ಅನುದಿನದ ಮನ್ನಾ
ಬೆಟ್ಟಗಳ ಮತ್ತು ತಗ್ಗಿನ ದೇವರು.
Wednesday, 3rd of July 2024
1
0
198
Categories :
ಕ್ರಿಸ್ತನಲ್ಲಿನ ದೈವತ್ವ(Deity of Christ)
ಆರಾಮ್ಯರು ಯುದ್ಧದಲ್ಲಿ ತಾವು ಇಸ್ರೇಲರ ವಿರುದ್ಧ ಸೋತುಹೋದದಕ್ಕೆ ಮತ್ತೊಮ್ಮೆ ಯುದ್ಧದಲ್ಲಿ ಗೆಲ್ಲಬೇಕೆಂದು ಒಂದು ಗಂಭೀರ ತಪ್ಪಾದ ಯುದ್ಧ ತಂತ್ರಗಾರಿಕೆಯನ್ನು ಮಾಡುತ್ತಾರೆ. "ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ - ಇಸ್ರಾಯೇಲ್ಯರ ದೇವರು ಬೆಟ್ಟಗಳ ದೇವರಾಗಿರುವದರಿಂದ ಅವರು ನಮ್ಮನ್ನು ಸೊಲಿಸಿದರು; ನಾವು ಅವರೊಡನೆ ಬೈಲಿನಲ್ಲಿ ಯುದ್ಧಮಾಡುವದಾದರೆ ಹೇಗೂ ಜಯಹೊಂದುವೆವು."(1ಅರಸುಗಳು 20:23)
ಈ ಒಂದು ಹೊಸ ತಂತ್ರಗಾರಿಕೆಯನ್ನು ಉಪಯೋಗಿಸಿಕೊಂಡು ಇನ್ನೇನು ಇಸ್ರಾಯೇಲ್ಯರ ಮೇಲೆ ದಾಳಿ ಮಾಡಬೇಕು ಎನ್ನುವಾಗ ಕರ್ತನು ಅವರಿಗೆ ಒಂದು ಅಚ್ಚರಿಯ ಉತ್ತರವನ್ನು ಕೊಡುತ್ತಾನೆ.
"ಆಗ ದೇವರ ಮನುಷ್ಯನು ಇಸ್ರಾಯೇಲ್ಯರ ಅರಸನ ಬಳಿಗೆ ಬಂದು ಅವನಿಗೆ - ಯೆಹೋವನು ಹೀಗನ್ನುತ್ತಾನೆ - ಯೆಹೋವನು ತಗ್ಗುಗಳ ದೇವರಲ್ಲ, ಬೆಟ್ಟಗಳ ದೇವರಾಗಿರುತ್ತಾನೆ ಅಂದುಕೊಂಡು ಬಂದಿರುವ ಈ ಅರಾಮ್ಯರ ಮಹಾಸಮೂಹವನ್ನು ನಿನ್ನ ಕೈಗೆ ಒಪ್ಪಿಸುವೆನು; ಇದರಿಂದ ನಾನು ಯೆಹೋವನೇ ಎಂದು ನಿನಗೆ ಗೊತ್ತಾಗುವದು ಎಂದು ಹೇಳಿದನು."(1ಅರಸುಗಳು 20:28)
ಅರಾಮ್ಯರು ಕರ್ತನನ್ನು ಒಂದು ಸೀಮಿತ "ಪ್ರದೇಶಕ್ಕೆ" ಮಾತ್ರ ದೇವರು ತನ್ನ ಜನರನ್ನು ರಕ್ಷಿಸುವ ಆತನ ಸಾಮರ್ಥ್ಯವು ಸೀಮಿತವಾದದ್ದು ಎಂದು
ಯೋಚಿಸಿದ್ದರು. ಅವರು ಇವರ ದೇವರನ್ನು ಕೇವಲ ಬೆಟ್ಟಗಳ ದೇವರು ಎಂದು ಮಾತ್ರ ಅಂದುಕೊಂಡಿದ್ದರು. ಆದರೆ ಕರ್ತನು ಬರೀ ಬೆಟ್ಟಗಳ ದೇವರಷ್ಟೇ ಅಲ್ಲ. ಆತನು ಬಯಲಿನ ಹಾಗೂ ತಗ್ಗಿನ ದೇವರು ಕೂಡ ಆಗಿದ್ದಾನೆ ಎಂಬುದನ್ನು ನಾವು ಅರಿತುಕೊಳ್ಳಬೇಕೆಂದು ಆತನು ಬಯಸುತ್ತಾನೆ.
ಬೆಟ್ಟಗಳೆಂದರೆ ಅಲ್ಲಿ ವಿಪುಲವಾದ ದೇವರ ದರ್ಶನದ ಪ್ರಕಟಣೆಗಳನ್ನು ಹೊಂದುವ ಆತನ ಮಹಿಮೆಯು ವಿಶೇಷವಾಗಿ ಸುರಿಯಲ್ಪಡುವಂತಹ ಸಮಯವಾಗಿದೆ. ಬೆಟ್ಟಗಳು ಎಂಬುದು ನಮ್ಮ ಜೀವಿತದಲ್ಲಿನ ಸುಸಮಯವನ್ನು ಸೂಚಿಸುತ್ತದೆ. ಆ ಸಮಯದಲ್ಲಿ ಎಲ್ಲಾ ಸಂಗತಿಗಳು ದೇವರ ಚಿತ್ತಕ್ಕನುಗುಣವಾಗಿಯೂ ದೇವರ ಯೋಜನೆಗಳಲ್ಲಿ ನಮ್ಮ ಹೆಜ್ಜೆಗಳು ನೆಲೆಯೂರುವಂತ ಸನ್ನಿವೇಶಗಳು ಘಟನೆಗಳು ನಡೆಯುವಂತದ್ದನ್ನು ನಾವು ನೋಡುತ್ತಿರುತ್ತೇವೆ.
ಆದರೆ ನಮ್ಮ ಜೀವಿತದಲ್ಲಿ ಎಲ್ಲಾ ಸಂಗತಿಗಳೂ ಉನ್ನತವಾಗಿದ್ದಾಗ ಮಾತ್ರ ದೇವರು ನಮ್ಮ ಜೊತೆಯಲ್ಲಿರುವವನಷ್ಟೇ ಅಲ್ಲ ಆತನು ಬಯಲಿನ ದೇವರು ಕೂಡ ಆಗಿದ್ದಾನೆ. ಬಯಲೆಂಬುದು ದಿನನಿತ್ಯದ ಯಾವುದೇ ವಿಶೇಷವಿಲ್ಲದ ಸಾಮಾನ್ಯ ದಿನಚರಿಯನ್ನು ಕುರಿತು ಹೇಳುತ್ತದೆ.
ನಮ್ಮನ್ನು ದೇವರು ಎಷ್ಟೊಂದು ಪ್ರೀತಿಸಿದ್ದಾನೆಂದರೆ ಆತನು ತನ್ನ ನಡುಕಟ್ಟನ್ನು ಬಿಚ್ಚಿಟ್ಟು ತನ್ನೆಲ್ಲ ಮಹಿಮೆಯನ್ನು ಕಳಚಿಬಿಟ್ಟು ಒಬ್ಬ ಸಾಮಾನ್ಯ ಮನುಷ್ಯನಾಗುವಷ್ಟು ತಗ್ಗಿಗೆ ಇಳಿದು ಬಂದಿದ್ದಾನೆ. ನಾವು ಮರಣದಂಡನೆ ಹೊಂದಬೇಕಾಗಿದ್ದ ಸ್ಥಳದಲ್ಲಿ ಆತನು ನಮಗಾಗಿ ಮರಣ ಹೊಂದಿ, ಆತನ ವಿಜಯವನ್ನು ನಮಗೆ ಹಂಚಿದ್ದಾನೆ.
ನೀವಿಂದು ಎಂಥ ಪರಿಸ್ಥಿತಿಯನ್ನು ಹಾದು ಹೋಗುತ್ತಿದ್ದರೂ ಸರಿಯೇ, ಆತನು ಕೇವಲ ಬೆಟ್ಟಗಳ ದೇವರಷ್ಟೇ ಅಲ್ಲದೆ ಬಯಲಿನ, ತಗ್ಗಿನ ದೇವರೂ ಸಹ ಆಗಿದ್ದಾನೆ ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆತನು ನಮ್ಮ ಜೀವಿತದ ಎಲ್ಲಾ ಸಮಯದಲ್ಲೂ ಎಲ್ಲಾ ಕಾಲದಲ್ಲೂ ದೇವರಾಗಿದ್ದಾನೆ.
ಅರಿಕೆಗಳು
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು. ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯ ಕೊಡುತ್ತವೆ.
Join our WhatsApp Channel
Most Read
● ಬೇರಿನೊಂದಿಗೆ ವ್ಯವಹರಿಸುವುದು● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ಪುರುಷರು ಏಕೆ ಪತನಗೊಳ್ಳುವರು -6
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕೃಪೆಯಿಂದಲೇ ರಕ್ಷಣೆ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
ಅನಿಸಿಕೆಗಳು