"ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು."(ಮತ್ತಾಯ 5:16)
ಒಮ್ಮೆ ನೀವು ಪ್ರತಿದಿನ ಕರ್ತನ ಸನ್ನಿಧಿಗೆ ಪ್ರವೇಶಿಸುವ ಅಭ್ಯಾಸ ಮಾಡಿಕೊಂಡುಬಿಟ್ಟರೆ, ನಿಮ್ಮ ಜೀವಿತ ಮತ್ತೆ ಎಂದಿಗೂ ಅದೇ ರೀತಿ ಇರುವುದಿಲ್ಲ. ಸಂದರ್ಭಗಳು ಮತ್ತು ವಿಷಯಗಳು ಕರ್ತನ ದೃಷ್ಟಿಕೋನದಿಂದ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಲಾರಾಂಭಿಸುತ್ತವೆ. ಇದು ನಿಮ್ಮ ನಡವಳಿಕೆಯನ್ನು ನೀವು ಮಾತನಾಡುವ ರೀತಿ -ನೀತಿ ಇತ್ಯಾದಿ ಎಲ್ಲವನ್ನೂ ಬದಲಾಯಿಸುತ್ತದೆ.
ಎಸ್ತೇರಳು , ಒಬ್ಬ ಸಾಮಾನ್ಯ ರೈತ ಹುಡುಗಿ ಯಾಗಿದ್ದಳು. ಆದರೆ ಒಂದು ರಾತ್ರಿ ರಾಜನ ಎದುರು ನಿಲ್ಲಲು ಇಡೀ ವರ್ಷ ತನ್ನನ್ನು ಸಿದ್ಧಪಡಿಸಿಕೊಂಡಳು. ಆ ಒಂದು ಮುಖಾಮುಖಿಯ ನಂತರ ಅವಳು ಅವನನ್ನು ಮತ್ತೆ ನೋಡುವ ಭರವಸೆ ಆಕೆಗೆ ಇರಲಿಲ್ಲ. ಆದರೆ ಫಲಿತಾಂಶದ ಕುರಿತು ಆಕೆ ಯೋಚಿಸದೆ, ಅವಳು ತನ್ನನ್ನು ತಾನೇ ಸಿದ್ಧಪಡಿಸಿಕೊಂಡಳು. ಅವಳ ತಯಾರಿಯ ಸಮಯ ಮುಗಿದ ಕ್ಷಣ, ಅವಳು ರಾಜನ ಉಪಸ್ಥಿತಿಗೆ ಬಂದಳು ಮತ್ತು ಆ ದಿನದಿಂದ ಅವಳು ಇನ್ನು ಮುಂದೆ 'ಸೆರೆ ಹೋದ ಜನಾಂಗದ 'ರೈತ ಹುಡುಗಿ'ಯಾಗಿರದೇ ಸೆರೆ ಮಾಡಿತಂದ ಆ ದೇಶಕ್ಕೆ ರಾಣಿಯಾಗಿದ್ದಳು. ಆ ದಿನದಿಂದ ಅವಳು ರಾಣಿಯಂತೆ ನಡೆದಳು, ರಾಣಿಯಂತೆ ಮಾತನಾಡುತ್ತಿದ್ದಳು ಮತ್ತು ಅವಳು ರಾಣಿಯೇ ಆಗಿಬಿಟ್ಟಳು. ಅವಳ ತಯಾರಿಯೇ ಅವಳ ಜೀವನಶೈಲಿಯಾಯಿತು.
ನೆನಪಿಡಿ, ಆರಾಧನೆಯು ಕೇವಲ ಒಂದು ಅಥವಾ ಎರಡು ಗಂಟೆಗಳ ಕಾಲ ಪ್ರಾರ್ಥನಾ ಸಭೆಯಲ್ಲಿ ಅಥವಾ ಚರ್ಚ್ ಸೇವೆಯಲ್ಲಿಯೋ ಅಥವಾ ನಾವು ದೇವರ ಉಪಸ್ಥಿತಿಯಲ್ಲಿ ಏಕಾಂಗಿಯಾಗಿ ಸಮಯವನ್ನು ಕಳೆಯುವ ಸಂಗತಿಯಲ್ಲ. ಇದು ನಮ್ಮ ಜೀವನಶೈಲಿಯಾಗಬೇಕು. ನೀವು ಎಲ್ಲಿಗೆ ಹೋದರೂ, ನೀವು ಏನು ಮಾಡಿದರೂ, ಅದು ಆರಾಧನೆಯ ಪರಿಮಳವನ್ನು ಹೊಂದಿರಬೇಕು- ಅದಕ್ಕಾಗಿ ಯಾವುದೇ ವಿಶೇಷ ಸಂದರ್ಭಗಳನ್ನು ಕಾಯುವ ಅವಶ್ಯವಿಲ್ಲ. ರಾಜಾಧೀರಾಜನು ತನ್ನ ಪವಿತ್ರಾತ್ಮನ ಮೂಲಕ ನಮ್ಮಲ್ಲಿ ನೆಲೆಸಿರುವ ಕಾರಣ, ನಾವು ಎಲ್ಲಿಗೆ ಹೋದರೂ ಆತನ ಉಪಸ್ಥಿತಿಯನ್ನು ನಮ್ಮೊಂದಿಗೆ ಕೊಂಡೊಯ್ಯುವವರಾಗಿದ್ದೇವೆ. ಆದ್ದರಿಂದ, ಪ್ರತಿದಿನದ ಪ್ರತಿಯೊಂದು ಕ್ಷಣವೂ, ಪ್ರತಿ ಒಂದು ಅವಕಾಶ ಸಹ ಆರಾಧನೆಗೆ ಕಾರಣವಾಗಲಿ.
ಆರಾಧನೆ ಎಂಬುದು ನಾವು ಏನನ್ನು ಮಾಡುತ್ತೇವೆ ಎಂಬುದಲ್ಲ ಬದಲಾಗಿ ನಾವು ಯಾರಾಗಿದ್ದೇವೆ ಎಂಬುದಾಗಿದೆ! ನಾವು ಸ್ವಭಾವತಃ ಆರಾಧಕರಾಗಿದ್ದೇವೆ. ಅರಸನನ್ನು ಮೆಚ್ಚಿಸುವವರಾಗಿ, ನಮ್ಮ ಜೀವಾಂತ್ಯ ದಿನದವರೆಗೂ ಆರಾಧನೆಯನ್ನು ಮುಂದುವರೆಸಬೇಕು! ಮತ್ತಾಯ 5 ರಲ್ಲಿ, ಕರ್ತನಾದ ಯೇಸು ಆರಾಧಕನ ಪಾತ್ರವೇನೇಂಬುದನ್ನು ವಿವರಿಸಿದ್ದಾನೆ. ಆರಾಧಕರು ಆತ್ಮದಲ್ಲಿ ಬಡವರಾದವರು, (ಪ್ರಪಂಚದ ಪಾಪಕ್ಕಾಗಿ ) ದುಃಖ ಪಡುವವರು, ಶಾಂತರು (ಸೌಮ್ಯ), ನೀತಿಗಾಗಿ ಹಸಿದು ಬಾಯಾರಿದವರು, ಕರುಣಾಮಯಿಗಳು, ಹೃದಯದಲ್ಲಿ ನಿರ್ಮಲ ರಾಗಿರುವವರು ಮತ್ತು ಸಮಾಧಾನ ಪಡಿಸುವವರು ಆಗಿರುತ್ತಾರೆ ಎಂದು ಹೇಳಿದ್ದಾನೆ. ಅವರು ನೀತಿಯ ನಿಮಿತ್ತ ಹಿಂಸೆಗೊಳಗಾಗುತ್ತಾರೆ ಎಂದು ಹೇಳಿದರು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರು ತಮ್ಮ ತಂದೆಯಾದ ರಾಜಾಧಿರಾಜನ ಪಾತ್ರವನ್ನು ಪ್ರದರ್ಶಿಸುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಮಾಡುವ ಕಾರ್ಯಗಳು ಅಥವಾ ನಾವು ನುಡಿಯುವ ಮಾತುಗಳೆಲ್ಲ ಆತನ ಹೆಸರು ಮತ್ತು ಸ್ವಭಾವವನ್ನು ಮಹಿಮೆಪಡಿಸುವಂತಿರುತ್ತದೆ .
ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳಿ: ನನ್ನ ದೈನಂದಿನ ಜೀವನವು ನಿರಂತರ ಆರಾಧನೆಯ ಕಾರ್ಯವಾಗಿದೆಯೇ? ನನ್ನ ಮಾತುಗಳು ಮತ್ತು ನಡವಳಿಕೆಯು ಜನರನ್ನು ಕರ್ತನಾದ ಯೇಸುವಿನ ಕಡೆಗೆ ಸೆಳೆಯುತ್ತದೆಯೇ ಅಥವಾ ಅವರನ್ನು ಓಡಿಸುತ್ತದೆಯೇ? ನಿಮ್ಮ ಬೆಳಕು ಜನರ ಮುಂದೆ ಬೆಳಗಲಿ!
Bible Reading: Numbers 26-28
ಪ್ರಾರ್ಥನೆಗಳು
ತಂದೆಯೇ, ನನ್ನ ಪೂರ್ಣ ಹೃದಯ, ಮನಸ್ಸು ಮತ್ತು ಶಕ್ತಿಯಿಂದ ನಿನ್ನನ್ನು ಆರಾಧಿಸುವಂತೆ ನನ್ನನ್ನು ಮಾಡೆಂದು ನಿನ್ನನ್ನೇ ಬೇಡುತ್ತೇನೆ. ನನ್ನ ಜೀವನದಲ್ಲಿ ಆರಾಧನೆಯು ನನ್ನ ಜೀವನಶೈಲಿ ಆಗುವಂತೆ ಮಾಡು. ನಾನು ಮಾಡುವ ಪ್ರತಿಯೊಂದು ಕಾರ್ಯವು ಅಥವಾ ಆಡುವ ಪ್ರತಿ ಮಾತುಗಳು ನಿಮ್ಮ ಮಹಿಮೆಯನ್ನು ಮತ್ತು ಸ್ವಭಾವವನ್ನು ಪ್ರತಿಬಿಂಬಿಸುವಂತಿರಲಿ. ಇದರಿಂದ ಜನರು ಕರ್ತನಾದ ಯೇಸುವಿನತ್ತ ಸೆಳೆಯಲ್ಪಡಲಿ . ನನ್ನ ಬೆಳಕು ಜನರ ಮುಂದೆ ಯೇಸುನಾಮದಲ್ಲಿ ಪ್ರಕಾಶಿಸಲಿ. ಆಮೆನ್.
Join our WhatsApp Channel

Most Read
● ನೀವು ಎಷ್ಟು ವಿಶ್ವಾಸಾರ್ಹರು?● ಬೀಜದಲ್ಲಿರುವ ಶಕ್ತಿ -3
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
● ಕನಸು ಕಾಣುವ ಧೈರ್ಯ
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ಅತ್ಯುನ್ನತವಾದ ರಹಸ್ಯ
● ನಂಬಿಕೆಯ ಶಾಲೆ
ಅನಿಸಿಕೆಗಳು