ಅನುದಿನದ ಮನ್ನಾ
ಪುರುಷರು ಏಕೆ ಪತನಗೊಳ್ಳುವರು -4
Saturday, 11th of May 2024
0
0
166
Categories :
ಜೀವನದ ಪಾಠಗಳು (Life Lessons)
ಮುಂಬೈನ ಜುಹು ಸಮುದ್ರ ತೀರದಲ್ಲಿ ಕುದುರೆ ಸವಾರಿ ಮಾಡಿಸುವ ಒಬ್ಬ ಈಶಾನ್ಯ ಭಾರತದ ಹಿರಿಯ ವ್ಯಕ್ತಿಯನ್ನು ನಾನು "ಅಂಕಲ್ ನೀವು ಕುದುರೆಗೆ ಈ ಕಣ್ಣಿನ ಪಟ್ಟಿಯನ್ನು ಯಾಕೆ ಕಟ್ಟುತ್ತೀರಿ?" ಎಂದು ಮುಗ್ದವಾಗಿ ಕೇಳಿದೆ. ಕುದುರೆಯ ಕುರಿತು ಸಾಕಷ್ಟು ತಿಳುವಳಿಕೆ ಇದ್ದ ಅವರು "ಕುದುರೆಗೆ ಕಟ್ಟುವ ಕಣ್ಣು ಪಟ್ಟಿಯು ಕುದುರೆಯ ದೃಷ್ಟಿಯ ವೈಶಾಲ್ಯತೆಯನ್ನು ಕಡಿತಗೊಳಿಸಿ ಅದು ಕೇವಲ ತನ್ನ ಮುಂದಿರುವ ರಸ್ತೆಯನ್ನು ಮಾತ್ರ ನೋಡುವಂತೆ ಮಾಡುತ್ತದೆ. ಹೀಗಾಗಿ ಕುದುರೆಯ ಕಣ್ಣು ಪಟ್ಟಿಯು ಕುದುರೆಗೆ ಹೊರಗಿನ ಒತ್ತಡಮಯ ಪರಿಸ್ಥಿತಿಗಳಿಂದ ಅದರ ನೋಟವನ್ನು ತಪ್ಪಿಸಿ, ಅದು ಶಾಂತಿಯುತವಾಗಿರುವಂತೆ ಸಹಾಯ ಮಾಡುತ್ತದೆ "ಎಂದು ಉತ್ತರ ಕೊಟ್ಟರು.
ನಮ್ಮ ಕಣ್ಣುಗಳು ನಮ್ಮ ಒಳಗಿನ ಬಯಕೆಗಳಿಂದ ನಿರ್ದೇಶಿಸಲ್ಪಡುತ್ತವೆ. ನಮ್ಮ ಜೀವಿತದ ದಿಕ್ಕನ್ನೇ ಬದಲಾಯಿಸುವಷ್ಟು ಪ್ರಭಾವ ಬೀರುವ ಸಾಮರ್ಥ್ಯ ನಮ್ಮ ಕಣ್ಣುಗಳು ಹೊಂದಿವೆ.ನಮ್ಮ ಕಣ್ಣುಗಳು ಅಲೆದಾಡಲು ಆರಂಭಿಸಿದಾಗ ನಾಶನದ ಅಪಾಯಗಳು ಸಂಭವಿಸಲಾರಂಭಿಸುತ್ತವೆ.
"ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವಲ್ಲಿ ನಿನ್ನ ಕಣ್ಣು ನೆಟ್ಟಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಾಗಿರುವದು. 23ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ದೇಹವೆಲ್ಲಾ ಕತ್ತಲಾಗಿರುವದು. ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಷ್ಟೆನ್ನಬೇಕು!" ಎಂದು ಕರ್ತನಾದ ಯೇಸು ಬೋಧಿಸುತ್ತಾನೆ.(ಮತ್ತಾಯ 6:22-23)
ಆರೋಗ್ಯಕರವಾದ ಕಣ್ಣುಗಳು ದೇವರ ವಾಕ್ಯದ ಆಡಳಿತಕ್ಕೆ ಒಳಪಟ್ಟಿರುತ್ತದೆ ಮತ್ತು ಅವು ಸತ್ಯವಾದಂತವುಗಳನ್ನು ಶುದ್ಧವಾದವುಗಳನ್ನು ನಮಗೆ ಉಣಬಡಿಸುತ್ತದೆ. ಮತ್ತೊಂದು ಕಡೆ ಅನಾರೋಗ್ಯಕರವಾದ ಕಣ್ಣುಗಳು ಕ್ರಿಸ್ತನನ್ನು - ಕ್ರಿಸ್ತನು ಮಾಡಿದ ಅದ್ಭುತ ಕಾರ್ಯಗಳನ್ನು ನೋಡಲಾರದಷ್ಟು ಲೌಕಿಕ ಸಂಗತಿಗಳಿಂದ ತುಂಬಿಸುತ್ತದೆ.
"ಅವನು ಒಂದು ದಿವಸ ಸಂಜೇ ಹೊತ್ತಿನಲ್ಲಿ ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿರುವಾಗ ಅಲ್ಲಿಂದ ಬಹುಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವದನ್ನು ಕಂಡನು."(2 ಸಮುವೇಲನು 11:2)
"ಅವನು ಒಬ್ಬ ಸ್ತ್ರೀಯು ಸ್ನಾನ ಮಾಡುವುದನ್ನು ಕಂಡನು" ಎಂದು ಹೇಳಿರುವ ವಾಕ್ಯವು ದಾವೀದನು ಉದ್ದೇಶಪೂರ್ವಕವಾಗಿ ಅವಳನ್ನು ಬಹಳ ಕಾಲ ನೋಡುತ್ತಿದ್ದನು ಎನ್ನುವ ಕಲ್ಪನೆಯನ್ನು ಪ್ರಕಟಿಸುತ್ತದೆ. ಅದೇನೋ ಅಚಾನಕ್ಕಾಗಿ ಕಣ್ಣಿಗೆ ಬಿದ್ದಂತಹ ಸನ್ನಿವೇಶವಾಗಿರದೇ ಅಲೆದಾಡುವ ಕಣ್ಣುಗಳಿಂದ ಮತ್ತೆ ಮತ್ತೆ ನೋಡುವ ನೋಟವಾಗಿದೆ. ಅಲೆದಾಡುವ ಕಣ್ಣುಗಳು ತಪ್ಪಾದ ಆಲೋಚನೆಗಳಿಗೆ ಸ್ಥಳ ಕೊಡುವಂಥವುಗಳಾಗಿವೆ. ಅದು ನಿಮ್ಮನ್ನು ಆಂತರಿಕವಾಗಿ ಕಲುಷಿತಗೊಳಿಸಿ ನೀವು ತಪ್ಪಿಸಿಕೊಳ್ಳಲಾರದಂತ ಗುಂಡಿಗೆ ಬೀಳುವಂತೆ ಮಾಡುತ್ತದೆ.- ದಾವೀದನು ಪಾಪದಲ್ಲಿ ಬಿದ್ದನು
ನಿಮ್ಮ ಕಣ್ಣುಗಳು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದರೆ ಮತ್ತು ಇತ್ತೀಚೆಗಷ್ಟೇ ಅಲೆದಾಡಲು ಆರಂಭಿಸಿದ್ದರೆ ನೀವು ಈ ಕಾರ್ಯವನ್ನು ಈಗಲೇ ಮಾಡಲೇಬೇಕು. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ದೇವರ ವಾಕ್ಯಗಳನ್ನು ಓದುವ ಮುಖಾಂತರ ನಿಮ್ಮ ಮನಸ್ಸು ತುಂಬಿಸಿಕೊಳ್ಳುವಂತಹ ನವ ನೂತನವಾದ ದೃಷ್ಟಿಯನ್ನು ಹೊಂದಿಕೊಳ್ಳಿರಿ.
ಎರಡನೆಯದಾಗಿ, ಆರಾಧನೆಯಲ್ಲಿ ಸ್ವಲ್ಪ ಕಾಲ ಕಳೆಯಿರಿ. ಆತನನ್ನು ಆರಾಧನೆ ಮಾಡುವಂತದ್ದು ನಿಮ್ಮ ಆತ್ಮಿಕ ಮನುಷ್ಯನೊಳಗೆ ದೇವರ ಪ್ರೀತಿಯನ್ನು ತುಂಬಿಸಿ ಲೋಕದ ಮೇಲಿನ ಪ್ರೀತಿಯನ್ನು ವಿಸರ್ಜಿಸುವಂತೆ ಮಾಡುತ್ತದೆ.
ಯೋಬನು ಈ ಅಲೆದಾಡುವ ಕಣ್ಣುಗಳ ಅಪಾಯವನ್ನು ಅರಿತಿದ್ದನು. ಅದಕ್ಕಾಗಿಯೇ "ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ. ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?" ಎಂದು ವಿವೇಕಪೂರ್ವಕವಾಗಿ ಬರೆಯುತ್ತಾನೆ. ಈ ವಿಚಾರಗಳು ನೋಡಲು ಸರಳ ಎನಿಸಬಹುದು ಆದರೆ ನಿಜವಾಗಿ ಮುಂದೆ ಬರುವಂತಹ ಶೋಧನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರವಾಗಿದೆ. ಸರಿಯಲ್ಲ ಎನಿಸುವಂಥವುಗಳನ್ನು ನೋಡದಂತೆ ಅದರ ಮೇಲೆ ಲಕ್ಷ್ಯವಿಡದಂತೆ ನಿಮ್ಮ ಕಣ್ಣುಗಳನ್ನು ತರಬೇತಿಗೊಳಿಸಿ. ಮೊದಲ ನೋಟವು ಪಾಪಮಯವಾಗಿರಲಾರದು ಆದರೆ ಅಲೆದಾಡುವ ಕಣ್ಣುಗಳು ಲಕ್ಷವಿಟ್ಟು ಎರಡನೇ ಸಲ ನೋಡುವಂಥದ್ದು ನಿಜಕ್ಕೂ ನಿಮ್ಮ ನಾಶನಕ್ಕೆ ನಿಮ್ಮನ್ನು ಕೊಂಡುಯುತ್ತದೆ.
ಪ್ರಾರ್ಥನೆಗಳು
ತಂದೆಯೇ, ನನ್ನ ಕಣ್ಣುಗಳನ್ನು ಪವಿತ್ರ ಮಾಡು. ಎಲ್ಲಾ ಶೋಧನೆಗಳಿಂದ ನನ್ನನ್ನು ತಪ್ಪಿಸು ಮತ್ತು ಎರಡನೇ ಸಲ ದೃಷ್ಟಿಸಿ ನೋಡದಂತೆ ನನ್ನನ್ನು ಬಲಪಡಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
ಅನಿಸಿಕೆಗಳು