english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಬಾಗಿಲನ್ನು ಮುಚ್ಚಿರಿ.
ಅನುದಿನದ ಮನ್ನಾ

ಬಾಗಿಲನ್ನು ಮುಚ್ಚಿರಿ.

Saturday, 31st of May 2025
1 0 55
Categories : ಚಿತ್ತಚಂಚಲತೆ(Distraction) ಪ್ರಾರ್ಥನೆ (prayer)
"ಆದರೆ ನೀನು ಪ್ರಾರ್ಥನೆ ಮಾಡುವಾಗ, ನಿನ್ನ ಕೋಣೆಯೊಳಗೆ ಹೋಗಿ, ಬಾಗಿಲನ್ನು ಮುಚ್ಚಿ ಅದೃಶ್ಯವಾಗಿರುವ ನಿನ್ನ ತಂದೆಗೆ ಪ್ರಾರ್ಥನೆ ಸಲ್ಲಿಸು. ಆಗ ರಹಸ್ಯದಲ್ಲಿ ನಡೆಯುವುದನ್ನು ಕಾಣುವ ನಿನ್ನ ತಂದೆ ನಿನಗೆ ಬಹಿರಂಗವಾಗಿ ಪ್ರತಿಫಲ ಕೊಡುವನು."(ಮತ್ತಾಯ 6:6)

ಈ ದೇವರವಾಕ್ಯದಲ್ಲಿ "ಕೋಣೆ" ಎಂಬ ಕರ್ತನ ಉಲ್ಲೇಖವನ್ನು ಅಕ್ಷರಶಃ ಭೌತಿಕವಾದ  ಸ್ಥಳವೆಂದು ಪರಿಗಣಿಸಬಾರದು. ಏಕೆಂದರೆ ಈ ವಾಕ್ಯವು ಅನೇಕ ಕೋಣೆಗಳನ್ನು ಹೊಂದಿರುವ ಮನೆಯನ್ನು ಹೊಂದಿರುವ ಜನರಿಗೆ ಮಾತ್ರ ಅನ್ವಯಿಸುತ್ತದೆ. ಕರ್ತನಾದ ಯೇಸು ಸ್ವತಃ ಉದ್ಯಾನಗಳು, ಪರ್ವತಗಳು ಮತ್ತು ಅರಣ್ಯದಂತಹ ವಿವಿಧ ಸ್ಥಳಗಳಲ್ಲಿ ಪ್ರಾರ್ಥಿಸಿದನು. ಯಾಕೆಂದರೆ  ಗೊಂದಲಗಳಿಂದ ದೂರವಿರುವ ಶಾಂತತೆಯಿಂದ ಕೂಡಿದ , ಏಕಾಂತ ಸ್ಥಳವನ್ನು ಕಂಡುಕೊಳ್ಳುವುದರ  ಮೇಲೆ ಒತ್ತು ನೀಡಲಾದಂತ ಸ್ಥಳ ಅದಾಗಿರುತಿತ್ತು. ಏಕೆಂದರೆ  ಇದು ದೇವರೊಂದಿಗೆ ಆಳವಾದ ಮತ್ತು ಹೆಚ್ಚು ಕೇಂದ್ರೀಕೃತ ಸಂಪರ್ಕ ಹೊಂದಲು  ಅನುವು ಮಾಡಿಕೊಡುತ್ತದೆ. 

ಈ ಪರಿಕಲ್ಪನೆಯು ಸಾರ್ವತ್ರಿಕವಾಗಿಯೂ ಅನ್ವಯಿಸುತ್ತದೆ, ಕ್ರೈಸ್ತರು ತಮ್ಮ  ಸುತ್ತಮುತ್ತಲಿನ ಭೌತಿಕ ಪ್ರದೇಶಗಳನ್ನು ಲೆಕ್ಕಿಸದೆ ತಮ್ಮದೇ ಆದ ಆತ್ಮೀಕ ಅಭಯಾರಣ್ಯಗಳನ್ನು ರಚಿಸಿಕೊಳ್ಳಲು ಇದು ಪ್ರೋತ್ಸಾಹಿಸುತ್ತದೆ. ಬಾಗಿಲು ಮುಚ್ಚುವುದು ಎನ್ನುವಂಥದ್ದು ಗೊಂದಲಗಳನ್ನು ಮುಚ್ಚಿ ಹಾಕುವ  ಕುರಿತು ಹೇಳುವಂತದ್ದಾಗಿದೆ.

ದೇವರು ನಿಮ್ಮನ್ನು ಏನಾಗಿ  ಕರೆದಿದ್ದಾನೆ ಎಂಬುದಕ್ಕೆ ಇರುವ ಮೊದಲ ಶತ್ರು ಗೊಂದಲಗಳು. ಗೊಂದಲಗಳು ನಿಮ್ಮ ಗಮನವನ್ನು ಕಸಿದುಕೊಳ್ಳುತ್ತವೆ. ಗೊಂದಲಗಳು ಅಪಾಯಕಾರಿಯಾದವುಗಳು ಏಕೆಂದರೆ ಅವು ಆಗಾಗ್ಗೆ ನಮ್ಮ ಗಮನವನ್ನು ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾದ ಸಂಗತಿಗಳಿಗಿಂತ  ಕಡಿಮೆ ಪ್ರಾಮುಖ್ಯತೆ ಕೊಡಬಹುದಾದ ಸಂಗತಿಗಳ  ಕಡೆಗೆ ವರ್ಗಾಯಿಸುತ್ತದೆ.

ನೀವು ಎಲ್ಲಾ ಗೊಂದಲಗಳನ್ನು ಛೇದಿಸುವ  ಮೂಲಕ  ಸಾಂಕೇತಿಕವಾಗಿ ಬಾಗಿಲುಗಳನ್ನು ಮುಚ್ಚಿದಾಗ, ಅತಿಶಯವು ಸಂಭವಿಸಲು ಪ್ರಾರಂಭಿಸುತ್ತವೆ. ನೀವು ನಿಜವಾಗಿಯೂ ದೇವರ ಗಮನವನ್ನು ನಿಮ್ಮೆಡೆಗೆ ಸೆಳೆಯುವ ಸಮಯ ಇದು. ನಂತರ ಆತನು ನಿಮ್ಮ ಜೀವನದಲ್ಲಿ ನೀವು ಊಹಿಸದ ರೀತಿಯಲ್ಲಿ ಕಾರ್ಯ ಮಾಡಲು ಪ್ರಾರಂಭಿಸುತ್ತಾನೆ. ನಿಮ್ಮ ಜೀವನದಲ್ಲಿ ದೇವರು ಕಾರ್ಯ ಮಾಡುತ್ತಿದ್ದಾನೆ ಎಂದು ಜನರು ಒಪ್ಪಿಕೊಳ್ಳುವಂತೆ ಒತ್ತಾಯಿಸಲ್ಪಡುತ್ತಾರೆ. 

ಪ್ರವಾದಿಯಾದ ಎಲೀಷನು ಆ  ವಿಧವೆಗೆ, “ಹೋಗಿ, ನೆರೆಯವರಿಂದ ಖಾಲಿ ಪಾತ್ರೆಗಳನ್ನು ಎರವಲಾಗಿ  ಪಡೆದು ತಂದು  (ಎಲ್ಲಾ - ; ಕೆಲವನ್ನು ಮಾತ್ರ ಸಂಗ್ರಹಿಸಬೇಡಿ). ನೀನು ಮತ್ತು ನಿನ್ನ ಗಂಡು ಮಕ್ಕಳು ಮನೆಯೊಳಗೆ  ಹೋಗಿ  ಬಾಗಿಲನ್ನು ಮುಚ್ಚಿ ; ನಂತರ ಎಣ್ಣೆಯನ್ನು ಆ ಎಲ್ಲಾ ಪಾತ್ರೆಗಳಲ್ಲಿ ಸುರಿಯಿರಿ ಮತ್ತು ತುಂಬಿದ ಪಾತ್ರೆಗಳನ್ನು ಪಕ್ಕಕ್ಕೆ ಇರಿಸಿ.” ಎಂದು ಹೇಳಿದನು.
 ಗಮನಿಸಿ, ವಿಧವೆ ಬಾಗಿಲನ್ನು  ಮುಚ್ಚಿದಾಗ ಮಾತ್ರ ಎಣ್ಣೆ ವೃದ್ಧಿಯಾಗಲು ಪ್ರಾರಂಭಿಸಿತು. ಇದು ನಿಮ್ಮ ಸುತ್ತಲಿನ ಎಲ್ಲಾ ನಕಾರಾತ್ಮಕ ಧ್ವನಿಗಳಿಗೆ ಬಾಗಿಲು ಮುಚ್ಚುವ ಸಮಯ. ನಿಮ್ಮ ಪ್ರಾರ್ಥನೆಯ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಆಫ್ ಮಾಡುವ ಸಮಯ ಇದು. ನಾನು ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಿನ  ಉಪವಾಸ ಎಂದು ಕರೆಯುತ್ತೇನೆ. ಅನೇಕರಿಗೆ, ನೀವು ನಿಮ್ಮ ಫೋನ್‌ಗಳಿಂದ ದೈಹಿಕವಾಗಿ ಬೇರ್ಪಡಬೇಕಾಗುತ್ತದೆ ಎಂದು ಹೇಳುತ್ತೇನೆ.
ಉದಾಹರಣೆಗೆ, ನಿಮ್ಮ ಪ್ರಾರ್ಥನಾ ಸಮಯದಲ್ಲಿ ಕೆಲವರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಅವರು ಪ್ರಸ್ತುತ ಇರುವ ಕೋಣೆಯಲ್ಲಿ ಇಟ್ಟುಕೊಳ್ಳದೆ , ಬೇರೆ ಕೋಣೆಯಲ್ಲಿ ಇಡಬೇಕಾಗುತ್ತದೆ. ಈ ಸಮಯದಲ್ಲಿಯೇ ನಿಮ್ಮ ಜೀವನದಲ್ಲಿ ಹೊರಹರಿವು ಪ್ರಾರಂಭವಾಗುತ್ತದೆ. 

Bible Reading: 2 Chronicles 26-28
ಪ್ರಾರ್ಥನೆಗಳು
ತಂದೆಯಾದ ದೇವರೇ, ಯೇಸುನಾಮದಲ್ಲಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಆಗಮನದವರೆಗೂ ನನ್ನ ದೇಹ, ಪ್ರಾಣ ಮತ್ತು ಆತ್ಮವು ದೋಷವಿಲ್ಲದೆ ಉಳಿಯಲಿ.


Join our WhatsApp Channel


Most Read
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
● ಮನುಷ್ಯರ ಸಂಪ್ರದಾಯಗಳು
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕ್ರಿಸ್ತನ ಮೂಲಕ ಜಯಶಾಲಿಗಳು
● ಪ್ರೀತಿಯ ಭಾಷೆ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್