹೆಚ್ಚಿಸಿ, ಬೋಧಕರ ನಂಬಿಕೆಯನ್ನೂ ಹೆಚ್ಚಿಸಿ ಯೇಸುವಿನ ನಾಮವನ್ನು ಎತ್ತಿ ಹಿಡಿಯುವಂತೆಯೂ ಮತ್ತು ಪವಿತ್ರಾತ್ಮನು ಬಲವಾಗಿ ಚಲಿಸುವಂತಹ ನಂಬಿಕೆಯ ವಾತಾವರಣವನ್ನು ಸೃಷ್ಟಿಸುವಂತೆಯೂ ಕಾರ್ಯ ಮಾಡುತ್ತದೆ.
ನಾವು ನಮ್ಮ ಮನೆಗಳಲ್ಲಿ ಆತ್ಮಿಕ ವಾತಾವರಣವನ್ನು ಅಭಿವೃದ್ಧಿಪಡಿಸಬೇಕೆಂದಿದ್ದರೆ ನಾವು ಕುಟುಂಬವಾಗಿ ಪ್ರತಿಯೊಬ್ಬರೂ ಶ್ರದ್ದೆಯಿಂದ ಕೂಡಿ ನಿಯಮಿತವಾಗಿ ಕುಟುಂಬ ಪ್ರಾರ್ಥನೆಯನ್ನು ಮಾಡಬೇಕು.
ಇನ್ನೊಂದು ಮುಖ್ಯವಾಗಿ ಕಾಳಜಿ ವಹಿಸಬೇಕಾದ ಕ್ಷೇತ್ರವಿದೆ.
ನಾವು ಯಾವಾಗಲಾದರೂ ರೈಲು ಅಥವಾ ವಿಮಾನ ಪ್ರಯಾಣ ಮಾಡಬೇಕೆಂದಿದ್ದರೆ ಆ ಸಮಯಕ್ಕೆ ಮುಂಚಿತವಾಗಿಯೇ ನಿಲ್ದಾಣ ತಲುಪಲು ಪ್ರಯತ್ನಿಸುತ್ತೇವೆ. ಆದರೆ ಸಭೆಗೆ ಹೋಗುವ ವಿಚಾರ ಬಂದಾಗ ಮಾತ್ರ ಅದೇನೋ ಅದೊಂದು ದಿನನಿತ್ಯದ ಸಂಗತಿ ಎಂಬಂತೆ ಸಭೆಯ ಸೇವೆ ಕಾರ್ಯಕ್ಕೆ ತಡವಾಗಿ ಹೋದರೂ ನಡೆಯುತ್ತದೆ ಎಂದು ಅನೇಕರು ವರ್ತಿಸುತ್ತಾರೆ.
ನಾವು ಸಭೆಯಾಗಿ ಆರಾಧನೆಯಲ್ಲಿ ಪಾಲ್ಗೊಳ್ಳುವಾಗ ಪವಿತ್ರಾತ್ಮನ ಪ್ರಸನ್ನತೆಯಿಂದ ತುಂಬಿದ ವಾತಾವರಣವನ್ನು ಸೃಷ್ಟಿಸಲು ನಾವು ಸಹಾಯ ಮಾಡುವವರಾಗುತ್ತೇವೆ. ಅಂತಹ ಒಂದು ವಾತಾವರಣದಲ್ಲಿಯೇ ಜನರ ಹೃದಯಗಳು ದೇವರ ಕಡೆಗೆ ತಿರುಗಿಕೊಳ್ಳುವಂತೆ ಆಗುತ್ತದೆ. ಅದುವೇ ಜನರು ಕರ್ತನಾದ ಯೇಸುವಿನ ಬಗೆಗಿನ ತಮ್ಮ ಮೊದಲಿದ್ದ ಪ್ರೀತಿಯ ಕಡೆಗೆ ತಿರುಗಿಸುವಂತಹ ವಾತಾವರಣವಾಗಿರುತ್ತದೆ. ಆದುದರಿಂದ ಎಂದಿಗೂ ಆರಾಧನೆಯನ್ನು ತಪ್ಪಿಸಬೇಡಿರಿ
ನಾನೊಂದು ಆಳವಾದ ಗೂಡಾರ್ಥವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಒಬ್ಬ ವ್ಯಕ್ತಿಯು ಆರಾಧನೆಯಲ್ಲಿ ನಿಯಮಿತವಾಗಿ ಪಾಲ್ಗೊಳ್ಳುವಂತವನಾಗಿದ್ದರೆ ಅವನು ಅಥವಾ ಅವಳು ಆ ಆರಾಧನೆಯ ವಾತಾವರಣವನ್ನು ಆರಾಧನೆ ಮುಗಿದ ಮೇಲೇಯೂ ಸಹ ಎಲ್ಲೇ ಹೋದರೂ ತಮ್ಮೊಡನೆ ಕೊಂಡೊಯ್ಯುವವರಾಗಿರುತ್ತಾರೆ.
ಅಂತಹ ವ್ಯಕ್ತಿಯು ಸಭೆಯು ಸೇವ ಕಾರ್ಯಗಳಾದ ಮೇಲೆ ಹೋಗುವ ಸ್ಥಳಗಳಲ್ಲೆಲ್ಲಾ ಪ್ರಭಾವವನ್ನೂ -ಪರಿಣಾಮವನ್ನೂ ಬೀರುವಂತವರಾಗಿರುತ್ತಾರೆ.
ದೇವದೂತರುಗಳೆಲ್ಲರೂ ಹಗಲಿರುಳೆನ್ನದೆ ಕರ್ತನನ್ನು ಆರಾಧಿಸುತ್ತಲೇ ಇರುತ್ತಾರೆ. ಅಂತಹ ದೇವದೂತರು ಇಳಿದು ಬಂದು ಬೆತ್ಸೆದಾ ಕೊಳದ ನೀರನ್ನು ಕಲುಕಿ, ಪರಲೋಕದ ವಾತಾವರಣವನ್ನು ಅಲ್ಲಿ ಸೃಷ್ಟಿಸುತ್ತಿದ್ದರು. ಮೊದಲು ಯಾರು ನೀರಿಗೆ ಇಳಿಯುತ್ತಿದ್ದರೋ ಅವರೆಲ್ಲಾ ಅದೆಂತ ರೋಗವಿದ್ದರೂ ಗುಣವಾಗುತ್ತಿದ್ದರು ಮತ್ತು ಬಿಡುಗಡೆ ಹೊಂದುತ್ತಿದ್ದರು.
ನೀವು ಎಲ್ಲೇ ಹೋದರೂ ಈ ರೀತಿಯ ಆರಾಧನೆಯ ಮತ್ತು ಪ್ರಾರ್ಥನೆಯ ವಾತಾವರಣವನ್ನು ನಿಮ್ಮೊಂದಿಗೆ ಕೊಂಡೊಯ್ದು ಅಲ್ಲಿ ಅದ್ಭುತವಾದ ಬಿಡುಗಡೆಗಳು ಉಂಟಾಗಲೆಂದು ಯೇಸು ನಾಮದಲ್ಲಿ ಅಜ್ಞಾಪಿಸಿ ಘೋಷಿಸುತ್ತೇನೆ. ಈ ವಾಕ್ಯವನ್ನು ಹೊಂದಿಕೊಳ್ಳಿರಿ.
ಗಮನಿಸಿ : ಈ ದೈನಂದಿನ ಮನ್ನವು ನಿಮಗೆ ಆಶೀರ್ವಾದಕರವಾಗಿದ್ದರೆ ನಿಮ್ಮ ಕುಟುಂಬದವರಿಗೂ ಸ್ನೇಹಿತರಿಗೂ ನೋಹಾ ಆಪ್ಗೆ ಸೇರ್ಪಡೆಯಾಗಲು ಪ್ರೋತ್ಸಾಹಿಸಿ. ಈ ದೈನಂದಿನ ಮನ್ನವನ್ನು ಅವರಿಗೆ ಹಂಚಿರಿ.
ಪ್ರಾರ್ಥನೆಗಳು
ಕರ್ತನ ಆತ್ಮವು ನನ್ನ ಮೇಲೆಯೂ ನನ್ನೊಳಗೂ ಇದೆ, ನಾನು ಆತನ ಪ್ರಸನ್ನತೆಯನ್ನು ನಾನು ಹೋಗುವ ಕಡೆಯಲೆಲ್ಲಾ ಕೊಂಡೊಯ್ಯುವೆನು ಮತ್ತು ಕರ್ತನು ನನ್ನ ಮುಂದಾಗಿ ಹೊರಡುವನು ಎಂದು ಯೇಸು ನಾಮದಲ್ಲಿ ಘೋಷಿಸುವೆನು.
Join our WhatsApp Channel
Most Read
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಮಳೆಯಾಗುತ್ತಿದೆ
● ದೇವರ ಕೃಪೆಯನ್ನು ಸೇದುವುದು
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ಪ್ರೀತಿಯ ಭಾಷೆ
● ಬೀಜದಲ್ಲಿರುವ ಶಕ್ತಿ -3
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
ಅನಿಸಿಕೆಗಳು