ಅನುದಿನದ ಮನ್ನಾ
ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
Tuesday, 12th of March 2024
2
1
479
Categories :
ದೇವರವಾಕ್ಯ ( Word of God )
ನಾನೊಮ್ಮೆ ಪ್ರಾರ್ಥನಾ ಮನವಿ ಕೇಳಲು ಕರೆಯನ್ನು ಸ್ವೀಕರಿಸುವಾಗ ಒಬ್ಬ ಮಹಿಳೆಯು ನನಗೆ ಕರೆ ಮಾಡಿ ರಾತ್ರಿಯ ವೇಳೆಯಲ್ಲಿ ದೆವ್ವವು ಹೇಗೆಲ್ಲಾ ಆಕೆಯನ್ನು ಹಿಂಸಿಸುತ್ತದೆ ಎಂಬುದನ್ನು ಕುರಿತು ಹೇಳಿದಳು. ನಾನು ಆಕೆಗೆ ವಿನಯವಾಗಿ ಮಲಗುವ ಮುಂಚೆ ದೇವರ ವಾಕ್ಯವನ್ನು ಓದಿ ಮಲಗುವಂತೆ ಸಲಹೆ ನೀಡಿದೆ.
ತಕ್ಷಣವೇ ಆಕೆ ತಾನು ಪ್ರತಿದಿನ ತಪ್ಪದೆ ಸತ್ಯವೇದದ ಪ್ರತಿಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡೇ ಮಲಗುವುದು ಎಂದು ಪ್ರತ್ಯುತ್ತರ ಕೊಟ್ಟಳು. ಎಷ್ಟೋ ಜನ ಕ್ರೈಸ್ತರೆನಿಸಿಕೊಂಡವರೇ ಸತ್ಯವೇದ ಓದುವುದನ್ನು ಕಡೆಗಣಿಸುತ್ತಾರೆ. ಇದನ್ನು ಕೇಳಲು ಕೆಲವರಿಗೆ ಹಾಸ್ಯಾಸ್ಪದ ಎನಿಸಬಹುದು.
ಅನೇಕರು ವೈವಿಧ್ಯಮಯವಾದ ವರ್ಷನ್ಗಳ ಬೈಬಲ್ ಗಳನ್ನು ತಮ್ಮ ಮನೆಗಳಲ್ಲಿಯೂ ತಮ್ಮ ಮೊಬೈಲ್ ಫೋನುಗಳಲ್ಲಿಯೂ ಇಟ್ಟುಕೊಂಡಿರುತ್ತಾರೆ ಆದರೆ ಅದನ್ನು ಓದಲು ಮಾತ್ರ ಸಮಯ ತೆಗೆದುಕೊಳ್ಳುವುದಿಲ್ಲ. ನಿಮ್ಮ ಮನೆಯಲ್ಲಿ ಬೈಬಲ್ ಇರುವುದನ್ನು ಅಥವಾ ನಿಮ್ಮ ಕೈಗಳಲ್ಲಿ ಇಟ್ಟುಕೊಂಡಿರುವುದನ್ನು ನೋಡಿ ಸೈತಾನನು ಹೆದರಿ ಓಡಿ ಹೋಗುವುದಿಲ್ಲ ಆದರೆ ನೀವು ಬೈಬಲ್ ಪುಟಗಳನ್ನು ತೆರೆದು ಓದುವಾಗ ಅದು ಏನನ್ನು ಹೇಳುತ್ತದೆ ಎನ್ನುವುದನ್ನು ನಂಬುವಾಗ ಸೈತಾನನು ಭಯಗ್ರಸ್ಥನಾಗುತ್ತಾನೆ.
"ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು. "(ಕೀರ್ತನೆಗಳು 107:19)
ಈ ಮೇಲಿನ ಬೈಬಲಿನ ವಾಕ್ಯ ಹೇಳುತ್ತದೆ "ಅವರು ಕಷ್ಟ ಕಾಲದಲ್ಲಿ ದೇವರಿಗೆ ಮೊರೆಯಿಟ್ಟರು ದೇವರು ಅವರನ್ನು ಕಷ್ಟದಿಂದ ಬಿಡಿಸಿದನು" ಎಂದು ಕರ್ತನು ತನ್ನ ಜನರನ್ನು ಹೇಗೆ ಬಿಡಿಸಿದನು? ಮುಂದಿನ ವಚನಗಳನ್ನು ನೋಡಿ....
"ಆತನು [ದೂತನನ್ನೋ ಎಂಬಂತೆ] ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಗುಣಪಡಿಸಿದನು; ಸಮಾಧಿಗೆ ಸೇರದಂತೆ ಮಾಡಿದನು."(ಕೀರ್ತನೆಗಳು 107:20)
ಆತನು ತನ್ನ ವಾಕ್ಯವನ್ನು ದೂತನನ್ನೊ ಎಂಬುವಂತೆ ಕಳುಹಿಸಿ ಅವರನ್ನು ಗುಣಪಡಿಸಿದನು ಎಂದು ಸತ್ಯವೇದ ಹೇಳುತ್ತದೆ. ಈಗ, ಕರ್ತನು ನಿಮ್ಮನ್ನು ಗುಣಪಡಿಸಲು ಬಯಸಿದರೆ,ಕರ್ತನು ಏನನ್ನು ಮಾಡುತ್ತಾನೆ? ಆತನು ತನ್ನ ವಾಕ್ಯವನ್ನು ಕಳುಹಿಸುತ್ತಾನೆ. ಕರ್ತನು ನಿಮ್ಮನ್ನು ಬಿಡುಗಡೆಗೊಳಿಸುವ ಮೊದಲು ಆತನ ವಾಕ್ಯವನ್ನು ಕಳುಹಿಸಿಕೊಡುತ್ತಾನೆ.
ಈ ಕಾರಣದಿಂದಲೇ ನೀವು ಪ್ರತಿದಿನವೂ ಬೈಬಲನ್ನು (ದೇವರ ವಾಕ್ಯವನ್ನು)ಓದುವಂತಹ ಹವ್ಯಾಸವನ್ನು ಇಟ್ಟುಕೊಳ್ಳಬೇಕು. ಆದ್ದರಿಂದಲೇ ನೀವು ದೈನಂದಿನ ಮನ್ನಾವನ್ನು ಓದಲು ಅಸಡ್ಡೆ ತೋರಬಾರದು. (ಈ ವಾಕ್ಯಗಳನ್ನು ಕಳುಹಿಸುವ ಮುನ್ನ ನಾನು ಬಹಳಷ್ಟು ಪ್ರಾರ್ಥಿಸಿಯೇ ಕಳುಹಿಸಿರುತ್ತೇನೆ). ದೇವರ ವಾಕ್ಯಕ್ಕೆ ನಿಮ್ಮನ್ನು ಸ್ವಸ್ಥ ಪಡಿಸುವ, ಬಿಡುಗಡೆ ಮಾಡುವ ಸಾಮರ್ಥ್ಯವಿದೆ.
ನಮ್ಮ ಸಭೆಯ ಸೇವಾಕಾರ್ಯದ ಸಮಯದಲ್ಲಿ ಮಕ್ಕಳಿಲ್ಲದ ಒಬ್ಬ ಸ್ತ್ರೀಗಾಗಿ ಪ್ರಾರ್ಥಿಸುತ್ತಿದ್ದೆ. ನಾನು ದೇವರ ವಾಗ್ದಾನಗಳನ್ನು ಹಿಡಿದು ಪ್ರಾರ್ಥಿಸುವಾಗ ಬೇರೊಬ್ಬ ಸ್ತ್ರೀಯು ಎಲ್ಲವನ್ನು ತನ್ನ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿಯುತ್ತಿದ್ದಳು. ಆಕೆಯೂ ಕೂಡ ಹತ್ತು ವರ್ಷಗಳಿಂದ ಮಕ್ಕಳಿಲ್ಲದವಳಾಗಿದ್ದಳು
ಈ ಸ್ತ್ರೀಯು ಪ್ರತಿದಿನ ಸೆರೆಹಿಡಿದಂತಹ ಆ ವಿಡಿಯೋವನ್ನು ನೋಡಿಕೊಂಡು ನಾನು ಉಪಯೋಗಿಸಿದ ಅದೇ ಪ್ರಾರ್ಥನಾ ಅಂಶಗಳನ್ನು ಹಿಡಿದು ಪ್ರಾರ್ಥಿಸುತ್ತಿದ್ದಳು. ಕೆಲವೇ ತಿಂಗಳುಗಳಲ್ಲಿ ಆಕೆಯು ಅದ್ಭುತವಾಗಿ ಗರ್ಭಿಣಿಯಾದಳು ನಮ್ಮ ಒಂದು W3 ಸಭೆಯಲ್ಲಿ ಆಕೆಯ ಸ್ನೇಹಿತೆಯೂ ಕೂಡ ಇದನ್ನು ದೃಢೀಕರಿಸಿದಳು. ನೋಡಿರಿ, ಅವಳ ಪರಿಸ್ಥಿತಿಯನ್ನು ದೇವರ ವಾಕ್ಯವು ಬದಲಾಯಿಸಿತು. ಹಾಗಾಗಿ ದೇವರ ವಾಕ್ಯದ ಬಲವನ್ನು ಎಂದಿಗೂ ಕಡೆಗಣಿಸಬೇಡಿರಿ
"ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು.
ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ.
ಅವುಗಳನ್ನು ಹೊಂದುವವರಿಗೆ ಅವು ಜೀವವು. ದೇಹಕ್ಕೆಲ್ಲಾ ಅವೇ ಆರೋಗ್ಯವು."(ಜ್ಞಾನೋಕ್ತಿಗಳು 4:20 -22)
ಪ್ರಾರ್ಥನೆಗಳು
ತಂದೆಯೇ, ಯಾವುದೇ ರೀತಿಯಲ್ಲಾದರೂ ನಿನ್ನ ವಾಕ್ಯವನ್ನು ಅಸಡ್ಡೆ ಮಾಡಿದ್ದರೆ ನನ್ನನ್ನು ಕ್ಷಮಿಸು. ಪ್ರತಿದಿನವೂ ನಿನ್ನ ಅತ್ಯಮೂಲ್ಯವಾದ ವಾಕ್ಯಗಳನ್ನು ಓದುವಂತೆಯೂ ಧ್ಯಾನಿಸುವಂತೆಯೂ ಕೃಪೆಯನ್ನು ನನಗೆ ಅನುಗ್ರಹಿಸು. ನಿನ್ನ ವಾಕ್ಯವೇ ನನ್ನ ಜೀವವೂ ನನ್ನ ಆರೋಗ್ಯವೂ ಆಗಿದೆ.
ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್.
ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್.
Join our WhatsApp Channel
Most Read
● ಇಂತಹ ಪರಿಶೋಧನೆಗಳು ಏಕೆ?● ಪುರುಷರು ಏಕೆ ಪತನಗೊಳ್ಳುವರು -4
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
● ಪ್ರೀತಿಯ ಹುಡುಕಾಟ
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ಬದಲಾಗಲು ಇನ್ನೂ ತಡವಾಗಿಲ್ಲ
● ಆತನ ಬಲದ ಉದ್ದೇಶ.
ಅನಿಸಿಕೆಗಳು