english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
ಅನುದಿನದ ಮನ್ನಾ

ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ

Saturday, 8th of March 2025
3 1 151
Categories : ದೇವದೂತರು (Angels) ಪ್ರಾರ್ಥನೆ (prayer)
ಕೆಲವು ದಿನಗಳ ಹಿಂದೆ ಒಬ್ಬ ದಂ ಪತಿಗಳು ನನಗೊಂದು ಪತ್ರ ಬರೆದಿದ್ದರು. ಅದರಲ್ಲಿ ಅವರು ತಾವು ಅನೇಕ ವರ್ಷಗಳಿಂದ ಮಕ್ಕಳಿಲ್ಲದವರಾಗಿರುವುದರಿಂದ ಪ್ರಧಾನದೇವದೂತನಾದ ಗೆಬ್ರಿಯೇಲನಿಗೆ  ಪ್ರಾರ್ಥನೆ ಮಾಡುತಿದ್ದೇವೆ ಎಂದು ಬರೆದಿದ್ದರು.ಅವರ ಆಲೋಚನೆ ಏನೆಂದರೆ ಈ ಗೆಬ್ರಿಯೇಲನು  ಯೇಸುವಿನ ಜನನವನ್ನು ಘೋಷಿಸಲು ಸಾಧನವಾಗಿದ್ದಂತೆ ತಮಗೂ ಸಹ ದೇವರ ಆಶೀರ್ವಾದ ತರುವ ಸಾಧನವಾಗಬಹುದೆಂಬುದೇ. ನಾನು ಅವರನ್ನು ಇದಕ್ಕಾಗಿ ಗದರಿಸಲಿಲ್ಲ,ಆದರೆ ಅವರನ್ನು ಸಾವಧಾನವಾಗಿ ತಿದ್ದಿ ದೇವರ ವಾಕ್ಯಗಳೇನು ಹೇಳುತ್ತವೆ ಎಂಬುದನ್ನು ತೋರಿಸಿ ಅವರಿಗಾಗಿ ಪ್ರಾರ್ಥಿಸಿದೆ.

ಈ ರೀತಿಯ ಪ್ರಿಯ ದಂಪತಿಗಳಂತೆಯೇ ಅನೇಕರು ಇಂದು ತಮ್ಮ ಅನೇಕ ಅಗತ್ಯತೆಗಳಿಗಾಗಿ ದೇವದೂತರಿಗೆ ಮೊರೆ ಇಡುತ್ತಾರೆ. ಎಷ್ಟೋ ಜನ ಪೋಷಕರು ಸಹ ತಮ್ಮ ಮಕ್ಕಳಿಗೆ ತಮ್ಮನ್ನು ಕಾಯುವ ದೇವದೂತರಿಗೆ ಪ್ರಾರ್ಥನೆ ಸಲ್ಲಿಸುವಂತೆ ಉತ್ತೇಜಿಸುತ್ತಾರೆ. ಇದು ಬಹಳ ಮುದ್ದಾಗಿ ಕಂಡರೂ ದೇವರ ವಾಕ್ಯಕ್ಕನುಸಾರವಾದುದಲ್ಲ.

ತಮ್ಮ ದೃಷ್ಟಿಯಲ್ಲಿ ತಾವು ದೇವದೂತರಿಗೆ ಪ್ರಾರ್ಥಿಸುತ್ತಿರುವುದು ಸರಿಯಾದದ್ದೇ ಎಂದು ಪ್ರತಿಪಾದಿಸಲು ಅವರು ಪ್ರಕಟಣೆಯ 8:2-5ರ ಈ ವಾಕ್ಯವನ್ನು ಆಧಾರವಾಗಿ ತೋರಿಸುತ್ತಾರೆ.

"2ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ಮಂದಿ ದೇವದೂತರನ್ನು ಕಂಡೆನು; ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟವು.
3ಆಮೇಲೆ ಮತ್ತೊಬ್ಬ ದೇವದೂತನು ಬಂದು ಯಜ್ಞವೇದಿಯ ಬಳಿಯಲ್ಲಿ ನಿಂತನು; ಅವನ ಕೈಯಲ್ಲಿ ಚಿನ್ನದ ಧೂಪಾರತಿ ಇತ್ತು. ಸಿಂಹಾಸನದ ಮುಂದಣ ಚಿನ್ನದ ಧೂಪವೇದಿಯ ಮೇಲೆ ದೇವಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸುವದಕ್ಕಾಗಿ ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು.
4ಆಗ ಧೂಪದ ಹೊಗೆಯು ದೇವದೂತನ ಕೈಯೊಳಗಿಂದ ಹೊರಟು ದೇವಜನರ ಪ್ರಾರ್ಥನೆಗಳೊಂದಿಗೆ ಕೂಡಿ ದೇವರ ಸನ್ನಿಧಿಗೆ ಏರಿಹೋಯಿತು.
5ತರುವಾಯ ಆ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲಿದ್ದ ಕೆಂಡಗಳಿಂದ ತುಂಬಿಸಿ ಭೂವಿುಗೆ ಬಿಸಾಡಿದನು. ಆಗ ಗುಡುಗುಗಳೂ ವಾಣಿಗಳೂ ವಿುಂಚುಗಳೂ ಭೂಕಂಪವೂ ಉಂಟಾದವು."

ನೀವು ಇದನ್ನು ಜಾಗರೂಕತೆಯಿಂದ ಗಮನಿಸಿದರೆ ಅಲ್ಲಿ ಜನರು ಪ್ರಾರ್ಥಿಸುತ್ತಿರುವುದು (ಮಧ್ಯಸ್ಥಿಕ ವಿಜ್ಞಾಪನೆ ಮಾಡುತ್ತಿರುವುದು) ದೇವದೂತರಿಗಲ್ಲ. ದೇವದೂತರು ಅಲ್ಲಿ ಕೇವಲ ಸಂದೇಶವಾಹಕರಾಗಿ ದಾನಿಯೇಲನ ಗ್ರಂಥದಲ್ಲಿ ನಾವು ಕಾಣುವಂತೆ ದೇವರಿಂದ ಸಂತರಿಗೂ  ಸಂತರಿಂದ ದೇವರಿಗೂ ಸಂದೇಶವಾಹಕರಾಗಿ ಕಾರ್ಯ ಮಾಡುತ್ತಿದ್ದಾರೆ ಅಷ್ಟೇ

"ನೀವು ನಿಮ್ಮ ದೇವದೂತರನ್ನು ಹೇಗೆ ಸಂಪರ್ಕಿಸಬಹುದು" ಎಂಬ ಒಕ್ಕಣೆಯುಳ್ಳ ನೂರಾರು ಪುಸ್ತಕಗಳನ್ನು ನಾನು ಅಂತರ್ಜಾಲದಲ್ಲಿ ನೋಡಿದ್ದೇನೆ. ಇನ್ನೂ ಕೆಲವರಂತೂ ತಾವೇನೋ ದೇವದೂತರ ಪರಿಣಿತರೆಂಬಂತೆ ತಮ್ಮನ್ನು ಅನುಸರಣೆ ಮಾಡುವವರಿಗೆ ತಮ್ಮನ್ನು  ತೋರ್ಪಡಿಸಿಕೊಂಡು, ಅವರನ್ನು ತಮ್ಮದೇವದೂತರನ್ನು ಪ್ರೀತಿಸುವಂತೆಯೂ ತಮಗೆ ಸ್ವಸ್ತತೆಯನ್ನು ಆರೋಗ್ಯವನ್ನು ಸಮೃದ್ಧಿಯನ್ನು ಮಾರ್ಗದರ್ಶನವನ್ನು ಪ್ರಣಯವನ್ನು ಕೊಡುವಂತೆ ಪ್ರಾರ್ಥಿಸಿ ಎಂದು ಉತ್ತೇಜಿಸುತ್ತಾರೆ. ಇದೊಂದು ಶುದ್ಧ ಮೋಸವಾಗಿದ್ದು ದೇವರ ವಾಕ್ಯಕ್ಕೆ ವ್ಯತಿರಿಕ್ತವಾಗಿದ್ದಾಗಿದೆ.

ಈ ಜನರು ದೇವರವಾಕ್ಯವನ್ನು ಅನುಸರಿಸುವ ಬದಲಾಗಿ ಈ ರೀತಿಯಾಗಿ ಪ್ರಸಂಗಿಸುವ ವ್ಯಕ್ತಿಯ ಅಂತಸ್ಥರನ್ನು ಶಿರೋನಾಮೆಯನ್ನು ನೋಡಿ ಸುಮ್ಮನೆ ಅವರ ಮಾತುಗಳನ್ನು ನಂಬಿ ಮೋಸ ಹೋಗುತ್ತಾರೆ

ನಾವು ದೇವದೂತರನ್ನು ಪ್ರಾರ್ಥಿಸುವಂತದ್ದು ತಪ್ಪಾದ ಕಾರ್ಯ ಎಂಬುದಕ್ಕೆ ಅನೇಕ ಪ್ರಯೋಗಿಕವಾದ ಆಧ್ಯಾತ್ಮಿಕವಾದ ಕಾರಣಗಳಿವೆ. ( ಅದರಲ್ಲಿ ನಾನಿಂದು ಕೇವಲ ಒಂದು ಕಾರಣವನ್ನು ಮಾತ್ರ ಚರ್ಚಿಸಲಿದ್ದೇನೆ).

1.ಸ್ವತಹಃ  ಕರ್ತನಾದ ಯೇಸು ಕ್ರಿಸ್ತನೇ ಪರಲೋಕದ ತಂದೆಯನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರಾರ್ಥಿಸಲಿಲ್ಲ.

ಕರ್ತನಾದ ಯೇಸು "‭‭ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ?"ಎಂದು ಕೇಳುತ್ತಾನೆ.(ಮತ್ತಾಯ‬ ‭26:53‬).

ಕ್ರಿಸ್ತನು ಎಂದಿಗೂ ತಂದೆಯನ್ನು ಬಿಟ್ಟು  ನೇರವಾಗಿ ದೇವ ದೂತರಿಗೆ ಮನವಿಯನ್ನು ಸಲ್ಲಿಸಲಿಲ್ಲ. ಆತನು ಗೆತ್ಸೆ ಮನೆ ತೋಟದಲ್ಲಿ ತಾನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದಾಗಲೂ ಸಹ, ತಾನು ಸ್ವತಃ ದೇವಕುಮಾರನಾಗಿದ್ದರೂ ಸಹ, ದೇವದೂತರಿಗೆ ನೇರವಾಗಿ ತನ್ನ ಮನವಿಯನ್ನು ಸಲ್ಲಿಸಲಿಲ್ಲ.ಅಂದಮೇಲೆ ಹಾಗೆ ಮಾಡಲು ನೀವು ಇನ್ನೆಷ್ಟರವರು?

ಕರ್ತನಾದ  ಯೇಸುವೇ, ತಂದೆಗೆ ದೇವದೂತರನ್ನು ರಕ್ಷಣೆಗಾಗಿ ಕಳುಹಿಸು ಎಂದು ಪ್ರಾರ್ಥಿಸುವುದಾದರೆ ನಾವು ಹೇಗೆ ನೇರವಾಗಿ ದೇವದೂತರಿಗೆ ನಮ್ಮನ್ನು ರಕ್ಷಿಸ ಬನ್ನಿ ಎಂದು ಪ್ರಾರ್ಥಿಸುವುದು?

 ಶಿಷ್ಯರು ನಮಗೆ ಪ್ರಾರ್ಥಿಸಲು ಕಲಿಸಿ ಕೊಡಬೇಕೆಂದು ನಮ್ಮ ಕರ್ತನಾದ ಯೇಸುವನ್ನು ಕೇಳಿದಾಗ ಆತನು ನೀವು ಹೀಗೆ ಪ್ರಾರ್ಥಿಸಬೇಕು ಎಂದು ಹೇಳಿದನು"‭‭
"ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು - 10ಪರಲೋಕದಲ್ಲಿರುವ ನಮ್ಮ ತಂದೆಯೇ,.... "(ಮತ್ತಾಯ‬ ‭6:9‭, ಲೂಕ 11:2).
 ಶಿಷ್ಯರು ಆಗ ದೇವದೂತರಿಗೆ ತಮ್ಮ ಪ್ರಾರ್ಥನೆ ಸಲ್ಲಿಸಿದ್ದರೆ , ನಮಗೂ ಸಹ ಹಾಗೆಯೇ ಮಾಡಲು ಈಗಾತ ಸ್ಥಳ ಕೊಡುತ್ತಿದ್ದನಲ್ಲವೇ?

Bible Reading: Deuteronomy 21-23
ಪ್ರಾರ್ಥನೆಗಳು
ತಂದೆಯೇ, ನನ್ನನ್ನು ಮತ್ತು ನನ್ನ ಪ್ರೀತಿ ಪಾತ್ರರನ್ನು ನೋಡಿಕೊಳ್ಳಲು ನಿನ್ನ ದೇವದೂತರನ್ನು ಕಳಿಸಿಕೊಟ್ಟಿದ್ದಕ್ಕಾಗಿ ನಿಮಗೆ ಸ್ತೋತ್ರ. ಅವರು ನಮ್ಮ ಕಾಲು ಕಲ್ಲಿಗೆ ತಗಲದಂತೆ ತಮ್ಮ ಕೈಗಳಲ್ಲಿ ನಮ್ಮನ್ನು ಎತ್ತಿಕೊಳ್ಳುವರು ಅದಕ್ಕಾಗಿ ನಿಮಗೆ ಸ್ತೋತ್ರ.


Join our WhatsApp Channel


Most Read
● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯಾಬೇಚನ ಪ್ರಾರ್ಥನೆ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೈವೀಕ ಅನುಕ್ರಮ -2
● ಮಳೆಯಾಗುತ್ತಿದೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್