ಅನುದಿನದ ಮನ್ನಾ
2
0
95
ನಿಮ್ಮ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ.
Saturday, 5th of July 2025
Categories :
ಸಮಾಧಾನ(Peace)
ಪ್ರಗತಿಯು ದೂರದಲ್ಲಿದೆ ಎಂದು ತೋರಿದಾಗ, ನಮ್ಮ ಮನಸ್ಸು ಸುಲಭವಾಗಿ ಮುರಿದುಹೋಗುತ್ತದೆ ಮತ್ತು ಸ್ವ-ಅನುಕಂಪ ಮತ್ತು ಇತರ ಅನುಕೂಲಕರ ವಿಷಯಗಳಲ್ಲಿ ಮುಳುಗಿಸುತ್ತದೆ. ಹಲವು ವರ್ಷಗಳ ಹಿಂದೆ ನನ್ನ ತಂದೆ ನನ್ನನ್ನು ಮತ್ತು ನನ್ನ ಸಹೋದರನನ್ನು ಮಂಗಳೂರಿನ ಕಲ್ಲಿನ ಕ್ವಾರಿಗೆ ಕರೆದೊಯ್ದದ್ದು ನನಗೆ ಸ್ಪಷ್ಟವಾಗಿ ನೆನಪಿದೆ, ಅದು ನಮ್ಮ ಮನೆಗೆ ಬಹಳ ಹತ್ತಿರದಲ್ಲಿದೆ. ನಾವು ಅಲ್ಲಿ ನೋಡುವಾಗ, ಕೈಯಿಂದ ಬಂಡೆಯನ್ನು ಒಡೆಯುವ ಪ್ರಕ್ರಿಯೆಯು ಬಹಳ ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ನಾನು ಗಮನಿಸಿದೆ. ಇನ್ನೂ ಸುತ್ತಿಗೆಯನ್ನು ಬಳಸಿ ಬಂಡೆಯನ್ನು ಅರ್ಧದಷ್ಟು ವಿಭಜಿಸಲು ಪ್ರಯತ್ನಿಸುವುದನ್ನು ಕಲ್ಪಿಸಿಕೊಳ್ಳಿ. ಬಂಡೆಯನ್ನು ಮತ್ತೆ ಮತ್ತೆ ಹೊಡೆಯಲಾಗುತ್ತಿದ್ದರೂ ಅಲ್ಲಿ ಏನೂ ಆಗುತ್ತಿರುವುದಿಲ್ಲ.
ನಿಮ್ಮ ಸ್ವಾಭಾವಿಕ ಕಣ್ಣುಗಳಿಂದ ನೀವು ಅಲ್ಲಿ ಯಾವುದೇ ಪ್ರಗತಿಯನ್ನು ನೋಡುವುದಿಲ್ಲವಾದರೂ ವ್ಯಕ್ತಿಯು ಸುತ್ತಿಗೆಯಿಂದ ಬಿಡದೇ ಹೊಡೆಯುತ್ತಲೇ ಇರುವಾಗ ಅಂತಿಮವಾಗಿ ಅದು ಒಡೆಯುತ್ತದೆ. ಹೊರಗೆ ಏನೂ ನಡೆಯುತ್ತಿಲ್ಲ ಎಂದು ತೋರುತ್ತಿದ್ದರೂ, ಸುತ್ತಿಗೆಯ ಪ್ರತಿಯೊಂದು ಹೊಡೆತವು ಅಲ್ಲಿ ಏನನ್ನಾದರೂ ಸಾಧಿಸುತ್ತಿದೆ. ಒಳಭಾಗದಲ್ಲಿ ಬಂಡೆಯು ದುರ್ಬಲಗೊಳ್ಳುತ್ತಿರುತ್ತದೆ.
ನಾವು ಪ್ರಗತಿಯನ್ನು ನೋಡಬೇಕಾದರೆ, ಅದು ನಮ್ಮನ್ನು ಪ್ರಗತಿಯ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ ಎಂದು ನಮಗೆ ತಿಳಿದಿರುವದನ್ನು ಮಾಡುವಲ್ಲಿ ನಾವು ನಿರಂತರವಾಗಿರಬೇಕು ಎಂಬುದನ್ನು ಇದು ನಮಗೆ ಹೇಳುತ್ತದೆ. "ಶೋಧನೆಯಲ್ಲಿ ದೃಢಚಿತ್ತನಾಗಿ ನಿಲ್ಲುವವನೇ ಧನ್ಯನು." (ಯಾಕೋಬ 1:12)
ಇನ್ನೊಂದು ಸತ್ಯವೆಂದರೆ ಯುದ್ಧವಿಲ್ಲದ ಪ್ರಗತಿಗಳು ವಿರಳವಾಗಿ ಬರುತ್ತವೆ. ದೇವರು ಮೊದಲು ಸತ್ಯವೇದದಲ್ಲಿ ಯುದ್ಧದ ಸಂದರ್ಭದಲ್ಲೆಲ್ಲ ಬಿಡುಗಡೆಯ ನಾಯಕ ಎಂದು ಪ್ರಕಟಪಡಿಸಲ್ಪಟ್ಟಿದ್ದಾನೆ. ಸತ್ಯವೇದವು ದೇವರನ್ನು "ಬಿಡುಗಡೆಯ ನಾಯಕ" ಅಥವಾ "ಅಡೆತಡೆಗಳನ್ನು ಭೇದಿಸುವ ಪ್ರಭು" ( ಬಾಳ್ ಪೆರಾಚಿಮ್)(1 ಪೂರ್ವಕಾಲವೃತ್ತಾಂತ 14:10-11 ) ಎಂದು ವಿವರಿಸುತ್ತದೆ.
ಫಿಲಿಷ್ಟಿಯರು ರೆಫಾಯೀಮ್ ಕಣಿವೆಯಲ್ಲಿ ತಮ್ಮ ದಾಳಿಯನ್ನು ನಡೆಸಿದ ಸಮಯ ಅದಾಗಿತ್ತು, ಇದರರ್ಥ "ದೈತ್ಯರ ಕಣಿವೆ" ಅಥವಾ "ಸಮಸ್ಯೆಯ ಕಣಿವೆ". (1 ಪೂರ್ವಕಾಲವೃತ್ತಾಂತ 14:14-17 NLT). ಆದರೆ ದಾವೀದನು ಕರ್ತನನ್ನು ಶ್ರದ್ಧೆಯಿಂದ ಹುಡುಕಿ ಕರ್ತನ ನಿರ್ದೇಶನವನ್ನು ಪಡೆದನು ಮತ್ತು ಆ ಸೂಚನೆಗಳನ್ನು ಪಾಲಿಸಿದನು.
ನೀವು ಬಿಡುಗಡೆಯ ನಾಯಕನ್ನು ಹುಡುಕುವಾಗ ಮತ್ತು ಆತನ ಸೂಚನೆಗಳನ್ನು ಪಾಲಿಸುವಾಗ, ನಿಮ್ಮ "ಸಮಸ್ಯೆಯ ಕಣಿವೆ" "ನಮ್ಮನ್ನು ಯಾವಾಗಲೂ ವಿಜಯೋತ್ಸವದಲ್ಲಿ ಮುನ್ನಡೆಸುವ" (2 ಕೊರಿಂಥ 2:14) ಜೊತೆಗೆ ನೀವು ಹೊಸ ದರ್ಶನವನ್ನು ಹೊಂದುವ ಸ್ಥಳವಾಗಬಹುದು. ಆತನು ನಿಮಗೆ ಹೊಸ ತಂತ್ರಗಳನ್ನು ನೀಡುವುದಲ್ಲದೆ, ಆ ತಂತ್ರಗಳನ್ನು ಕಾರ್ಯಗತಗೊಳಿಸಲು ನಿಮಗೆ ನವೀಕೃತ ಶಕ್ತಿಯನ್ನು ಸಹ ನೀಡುತ್ತಾನೆ (ಯೆಶಾಯ 40:31).
ನೀವು ಅತ್ಯಾಸಕ್ತಿಯಿಂದ ಬಯಸುವ ಅದ್ಭುತಗಳನ್ನು ನಿಮಗೆ ಹೊಂದುವಂತೆ ಕರ್ತನು ನಿಮಗೆ ಸಹಾಯ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ಶೀಘ್ರದಲ್ಲೇ ಸಾಕ್ಷಿ ಹೇಳುತ್ತೀರಿ.
Bible Reading: Psalms 81-88
ಅರಿಕೆಗಳು
ಕರ್ತನ ಆತ್ಮವು ನನ್ನ ಮೇಲೆ ಇದೆ. ಕರ್ತನು ನನ್ನನ್ನು ಮಾಡಲು ಕರೆದಿರುವ ಕೆಲಸಗಳನ್ನು ಪೂರೈಸುವಲ್ಲಿ ನಾನು ಬಳಲಿಹೋಗುವುದಿಲ್ಲ. ನಾನು ಈಗ ನನ್ನ ಪ್ರಗತಿಯನ್ನು ( ಬಿಡುಗಡೆಯನ್ನು)ಯೇಸುನಾಮದಲ್ಲಿ ಪ್ರವೇಶಿಸುತ್ತಿದ್ದೇನೆ. ಆಮೆನ್.
Join our WhatsApp Channel

Most Read
● ರಹಸ್ಯವಾದ ಆತ್ಮೀಕ ದ್ವಾರಗಳು● AI ಎಂಬುದು ಕ್ರಿಸ್ತವಿರೋಧಿಯ ಆತ್ಮವೇ?
● ಆತನು ನೋಡುತ್ತಿದ್ದಾನೆ.
● ದೈನಂದಿನ ಮನ್ನಾ
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
ಅನಿಸಿಕೆಗಳು