ಕೊಡುವ ಕೃಪೆ ಎಂಬ ಸರಣಿಯನ್ನು ಮುಂದುವರಿಸುತ್ತಾ ಇದ್ದೇವೆ ನಾವೀಗ ನಮ್ಮ ಆತ್ಮಿಕ ಬೆಳವಣಿಗೆಯಲ್ಲಿ ಕೊಡುವಿಕೆಯು ಏಕೆ ನಿರ್ಣಾಯಕ ಅಂಶವಾಗಿದೆ ಎಂಬುದನ್ನು ನೋಡುತ್ತಿದ್ದೇವೆ.
2. ನಮ್ಮ ಕೊಡುವಿಕೆಯಲ್ಲಿ ದೇವರಿಗೆ ಸಂತೋಷ ಉಂಟು.
"ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಅಂದನು." ಎಂದು ಲೂಕ 6:38 ಹೇಳುತ್ತದೆ
"...... ಮೊದಲು ಆತನಿಗೆ ಕೊಟ್ಟು ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು? ಸಮಸ್ತವು ಆತನಿಂದ ಉತ್ಪತ್ತಿಯಾಗಿ ಆತನಿಂದ ನಡೆಯುತ್ತಾ ಆತನಿಗಾಗಿ ಇರುತ್ತದೆ;....." ಎಂಬ ಅರಿವಿನ ಮೂಲಕ ಕೊಡುವಿಕೆಯು ಆರಂಭವಾಗುತ್ತದೆ.(ರೋಮಾಪುರದವರಿಗೆ 11:35-36) ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಜೀವಿತದ ಎಲ್ಲಾ ಗೊತ್ತು -ಗುರಿಗಳಿಗೂ ಆತನೇ ಮೂಲನಾಗಿದ್ದಾನೆ.ನಾವು ಈ ಒಂದು ಮನಸ್ಥಿತಿಯಲ್ಲಿ ದೇವರಿಗೆ ಕೊಡುವಾಗ ಅದು ಸಮೃದ್ಧಿಯನ್ನು ಖಚಿತಪಡಿಸುವಂತಹ ಆಶೀರ್ವಾದಗಳ ಬಾಗಿಲನ್ನು ನಮಗೆ ತೆರೆಯುತ್ತದೆ.
ಮಾರ್ಟಿನ್ ಲೂಥರ್ ರವರು ಒಮ್ಮೆ ಹೀಗೆ ಹೇಳಿದ್ದಾರೆ "ನಾನು ನನ್ನ ಕೈಗಳಲ್ಲಿ ಎಲ್ಲವನ್ನೂ ಇಟ್ಟುಕೊಳ್ಳಲು ಪ್ರಯತ್ನಿಸಿದಾಗ ನಾನು ಎಲ್ಲವನ್ನೂ ಕಳೆದುಕೊಂಡೆ. ಆದರೆ ನಾನು ನನ್ನಲ್ಲಿರುವುದನ್ನು ದೇವರ ಕರಗಳಿಗೆ ಒಪ್ಪಿಸಿಕೊಟ್ಟಾಗ ಎಲ್ಲವನ್ನೂ ಹೊಂದಿಕೊಂಡೆ"
ಲೂಕ 6:38 ಓದುವಾಗ ನಾವು ಒಂದು ಪ್ರಲೋಬನೆಗೊಳಗಾಗಿ ನಾವು ಕೊಡುವುದರಿಂದ ಏನನ್ನೊ ಪಡೆದುಕೊಳ್ಳುತ್ತೇವೆ ಎಂಬುದರ ಬಗ್ಗೆ ಮಾತ್ರ ಗಮನಹರಿಸುವುದರಿಂದ ನಾವು ಮುಖ್ಯ ವಿಚಾರದಲ್ಲಿ ತಪ್ಪುತ್ತೇವೆ. ನಾನು ಕೊಡುತ್ತೇವೆ ಏಕೆಂದರೆ ದೇವರು ನಮ್ಮ ಉದಾರತೆಯನ್ನು ಮೆಚ್ಚುವವನಾಗಿದ್ದಾನೆ. "ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿ ಉಂಟು"(2ಕೊರಿಯಂತೆ 9:7)
3. ನಮ್ಮ ಕೊಡವಿಕೆಯು ಆಶೀರ್ವಾದದ ಬಾಗಿಲುಗಳನ್ನು ತೆರೆದು ಕೊಡುತ್ತದೆ.
"ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು; ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರೆಗೆ ಊಟಮಾಡಿದರು."(1 ಅರಸುಗಳು 17:15)
ಆ ವಿಧವೆಯು ಆಶೀರ್ವದಿಸಲ್ಪಟ್ಟವಳಾದಳು ಮತ್ತು ಆಕೆಗೆ ಮತ್ತು ಆಕೆಯ ಮನೆಯವರಿಗೆ ತುಂಬಾ ದಿನಗಳವರೆಗೂ ಊಟಕ್ಕೆ ಕೊರತೆಯಾಗಲಿಲ್ಲ. ಅವಳ ಉದಾರತೆಯು ಅವಳಿಗಾಗಿಯೂ ಅವಳ ಕುಟುಂಬಕ್ಕಾಗಿಯೂ ಆಶೀರ್ವಾದದ ಬಾಗಿಲನ್ನು ತೆರೆಸಿತು. ಅನೇಕರಿಗೆ ಇದರ ತಿಳುವಳಿಕೆಯ ಕೊರತೆ ಇದೆ ಆದುದರಿಂದಲೇ ಕೊರತೆಯ ಸಮಯದಲ್ಲಿ ಕೊಡಲು ಹೆಣಗಾಡುತ್ತಾರೆ.
"ಮಧ್ಯಾಹ್ನದ ಮೇಲೆ ಸುಮಾರು ಮೂರು ಗಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು - ಕೊರ್ನೇಲ್ಯನೇ ಎಂದು ಕರೆಯುವದನ್ನು ಅವನು ಪ್ರತ್ಯಕ್ಷವಾಗಿ ಕಂಡನು. ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ - ಏನು ಸ್ವಾಮೀ ಎಂದು ಕೇಳಲು ದೂತನು ಅವನಿಗೆ - ನಿನ್ನ ಪ್ರಾರ್ಥನೆಗಳೂ ನಿನ್ನ ದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು."(ಅಪೊಸ್ತಲರ ಕೃತ್ಯಗಳು 10:3-4)
ಕೊರ್ನೆಲ್ಯನು ಏನೋ ಬರಿ ಮಾತಿನಿಂದ ದೇವರನ್ನು ಆರಾಧಿಸುವ ವ್ಯಕ್ತಿಯಾಗಿರಲಿಲ್ಲ. ಅವನು ಆರಾಧನೆಯನ್ನು ಕ್ರಿಯೆಯಲ್ಲಿ ನೆರವೇರಿಸುವವನಾಗಿದ್ದನು. ದೇವರ ವಾಕ್ಯವು ಕೊರ್ನೆಲ್ಯನನ್ನು ದೇವರ ಕಾರ್ಯಕ್ಕಾಗಿಯೂ ದೇವ ಜನರಿಗಾಗಿಯೂ ನಿಯಮಿತವಾಗಿ ಕೊಡುವ ವ್ಯಕ್ತಿಯಾಗಿದ್ದನು ಎಂದು ಗುರುತಿಸುತ್ತದೆ.
ಕೊರ್ನೆಲ್ಯನ ಧರ್ಮಕಾರ್ಯಗಳು ಅವನಿಗೆ ಆಲೌಕಿಕವಾದ ದೇವದೂತ ದರ್ಶನದ ಬಾಗಿಲನ್ನು ತೆರೆದು ಕೊಟ್ಟಿತು. ದೇವರು ಸಹ ಆತನ ಬಲವಾದ ಅಪೋಸ್ತಲನಾದ ಪೇತ್ರನನ್ನು ಅವನಿಗೂ -ಅವನ ಕುಟುಂಬದವರಿಗೂ ರಕ್ಷಣಾ ಸುವಾರ್ತೆಯ ಸಂದೇಶವನ್ನು ಕೊಡಲು ಕಳುಹಿಸಿಕೊಟ್ಟನು.
ಹಾಗಾಗಿ ನೋಡಿರಿ, ಬೀಜ ಬಿತ್ತುವಂಥದ್ದು ದೇವರ ಅಳತೆಯ ಬೆಳೆಯನ್ನು ಪಡೆಯಲು ಬಾಗಿಲು ತೆರೆದು ಕೊಡುತ್ತದೆ. ನೀವು ಬಿತ್ತಿದ ಪ್ರತಿಯೊಂದು ಬೀಜವು ದೇವರ ಮುಂದೆ ಜ್ಞಾಪಕಾರ್ಥವಾಗಿ ಬಂದು ನಿಮ್ಮ ಅಗತ್ಯಕ್ಕೆ ತಕ್ಕಂತೆ ಆತನು ನಿಮ್ಮ ಬಿತ್ತನೆಗೆ ಪ್ರತಿಫಲವನ್ನಾಗಿ ಪೂರೈಸುತ್ತಾನೆ.
ಯೆಶಾಯ 45:2-3 ಹೇಳುವಂತೆ
"ನಾನು ನಿನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸಮಮಾಡುವೆನು, ತಾಮ್ರದ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು. ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು." ಎಂದು ದೇವರು ವಾಗ್ದಾನ ಮಾಡುತ್ತಾನೆ.
ಪ್ರಾರ್ಥನೆಗಳು
ತಂದೆಯೇ, ನಾನು ಕೊಟ್ಟಿರುವುದೆಲ್ಲವೂ ಜಡಿದು ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನನಗೆ ಮನುಷ್ಯರು ಕೊಡುವರು ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ.
Join our WhatsApp Channel
Most Read
● ಸಾಲದಿಂದ ಹೊರಬನ್ನಿ : ಕೀಲಿಕೈ #2● ಯುದ್ಧಕ್ಕಾಗಿ ತರಬೇತಿ.
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
ಅನಿಸಿಕೆಗಳು