ಅನುದಿನದ ಮನ್ನಾ
ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
Thursday, 16th of January 2025
4
1
67
Categories :
ಚಿತ್ತಚಂಚಲತೆ(Distraction)
ದಾವೀದನು ಯುದ್ಧಭೂಮಿಗೆ ಬಂದಿದ್ದು ತನ್ನ ಸ್ವಂತ ಇಚ್ಛೆಯಿಂದಲ್ಲ, ಆದರೆ ಅವನ ತಂದೆ ಅವನಿಗೆ ಒಂದು ಕೆಲಸ ಮಾಡಲು ಹೇಳಿ ಕಳುಹಿಸಿದರಿಂದ. ಯುದ್ಧದ ಮುಂಚೂಣಿಯಲ್ಲಿರುವ ತನ್ನ ಸಹೋದರರಿಗೆ ಕೆಲವು ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕೆಂದು ಅವನ ತಂದೆ ಬಯಸಿದ್ದರಿಂದ ( 1 ಸಮುವೇಲ 17:17-18 ಓದಿ )
ಫಿಲಿಷ್ಟಿಯನಾದ ಗೊಲ್ಯಾತನು ಇಸ್ರಾಯೇಲ್ಯರನ್ನು ಹೇಗೆ ಅಪಹಾಸ್ಯ ಮಾಡುತ್ತಿದ್ದನೆಂಬುದನ್ನು ದಾವೀದನು ಪ್ರತ್ಯಕ್ಷವಾಗಿ ನೋಡಿದಾಗ ಅವನೊಳಗಿನ ಅವನ ಆತ್ಮವು ಪ್ರಚೋದಿಸಲ್ಪಟ್ಟು ಅವನು ತನ್ನ ಸುತ್ತಲಿನ ಜನರನ್ನು ಗೊಲಿಯಾತನ ವಿರುದ್ಧ ಹೋರಾಡಿದರೆ ಸಿಗುವ ಪ್ರತಿಫಲವೇನು ಎಂದು ಕೇಳಿದನು.
"ಅವರು, “ಇಸ್ರಾಯೇಲ್ಯರಾದ ನಮ್ಮನ್ನು ಹೀಯಾಳಿಸುವುದಕ್ಕೋಸ್ಕರ ಬಂದಿರುವ ಈ ಮನುಷ್ಯನನ್ನು ಕಂಡಿರಾ? ಯಾವನು ಇವನನ್ನು ಕೊಲ್ಲುವನೋ ಅಂಥವನಿಗೆ ಅರಸನು ಅಪಾರದ್ರವ್ಯದೊಡನೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವನು. ಇದಲ್ಲದೆ ಅವನ ತಂದೆಯ ಕುಟುಂಬವನ್ನು ಎಲ್ಲಾ ತೆರಿಗೆಯಿಂದ ವಿಮೋಚಿಸುವನು” ಎಂದು ಮಾತನಾಡಿಕೊಳ್ಳುತ್ತಿದ್ದರು.(1 ಸಮುವೇಲ 17:25)
"ದಾವೀದನು ಜನರ ಸಂಗಡ ಹೀಗೆ ಮಾತನಾಡುತ್ತಿರುವುದನ್ನು ಅವನ ಹಿರಿಯ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿರುವೆ. ನಿನ್ನ ಸೊಕ್ಕು, ತುಂಟತನವು ನನಗೆ ಗೊತ್ತಿದೆ. ನೀನು ಯುದ್ಧವನ್ನು ನೋಡುವುದಕ್ಕೆ ಬಂದಿದ್ದೀ” ಎಂದು ಅವನನ್ನು ಗದರಿಸಿದನು." (1 ಸಮುವೇಲ 17:27-28)
ದಾವೀದನ ಅಣ್ಣನಾದ ಎಲೀಯಾಬನು ದಾವೀದನು ಆ ಜನರೊಂದಿಗೆ ಮಾತನಾಡುವುದನ್ನು ಕೇಳಿ ಎಲ್ಲ ಜನರ ಮುಂದೆಯೇ ಅವನನ್ನು ಕಟುವಾಗಿ ಖಂಡಿಸಿದನು. ದಾವೀದನು ಬೇಕಿದ್ದರೆ ಸುಲಭವಾಗಿ ಮನನೊಂದುಕೊಳ್ಳಬಹುದಿತ್ತು. ಆದರೆ ಅದರ ಕುರಿತು ತಲೆಕೆಡಿಸಿಕೊಳ್ಳ ಬಾರದೆಂದು ಅವನು ನಿರ್ಧರಿಸಿದನು.
ಇಲ್ಲಿ ಒಂದು ಪ್ರಮುಖ ಕೀಲಿಯು ಅಡಗಿದೆ:
ದಾವೀದನು ತನ್ನನ್ನು ಖಂಡಿಸಿ ಮಾತಾನಾಡುತ್ತಿರುವ ಮಾತುಗಳಿಂದ ವಿಚಲಿತನಾಗಲು ನಿರಾಕರಿಸಿದನು. ನೀವು ಯುದ್ಧದಲ್ಲಿರುವಾಗ, ನಿಜವಾದ ಯುದ್ಧದಲ್ಲಿ ನೀವು ಹೋರಾಡ ಕೂಡದಂತೆ ನಿಮ್ಮನ್ನು ತಡೆಯಲು ಶತ್ರು ಯಾವಾಗಲೂ ನಿಮ್ಮ ಮೇಲೆ ಗೊಂದಲದ ಅಸ್ತ್ರವನ್ನು ಎಸೆಯುತ್ತಾನೆ .
ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದು : “ ನಾನು ನಿಮಗೆ ನಿರ್ಬಂಧ ಏರಬೇಕೆಂದು ಇದನ್ನು ಹೇಳುತ್ತಿಲ್ಲ. ನೀವು ಚಂಚಲ ಚಿತ್ತರಾಗದೆ ಕರ್ತನಿಗೆ ಮಾನ್ಯತೆಯುಳ್ಳವರಾಗಿ, ನಿಷ್ಠೆಯುಳ್ಳವರಾಗಿ ನಡೆದುಕೊಳ್ಳಬೇಕೆಂದು ನಿಮ್ಮ ಪ್ರಯೋಜನಕ್ಕೋಸ್ಕರವೇ ಹೇಳುತ್ತಿದ್ದೇನೆ. ” (1 ಕೊರಿಂಥ 7:35) ಎಂದು ಹೇಳಿದನು.
ಗೊಂದಲವು ದೇವರ ಉದ್ದೇಶಗಳು ಮತ್ತು ಯೋಜನೆಗಳ ನಂ.1 ಶತ್ರುವಾಗಿದೆ. ಜನರು ನಿಮಗೆ ವಿರುದ್ಧವಾಗಿ ತಪ್ಪು ಮಾಡಿದಾಗ, ನಿಮ್ಮ ಮನ ನೋಯಿಸಿದಾಗ,ನಿಮ್ಮ ಕುರಿತು ಸುಳ್ಳಾಗಿ ಆಪಾಧನೆ ಮಾತುಗಳನ್ನು ಹೇಳಿದಾಗ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಾವು ಸಾಮಾಜಿಕ ಮಾಧ್ಯಮ ಅಥವಾ ಇತರ ವೇದಿಕೆಗಳಲ್ಲಿ ಹೋರಾಡುತ್ತೇವೆ. ಇದು ನಿಮ್ಮನ್ನು ದೇವರಿಂದ ಕರೆಯಲ್ಪಟ್ಟ ನಿಜವಾದ ವಿಷಯದಿಂದ ನಿಮ್ಮನ್ನು ದೂರವಿರಿಸಲು ಇರುವ ಒಂದು ಚಿತ್ತ ವಿಚಲತೆ ಅಲ್ಲದೇ ಬೇರೇನೂ ಅಲ್ಲ.
ಹಿಂದೆ, ದಾವೀದನು ಒಂದು ಸಿಂಹ ಮತ್ತು ಕರಡಿಯನ್ನು ಕೊಂದಿದ್ದನು, ಆದ್ದರಿಂದ ಅವನು ಸುಲಭವಾಗಿ ಗೊಲ್ಯಾತನೊಂದಿಗೆ ವ್ಯವಹರಿಸಿದನೇ ಹೊರತು ಅವನು ತನ್ನ ಸ್ವಂತ ಸಹೋದರನೊಂದಿಗೆ ಹೋರಾಡುತ್ತಾ ಕೂರಲಿಲ್ಲ .
ಅವನು ಎಲಿಯಾಬ್‌ನೊಂದಿಗೆ ಹೋರಾಡುತ್ತಾ ನಿಂತಿದ್ದರೆ, ಅವನು ಗೋಲಿಯಾತ್‌ನೊಂದಿಗೆ ಹೋರಾಡುವುದರಿಂದ ವಂಚಿತನಾಗುತ್ತಿದ್ದ.ಅಂದು ದಾವೀದನು ಗೋಲಿಯಾತ್‌ನೊಂದಿಗಿನ ಯುದ್ಧವನ್ನು ತಪ್ಪಿಸಿಕೊಂಡಿದ್ದರೆ, ಅವನು ಇಸ್ರೇಲ್‌ನಲ್ಲಿ ಎಂದಿಗೂ ಮನೆಮಾತಾಗುತ್ತಿರಲಿಲ್ಲ.
Bible Reading : Genesis 45 - 46
ಪ್ರಾರ್ಥನೆಗಳು
ತಂದೆಯೇ, ನೀವು ನನ್ನನ್ನು ಏನು ಮಾಡಬೇಕೆಂದು ಕರೆದಿದ್ದೀರೋ ಅದರ ಮೇಲೆ ಮಾತ್ರ ಮೇಲೆ ನನ್ನ ದೃಷ್ಟಿಯನ್ನು ಕೇಂದ್ರೀಕರಿಸಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ನನ್ನ ಚಂಚಲಗೊಳಿಸಲು ಹವಣಿಸುವ ಪ್ರತಿಯೊಂದು ಶಕ್ತಿಯೂ ಯೇಸುನಾಮದಲ್ಲಿ ಛಿದ್ರವಾಗಲಿ. ಆಮೆನ್.
Join our WhatsApp Channel
Most Read
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
● ಬೀಜದಲ್ಲಿರುವ ಶಕ್ತಿ -2
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
ಅನಿಸಿಕೆಗಳು