ಅನುದಿನದ ಮನ್ನಾ
1
0
78
ಗೌರವ ಮತ್ತು ಮೌಲ್ಯ
Wednesday, 16th of April 2025
Categories :
ನಂಬಿಕೆಗಳನ್ನು(Beliefs)
ಬದಲಾವಣೆ (Change)
"ನೀವು ನಿಜವಾಗಿಯೂ ಯಾವುದನ್ನು ಗೌರವಿಸುತ್ತೀರೋ ಅದನ್ನು ಮಾತ್ರ ನೀವು ನಿಮ್ಮೆಡೆಗೆ ಸೆಳೆಯುವವರಾಗಿರುತ್ತೀರಿ ಮತ್ತು ನೀವು ಯಾವುದನ್ನು ಅಗೌರವಿಸುತ್ತೀರೋ ಅದನ್ನು ನಿಮ್ಮೆಡೆಗೆ ಬಾರದಂತೆ ತಡೆಯುವವರಾಗಿರುತ್ತೀರಿ." ಎಂಬುದು ನಾನು ಇಷ್ಟು ವರ್ಷಗಳಲ್ಲಿ, ಕಲಿತ ಒಂದು ತತ್ವವಾಗಿದೆ. ಹಣಕಾಸಿನ ಸಮಸ್ಯೆಯೊಂದಿಗೆ ನಿರಂತರವಾಗಿ ಹೋರಾಡುವ ಜನರು ಹಣವನ್ನು ಸಾಕಷ್ಟು ಗೌರವಿಸದೇ ಹೋಗಿದ್ದಿರಬಹುದು ಅಥವಾ ಅದಕ್ಕೆ ಬೆಲೆ ಕೊಡದೆ ಹೋಗಿದ್ದಿರಬಹುದು ಮತ್ತು ಈ ಮನೋಭಾವವು ಅವರು ಹಣವನ್ನು ನಿರ್ವಹಿಸುವ ರೀತಿಯಲ್ಲಿ ಹೆಚ್ಚಾಗಿ ಪ್ರತಿಫಲಿಸುತ್ತಿರಬಹುದು.
ದೇವರಿಗೆ ಮಾತ್ರ ಸಲ್ಲಿಸಬಹುದಾದ ಆರಾಧನೆಯು "ಮೌಲ್ಯ' ಮತ್ತು 'ಗೌರವ" ಎಂಬುದಕ್ಕಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸುವುದು ಇಲ್ಲಿ ಮುಖ್ಯ (ವಿಮೋಚನಕಾಂಡ 20:2-3).
ಗೌರವ ಮತ್ತು ಮೌಲ್ಯ ಎನ್ನುವ ಸಂಗತಿಗಳು ಏಕೆ ಪ್ರಮುಖವಾದದ್ದು ?
ನಮ್ಮ ಜೀವನದಲ್ಲಿ 'ಗೌರವ ಮತ್ತು ಮೌಲ್ಯವು' ನಿರ್ಣಾಯಕ ಅಂಶಗಳಾಗಿವೆ. ಏಕೆಂದರೆ ಅವು ದೈವಿಕ ಕ್ರಮವನ್ನು ನಮ್ಮಲ್ಲಿ ತರುತ್ತವೆ. ಗೌರವ ಮತ್ತು ಮೌಲ್ಯ ಇರುವಲ್ಲಿ, ಜಗಳ ಮತ್ತು ಗೊಂದಲಕ್ಕೆ ಅವಕಾಶವಿರುವುದಿಲ್ಲ."ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ " (1 ಕೊರಿಂಥ 14:33). ಒಬ್ಬರ ಜೀವನ, ದಾಂಪತ್ಯ ಮತ್ತು ಹಣಕಾಸು ವಿಚಾರಗಳಲ್ಲಿ ಕ್ರಮ ಮತ್ತು ಸಮಾಧಾನ ಇಲ್ಲದಿದ್ದರೆ, ಅವರ ಪ್ರಗತಿ ಸೀಮಿತವಾಗಬಹುದು. ಇಂದು ನಾವು ಗೌರವಿಸುತ್ತಿರುವ ಮತ್ತು ಮೌಲ್ಯೀಕರಿಸುವ ಅನೇಕ ಸಂಗತಿಗಳು ನಾವು ಕಾಲಗಳಿಂದ ಕಲಿತು ಬಂದವೇ ಆಗಿವೆ. ಈ ಕಲಿಕೆಯು ಸಾಮಾನ್ಯವಾಗಿ ಬಾಲ್ಯ ಅಥವಾ ಹದಿಹರೆಯದಲ್ಲಿಯೇ ಪ್ರಾರಂಭವಾಗುತ್ತದೆ. ಆದಾಗ್ಯೂ, ಸುಳ್ಳಿಗೆ ಮೂಲ ತಂದೆಯಾದ ಸೈತಾನನು, ಇಂದು ನಾವು ವಯಸ್ಕರಾದ ಮೇಲೆ ಸಂಗತಿಗಳನ್ನು ಅಥವಾ ಜನರನ್ನು ಹೇಗೆ ಗೌರವಿಸಬೇಕು ಮತ್ತು ಮೌಲ್ಯೀಕರಿಸಬೇಕು ಎಂಬುದರ ಮೇಲೆ ಪ್ರಭಾವ ಬೀರುವಂತ ಸುಳ್ಳು ನಂಬಿಕೆಗಳನ್ನು ನಮಗೆ ನೀಡಿರಬಹುದು ಎಂಬುದು ನಾವು ಗಮನಿಸಬೇಕಾದ ಸಂಗತಿಯಾಗಿದೆ.
ಉದಾಹರಣೆಗೆ, ಹಣವು ಕೆಟ್ಟದು ಅಥವಾ ಸಂಪತ್ತು ಗಣ್ಯರಿಗೆ ಮಾತ್ರ ಮೀಸಲಾದದ್ದು ಎಂಬುದನ್ನು ನಮಗೆ ಕಲಿಸಿದ್ದರೆ, ನಮ್ಮ ಹಣಕಾಸನ್ನು ಮೌಲ್ಯಮಾಪನ ಮಾಡುವಂತದ್ದು ಮತ್ತು ನಿರ್ವಹಿಸುವಂತದ್ದು ನಮಗೆ ಕಷ್ಟಕರವಾಗಬಹುದು.
ಆದಾಗ್ಯೂ, ಸಂಪತ್ತು ಮತ್ತು ಆಸ್ತಿಗಳು ದೇವರ ವರ ಮತ್ತು ಅವುಗಳನ್ನು ವಿವೇಕದಿಂದ ನಿರ್ವಹಿಸುವುದು ನಮ್ಮ ಜವಾಬ್ದಾರಿ ಎಂದು ಸತ್ಯವೇದ ನಮಗೆ ಕಲಿಸಿಕೊಡುತ್ತದೆ (ಜ್ಞಾನೋಕ್ತಿ 10:22, ಲೂಕ 12:48).
ನಿಮ್ಮ ಮೌಲ್ಯೀಕರಿಸುವ ವ್ಯವಸ್ಥೆಯನ್ನು ನೀವು ಹೇಗೆ ಬದಲಾಯಿಸಬಹುದು?
ನಿಮ್ಮ ಮೌಲ್ಯೀಕರಿಸುವ ವ್ಯವಸ್ಥೆಯನ್ನು ಬದಲಾಯಿಸಬೇಕೆಂದು ನೀವು ಬಯಸಿದರೆ, ಹಳೆಯ ಒಡಂಬಡಿಕೆಯಲ್ಲಿ ಅರಸನಾದ ದಾವೀದನ ಸಲಹೆಯು ಸಹಾಯಕವಾಗಬಹುದು. ಅವನು ಈ ದೇವರ ವಾಕ್ಯವನ್ನು ಧ್ಯಾನಿಸಲು ನಮಗೆ ಸೂಚಿಸುತ್ತಾನೆ.
"ಯಾರು ದುಷ್ಟರ ಆಲೋಚನೆಯಂತೆ ನಡೆಯದೆ,
ಪಾಪಿಗಳ ಮಾರ್ಗದಲ್ಲಿ ನಿಲ್ಲದೆ,
ಧರ್ಮ ನಿಂಧಕರ ಕೂಟದಲ್ಲಿ ಕೂತುಕೊಳ್ಳದೆ,
ಯೆಹೋವ ದೇವರ ನಿಯಮದಲ್ಲಿ ಆನಂದಿಸುತ್ತಾ,
ದೇವರ ನಿಯಮವನ್ನು ರಾತ್ರಿ ಹಗಲು ಧ್ಯಾನಿಸುತ್ತಾ ಬದುಕುವರೋ ಅವರು ಧನ್ಯರು.
ಅಂಥವರು ನೀರಿನ ಕಾಲುವೆಗಳ ಬಳಿಯಲ್ಲಿ ನೆಟ್ಟಿರುವ, ಮರದ ಹಾಗಿರುವರು.
ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದೆ, ಅದರ ಎಲೆ ಉದುರುವುದೇ ಇಲ್ಲ.
ಅದರಂತೆ ಅವರು ಮಾಡುವ ಕಾರ್ಯವೆಲ್ಲವೂ ಸಫಲವಾಗುವುದು." ಎನ್ನುವ
ಸತ್ಯವೇದದ ಕೀರ್ತನೆ 1:1-3 ನಮಗೆ ಆ ಸೂಚನೆ ನೀಡುವಂತದ್ದಾಗಿದೆ.
ಧ್ಯಾನಿಸುವುದು ಎಂದರೆ ದೇವರು ತನ್ನ ವಾಕ್ಯದ ಮೂಲಕ ಏನನ್ನು ತಿಳಿಸುತ್ತಿದ್ದಾನೆ ಎಂಬುದರ ಕುರಿತು ಆಳವಾಗಿ ಯೋಚಿಸುವುದು, ಚಿಂತಿಸುವುದು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಎಂದರ್ಥ. ನಂತರ ನಾವು ಈ ಬೋಧನೆಗಳನ್ನು ನಮ್ಮ ದೈನಂದಿನ ಜೀವನಕ್ಕೆ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದರ ಕುರಿತು ಚಿಂತಿಸಬೇಕು ಮತ್ತು ಈ ಸಕಾರಾತ್ಮಕ ಗುಣಗಳನ್ನು ನಮ್ಮ ವ್ಯಕ್ತಿತ್ವಗಳಲ್ಲಿ ಹೇಗೆ ಸಂಯೋಜಿಸಿಕೊಳ್ಳಬಹುದು ಎಂಬುದನ್ನು ಪರಿಗಣಿಸಬೇಕು.
ಫಿಲಿಪ್ಪಿ 4:8 ರಲ್ಲಿ, ಪೌಲನು ನಮ್ಮ ಮನಸ್ಸನ್ನು ಸತ್ಯ, ಗೌರವಾನ್ವಿತ, ನ್ಯಾಯಯುತ, ಶುದ್ಧ, ಸುಂದರ, ಶ್ಲಾಘನೀಯ, ಅತ್ಯುತ್ತಮ ಮತ್ತು ಸ್ತುತಿಗೆ ಅರ್ಹವಾದ ವಿಷಯಗಳ ಮೇಲೆ ಕೇಂದ್ರೀಕರಿಸಬೇಕೆಂದು ಒತ್ತಾಯಿಸುತ್ತಾನೆ. ಈ ಅಭ್ಯಾಸವು ನಮ್ಮ ಆಲೋಚನೆಯನ್ನು ಪರಿವರ್ತಿಸುತ್ತದೆ ಮತ್ತು ದೇವರು ಮೌಲ್ಯೀಕರಿಸುವ ಮತ್ತು ಗೌರವಿಸುವದನ್ನೇ ನಾವೂ ಸಹ ಮೌಲ್ಯೀಕರಿಸುವಂತೆ ಮತ್ತು ಗೌರವಿಸುವಂತೆ ನಮ್ಮ ಮನಸ್ಸನ್ನು ನವೀಕರಿಸುತ್ತದೆ.
ನೀವು ಯಾವುದನ್ನು ಗೌರವಿಸುತ್ತೀರೋ ಅದನ್ನೇ ನೀವು ನಿಮ್ಮೆಡೆಗೆ ಸೆಳೆಯುತ್ತೀರಿ ಮತ್ತು ನೀವು ಅಗೌರವಿಸುವದನ್ನು ನಿಮ್ಮೆಡೆಗೆ ಬರದಂತೆ ತಡೆಯುತ್ತಿದ್ದೀರಿ ಎಂಬುದನ್ನು ನೆನಪಿಡಿ.
Bible Reading: 2 Samuel 12-13
ಪ್ರಾರ್ಥನೆಗಳು
ಪರಲೋಕದಲ್ಲಿರುವ ಪ್ರೀತಿಯ ತಂದೆಯೇ, ದೀನ ಹೃದಯದಿಂದ ನಿನ್ನ ಸನ್ನಿಧಿಗೆ ಬರುತ್ತೇನೆ. ನನ್ನ ಮೌಲ್ಯೀಕರಿಸುವ ವ್ಯವಸ್ಥೆಯನ್ನು ನಿನ್ನ ಇಚ್ಛೆಯೊಂದಿಗೆ ಜೋಡಣೆಯಾಗುವಂತೆ ಮಾಡು. ನಿನ್ನ ವಾಕ್ಯವನ್ನು ಧ್ಯಾನಿಸಲು, ನಿನ್ನ ಬೋಧನೆಗಳನ್ನು ಚಿಂತಿಸಲು ಮತ್ತು ಆಲೋಚಿಸಲು ಮತ್ತು ಅವುಗಳನ್ನು ನನ್ನ ದೈನಂದಿನ ಜೀವನದಲ್ಲಿ ಸಂಯೋಜಿಸಿಕೊಳ್ಳಲು ಯೇಸುನಾಮದಲ್ಲಿ ನನಗೆ ಕೃಪೆ ನೀಡು. ಆಮೆನ್.
Join our WhatsApp Channel

Most Read
● ಕ್ರಿಸ್ತನ ಮೂಲಕ ಜಯಶಾಲಿಗಳು● ನಡೆಯುವುದನ್ನು ಕಲಿಯುವುದು
● ಮೂರು ನಿರ್ಣಾಯಕ ಪರೀಕ್ಷೆಗಳು
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ತಪ್ಪು ಆಲೋಚನೆಗಳು
● ಮಾತಿನಲ್ಲಿರುವ ಶಕ್ತಿ
ಅನಿಸಿಕೆಗಳು