ಅನುದಿನದ ಮನ್ನಾ
ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
Tuesday, 14th of January 2025
4
1
72
Categories :
ಪವಿತ್ರ ಆತ್ಮ (Holy spirit)
ಬಿರುದುಗಳು ಎಂಬುದು ವ್ಯಕ್ತಿಯ ಸ್ಥಾನವನ್ನು ಮತ್ತು ಕಾರ್ಯವನ್ನು ವಿವರಿಸುವ ವಿವರಣಾತ್ಮಕ ಪದಗುಚ್ಛವಾಗಿರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ದೇಶದ "ಅಧ್ಯಕ್ಷ" ಎಂಬ ಬಿರುದನ್ನು ಹೊಂದಿದ್ದರೆ, ಅದು ಸರ್ಕಾರದಲ್ಲಿ ಆ ವ್ಯಕ್ತಿಯ ಸ್ಥಾನವನ್ನು ಮತ್ತು ರಾಷ್ಟ್ರದ ನಾಯಕನಾಗಿ ಆ ವ್ಯಕ್ತಿ ಮಾಡುವ ಕಾರ್ಯವನ್ನು ವಿವರಿಸುತ್ತದೆ.
ಹಾಗೆಯೇ , ಸತ್ಯವೇದಾದ್ಯಂತ, ಪವಿತ್ರಾತ್ಮನ ವಿವಿಧ ಹೆಸರುಗಳನ್ನು ಅಥವಾ ಬಿರುದುಗಳನ್ನು ನಾವು ನೋಡಬಹುದು. ಈ ಹೆಸರುಗಳು ಅಥವಾ ಬಿರುದುಗಳು:
1. ಆತನು ನಿಜವಾಗಿಯೂ ಯಾರಾಗಿದ್ದಾನೆ
2. ಆತನ ವ್ಯಕ್ತಿತ್ವ ಎಂತದ್ದು ಎಂದು - ಆತನನ್ನು ತಿಳಿದುಕೊಳ್ಳಲು ನಮಗೆ ಸಹಾಯ ಮಾಡುತ್ತವೆ:
"ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ."
(ಕೀರ್ತನೆಗಳು 51:11)
ಪ್ರಾಯಶಃ ನೀವು ಆತ್ಮನ ಕುರಿತು ನೀವು ಕೇಳಿರುವ ಅತ್ಯಂತ ಸಾಮಾನ್ಯ ಹೆಸರು - ಪರಿಶುದ್ದಾತ್ಮನು . ಹೌದು ಆತನು ಪರಿಶುದ್ಧನು - ಅಪವಿತ್ರನಲ್ಲ ಅಥವಾ ಸಾಮಾನ್ಯನಲ್ಲ, ಆದರೆ ದೇವರ ಸಕಲ ಶುದ್ಧತೆಯಲ್ಲೂ ಮತ್ತು ಪವಿತ್ರತೆಯಲ್ಲೂ ಪಾಲುಗಾರನಾಗಿದ್ದಾನೆ .
ಆತನು ಆತ್ಮನಾಗಿದ್ದಾನೆ-ಮಾನವರಂತೆ ಶರೀರಿಯಲ್ಲ; ಆತನಿಗೆ ಭೌತಿಕ ದೇಹವಿಲ್ಲ , ಆದರೆ ಆತನು ದೇವರ ಅತ್ಯಂತ ಅಗೋಚರವಾದ ಸ್ವಭಾವ ಮತ್ತು ಸಾರದಲ್ಲಿ ಪಾಲುಗಾರನಾಗಿದ್ದಾನೆ.
ಪವಿತ್ರಾತ್ಮನು ಸಾಮಾನ್ಯ ಎನಿಸುವ ಮತ್ತು ಅತ್ಯಲ್ಪ-ಎಂದು ಎಣಿಸುವ ಸ್ಥಳವನ್ನೇ ಉಪಯೋಗಿಸಿಕೊಂಡು ಅದನ್ನು ಅತ್ಯಂತ ಪವಿತ್ರವಾದ ಅತ್ಯಂತ ಪರಿಶುದ್ಧವಾದ ಸ್ಥಳವನ್ನಾಗಿ ಪರಿವರ್ತಿಸಿ -ದೇವರ ಪ್ರಸನ್ನತೆಯಿಂದ ತುಂಬಿಸಿ ದೇವರ ಪ್ರಸನ್ನತೆಯನ್ನು ಸ್ಪಷ್ಟವಾಗಿ ಪ್ರಕಟ ಪಡಿಸುವ ಸ್ಥಳವನ್ನಾಗಿ ಮಾಡುತ್ತಾನೆ.
ತ್ರಯೇಕತ್ವದಲ್ಲಿ ಪವಿತ್ರಾತ್ಮನನ್ನು ಮೂರನೇ ವ್ಯಕ್ತಿಯಾಗಿ ಉಲ್ಲೇಖಿಸಲಾಗಿರುವ ಧರ್ಮಗ್ರಂಥದಾದ್ಯಂತ ಕೆಲವು ನಿರ್ದಿಷ್ಟ ಸ್ಥಳಗಳು:
"ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು." (ಮತ್ತಾಯ 1:18)
" ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನೇ ಕೊಡುವನಲ್ಲವೇ?” ಅಂದನು."(ಲೂಕ 11:13)
"ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.(ಎಫೆಸ್ಸೆ 4:30)
"ಅಶುದ್ಧತೆಯಿಂದ ಶುದ್ಧವಾದದ್ದನ್ನು ತರುವವನು ಯಾರು? ಯಾರೂ ತರಲಾರರು!" (ಯೋಬ 14:4)
ನಾವು ಪವಿತ್ರಾತ್ಮನ ಹೆಸರುಗಳನ್ನು ಧ್ಯಾನಿಸುವಾಗ, ನಮ್ಮೊಳಗೆ ವಾಸಿಸುವ ಮತ್ತು ನಮ್ಮಲ್ಲಿ ವಾಕ್ಯವು ಜೀವಿಸುವಂತೆ ನಮಗೆ ಅಧಿಕಾರ ನೀಡುವ ಒಬ್ಬನನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬಹುದು.
Bible Reading: Genesis 40-41
ಪ್ರಾರ್ಥನೆಗಳು
ಧನ್ಯ ಪವಿತ್ರಾತ್ಮನೇ , ನಿನ್ನ ಪವಿತ್ರ ಸ್ವಭಾವದ ಆಳವಾದ ತಿಳುವಳಿಕೆಯನ್ನು ನನಗೆ ಯೇಸುನಾಮದಲ್ಲಿ ಅನುಗ್ರಹಿಸಿ
(ಇದು ನಿಮ್ಮ ಹೃದಯದಿಂದ ಬರುವವರೆಗೆ ಈ ಪ್ರಾರ್ಥನೆಯನ್ನು ಪುನರಾವರ್ತಿಸಿ. ನೀವು ಅದಕ್ಕೆ ನಿಮ್ಮ ಸ್ವಂತ ಮಾತುಗಳನ್ನೂ ಕೂಡ ಸೇರಿಸಬಹುದು. ನಂತರ ಮಾತ್ರ ಮುಂದುವರಿಯಿರಿ)
Join our WhatsApp Channel
Most Read
● ಪುರಾತನ ಮಾರ್ಗಗಳನ್ನು ವಿಚಾರಿಸಿ● ಸಾಲದಿಂದ ಹೊರಬನ್ನಿ : ಕೀಲಿಕೈ #2
● ಅಗ್ನಿಯು ಸುರಿಯಲ್ಪಡಬೇಕು
● ಯಹೂದವು ಮುಂದಾಗಿ ಹೊರಡಲಿ
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
ಅನಿಸಿಕೆಗಳು