english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
ಅನುದಿನದ ಮನ್ನಾ

ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು

Tuesday, 25th of June 2024
2 1 631
Categories : ಆತ್ಮನ ಫಲ (Fruit of the Spirit)
"ಚಿನ್ನದ ಗೆಜ್ಜೆಯೂ ದಾಳಿಂಬದಂತಿರುವ ಚಂಡೂ ಒಂದಾದ ಮೇಲೆ ಒಂದು ದೇವರ ಸೇವೆಗೋಸ್ಕರವಾದ ಆ ಮೇಲಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದನು."(ವಿಮೋಚನಕಾಂಡ 39:26)

ಈ ಮೇಲಿನ ದೇವರ ವಾಕ್ಯವು ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವಂತಹ ಮಹಾಯಾಜಕರು ಧರಿಸಬೇಕಾದ ಮೇಲಂಗಿಯ ವಿನ್ಯಾಸದ ಕುರಿತು ಹೇಳಿದೆ. ಆ ಮೇಲಂಗಿಯ ಅಂಚಿಗೆ ಒಂದು ಚಿನ್ನದ ಗಂಟೆ ಹಾಗೂ ಒಂದು ದಾಳಿಂಬ ಹಣ್ಣು, ಒಂದು ಚಿನ್ನದ ಗಂಟೆ ಹಾಗೂ ಒಂದು ದಾಳಿಂಬೆ ಹಣ್ಣು ಹೀಗೆ ಒಂದಾದ ಮೇಲೆ ಒಂದಂತೆ ದಾರಕ್ಕೆ ಕಟ್ಟಿರಬೇಕಿತ್ತು. ಇದರಲ್ಲಿ ಆಳವಾದ ಆತ್ಮೀಕ ಮಹತ್ವವು ಅಡಗಿದೆ.

ಪ್ರವಾದಿಯಾದ ಮೋಷೆಯು ಕಾನಾನ್ ದೇಶವನ್ನು  ನೋಡಿಕೊಂಡು ಬರಲು ಗೂಡಚರರನ್ನು ಕಳುಹಿಸಿ ಕೊಟ್ಟಾಗ ಅವರು ತಿರುಗಿ ಬಂದು ಆ ದೇಶದ ಹಣ್ಣಿನ ಬಗ್ಗೆ ವರದಿ ಕೊಟ್ಟರು.

"ಅವರು ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಾಲತೆಯಿಂದ ಒಂದೇ ಗೊಂಚಲುಳ್ಳ ಕೊಂಬೆಯನ್ನು ಕೊಯಿದರು; ಇಬ್ಬರು ಅದನ್ನು ಅಡ್ಡದಂಡಿಗೆಯಿಂದ ಹೊತ್ತುಕೊಂಡು ಬಂದರು. ಕೆಲವು ದಾಳಿಂಬ ಹಣ್ಣುಗಳನ್ನೂ ಅಂಜೂರದ ಹಣ್ಣುಗಳನ್ನೂ ತಂದರು. ಇಸ್ರಾಯೇಲ್ಯರು ಅಲ್ಲಿ ಆ ದ್ರಾಕ್ಷೆಯ ಗೊಂಚಲನ್ನು ಕೊಯಿದದರಿಂದಲೇ ಆ ಸ್ಥಳಕ್ಕೆ ಎಷ್ಕೋಲ್ ಎಂದು ಹೆಸರುಂಟಾಯಿತು."(ಅರಣ್ಯಕಾಂಡ 13:23-24)

ಒಂದು ದೇಶವು ಫಲವತ್ತಾಗಿರುವುದೋ ಇಲ್ಲವೇ ಬರಡೋ ಎಂದು ತಿಳಿದುಕೊಳ್ಳುವುದು ಆ ದೇಶದ ಫಲದಿಂದ. ಹಾಗೆಯೇ ಒಬ್ಬ ವ್ಯಕ್ತಿಯೂ ಸಹ ಅವನ ಜೀವನದಲ್ಲಿ ಅವನ ಜೀವನದ ಮೂಲಕ ಉಂಟಾದ ಫಲಗಳಿಂದಲೇ ಗುರುತಿಸಲ್ಪಡುತ್ತಾನೆ.

ಯೇಸು ಸ್ವಾಮಿಯು ಕೂಡ ಇದನ್ನೇ ಹೇಳಿದ್ದಾನೆ.
" ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ."(.‭ಮತ್ತಾಯ 7:18-20)

 ಈಗ ಕರ್ತನಾದ ಯೇಸು ಸ್ವಾಮಿಯು ಮಾತನಾಡುತ್ತಿರುವುದು ಮರ ಹಾಗೂ ಹಣ್ಣಿನ ಕುರಿತಲ್ಲ ಬದಲಾಗಿ ಆತನು ಜನರ ಗುಣದ ಕುರಿತಾಗಿ ಮಾತನಾಡುತ್ತಿದ್ದಾನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನೋಡಿರಿ, ಮಹಾಯಾಜಕನ ದೀಕ್ಷಾ ವಸ್ತ್ರದ ಮೇಲಂಗಿಯ ಅಂಚಿಗೆ ಕಟ್ಟಿದ ದಾಳಿಂಬರ ಹಣ್ಣು ಪವಿತ್ರಾತ್ಮನ ಫಲವನ್ನು ಸೂಚಿಸುವಂತದ್ದಾಗಿದೆ.

ಕ್ರೈಸ್ತರಾಗಿ ನಾವು ಆತನ ಸಾಕ್ಷಿಗಳಾಗಿ ನಡೆಯುವಾಗ ಆತ್ಮನ ಫಲವನ್ನು ಪ್ರದರ್ಶಿಸುವಲ್ಲಿ ಜಾಗರೂಕರಾಗಿರಬೇಕು. ಕೇವಲ ಫಲದ ಕುರಿತು ಮಾತನಾಡಿದರೆ ಅಷ್ಟೇ ಸಾಲದು.

"ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ - ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ."(ಗಲಾತ್ಯದವರಿಗೆ 5:22-23). ಇವುಗಳಿಲ್ಲದೆ ಯಾವುದೇ ನಿಜವಾದ ಸಾಕ್ಷಿ ಇಲ್ಲ ಮತ್ತು ಸೇವೆಯೂ ಇಲ್ಲ

ಎರಡನೆಯದಾಗಿ, ಮಹಾಯಾಜಕನ ದೀಕ್ಷಾ ವಸ್ತ್ರದ ಮೇಲಂಗಿಯ ಅಂಚಿಗೆ ಕಟ್ಟಿರುವ ಚಿನ್ನದ ಗಂಟೆಯು ಪವಿತ್ರಾತ್ಮನ ವರಗಳನ್ನು ಸೂಚಿಸುವಂತಹದ್ದಾಗಿದೆ.

"ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ."(‭1 ಕೊರಿಂಥದವರಿಗೆ 13:1)

ಪೌಲನು ಒಂದು ಕೊರಿಯಂತೆ 12ರಲ್ಲಿ ಪವಿತ್ರಾತ್ಮನ ವರಗಳನ್ನು ಕುರಿತು ಮಾತನಾಡಿದ ತಕ್ಷಣವೇ ಮುಂದಿನ ಅಧ್ಯಾಯದಲ್ಲಿ ಪವಿತ್ರಾತ್ಮನ ವರಗಳು ಪ್ರೀತಿಯ ಆಧಾರದ ಮೇಲೆ ಕಾರ್ಯ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳುತ್ತಾನೆ.

ದೀಕ್ಷಾವಸ್ತ್ರದ ಅಂಚಿಗೆ ಕಟ್ಟುತ್ತಿದ್ದ  ಈ ಚಿನ್ನದ ಗಂಟೆಯ ನಾದವು ಮಹಾ ಪರಿಶುದ್ಧಸ್ಥಳದೊಳಗಿರುವ ಮಹಾ ಯಾಜಕನು ದೇವರ ಪ್ರಸನ್ನತೆಯಲ್ಲಿ ಸಾಯದೆ ಬದುಕುಳಿದಿದ್ದಾನೆ ಎಂಬುದನ್ನು ಹೊರಗಡೆ ಅಂಗಳದಲ್ಲಿ ಕಾಯುತ್ತಾ ನಿಂತಿರುವ ಜನರಿಗೆ ತಲುಪಿಸಲು ಸೂಚನೆಯಾಗಿತ್ತು.

ಇಲ್ಲಿ ಬಹು ಮುಖ್ಯವಾಗಿರುವ ಸತ್ಯವೇನೆಂದರೆ ನಾವು ಇದರಲ್ಲಿ ಯಾವುದೋ ಒಂದನ್ನು ಆಯ್ಕೆ ಮಾಡಿಕೊಂಡು ಇನ್ನೊಂದನ್ನು ಬಿಡುವ ಹಾಗಿಲ್ಲ. ಒಂದನ್ನು ನಾವು ಬೆಳೆಸಿಕೊಂಡು ಮತ್ತೊಂದು ನಿರ್ಲಕ್ಷಿಸುವ ಹಾಗೆಯೂ ಇಲ್ಲ. ನಮ್ಮ ಜೀವಿತದಲ್ಲೆಲ್ಲ ಗಂಟೆ ಮತ್ತು ದಾಳಿಂಬರ ಹಣ್ಣು ಒಂದು ಗಂಟೆ ಒಂದು ದಾಳಿಂಬರ ಹಣ್ಣು ಹೀಗೆ ಎರಡೂ ಏಕರೂಪದಲ್ಲಿ ಸಾಗುತ್ತಾ ಹೋಗಬೇಕು.

ನಮ್ಮ ಜೀವನದಲ್ಲಾಗಲೀ, ನಮ್ಮ ಸೇವೆಯಾಗಲೀ ನಾವೇನೇ ಮಾಡಿದರೂ ಪವಿತ್ರಾತ್ಮನ ವರಗಳು ಮತ್ತು ಫಲದ ಪರಿಪೂರ್ಣವಾದ ಸಮತೋಲನ ಕಾಯ್ದುಕೊಳ್ಳಬೇಕು. ಮತ್ತು ಎರಡು ಸಹ ದೇವರಿಗೆ ಸ್ತೋತ್ರವನ್ನು ಜನರಿಗೆ ಆಶೀರ್ವಾದವನ್ನು ತರುವಂತದ್ದಾಗಿರಬೇಕು. ಎಲ್ಲವೂ ಹಾಗೆಯೇ ಆಗಲಿ.
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವಿತವು ಪವಿತ್ರಾತ್ಮನ ವರಗಳು ಹಾಗೂ ಪವಿತ್ರಾತ್ಮನ ಫಲ ಎರಡನ್ನು ಪರಿಪೂರ್ಣವಾಗಿ ಪ್ರಕಟಿಸುವಂತಾಗಲಿ. ಯೇಸು ನಾಮದಲ್ಲಿ ಈ ಎಲ್ಲದರಿಂದಲೂ ನಿನಗೆ ಮಹಿಮೆಯೂ ಘನವೂ ಉಂಟಾಗಲಿ. ಆಮೆನ್.


Join our WhatsApp Channel


Most Read
● ದೈನಂದಿನ ಮನ್ನಾ
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ಕೊಡುವ ಕೃಪೆ -2
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್