ಒಬ್ಬ ಸ್ಥಿರಚಿತ್ತ ವ್ಯಕ್ತಿಯೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವಾಗ, ಕರ್ತನಾದ ಯೇಸು ಕ್ರಿಸ್ತನು ಬೇರೆ ಯಾರೂ ನೀಡಲಾಗದ ಸಮಾಧಾನವನ್ನು ಅವನಿಗೆ ನೀಡಬಲ್ಲನೆಂದು ನಾನು ಉಲ್ಲೇಖಿಸಿದೆ! ಅವನು ವ್ಯಂಗ್ಯವಾಗಿ ಮೂಗು ತಿರುಗಿಸುತ್ತಾ, "ಸಮಾಧಾನ, ಇದು ತುಂಬಾ ಬೇಸರದ ಸಂಗತಿ" ಎಂದು ಹೇಳಿದನು.
"ಈ "ಸಮಾಧಾನ"ವೇ ನಿಮ್ಮನ್ನು ಛಿದ್ರವಾಗಿ ಹೋಗದಂತೆ ತಡೆಯಬಹುದು! ಪೂರೈಸಬೇಕಾದ ಗಡುವುಗಳು, ಆರ್ಥಿಕ ಗುರಿಗಳ ಕುಶಲತೆ ಮತ್ತು ಸಂಬಂಧಗಳು ನಿಮ್ಮ ಸಮಾಧಾನವನ್ನು ಸಂಪೂರ್ಣವಾಗಿ ಕಸಿದುಕೊಳ್ಳಬಹುದು ಮತ್ತು ನಿಮ್ಮನ್ನು ಖಿನ್ನತೆಗೆ ದೂಡಬಹುದು ಎಂದೆ.ಒಂದು ಕ್ಷಣ ಅವನು ಆಶ್ಚರ್ಯಚಕಿತನಾಗಿ ನಂತರ ಅವನು ಒಪ್ಪಿಕೊಂಡನು.
ಇಂದು ಲಭ್ಯವಿರುವ ಎಲ್ಲಾ ಮನರಂಜನೆಯ ಹೊರತಾಗಿಯೂ, ಜಗತ್ತಿನಲ್ಲಿ ಈಗಿರುವಷ್ಟು ಖಿನ್ನತೆಗೆ ಒಳಗಾಗುವ ಜನರು ಹಿಂದೆ ಎಂದಿಗೂ ಇರಲಿಲ್ಲ. ಸಮಾಧಾನದಿಂದ ಕೂಡಿದ ಜೀವನವು ಆಕಸ್ಮಿಕವಾಗಿ ಸಂಭವಿಸುವುದಿಲ್ಲ, ಅದು ನಾವು ಪ್ರತಿದಿನ ಮಾಡಬೇಕಾದ ಆಯ್ಕೆ. ಆತನ ಬಳಿಗೆ ಬರಲು ಮಾಡಬೇಕಾದ ದೈನಂದಿನ ಆಯ್ಕೆ. ಆತನ ವಾಕ್ಯದ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಮಾಡಬೇಕಾದ ದೈನಂದಿನ ಆಯ್ಕೆ. ನಮ್ಮ ಸುತ್ತಲೂ ಏನು ನಡೆಯುತ್ತಿದ್ದರೂ ಆತನನ್ನು ನಂಬುವುದನ್ನೇ ಮಾಡುವ ದೈನಂದಿನ ಆಯ್ಕೆ.
ನಾನು ಮೊದಲೇ ಹೇಳಿದಂತೆ, ಈ ಸಮಾಧಾವು ಸ್ವಾಭಾವಿಕವಾಗಿ ಸಿಗುವಂತದ್ದಲ್ಲ. ಅದಕ್ಕಾಗಿಯೇ ಈ ವಾಕ್ಯವು "ಸಮಾಧಾನವನ್ನೇ ಹಾರೈಸಿ ಅದನ್ನು ಬೆನ್ನಟ್ಟು" (ಕೀರ್ತನೆ 34:14) ಎಂದು ನಮಗೆ ಸವಾಲು ಹಾಕುತ್ತದೆ. ಈಗ ಕೆಲವರು, "ಕೆಲವು ದಿನಗಳವರೆಗೆ ದೂರ ಹೋಗಿ, ವಿಶ್ರಾಂತಿ ಪಡೆಯಿರಿ, ರಜೆ ತೆಗೆದುಕೊಳ್ಳಿ, ಒತ್ತಡದ ವಿಷಯಗಳ ಕುರಿತು ಯೋಚಿಸಬೇಡಿ, ಇತ್ಯಾದಿ" ಎಂದೆಲ್ಲಾ ಸಲಹೆ ನೀಡಬಹುದು. ಅದರಲ್ಲಿ ತಪ್ಪೇನಿಲ್ಲ, ಆದರೆ ಅದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ ಮತ್ತು ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ.
ದೇವರು ನೀಡುವ ಸಮಾಧಾನವು ವಿಭಿನ್ನವಾಗಿದೆ - ಅದು ಶಾಶ್ವತವಾದದ್ದು ಮತ್ತು ನೈಜವಾದದ್ದು ಆಗಿದೆ. ನೀವು ಪ್ರತಿದಿನ ಕರ್ತನು ನೀಡುವ ಸಮಾಧಾನದಲ್ಲಿ ನಡೆಯುವಾಗ, ನೀವು ಎದುರಿಸುವ ಯುದ್ಧವೇ ಶೀಘ್ರದಲ್ಲೇ ನಿಮ್ಮನ್ನು ಪೋಷಿಸುವ ಮತ್ತು ನಿರ್ಮಿಸುವ ಅನ್ಯೋನ್ಯತೆಯ ಆಹಾರವಾಗುತ್ತದೆ. ಕೀರ್ತನೆ 23 ರಲ್ಲಿ, ಕೀರ್ತನೆಗಾರನು "ಮರಣದ ಕಣಿವೆಯಲ್ಲಿ" ನಡೆಯುವಾಗಲೂ, ಅವನು "ಯಾವ ಕೇಡಿಗೆ ಹೆದರಲಿಲ್ಲ." ಎಂದು ಹೇಳುತ್ತಾ ನಂತರ "ನನ್ನ ಶತ್ರುಗಳ ಸಮ್ಮುಖದಲ್ಲಿಯೇ ನೀನು ನನಗೆ ಮೇಜನ್ನು ಸಿದ್ಧಪಡಿಸುತ್ತೀಯ." ಎಂದು ಹೇಳುತ್ತಾನೆ.
ಕರ್ತನಾದ ಯೇಸುವೇ ಸಮಾಧಾನದ ಪ್ರಭುವಾಗಿದ್ದಾನೆ. ಪ್ರತಿದಿನ ಬೆಳಿಗ್ಗೆ ಅವನನ್ನು ಹುಡುಕಲು ಸಮಯವನ್ನು ಏಕೆ ನೀವು ಮಾಡಿಕೊಳ್ಳಬಾರದು; ಆಗ ನಿಮ್ಮ ಮನೆ ಬಾಗಿಲನ್ನು ತಟ್ಟುವ ಎಲ್ಲವನ್ನೂ ನೀವು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ.
Bible Reading: Psalms 89-96
ಅರಿಕೆಗಳು
ಕರ್ತನಾದ ಯೇಸುವೇ ಸಮಾಧಾನದ ಪ್ರಭುವಾಗಿದ್ದಾನೆ. ಪ್ರತಿದಿನ ಬೆಳಿಗ್ಗೆ ಅವನನ್ನು ಹುಡುಕಲು ಸಮಯವನ್ನು ಏಕೆ ನೀವು ಮಾಡಿಕೊಳ್ಳಬಾರದು; ಆಗ ನಿಮ್ಮ ಮನೆ ಬಾಗಿಲನ್ನು ತಟ್ಟುವ ಎಲ್ಲವನ್ನೂ ನೀವು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ.
Join our WhatsApp Channel

Most Read
● ಸಾಲದಿಂದ ಹೊರಬನ್ನಿ : ಕೀಲಿಕೈ #2● ನಮ್ಮ ಹಿಂದಿರುವ ಉರಿಯುವ ಸೇತುವೆಗಳು
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು