ಅನುದಿನದ ಮನ್ನಾ
2
1
115
ನಿಮ್ಮ ಮನಸ್ಸಿಗೆ ಉಣಬಡಿಸಿರಿ
Sunday, 17th of November 2024
Categories :
ಬಿಡುಗಡೆ (Deliverance)
ನಿಮ್ಮ ಜೀವಿತಾವಧಿಯಲ್ಲಿ ನಿಮಗೂ ಸಹ ಅನೇಕ ಬಾರಿ ಈ ರೀತಿ ಅನುಭವ ಆಗಿರುತ್ತದೆ ಎಂದು ನನಗೆ ಖಾತ್ರಿಯಿದೆ.
ಎಲ್ಲೋ ಒಂದು ಹಾಡು ಕೇಳಿರುತ್ತೀರಿ "ಎಂಥ ಹಾಸ್ಯಾಸ್ಪದ ಹಾಡು?" ಎಂದು ಆಗ ನಿಮಗೆ ಎನಿಸಿರುತ್ತದೆ ಮತ್ತೆ ನಂತರದಲ್ಲಿ ಅದೇ ಹಾಡನ್ನು ಮತ್ತೆ ಎಲ್ಲೋ ಹಾಕಿದ್ದಾಗ ಕೇಳಿಸಿಕೊಳ್ಳುತ್ತೀರಿ. ಒಂದು ದಿನ, ನೀವು ಮನೆಯಲ್ಲಿ ಕುಳಿತಿದ್ದಾಗ, ನೀವು ಇದ್ದಕ್ಕಿದ್ದಂತೆ 'ಆ ಹಾಸ್ಯಸ್ಪದ ಹಾಡನ್ನೇ ' ಗುನುಗಲು ಅಥವಾ ಹಾಡಲು ಪ್ರಾರಂಭಿಸುತ್ತೀರಿ . ನಾನು ಹೇಳಬೇಕೆಂದಿರುವುದು ಏನೇಂದರೆ, ಆ ಹಾಡು ತುಂಬಾ ಹಾಸ್ಯಾಸ್ಪದ ಅಥವಾ ಮೂರ್ಖತನ ಎಂದು ಎನಿಸಿದ್ದರೆ , ನೀವೇಕೆ ಅದನ್ನು ಈ ಭೂಮಿಯ ಮೇಲೆ ಏಕೆ ಹಾಡುತ್ತಿದ್ದಿರಿ?
ವಾಸ್ತವವೆಂದರೆ, ನೀವು ಪದೇ ಪದೇ ಕೇಳುವ ಯಾವುದೇ ವಿಷಯವಾಗಲೀ ನಿಮ್ಮ ಪ್ರಜ್ಞೆಯ ಮುಂಚೂಣಿಯಲ್ಲಿರುತ್ತದೆ. ಪದೇ ಪದೇ ಪುನರಾವರ್ತನೆಯಾಗುವ ಯಾವುದನ್ನಾದರೂ ಮನಸ್ಸು ಆಲೋಚಿಸುತ್ತದೆ. ಇದನ್ನು ಬಲವರ್ಧನೆಯ ನಿಯಮ ಎಂದು ಕರೆಯಲಾಗುತ್ತದೆ.
ನಾವು ಯಾವುದನ್ನಾದರೂ ದೀರ್ಘಕಾಲದವರೆಗೆ ಕೇಳುತ್ತಿದ್ದರೆ, ನಾವು ಅದನ್ನು ನಂಬಲಾರಾಂಭಿಸುತ್ತೇವೆ ಮತ್ತು ಅದರ ಮೇಲೆ ಕಾರ್ಯನಿರ್ವಹಿಸುತ್ತೇವೆ. ಪ್ರಕ್ರಿಯೆಯು ಸರಳವಾಗಿದೆ. ಹಾಡು ಅನೇಕ ಬಾರಿ ಪುನರಾವರ್ತನೆಯಾಗವಾಗ ನಾವು ಅದನ್ನು ಮತ್ತೆ ಮತ್ತೆ ಕೇಳುತ್ತಿರುತ್ತೇವೆ, ನಂತರ ನಾವು ಆ ಹಾಡಿನ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ ಮತ್ತು ಶೀಘ್ರದಲ್ಲೇ ನಾವು ಆ ರಾಗವನ್ನು ಹಾಡುತ್ತೇವೆ ಅಥವಾ ಗುನುಗುತ್ತೇವೆ.
ಸರಿಯಾದ ಆಲೋಚನೆಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಅಥವಾ ಕನಿಷ್ಠ ಅವು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಚಲಿಸುವಂತೆ ಪ್ರೇರೇಪಿಸುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
ನಮ್ಮ ಮನಸ್ಸನ್ನು ಸರಿಯಾದ ಆಲೋಚನೆಗಳೊಂದಿಗೆ ಪೋಷಿಸುವ ಅತ್ಯಂತ ಉತ್ಪಾದಕ ಮಾರ್ಗವೆಂದರೆ ದೇವರ ವಾಕ್ಯದಿಂದ ಪ್ರತಿದಿನ ನಮ್ಮ ಮನಸ್ಸನ್ನು ಪೋಷಿಸುವುದು.
"ಈ ಲೋಕದ ನಡುವಳಿಕೆಯನ್ನು ಹೊಂದಿಕೊಳ್ಳದೇ, ನಿಮ್ಮ ಮನಸ್ಸನ್ನು ರೂಪಾಂತರಿಸಿಕೊಂಡು ನವೀಕರಿಸಿಕೊಳ್ಳಿರಿ. ಆಗ ನೀವು ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ ಯಾವುದು ಎಂಬುದನ್ನು ತಿಳಿದುಕೊಳ್ಳುವಿರಿ. (ರೋಮ 12:2)
ರೋಮ 12:2 ರಲ್ಲಿ, ಪೌಲನು ನಮ್ಮ ಆತ್ಮೀಕ ರೂಪಾಂತರವು "ನಮ್ಮ ಮನಸ್ಸನ್ನು ನವೀಕರಿಸುವ" ಮೂಲಕ ಸಂಭವಿಸುತ್ತದೆ ಎಂದು ಹೇಳುತ್ತಾನೆ. ದೇವರ ವಾಕ್ಯವನ್ನು ಓದುವ ಮೂಲಕ ಅಥವಾ ಆಡಿಯೊ ಬೈಬಲ್ ಅನ್ನು ಕೇಳುವ ಮೂಲಕ ನಿಮ್ಮ ದಿನವನ್ನು ಪ್ರತಿದಿನ ಪ್ರಾರಂಭಿಸಲು ಒಂದು ಹಂತವನ್ನು ಸಿದ್ದಮಾಡಿ.
ಅಪೊಸ್ತಲ ಪೌಲನು ನಮ್ಮ ಮನಸ್ಸನ್ನು ಸರಿಯಾದ ವಿಷಯಗಳೊಂದಿಗೆ ಪೋಷಿಸುವ ಪ್ರಾಮುಖ್ಯತೆಯನ್ನು ಇಲ್ಲಿ ಉಲ್ಲೇಖಿಸಿದ್ದಾನೆ, ಇದರಿಂದ ನಾವು ಯಾವಾಗಲೂ ದೇವರ ಪ್ರಸನ್ನತೆಯನ್ನು ಅನುಭವಿಸಬಹುದಾಗಿದೆ.
"ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ. ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ, ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿರುವಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು."(ಫಿಲಿಪ್ಪಿ 4:8-9)
ಅರಿಕೆಗಳು
1. ನನ್ನ ಪ್ರಾಣತ್ಮದಲ್ಲಿ ನಾನು ನವೀಕರಿಸಲ್ಪಟ್ಟಿದ್ದೇನೆ ಎಂದು ಅರಿಕೆ ಮಾಡುತ್ತೇನೆ. (ಎಫೆ. 4:23) ನಾನು ಕ್ರಿಸ್ತನ ಮನಸ್ಸನ್ನು ಹೊಂದಿಕೊಂಡಿದ್ದೇನೆ ಮತ್ತು ಕ್ರಿಸ್ತನ ಮನಸ್ಸಿನಂತೆಯೇ ಕಾರ್ಯನಿರ್ವಹಿಸುತ್ತೇನೆ ಎಂದು ಅರಿಕೆ ಮಾಡುತ್ತೇನೆ. ನಾನು ಕ್ರಿಸ್ತನ ಆಲೋಚನೆಗಳನ್ನು ಬೇಡುವುದರಿಂದ ನನ್ನ ಆಲೋಚನೆಗಳ ಮೇಲೆ ಯೇಸುನಾಮದಲ್ಲಿ ಆತನ ಆಲೋಚನ ಶಕ್ತಿಯು ಬಿಡುಗಡೆಯಾಗುತ್ತದೆ ಎಂದು ನಾನು ನಂಬುತ್ತೇನೆ, ಮತ್ತು ಅದನ್ನೇ ಅರಿಕೆ ಮಾಡುತ್ತೇನೆ. (1 ಕೊರಿಂಥ 2:16; ಫಿಲಿಪ್ಪಿ 2:5)
2. ಈ ಪ್ರಪಂಚದ ಮಾದರಿಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿ ನಾನು ಇರದೇ ದೇವರ ವಾಕ್ಯದ ಮೂಲಕ ನನ್ನ ಮನಸ್ಸನ್ನು ನವೀಕರಿಸಿ ಕೊಳ್ಳುವ ಮೂಲಕ ನಾನು ಪ್ರತಿದಿನ ರೂಪಾಂತರಗೊಳ್ಳುತ್ತೇನೆ. (ರೋಮನ್ನರು 12:2)
2. ಈ ಪ್ರಪಂಚದ ಮಾದರಿಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿ ನಾನು ಇರದೇ ದೇವರ ವಾಕ್ಯದ ಮೂಲಕ ನನ್ನ ಮನಸ್ಸನ್ನು ನವೀಕರಿಸಿ ಕೊಳ್ಳುವ ಮೂಲಕ ನಾನು ಪ್ರತಿದಿನ ರೂಪಾಂತರಗೊಳ್ಳುತ್ತೇನೆ. (ರೋಮನ್ನರು 12:2)
Join our WhatsApp Channel

Most Read
● ಕೊಡುವ ಕೃಪೆ - 1● ಅನುಕರಣೆ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ಬದಲಾಗಲು ಇನ್ನೂ ತಡವಾಗಿಲ್ಲ
● ಜೀವಬಾದ್ಯರ ಪುಸ್ತಕ
● ನಮ್ಮ ರಕ್ಷಕನ ಬೇಷರತ್ತಾದ ಪ್ರೀತಿ
ಅನಿಸಿಕೆಗಳು