"ಅಬ್ರಹಾಮನು ಆ ಸ್ಥಳಕ್ಕೆ ಯೆಹೋವ ಯೀರೆ ಎಂದು ಹೆಸರಿಟ್ಟನು. ಯೆಹೋವನ ಬೆಟ್ಟದಲ್ಲಿ ಒದಗುವದು ಎಂಬದಾಗಿ ಇಂದಿನವರೆಗೂ ಹೇಳುವದುಂಟಲ್ಲಾ.(ಆದಿಕಾಂಡ 22:14)
ನಾನು ಕರ್ತನ ಕಡೆಗೆ ತಿರುಗಿದಾಗ, 'ಯೆಹೋವ ಯೀರೆ, ಒದಗಿಸುವಾತಾನೇ.." ಎಂಬ ಹಾಡನ್ನು ಹಾಡುತ್ತಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಈ ಎಲ್ಲಾ ವರ್ಷಗಳಲ್ಲಿ, ಕರ್ತನಾದ 'ಯೆಹೋವ ಯೀರೆ ' ಎಂಬ ಹೆಸರು ನನ್ನ ಜೀವನದಲ್ಲಿ ವಿಶೇಷ ಅರ್ಥವನ್ನು ಹೊಂದಿದೆ.
ಸತ್ಯವೇದದ ಮೊದಲ ಪುಸ್ತಕವಾದ ಆದಿಕಾಂಡದಲ್ಲಿ, ದೇವರ ಆಜ್ಞೆಗೆ ವಿಧೇಯನಾಗಿ ಅಬ್ರಹಾಮನು ತನ್ನ ಏಕೈಕ ಪುತ್ರನಾದ ಇಸಾಕನನ್ನು ಮೋರಿಯಾ ದೇಶದ ಪರ್ವತದ ಮೇಲೆ ಸಿದ್ಧಪಡಿಸಿದ ಬಲಿಪೀಠದ ಮೇಲೆ ಬಲಿಕೊಡಲು ಸಿದ್ಧನಾಗಿದ್ದನು.ಹಾಗೆ, " ಹೋಗುವಾಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ - ಅಪ್ಪಾ ಎಂದು ಕರೆಯಲು ಅಬ್ರಹಾಮನು - ಏನು ಮಗನೇ ಅಂದನು. ಇಸಾಕನು - ಇಗೋ, ಬೆಂಕಿಯೂ ಕಟ್ಟಿಗೆಯೂ ಉಂಟು; ಆದರೆ ಹೋಮಕ್ಕೆ ಬೇಕಾದ ಕುರಿ ಎಲ್ಲಿ ಎಂದು ಕೇಳಿದನು.ಅದಕ್ಕೆ ಅಬ್ರಹಾಮನು
ಮಗನೇ, ಹೋಮಕ್ಕೆ ಬೇಕಾದ ಕುರಿಯನ್ನು ದೇವರೇ ಒದಗಿಸುವನು ಅಂದನು." (ಆದಿಕಾಂಡ 22:8)
ಅಬ್ರಹಾಮನು ತನ್ನ ಮಗನನ್ನು ಬಲಿಕೊಡಲು ಹೊರಟಿದ್ದಾಗ, ಕರ್ತನು ಅವನನ್ನು ತಡೆದು, ಪೊದೆಯಲ್ಲಿ ಸಿಲುಕಿದ್ದ ಟಗರನ್ನು ತೋರಿಸಿ, ಅದನ್ನು ಬಲಿಕೊಡುವಂತೆ ಹೇಳಿದನು. ಇಸಾಕನಿಗೆ ಬದಲಿಯಾಗಿ ಬೇರೊಬ್ಬರು ಬೇಕಾಗುತ್ತಾರೆಂದು ತಿಳಿದಿದ್ದ ದೇವರು, ಆ ಟಗರನ್ನು ಮೊದಲೇ ಹತ್ತಿರದಲ್ಲಿ ಇಟ್ಟಿದ್ದನು.ಆದರಿಂದ ಅಬ್ರಹಾಮನು ಆ ಸ್ಥಳಕ್ಕೆ “ಕರ್ತನು ಒದಗಿಸುವನು” ಎಂದು ಹೆಸರಿಟ್ಟನು.
ಇದರ ಅರ್ಥ ಮುಂಚಿತವಾಗಿ ಅಥವಾ ಅಗತ್ಯಕ್ಕೆ ಮೊದಲೇ ಮುಂದಾಗಿ ಇಡುವುದು ಎಂದು. ನಾವು ಬಹಳ ಅನಿಶ್ಚಿತ ಜಗತ್ತಿನಲ್ಲಿ ವಾಸಿಸುತ್ತೇವೆ. ಎಲ್ಲವೂ ಒಂದು ರೀತಿಯ ಅನಿಶ್ಚಿತ ಜಗತ್ತಿನಲ್ಲಿ ವಾಸಿಸುತ್ತಿದೆ. ಎಲ್ಲವೂ ಒಂದು ರೀತಿಯ ಮರಳಿನ ಮೇಲೆ ನಿರ್ಮಿಸಲ್ಪಟ್ಟಿದೆ. ಈ ಜಗತ್ತಿನಲ್ಲಿ ನಮಗಿರುವ ಏಕೈಕ ಸ್ಥಿರವಾದ ಭದ್ರತೆ ಎಂದರೆ ಅದು ನಮ್ಮ ಕರ್ತನು ಮತ್ತು ಆತನ ವಾಕ್ಯ.
ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಉತ್ತರ ಬೇಕಾಗುವ ಮೊದಲೇ ಕರ್ತನು ಆ ಉತ್ತರವನ್ನು ಸಿದ್ಧಪಡಿಸುತ್ತಿರುವುದನ್ನು ನಾನು ನೋಡುತ್ತೇನೆ. ತಂದೆ ಮತ್ತು ತಾಯಿ ತಮ್ಮ ಮಕ್ಕಳಿಗಾಗಿ ಮುಂಚಿತವಾಗಿ ಸಿದ್ಧಪಡಿಸುವಂತೆ, ಕರ್ತನು ನಿಮಗಾಗಿ ಅದ್ಭುತವಾದದ್ದನ್ನು ಸಿದ್ಧಪಡಿಸುತ್ತಿದ್ದಾನೆ. ಈ ವಾಕ್ಯವನ್ನು ಸ್ವೀಕರಿಸಿ!
ಈಗ ನೀವು ಈ ವಾಕ್ಯವನ್ನು ನಿಮ್ಮ ಜೀವನ ಮತ್ತು ಕುಟುಂಬದಲ್ಲಿ ಹೇಗೆ ಪ್ರಕಟಪಡಿಸಬಹುದು ಎಂದು ನಾನು ನಿಮಗೆ ತೋರಿಸುತ್ತೇನೆ. ನನ್ನೊಂದಿಗೆ ಯೆಶಾಯ 58:11 ಕ್ಕೆ ಬನ್ನಿ.
" ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂವಿುಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ ನಿಮ್ಮ ಎಲುಬುಗಳನ್ನು ಸಸಾರಮಾಡುವನು; ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ."
ನಿಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕರ್ತನು ನಿಮ್ಮನ್ನು ಮಾರ್ಗದರ್ಶನ ಮಾಡಲಿ, ಆಗ ಆತನ ಅಲೌಕಿಕ ಒದಗಿಸುವಿಕೆಯು ನಿಮ್ಮ ಜೀವನದಲ್ಲಿ ಪ್ರತಿದಿನ ಕಂಡುಬರುತ್ತದೆ. ನೆನಪಿಡಿ, ಆತನು ಯೆಹೋವ ಯೀರೆ!
Bible Reading: Psalms 70-76
ಅರಿಕೆಗಳು
ಯೆಹೋವನು ನನ್ನ ಕುರುಬ, ನನ್ನ ಹೆಜ್ಜೆಗಳನ್ನು ನಿರ್ದೇಶಿಸುವವನು. ಯೇಸುನಾಮದಲ್ಲಿ ನನಗೆ ಎಂದಿಗೂ ಕೊರತೆಯಾಗದು.
Join our WhatsApp Channel

Most Read
● ದ್ವಾರ ಪಾಲಕರು / ಕೋವರ ಕಾಯುವವರು● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ನಿಮ್ಮ ಆತ್ಮಗಳ ಪುನಃಸ್ಥಾಪನೆ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ಹನ್ನೆರಡು ಮಂದಿಯಲ್ಲಿ ಒಬ್ಬರು.
● ಪ್ರತಿಫಲ ನೀಡುವವನು ದೇವರೇ
ಅನಿಸಿಕೆಗಳು