"ಅವನು ಮುಖ್ಯಯಾಜಕರ ಬಳಿಗೂ ದೇವಾಲಯದ ಕಾವಲಧಿಕಾರಿಗಳ ಬಳಿಗೂ ಹೋಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಅವರ ಕೂಡ ಚರ್ಚಿಸಿದನು. ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವುದಕ್ಕೆ ವಾಗ್ದಾನ ಮಾಡಿದರು.ಅವನೂ ಸಮ್ಮತಿಸಿ, ಜನಸಮೂಹವು ಇಲ್ಲದಿರುವಾಗ ಯೇಸುವನ್ನು ಅವರಿಗೆ ಹಿಡಿದುಕೊಡುವಂತೆ ಸಂದರ್ಭವನ್ನು ಕಾಯುತ್ತಿದ್ದನು."( (ಲೂಕ 22:4-6)
ಯೂದನ ದ್ರೋಹದ ಕಥೆಯು ನಮ್ಮ ರಕ್ಷಕನ ಅಂತಿಮ ದಿನಗಳ ಕಥೆಯಲ್ಲಿ ಕೇವಲ ಒಂದು ನಿರೂಪಣಾ ವಿವರಕ್ಕಿಂತ ಹೆಚ್ಚಿನದಾಗಿದೆ. ಇದು ಅನಿಯಂತ್ರಿತ ಆಕಾಂಕ್ಷೆ ಮತ್ತು ಆತ್ಮೀಕ ಅಜಾಗರೂಕತೆಯು ನಮಗೆ ಹತ್ತಿರವಿರುವವರನ್ನು ಸಹ ದಾರಿ ತಪ್ಪಿಸಬಹುದು ಎಂಬ ಪ್ರಬಲ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.
ಇಸ್ಕಾರಿಯೋತ ಯೂದನು ಬೈಬಲ್‌ನಲ್ಲಿ ಒಬ್ಬ ನಿಗೂಢ ವ್ಯಕ್ತಿವಾಗಿದ್ದಾನೆ. ಅವನು ಯೇಸುವಿನೊಂದಿಗೆ ನಡೆದನು, ಆತನು ಮಾಡಿದ ಪವಾಡಗಳನ್ನು ವೀಕ್ಷಿಸಿದನು ಅಷ್ಟೇ ಅಲ್ಲದೇ ಆತನ ಆಂತರಿಕ ವಲಯದ ಭಾಗವಾಗಿ ಕೂಡ ಇದ್ದನು. ಆದರೂ, ಅವನು ದೇವಕುಮಾರನಿಗೆ ದ್ರೋಹ ಮಾಡುವುದನ್ನೇ ಆರಿಸಿಕೊಂಡನು. ಕರ್ತನಿಗೆ ಹತ್ತಿರವಿರುವ ಈ ವ್ಯಕ್ತಿಯನ್ನು ಇಂತಹ ಘೋರ ಕೃತ್ಯವನ್ನು ಮಾಡಲು ಯಾವುದು ಪ್ರೇರೇಪಿಸಬಹುದು? ಯೂದನು ಪಡೆದ ಮೂವತ್ತು ಬೆಳ್ಳಿಯ ತುಂಡುಗಳ ಮೇಲೆ ನಾವು ಹೆಚ್ಚಾಗಿ ಗಮನ ಹರಿಸುತ್ತೇವೆ. ಆದರೆ ಆರ್ಥಿಕ ಲಾಭದ ಆಮಿಷವೇ ನಿಜವಾಗಿ ಇಡೀ ಕಥೆಯಾಗಿತ್ತೇ?
ನಾವು ಆಳವಾಗಿ ಅಗೆದಾಗ, ಬಹುಶಃ ಒಳ್ಳೆಯ ಉದ್ದೇಶದಿಂದ ತನ್ನ ನಡೆಯನ್ನು ಪ್ರಾರಂಭಿಸಿದ ವ್ಯಕ್ತಿಯನ್ನು ನಾವು ನೋಡುತ್ತೇವೆ. ಯೂದನು ಇಸ್ರೇಲ್ ಅನ್ನು ರೋಮನ್ ದಬ್ಬಾಳಿಕೆಯಿಂದ ಭೌತಿಕವಾಗಿ ಮುಕ್ತಗೊಳಿಸುವ ಮೆಸ್ಸೀಯನನ್ನು ಕಲ್ಪಿಸಿಕೊಂಡಿರಬಹುದು. ಧರ್ಮಗ್ರಂಥಗಳಲ್ಲಿ ಸುಳಿವು ನೀಡಿದಂತೆ, ಅವನು ಬಹುಶಃ ಈ ಹೊಸ ರಾಜ್ಯದಲ್ಲಿ ಪ್ರಮುಖ ಪಾತ್ರವನ್ನು ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿಟ್ಟಿದ್ದೀರಬಹುದು (ಲೂಕ 19:11). ಆದರೆ ಕಡೆಗೆ ಮನ್ನಣೆ ಮತ್ತು ಅಧಿಕಾರಕ್ಕಾಗಿ ಅವನಿಗಿದ್ದ ಆಕಾಂಕ್ಷೆಯೇ ಅವನನ್ನು ನುಂಗಲು ಅಂಧಕಾರ ಪೈಶಾಚಿಕ ಶಕ್ತಿಗಳಿಗೆ ಇಂಧನವಾಗಿ ಕಾರ್ಯನಿರ್ವಹಿಸಿರಬಹುದು.
ಆದಾಗ್ಯೂ, ಯೇಸುವಿನ ರಾಜ್ಯವು ಈ ಲೋಕದ್ದಲ್ಲ ಎಂದು ಸ್ಪಷ್ಟವಾದಾಗ, ಯೂದನ ಹೃದಯದಲ್ಲಿ ಭ್ರಮನಿರಸನವು ನುಸುಳಿರಬಹುದು. ಈ ಭ್ರಮನಿರಸನವು - ಅವನಿಗೆ ವಹಿಸಿಕೊಡಲಾದ ಹಣದ ಚೀಲದಿಂದ ಅವನು ಕದಿಯುವಂತದ್ದು (ಯೋಹಾನ 12:4-6) - ಅವನ ಅಂತರ್ಗತ ದುರಾಸೆಯೊಂದಿಗೆ ಸೇರಿ - ಸೈತಾನನಿಗೆ ತನ್ನ ಜಾಲವನ್ನು ಹೆಣೆಯಲು ಬಳಸಿ ಪರಿಪೂರ್ಣ ಬಿರುಗಾಳಿಯಾಯಿತು. ಸೈತಾನನು ದುರ್ಬಲರನ್ನು ಮಾತ್ರ ಬೇಟೆಯಾಡುವುದಿಲ್ಲ; ಅವನು ಬಲಿಷ್ಠರ ದುರ್ಬಲ ಕ್ಷಣಗಳನ್ನು ಗುರಿಯಾಗಿಸಿಕೊಳ್ಳುತ್ತಾನೆ ಎಂಬುದೇ ಆತಂಕಕಾರಿ ಸಂಗತಿ.
ಅಪೊಸ್ತಲ ಪೇತ್ರನು ಎಚ್ಚರಿಸಿದಂತೆ," ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ."(1 ಪೇತ್ರ 5:8)
ಯೇಸುವಿನ ಕಥೆಯಲ್ಲಿ ಯೂದನನ್ನು ಖಳನಾಯಕ ಎಂದು ವರ್ಗೀಕರಿಸುವ ಮೂಲಕ ನಾವು ಯೂದನಿಂದ ದೂರವಿರುವುದು ಸುಲಭ. ಆದರೆ ಈ ದೃಷ್ಟಿಕೋನವು ಆತ್ಮತೃಪ್ತಿಗೆ ಕಾರಣವಾಗಬಹುದು. ಯೇಸುವಿನೊಂದಿಗೆ ದೈಹಿಕವಾಗಿ ಹಾಜರಿದ್ದ ಯೂದನೇ ಎಡವಿಬೀಳುವುದಾದರೆ, ನಾವೂ ಸಹ ಎಡವಬಹುದು. ಈ ಸತ್ಯವು ನಮ್ಮನ್ನು ಹತಾಶೆಗೆ ಅಲ್ಲ, ಜಾಗರೂಕತೆಗೆ ಕರೆದೊಯ್ಯಬೇಕು.
ಪಾಪವೆಂಬ ಹುಳಿಯ ಕುರಿತು ಬರೆಯುವಾಗ ಅಪೊಸ್ತಲನಾದ ಪೌಲನು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡನು. ಸ್ವಲ್ಪ ಹುಳಿಯೂ ಕಣಕವನ್ನೆಲ್ಲ ಮಾತ್ರ ಹುಳಿ ಮಾಡುತ್ತದೆ (1 ಕೊರಿಂಥ 5:6-8). ಹಾಗೆಯೇ ನಮ್ಮ ಜೀವನದಲ್ಲಿ ಅಸೂಯೆ, ಮಹತ್ವಾಕಾಂಕ್ಷೆ ಅಥವಾ ದುರಾಶೆಯ ಸುಳಿವು ಅನಿಯಂತ್ರಿತವಾಗಿ ಉಳಿಯುವಂತೆ ನಾವು ಅನುಮತಿಸಿದಾಗಲೆಲ್ಲಾ, ಅದು ಬೆಳೆದು ನಮ್ಮ ಗುರುತನ್ನು ವ್ಯಾಖ್ಯಾನಿಸಲು ನಾವು ಅವಕಾಶ ನೀಡುವ ಅಪಾಯದಲ್ಲಿರುತ್ತೇವೆ.
ಆದಾಗ್ಯೂ, ಕಥೆಯು ಭರವಸೆಯ ದಾರಿದೀಪವಾಗಿಯೂ ಕಾರ್ಯನಿರ್ವಹಿಸುತ್ತದೆ. ತನ್ನ ಅಂತಿಮ ಕ್ಷಣಗಳಲ್ಲಿಯೂ ಸಹ, ಯೇಸು ಪ್ರೀತಿ ಮತ್ತು ಕ್ಷಮೆಯನ್ನು ಯೂದನಿಗೆ ವಿಸ್ತರಿಸಿ ಯೂದನನ್ನು "ಸ್ನೇಹಿತ" ಎಂದು ಕರೆದನು (ಮತ್ತಾಯ 26:50). ಯೇಸುವಿನ ಪ್ರತಿಕ್ರಿಯೆಯು ನಾವು ಎಷ್ಟೇ ದೂರ ಹೋದರೂ, ದೇವರ ತೋಳುಗಳು ತೆರೆದಿದ್ದು ನಮ್ಮನ್ನು ಅಪ್ಪಿಕೊಳ್ಳಲು ಮತ್ತು ಪುನಃಸ್ಥಾಪಿಸಲು ಸಿದ್ಧವಾಗಿರುತ್ತವೆ ಎಂದು ನಮಗೆ ನೆನಪಿಸುತ್ತದೆ.
Bible Reading: John 15-17
ಪ್ರಾರ್ಥನೆಗಳು
ಪರಲೋಕದ ಪ್ರೀತಿಯುಳ್ಳ ತಂದೆಯೇ, ನಮ್ಮನ್ನು ದಾರಿ ತಪ್ಪಿಸುವ ಪ್ರಲೋಭನೆಗಳು ಮತ್ತು ಮಹತ್ವಾಕಾಂಕ್ಷೆಗಳಿಂದ ನಮ್ಮ ಹೃದಯಗಳನ್ನು ರಕ್ಷಿಸಿ ಕಾಪಾಡು. ಯೇಸುನಾಮದಲ್ಲಿ ನಾವು ಯಾವಾಗಲೂ ನಿನ್ನ ಮುಖವನ್ನೇ ಹುಡುಕುವವರಾಗಿ ನಿನ್ನ ಪ್ರೀತಿ ಮತ್ತು ಕೃಪೆಯಲ್ಲಿ ನೆಲೆಗೊಂಡಿರುವಂತಾಗಲೀ. ಆಮೆನ್.
Join our WhatsApp Channel
Most Read
● ಶ್ರೇಷ್ಠತೆಯ ಬೆನ್ನಟ್ಟುವಿಕೆ.● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
ಅನಿಸಿಕೆಗಳು
