ಸುಲಭವಾಗಿ ಬೇಸರಗೊಳ್ಳುವಂತಹ, ವಿರೋಧ ಮಾಡುವಂತ ವ್ಯಕ್ತಿಗಳಲ್ಲಿ ನೀವೂ ಒಬ್ಬರಾ? ಹತ್ತು ಜನರು ನೀವು ಮಾಡುವ ಒಳ್ಳೆಯ ಕೆಲಸಗಳನ್ನು ಪ್ರಶಂಸೆ ಮಾಡುತ್ತಿದ್ದರೂ ಒಬ್ಬರು ನಿಮ್ಮ ಕುರಿತು ನಕರಾತ್ಮಕವಾಗಿಯೇ ಹೇಳಿದ ಕೂಡಲೇ ಆ ದಿನ ನಿಮಗೆ ಖಿನ್ನತೆಯ ದಿನವಾಗಿ ಬಿಡುತ್ತದೆ. ಈ ರೀತಿ ಜೀವನ ನಡೆಸುವಂತದ್ದು ನಿಮ್ಮ ಜೀವಿತವನ್ನು ಶೋಚನೀಯವಾಗಿ ಮಾಡಿಬಿಟ್ಟು ಸೈತಾನನ ಆಕ್ರಮಣದ ಆಯಾಮಕ್ಕೆ ನಿಮ್ಮನ್ನು ಕೊಂಡಯ್ಯುತ್ತದೆ. ನೀವು ನಿಮ್ಮ ಕುರಿತು ನಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿಗಳ ಕೈಗೊಂಬೆಗಳಲ್ಲ.
ಈ ರೀತಿ ಬದುಕುವಂಥದ್ದು ದೇವರು ನಿಮಗಾಗಿ ಇಟ್ಟಿರುವ ಸಾಮರ್ಥ್ಯವನ್ನು ಕದ್ದುಕೊಳ್ಳುತ್ತದೆ. ಇತರರು ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ? ಏನು ಹೇಳಿಬಿಡುತ್ತಾರೋ? ಎಂಬ ನಿಮ್ಮ ಈ ಭಯದ ಆಲೋಚನೆಗಳು ನಿಮ್ಮ ಮುಂದೆ ಎಷ್ಟೊಂದು ಅವಕಾಶಗಳು ಬಿದ್ದಿದ್ದರೂ ಒಂದನ್ನೂ ಉಪಯೋಗಿಸಿಕೊಳ್ಳದಂತೆ ಮಾಡಿಬಿಡುತ್ತದೆ. ಭಾವನಾತ್ಮಕವಾಗಿ ಬಲಹೀನರಾಗಿರುವಂಥದ್ದು ಒಂದು ವ್ಯರ್ಥವಾದ ಕಾಯಿಲೆಯೇ ಸರಿ.
ನೀವೀಗ ಅರ್ಥ ಮಾಡಿಕೊಳ್ಳಬೇಕಾದೇನೆಂದರೆ ಭಾವನಾತ್ಮಕವಾಗಿ ಬಲಶಾಲಿಗಳಾಗಿ ಇರುವಂತದ್ದು ಎಂದರೆ ಕಠಿಣವಾಗಿ ನಡೆದುಕೊಳ್ಳುವುದು ಎಂದರ್ಥವಲ್ಲ. ಕೆಲವೊಮ್ಮೆ ಕಠಿಣವಾಗಿ ನಡೆದುಕೊಳ್ಳುವ ವ್ಯಕ್ತಿಗಳೇ ಭಾವನಾತ್ಮಕವಾಗಿ ಅತ್ಯಂತ ದುರ್ಬಲರಾಗಿರುತ್ತಾರೆ. ಒಂದಲ್ಲಾ ಒಂದು ಸಮಯದಲ್ಲಿ ಇದು ಸಾಬೀತಾಗಿ ಬಿಡುತ್ತದೆ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.
ದಕ್ಷಿಣ ಭಾರತದಲ್ಲಿ ಒಬ್ಬ ಮಹಾನ್ ದೇವ ಮನುಷ್ಯರಿದ್ದರು. ಅವರು ಬಹಳವಾಗಿ ಕರ್ತನಿಂದ ಉಪಯೋಗಿಸಲ್ಪಡುತ್ತಿದ್ದ ವ್ಯಕ್ತಿಯಾಗಿದ್ದರು. ಒಂದು ದಿನ ಅವರು ಆರೋಗ್ಯ ತಪ್ಪಿ ಆಸ್ಪತ್ರೆಯ ಐಸಿಯುನಲ್ಲಿ ಮಲಗಿದ್ದರು. ಆ ನೋವಿನಲ್ಲಿ ಅವರು ಕರ್ತನಿಗೆ ಮೊರೆ ಇಡುತ್ತಾ "ಕರ್ತನೆ ನಾನೆಷ್ಟು ನಂಬಿಗಸ್ತನಾಗಿ ನಿನ್ನ ಸೇವೆ ಮಾಡಿದೆ. ಆದರೂ ನಾನೇಕೆ ಈ ಪರಿಸ್ಥಿತಿಯನ್ನು ಹಾದು ಹೋಗಬೇಕಾಯಿತು? ನನಗೆ ಸಾಕಾಯ್ತು. ಕರ್ತನೇ ದಯಮಾಡಿ ಸಹಾಯ ಮಾಡು" ಎಂದು ಪ್ರಾರ್ಥಿಸಿದರು.
ಕರ್ತನು ಅವರಿಗೆ ದರ್ಶನದಲ್ಲಿ ಕಾಣಿಸಿಕೊಂಡು "ನನ್ನ ಮಗನೇ, ನಾನು ನಿನಗೆ ಸಾವಿರಾರು ಜನರನ್ನು ನನ್ನ ಕಡೆಗೆ ನಿನ್ನ ಸೇವೆಯ ಮೂಲಕ ತಿರುಗಿಸುವಂತಹ ಆತ್ಮಿಕ ವರಗಳನ್ನು ಬಲವನ್ನು ಅನುಗ್ರಹಿಸಿದ್ದೇನೆ. ಸಾವಿರಾರು ಜನರು ನಿನ್ನನ್ನು ಪ್ರೀತಿಸಿ -ನಿನ್ನನ್ನು ಪ್ರಶಂಶಿಸುತ್ತಾರೆ. ಆದಾಗಿಯೂ ಎಲ್ಲೋ ಕೆಲವರಷ್ಟೇ ನಿನ್ನ ಕುರಿತು ನಿನ್ನ ಸೇವೆ ಕುರಿತು ಕೆಟ್ಟದಾಗಿ ಮಾತನಾಡುತ್ತಾರೆ. ಆದರೆ ನೀನು ನಿನ್ನನ್ನು ಪ್ರೀತಿಸಿದ ನಿನ್ನ ಸೇವೆಗೆ ಬೆಂಬಲಿಸಿದ ಈ ಸಾವಿರಾರು ಜನರನ್ನು ಮರೆತೇಬಿಟ್ಟೆ. ಅದರ ಬದಲಾಗಿ ನೀನು ನಿನ್ನ ಮನಸ್ಸನ್ನು ನಿನ್ನ ಭಾವನೆಗಳನ್ನು ಅಕ್ಷರಶಃ ನಿನ್ನ ಕೈ ಬೆರಳಿನ್ನಷ್ಟು ಜನರು ಕೆಟ್ಟದಾಗಿ ಮಾತನಾಡುವಂಥವರ ಕಡೆಗೇ ಕೇಂದ್ರೀಕರಿಸಿದೆ.
ಈ ಒಂದು ಸಂಗತಿಯು ನಿನ್ನ ಜೀವಿತದಲ್ಲಿ ಕಹಿತನದ ಬಾಗಿಲನ್ನು ಶತ್ರುವಿಗೆ ತೆರೆದುಕೊಟ್ಟು ನಿನ್ನ ಆರೋಗ್ಯದ ಮೇಲೆಯೂ ನಿನ್ನ ಭಾವನೆಗಳ ಮೇಲೆಯೂ ವಿನಾಶಕರವಾದ ಆಟವನ್ನು ಆಡಲು ಅವನಿಗೆ ಅನುವು ಮಾಡಿಕೊಟ್ಟಿತ್ತು." ಎಂದನು. ಈ ದೇವ ಮನುಷ್ಯರು ಇದನ್ನು ಕೇಳಿ ಅದಕ್ಕಾಗಿ ಕರ್ತನಲ್ಲಿ ಕ್ಷಮೆಯಾಚಿಸಿ ಮುಂದೆ ಭವಿಷ್ಯದ ವರ್ಷಗಳಲ್ಲಿ ಬಲವಾದ ಸೇವೆಯನ್ನು ಮಾಡಿದರು.
ಹಾಗಾಗಿ ನಿಮ್ಮ ಜೀವನದಲ್ಲಿ ನಕರಾತ್ಮಕವಾಗಿ ಟೀಕೆಗಳನ್ನು ಮಾಡುವಂತಹ ಜನರ ಮಾತುಗಳಿಗೆ ಲಕ್ಷ್ಯ ಕೊಡಬೇಡಿರಿ. ನಿಮ್ಮ ಜೀವನದ ಲಕ್ಷ್ಯವು ನಿಮ್ಮ ಜೀವಿತದಲ್ಲಿ ಜನರ, ದೇವರ ಹಾಗೂ ನಿಮ್ಮ ಜೀವಿತದ ಚಿತ್ರಣವನ್ನು ನೀವು ತಪ್ಪಾಗಿ ಬಣ್ಣಿಸುವಂತೆ ಅವಕಾಶ ಕೊಡಬೇಡಿರಿ.
ಸರಿಯಾದವುಗಳ ಮೇಲೆ ನಿಮ್ಮ ಲಕ್ಷ್ಯವಿಡಿರಿ. ಒಳ್ಳೆಯ ಸಂಗತಿಗಳ ಮೇಲೆ ನಿಮ್ಮ ಲಕ್ಷ್ಯವಿಡುವುದನ್ನು ಇಂದಿನಿಂದಲೇ ಆರಂಭಿಸಿ.
"ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ."(ಫಿಲಿಪ್ಪಿಯವರಿಗೆ 4:8)
Ignore the negativity and focus on what God has called you to do. Don’t get distracted by the noise of some jealous folk.
— Pastor Michael Fernandes (@PastorMichaelF) May 10, 2021
"ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ - ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ." (ಗಲಾತ್ಯದವರಿಗೆ 5:22-23)
ಯಾವಾಗ ನಮ್ಮಲ್ಲಿ ಒಂಬತ್ತು ಗುಣಗಳನ್ನು ಮೈಗೂಡಿಸಿಕೊಳ್ಳುತ್ತೇವೋ ಆಗ ಖಂಡಿತವಾಗಿಯೂ ಎಲ್ಲಾ ಸಂಗತಿಗಳನ್ನು ದೇವರು ಬಯಸುವ ರೀತಿಯಲ್ಲಿ ನಾವು ನೋಡಲು ಸಮರ್ಥರಾಗುತ್ತೇವೆ.
ಪ್ರಾರ್ಥನೆಗಳು
ತಂದೆಯೇ, ನಾನು ಸರಿಯಾದ ಸಂಗತಿಗಳ ಮೇಲೆಯೇ ಲಕ್ಷ್ಯವಿಡುವಂತೆ ವಿವೇಚನೆಯ ವರವನ್ನೂ- ಬಲವನ್ನು ಯೇಸು ನಾಮದಲ್ಲಿ ಅನುಗ್ರಹಿಸು ಎಂದು ಬೇಡುತ್ತೇನೆ. ಆಮೇನ್.
Join our WhatsApp Channel
Most Read
● ಬದಲಾಗಲು ಇನ್ನೂ ತಡವಾಗಿಲ್ಲ● ಸಾಲದಿಂದ ಹೊರಬನ್ನಿ : ಕೀಲಿಕೈ #2
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಎರಡು ಸಾರಿ ಸಾಯಬೇಡಿರಿ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು