english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 6
ಅನುದಿನದ ಮನ್ನಾ

ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 6

Thursday, 15th of January 2026
2 2 173
Categories : ಹೆಚ್ಚು ಪರಿಣಾಮಕಾರಿ ಜನರ 9 (9 Habit of Highly Effective people)
"ಉಚಿತಲೋಚನೆ ಇಲ್ಲದಿರುವಲ್ಲಿ ಜನರು ಬಿದ್ದು ಹೋಗುತ್ತಾರೆ; ಆದರೆ ಬಹುಸಂಖ್ಯೆಯ ಸಲಹೆಗಾರರಿರುವಾಗ ಸುರಕ್ಷತೆ ಇದೆ." (ಜ್ಞಾನೋಕ್ತಿ 11:14) 

ಹೆಚ್ಚು ಪರಿಣಾಮಕಾರಿ ಜನರು ಹಠಾತ್ ಭಾವನೆಗಳು ಅಥವಾ ತ್ವರಿತ ನಿರ್ಧಾರಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ ಅವರು ಪ್ರಚೋದನೆಗಿಂತ ವಿವೇಚನೆಯನ್ನು ಹೆಚ್ಚು ಗೌರವಿಸುತ್ತಾರೆ ಮತ್ತು ಅವರು ಎಲ್ಲವನ್ನೂ ಏಕಾಂಗಿಯಾಗಿ ಮಾಡಬೇಕೆಂಬುದನ್ನು ಅವರು ನಂಬುವುದಿಲ್ಲ. 

ಇಲ್ಲಿ ಬೈಬಲ್ ನಮಗೆ ಪ್ರಬಲವಾದ ಸತ್ಯವನ್ನು ಕಲಿಸುತ್ತದೆ: ಜನರು ತಮ್ಮನ್ನು ಪ್ರತ್ಯೇಕಿಸಿಕೊಂಡಾಗ, ಅವರ ತೀರ್ಪು ಮಾಡುವ ಕ್ಷಮತೆ ದುರ್ಬಲವಾಗುತ್ತದೆ ಆದರೆ ಜ್ಞಾನಿಗಳ ಸಲಹೆ ಬಲವಾದ ಗತಿಯನ್ನು ರೂಪಿಸಲು ಸಹಾಯ ಮಾಡುತ್ತದೆ. ಜೀವನದಲ್ಲಿ ಅನೇಕ ವೈಫಲ್ಯಗಳು ಜನರು ಪ್ರಾರ್ಥನೆ ಮಾಡದೇ ಹೋದ ಕಾರಣದಿಂದ ಸಂಭವಿಸುವುದಿಲ್ಲ. ಜನರು ಅವರನ್ನು ತೊಂದರೆಯಿಂದ ರಕ್ಷಿಸಬಹುದಾಗಿದ್ದ ಸಲಹೆ, ತಿದ್ದುಪಡಿ ಅಥವಾ ಎಚ್ಚರಿಕೆ ಸೂಚನೆಗಳನ್ನು ನಿರ್ಲಕ್ಷಿಸಿದ್ದರಿಂದ ಆ ಆಲೋಚನೆ ಕೇಳಲು ನಿರಾಕರಿಸಿದ್ದರಿಂದ ಅವು ಸಂಭವಿಸುತ್ತವೆ. 

ದೇವರು ಯಾರನ್ನೂ ಬೆಳೆಯಬೇಕೆಂದು, ಯಶಸ್ವಿಯಾಗಬೇಕೆಂದು ಅಥವಾ ಉದ್ದೇಶವನ್ನು ಮಾತ್ರ ಪೂರೈಸಬೇಕೆಂದು ಎಂದಿಗೂ ವಿನ್ಯಾಸಗೊಳಿಸಿಲ್ಲ. ಮಾರ್ಗದರ್ಶನ, ಹೊಣೆಗಾರಿಕೆ ಮತ್ತು ದೈವಿಕ ಸಲಹೆಯ ಮೂಲಕ ಸಮುದಾಯದಲ್ಲಿ ಶ್ರೇಷ್ಠತೆಯನ್ನು ನಿರ್ಮಿಸಲಾಗುತ್ತದೆ. ನಾವು ಇತರರಿಂದ ಕೇಳಲು ಮತ್ತು ಕಲಿಯಲು ಸಿದ್ಧರಿರುವಾಗ, ನಮ್ಮ ಜೀವನವು ಸುರಕ್ಷಿತವಾಗಿಯೂ, ಬಲವಾಗಿಯೂ ಮತ್ತು ಹೆಚ್ಚು ಪರಿಣಾಮಕಾರಿಯೂ ಆಗಿರುತ್ತದೆ.

1. ಜ್ಞಾನವು ಒಂದು ರಕ್ಷಕ, ವಿಳಂಬವಲ್ಲ.

ಈ ವೇಗದ ಜಗತ್ತಿನಲ್ಲಿ, ಸಲಹೆಯನ್ನು ಹೆಚ್ಚಾಗಿ ಹಿಂದೇಳೆಯುವಂತದ್ದು ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಆದರೂ ಬೈಬಲ್ ಜ್ಞಾನವನ್ನು ರಕ್ಷಣೆ ಹೊರತು 

ವಿಳಂಬವಲ್ಲಎಂದು ಪ್ರಸ್ತುತಪಡಿಸುತ್ತದೆ. 

“ಸಲಹೆಯ ಕೊರತೆಯಿಂದ ಯೋಜನೆಗಳು ವಿಫಲಗೊಳ್ಳುತ್ತವೆ, ಆದರೆ ಅನೇಕ ಸಲಹೆಗಾರರಿದ್ದರೆ ಅವು ಯಶಸ್ವಿಯಾಗುತ್ತವೆ” (ಜ್ಞಾನೋಕ್ತಿ 20:18) ಎಂದು ನಾಣ್ಣುಡಿಗಳು ಎಚ್ಚರಿಸುತ್ತವೆ.

ಹೆಚ್ಚು ಪರಿಣಾಮಕಾರಿಯಾದ ಜನರು ದೈವಿಕ ಧ್ವನಿಗಳ ಮೂಲಕ ದೇವರ ಆಲೋಚನೆಯನ್ನು ಕೇಳಲು ಸಾಕಷ್ಟು ಸಮಯ ವಿರಾಮಗೊಳಿಸುತ್ತಾರೆ. ಜ್ಞಾನವಿಲ್ಲದ ಆವೇಗವು ವಿಷಾದವನ್ನು ಉಂಟುಮಾಡುತ್ತದೆ ಎಂಬುದು ಅವರಿಗೆ ತಿಳಿದಿದೆ. 
ಯೇಸು ಕೂಡ, ಆತ್ಮನಿಂದ ತುಂಬಿದ್ದರೂ, ತನ್ನ ಆರಂಭಿಕ ವರ್ಷಗಳಲ್ಲಿ ಲೋಕದ ಅಧಿಕಾರಕ್ಕೆ ಅಧೀನನಾಗಿದ್ದನು. 

"ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು.  ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು." (ಲೂಕ 2:51–52). 

ಜ್ಞಾನವು ನಂಬಿಕೆಯನ್ನು ದುರ್ಬಲಗೊಳಿಸುವುದಿಲ್ಲ - ಅದು ಅದನ್ನು ಸ್ಥಿರಗೊಳಿಸುತ್ತದೆ

2. ಅಹಂಕಾರವು ಸಲಹೆಯನ್ನು ತಿರಸ್ಕರಿಸುತ್ತದೆ; ನಮ್ರತೆಯು ಅದನ್ನು ಸ್ವೀಕರಿಸುತ್ತದೆ.

ಧರ್ಮಗ್ರಂಥವು ಅವನತಿಯನ್ನು ಅಹಂಕಾರಕ್ಕೆ ನಿರಂತರವಾಗಿ ಸಂಪರ್ಕಿಸಿ ಹೇಳುತ್ತದೆ. ರೆಹಬ್ಬಾಮನು ಹಿರಿಯರ ಸಲಹೆಯನ್ನು ನಿರ್ಲಕ್ಷಿಸಿ ತನ್ನ ವಾರಿಗೆಯವರ ಸಲಹೆಯನ್ನು ಅನುಸರಿಸಿದ್ದರಿಂದ ರಾಜ್ಯಆಡಳಿತವು ಮುರಿದುಹೋಯಿತು (1 ಅರಸುಗಳು 12). 

ಅವನು ವಿಫಲನಾದದ್ದು ಆತ್ಮೀಕ ಅಜ್ಞಾನವಲ್ಲ, ಆದರೆ ಅಹಂಕಾರದ  ಸ್ವೇಚ್ಚಚಾರದಿಂದ.

ಇದಕ್ಕೆ ವ್ಯತಿರಿಕ್ತವಾಗಿ, ದಾವೀದನು ಪದೇ ಪದೇ ಕರ್ತನನ್ನು ವಿಚಾರಿಸುವವನಾಗಿ ಮತ್ತು ಪರಾಕ್ರಮಿ ಪುರುಷರು ಮತ್ತು ಪ್ರವಾದಿಗಳಿಂದ ತನ್ನನ್ನು ಸುತ್ತುವರೆದಿದ್ದನು (1 ಸಮುವೇಲ 23:2; 2 ಸಮುವೇಲ 23). 

ದೀನತೆಯು ಅಧಿಕಾರವನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ ಎಂಬುದನ್ನು ಅವನು ಅರ್ಥಮಾಡಿಕೊಂಡಿದ್ದನು. 

ಯಾಕೋಬನು ಈ ನಿಲುವನ್ನು ಬಲಪಡಿಸುತ್ತಾನೆ:

“ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ, ಆದರೆ ದೀನರಿಗೆ ಕೃಪೆಯನ್ನು ತೋರಿಸುತ್ತಾನೆ ” (ಯಾಕೋಬ 4:6).

ಹೆಚ್ಚು ಪರಿಣಾಮಕಾರಿ ಜನರು ಬಿಕ್ಕಟ್ಟು ಬರುವ ಮೊದಲೇ ತಿದ್ದುಪಡಿಯನ್ನು ಆಹ್ವಾನಿಸುತ್ತಾರೆ. ಅವರು ತಮ್ಮ ಸುತ್ತಲೂ ಒಂದು ತಂಡವನ್ನು ನಿರ್ಮಿಸುವವರಾಗಿರುತ್ತಾರೆ ಆದರಿಂದ ನೀವು ಸಹ ಅದನ್ನು ಮಾಡಬೇಕಾಗಿದೆ.

3. ದೇವರು ಆಗಾಗ ಜನರ ಮೂಲಕ ಮಾತನಾಡುತ್ತಾನೆ.

ದೇವರು ತನ್ನ ವಾಕ್ಯ ಮತ್ತು ಆತ್ಮನ ಮೂಲಕ ನೇರವಾಗಿ ಮಾತನಾಡುತ್ತಾ,ಆತನು ಆಗಾಗ್ಗೆ ಜನರ ಮೂಲಕ ನಿರ್ದೇಶನವನ್ನು ದೃಢೀಕರಿಸುತ್ತಾನೆ ಎಂದು ದೇವರವಾಕ್ಯವು ತೋರಿಸುತ್ತದೆ.
ನಾಯಕತ್ವದ ಒತ್ತಡದಿಂದ ಬದುಕುಳಿಯಲು ಮೋಶೆಗೆ ಜೆತ್ರೋನ ಸಲಹೆಯ ಅಗತ್ಯವಿತ್ತು (ವಿಮೋಚನಕಾಂಡ 18).

ಪೌಲನು ಆತ್ಮೀಕ ಪಿತೃಗಳು ಮತ್ತು ಒಡನಾಡಿಗಳ ಮೇಲೆ ಅವಲಂಬಿತನಾಗಿದ್ದನು. " ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ ಬೋಧಕರೂ ಇದ್ದರು; ಯಾರಾರಂದರೆ - ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಉಪರಾಜನಾದ ಹೆರೋದನ ಸಾಕತಮ್ಮನಾದ ಮೆನಹೇನ, ಸೌಲ ಇವರೇ. ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿತ್ರಾತ್ಮನು - ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು.  ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ ಆ ಇಬ್ಬರ ಮೇಲೆ ಹಸ್ತಾರ್ಪಣ ಮಾಡಿ ಅವರನ್ನು ಕಳುಹಿಸಿಕೊಟ್ಟರು.(ಅ. ಕೃ 13:1–3). 

ದೈವಿಕ ಸಲಹೆಯನ್ನು ನಿರ್ಲಕ್ಷಿಸುವುದರಿಂದ ಒಬ್ಬ ವ್ಯಕ್ತಿಯು ಆತ್ಮೀಕ ನಾಗಿಸುವುದಿಲ್ಲ - ಅದು ಅವನನ್ನು ದುರ್ಬಲನನ್ನಾಗಿ ಮಾಡುತ್ತದೆ. 

ಹೆಚ್ಚು ಪರಿಣಾಮಕಾರಿ ವಿಶ್ವಾಸಿಗಳು ಪ್ರಕಟನೆಗಳನ್ನು ಪರೀಕ್ಷಿಸಿ, ನಿರ್ಧಾರಗಳನ್ನು ತೂಗಿ, ನಂತರ ವಿಶ್ವಾಸಾರ್ಹ ಆತ್ಮೀಕ ಅಧಿಕಾರಿಗಳಿಗೆ ಯೋಜನೆಗಳನ್ನು ಸಲ್ಲಿಸುತ್ತಾರೆ.ದೇವರ ಮಾರ್ಗದರ್ಶನವು ಹೆಚ್ಚಾಗಿ ಪದರಗಳಿಂದ ಕೂಡಿರುತ್ತದೆ ಎನ್ನುವ ಈ ತತ್ವವನ್ನು ಅವರು ಅರ್ಥಮಾಡಿಕೊಂಡಿರುತ್ತಾರೆ.

4. ಸಲಹೆಯು ನಿಮ್ಮನ್ನು ಆತ್ಮವಂಚನೆಯಿಂದ ರಕ್ಷಿಸುತ್ತದೆ.

ಮಾನವ ಹೃದಯವು ಮೋಸಕರ (ಯೆರೆಮೀಯ 17:9). ಅದಕ್ಕಾಗಿಯೇ ಜವಾಬ್ದಾರಿಯು ಐಚ್ಛಿಕವಲ್ಲ, ಅದು ರಕ್ಷಣಾತ್ಮಕವಾಗಿದೆ. ,

“ಸಲಹೆಯನ್ನು ಕೇಳುವವನು ಬುದ್ಧಿವಂತ” ಎಂದು ಜ್ಞಾನೋಕ್ತಿ ಹೇಳುತ್ತದೆ(ಜ್ಞಾನೋಕ್ತಿ 12:15). 

ಹೆಚ್ಚು ಪರಿಣಾಮಕಾರಿ ಜನರು “ಹೌದಪ್ಪ ಎನ್ನುವ ಮನುಷ್ಯರಿಂದ ”ಎಂದಿಗೂ ತಮ್ಮ ಸುತ್ತಲೂ ಇಟ್ಟುಕೊಂಡಿರುವುದಿಲ್ಲ. ಸತ್ಯವನ್ನು ಹೇಳುವ ಧ್ವನಿಗಳನ್ನುಅದು ಕುಟುಕಿದಾಗಲೂ ಸಹ ಅವರು ಸ್ವಾಗತಿಸುತ್ತಾರೆ. ಮೊದಲೇ ಪಡೆದ ತಿದ್ದುಪಡಿಯು ನಂತರ ಉಂಟಾಗ ಬಹುದಾದ ಅಡ್ಡ ಪರಿಣಾಮಗಳನ್ನು ತಡೆಯುತ್ತದೆ.

ಧರ್ಮೋಪದೇಶಕ ಪೌಲನು ತಿಮೊಥೆಯನಿಗೆ ತಾನು ಬೋದಿಸಿದ ಸಿದ್ಧಾಂತವನ್ನು ಕಾಪಾಡಿಕೊಳ್ಳಲು ಮತ್ತು ಬೋಧನೆ ಮತ್ತು ಮಾರ್ಗದರ್ಶನದ ಮೂಲಕ ನಡೆಯಲು ಪ್ರೋತ್ಸಾಹಿಸಿದನು (1 ತಿಮೋತಿ 4:16).

ತಿದ್ದುಪಡಿಯನ್ನು ಸ್ವೀಕರಿಸಿದ ಸ್ಥಳದಲ್ಲಿ ಬೆಳವಣಿಗೆ ಅಭಿವೃದ್ಧಿ ಉಂಟಾಗುತ್ತದೆ. ಹೆಚ್ಚು ಪರಿಣಾಮಕಾರಿ ಜನರು ಆತ್ಮೀಕ ಮಾರ್ಗದರ್ಶಕರು, ಹೊಣೆಗಾರಿಕೆ ಪಾಲುದಾರರು ಮತ್ತು ದೈವಿಕ ಗೆಳೆಯರು ಎಂಬ ಜ್ಞಾನದ ಜಾಲಗಳನ್ನು ನಿರ್ಮಿಸುತ್ತಾರೆ. ಸಮುದಾಯದಲ್ಲಿ ಗತಿಯೇ ಪ್ರವರ್ಧಮಾನಕ್ಕೆ ಬರುವಂತದ್ದು ಎಂದು ಅವರಿಗೆ ತಿಳಿದಿದೆ.

ಇದು ಅಭ್ಯಾಸ ಸಂಖ್ಯೆ 6. ಸಲಹೆಯನ್ನು ಗೌರವಿಸುವವರು ಸುರಕ್ಷಿತ ಮಾರ್ಗಗಳಲ್ಲಿ ನಡೆಯುತ್ತಾರೆ, ವಿವೇಕಯುತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಕಾಲಂತರಕ್ಕೂ ಪರಿಣಾಮಕಾರಿತ್ವವನ್ನು ಉಳಿಸಿಕೊಳ್ಳುತ್ತಾರೆ. 

Bible Reading: Genesis 42-44
ಪ್ರಾರ್ಥನೆಗಳು
ತಂದೆಯೇ, ಹೆಮ್ಮೆ ಮತ್ತು ಒಂಟಿತನದಿಂದ ನನ್ನನ್ನು ಬಿಡಿಸು. ನನ್ನನ್ನು ದೈವಿಕ ಸಲಹೆಗೆ ಸಂಪರ್ಕಪಡಿಸಿ, ನನ್ನ ವಿವೇಚನೆಯನ್ನು ಚುರುಕುಗೊಳಿಸಿ, ಮತ್ತು ಜ್ಞಾನವು ನನ್ನ ಹೆಜ್ಜೆಗಳನ್ನು ಕಾಪಾಡಲಿ ಮತ್ತು ನಿನ್ನ ಚಿತ್ತದ ಪ್ರಕಾರ ನನ್ನ ಗತಿಯನ್ನು ವೇಗಗೊಳಿಸಲಿ. ಯೇಸುನಾಮದಲ್ಲಿ. ಆಮೆನ್!!

Join our WhatsApp Channel


Most Read
● ತಪ್ಪು ಆಲೋಚನೆಗಳು
● ಅನಂತವಾದ ಕೃಪೆ
● ನೀವೇ ಮಾದರಿಯಾಗಿರ್ರಿ
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
● ಚಿತ್ತ ಚಂಚಲತೆ ಯನ್ನು ಜಯಿಸಲು ಇರುವ ಪ್ರಾಯೋಗಿಕ ಮಾರ್ಗಗಳು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮುಂದಿನ ಹಂತಕ್ಕೆ ಹೋಗುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್