ಅನುದಿನದ ಮನ್ನಾ
ಕರ್ತನ ಸೇವೆ ಮಾಡುವುದು ಎಂದರೇನು II
Wednesday, 20th of March 2024
5
3
366
Categories :
ಸೇವೆಮಾಡುವುದು(Serving)
"ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ಹಿಂದೆ ಬರಲಿ; ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನು ಸಹ ಇರುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಮಾಡುವನು."(ಯೋಹಾನ 12:26)
#3.ನಾನು ಎಲ್ಲಿ ಇರುತ್ತೇನೋ ಅಲ್ಲಿ ನನ್ನ ಸೇವಕನು ಸಹ ಇರುವನು.
ಕರ್ತನು ಎಲ್ಲಿರುತ್ತಾನೋ ಅಲ್ಲಿಯೇ ಆತನ ಸೇವಕನು ಇರಬೇಕು. ಇದು ಲಭ್ಯತೆಯ ಕುರಿತು ಮಾತಾಡುವ ಮಾತಾಗಿದೆ. ನೆಹಮಿಯನು ಮುನ್ನಲೆಗೆ ಬರುವ ಮುಂಚೆ ಅವನು ಏನೂ ಅಲ್ಲದವನಾಗಿದ್ದನು. ನೆಹಮಿಯ 1:1ರಲ್ಲಿ ಅವನು ತನ್ನನ್ನು ತಾನು ಪರಿಚಯ ಮಾಡಿಕೊಳ್ಳುವ ರೀತಿಯನ್ನು ನೋಡಿರಿ. "ಹಕಲ್ಯನ ಮಗನಾದ ನೆಹೆಮೀಯನ ಮಾತುಗಳು -...."
ನೆಹೆಮಿಯನಿಗೆ ಯಾವುದೇ ಅಲೌಕಿಕವಾದ ಅದ್ಭುತಗಳು ಜರಗಲಿಲ್ಲ. ಅವನಿಗೆ ಮರಿಯಾಳಿಗಾದಂತೆ ಅಥವಾ ದಮಸ್ಕದ ದಾರಿಯಲ್ಲಿ ಅಪೋಸ್ತಲನಾದ ಪೌಲನಿಗಾದಂತೆ ಯಾವುದೇ ದೇವದೂತನ ದರ್ಶನವೂ ಸಿಗಲಿಲ್ಲ. ಅವನು ಸರಳವಾಗಿ ಸೇವೆಗೆ ತನ್ನ ಕೈ ಹಚ್ಚಿದನು. ಅವನು ತನ್ನನ್ನೇ ಕರ್ತನ ಸೇವೆಗೆ ಸ್ವಯಂ ದೊರಕಿಸಿಕೊಟ್ಟನು. ಅವನು ಉಪಯೋಗಿಸಲ್ಪಡಲು ತನ್ನನ್ನೇ ಸ್ವತಃ ಒಪ್ಪಿಸಿಕೊಟ್ಟನು. ತನ್ನ ಕೈಯಲ್ಲಿ ಏನೆಲ್ಲ ಮಾಡಲು ಸಾಧ್ಯವೊ ಅದೆಲ್ಲವನ್ನು ತನ್ನ ಪೂರ್ಣ ಶಕ್ತಿಯಿಂದ ಮಾಡಿದನು. ನೀವು ಕಾರ್ಯವನ್ನು ಮಾಡಿ ಮುಗಿಸಲು ನಿಮಗೆ ಪದವಿಯ ಅವಶ್ಯಕತೆ ಇಲ್ಲ. ಕೇವಲ ನೀವು ಉಪಯೋಗಿಸಲ್ಪಡಲು ಲಭ್ಯವಿರಬೇಕಷ್ಟೇ.
ಪ್ರಾರ್ಥಿಸುವ ಸಮಯ ಬಂದಾಗ ನೆಹಮಿಯನು ಉತ್ಸಾಹದಿಂದ ಪ್ರಾರ್ಥಿಸುತ್ತಿದ್ದನು. ದೇವಾಲಯ ಕಟ್ಟುವ ಕೆಲಸ ಬಂದಾಗ ಗೋಡೆ ಕಟ್ಟುವವರ ಜೊತೆಗೆ ತನ್ನ ಕೈಜೋಡಿಸಿದನು
ಒಬ್ಬ ಮಹಾನ್ ದೇವರ ಸೇವಕಿಯಾದ ಕ್ಯಾಥರಿನ್ ಕುಲ್ಮಾನ್ ರವರು ಹೀಗೆ ಹೇಳಿದ್ದನ್ನು ನಾನು ಕೇಳಿದ್ದೇನೆ... "ದೇವರು ಚಿನ್ನದ ಬೆಳ್ಳಿಯ ಪಾತ್ರೆಗಳನ್ನು ಉಪಯೋಗಿಸುವುದಿಲ್ಲ. ಆದರೆ ಯಾವ ಪಾತ್ರೆ ಲಭ್ಯವಿರುತ್ತದೆಯೋ ಆ ಪಾತ್ರೆಯನ್ನೇ ಉಪಯೋಗಿಸುತ್ತಾನೆ" ಈ ಮಾತುಗಳು ಎಷ್ಟು ಸತ್ಯವಲ್ಲವೇ. ದೇವರು ಸಮರ್ಥತೆಗಿಂತ ಹೆಚ್ಚಾಗಿ ಲಭ್ಯತೆ ಕುರಿತು ಆಸಕ್ತನಾಗಿದ್ದಾನೆ. ನೀವು ದೇವರಿಗೆ ಲಭ್ಯವಾಗುವುದಾದರೆ ಆತನು ನಿಮ್ಮನ್ನು ಸಮರ್ಥರನ್ನಾಗಿ ಮಾಡಲು ಶಕ್ತನಾಗಿದ್ದಾನೆ.
ಎಂತದ್ದೇ ಸಂಧಿಗ್ಧ ಪರಿಸ್ಥಿತಿಗಳಲ್ಲೂ ಎಲ್ಲಾ ವಿರೋಧಗಳ ಮಧ್ಯದಲ್ಲೂ ಪ್ರಾಮಾಣಿಕವಾಗಿ ನಿಲ್ಲುವಂಥ ನೆಹಮಿಯನ ಸಾಮರ್ಥ್ಯವು ದೇವರಿಂದ ನಿರಂತರವಾಗಿ ಉಪಯೋಗಿಸಲ್ಪಡುವಂತೆ ಮಾಡಿತು.
#4 ನಾವು ಕರ್ತನನ್ನು ಸಂತೋಷದಿಂದ ಸೇವಿಸಬೇಕು.
"ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ."(ಕೀರ್ತನೆಗಳು 100:2 )
ದೇವರಿಗೆ ಗೊಣಗುಟ್ಟಿಕೊಂಡು, ಬೇಸರದಿಂದ ಅವ್ಯವಸ್ಥೆಯಿಂದ ಮಾಡುವಂತ ಸೇವೆಯು ಇಷ್ಟವಿಲ್ಲ. ಕೆಲವು ಜನರು ತಾವು ದೇವರಿಗೆ ಸೇವೆ ಮಾಡುವವರು ಎಂದು ಹೇಳಿಕೊಳ್ಳುತ್ತಾರೆ ಆದರೆ ಎಂದಿಗೂ ಸೇವೆಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನಾವು ದೇವರನ್ನು ಶ್ರೇಷ್ಠವಾಗಿ ಎಣಿಸಿ ಸೇವಿಸವವರಾಗಬೇಕೇ ವಿನಃ ಏನೋ ಸೇವೆ ಮಾಡಬೇಕಲ್ಲ ಎಂದುಕೊಂಡು ಬಲವಂತವಾಗಿ ಮಾಡಬಾರದು.
ನಮ್ಮ ದೇವರಿಗೆ ಆತನ ಸಿಂಹಾಸನದ ಸುತ್ತಲೂ ಜೀತದಾಳುಗಳಿಂದ ತುಂಬಿರಬೇಕು ಎನ್ನುವ ಅಗತ್ಯವಿಲ್ಲ. ಆತನು ಪ್ರೀತಿಯೇ ಮೈದಳಿದ ದೇವನಾಗಿದ್ದು ಆತನ ಸೇವಕರೆಲ್ಲಾ ಆನಂದ ಮತ್ತು ಸಂತೋಷವೆಂಬ ವಸ್ತ್ರ ಭೂಷಣದೊಡನೆ ಬಂದು ಸೇವಿಸಬೇಕೆಂದು ಬಯಸುತ್ತಾನೆ.
"ಪ್ರೀತಿಯಿಂದ ಒಬ್ಬರನ್ನೊಬ್ಬರು ಸೇವಿಸಿರಿ" ಎಂದು ಅಪೋಸ್ತಲನಾದ ಪೌಲನು ಹೇಳುತ್ತಾನೆ. ಇದುವೇ ಮುಖ್ಯವಾದ ಕೀಲಿ ಕೈಯಾಗಿದೆ.
"ನನಗಿರುವದೆಲ್ಲವನ್ನು ಅನ್ನದಾನಮಾಡಿದರೂ ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ."ಎಂದು 1 ಕೊರಿಂಥದವರಿಗೆ 13:3 ಹೇಳುತ್ತದೆ.
ದೇವದೂತರುಗಳೆಲ್ಲರೂ ಆತನನ್ನು ಸಂತೋಷದಿಂದ ಕೀರ್ತನೆಗಳಿಂದ ಸೇವಿಸುತ್ತಿದ್ದಾರೆಯೇ ಹೊರತು ನರಳುತ್ತಾ ನಿಟ್ಟುಸಿರು ಬಿಡುತ್ತಾ ಅಲ್ಲ. ಕರ್ತನು ಮನಪೂರ್ವಕವಾಗಿ ತನ್ನನ್ನು ಸೇವಿಸುತ್ತಿದ್ದಾರೋ ಅಥವಾ ಕಟ್ಟುಪಾಡುಗಳಿಗೋಸ್ಕರ ಬಲವಂತವಾಗಿ ತನ್ನನ್ನು ಸೇವಿಸುತ್ತಿದ್ದಾರೋ ಎಂದು ಸೇವೆ ಮಾಡುವವರ ಹೃದಯವನ್ನೇ ನೋಡುವವನಾಗಿದ್ದಾನೆ. ಲವಲವಿಕೆಯಿಂದ ಶೃಂಗರಿಸಲ್ಪಟ್ಟ ಸೇವೆಯೇ ಹೃತ್ಪೂರ್ವಕವಾದ ಸೇವೆಯಾಗಿದೆ ಅದುವೇ ದೇವರು ಬಯಸುವ ನಿಜವಾದ ಸೇವೆಯಾಗಿದೆ.
ಪ್ರಾರ್ಥನೆಗಳು
ತಂದೆಯೇ, ಇಗೋ ನಾನು ನಿನಗಾಗಿ ಸದಾ ಲಭ್ಯವಾಗಲು ಸಿದ್ಧ.ಕರ್ತನೇ, ಇಗೋ ನಾನಿದ್ದೇನೆ ನನ್ನನ್ನು ಕಳುಹಿಸು.
ತಂದೆಯೇ, ಕೆಲವೊಮ್ಮೆ ನಾನು ನನ್ನ ಸರಿಯಾದ ನಡವಳಿಕೆಯಿಂದ ನಿನ್ನನ್ನು ಸೇವಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ.
ಶ್ರೇಷ್ಠತೆಯ ಆತ್ಮದಿಂದ ನನ್ನನ್ನು ಬಲಪಡಿಸು ಆಗ ಯಾವಾಗಲೂ ನಿನ್ನ ನಾಮವನ್ನು ಮಹಿಮೆಗೊಳಿಸಲು ನನಗೆ ಸಾಧ್ಯವಾಗುವುದು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
ತಂದೆಯೇ, ಕೆಲವೊಮ್ಮೆ ನಾನು ನನ್ನ ಸರಿಯಾದ ನಡವಳಿಕೆಯಿಂದ ನಿನ್ನನ್ನು ಸೇವಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ.
ಶ್ರೇಷ್ಠತೆಯ ಆತ್ಮದಿಂದ ನನ್ನನ್ನು ಬಲಪಡಿಸು ಆಗ ಯಾವಾಗಲೂ ನಿನ್ನ ನಾಮವನ್ನು ಮಹಿಮೆಗೊಳಿಸಲು ನನಗೆ ಸಾಧ್ಯವಾಗುವುದು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ಮಾತನಾಡುವ ವಾಕ್ಯದ ಶಕ್ತಿ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಪುರಾತನ ಮಾರ್ಗಗಳನ್ನು ವಿಚಾರಿಸಿ
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು