ಅನುದಿನದ ಮನ್ನಾ
ನೀವಿನ್ನೂ ತಡಮಾಡುತ್ತಿರುವುದೇಕೆ?
Sunday, 14th of July 2024
1
0
210
Categories :
ಆತ್ಮತೃಪ್ತಿ (Complacency)
"ಇಸ್ರಾಯೇಲ್ಯರಲ್ಲಿ ಇನ್ನೂ ಏಳು ಕುಲಗಳಿಗೆ ಪಾಲುಸಿಕ್ಕಿರಲಿಲ್ಲ."(ಯೆಹೋಶುವ 18:2)
ಸತ್ಯವೇದ ವಿದ್ವಾಂಸರು ನಮಗೆ ಹೇಳುವ ಪ್ರಕಾರ ಆಗ ಇಸ್ರೇಲಿನ ಐದು ಕುಲಗಳು ತಮಗೆ ದೊರಕಿದ ಸ್ವಾಸ್ಥ್ಯದಲ್ಲಿ ನೆಲೆಸಿ ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿತ್ತು. ಆದರೆ ಇನ್ನುಳಿದ ಏಳು ಕುಲಗಳವರು ತಾವಿದ್ದ ಜಾಗದಲ್ಲೇ ಸಂಗತಿಗಳು ಹೇಗಿದೆಯೋ ಹಾಗೆ ತೃಪ್ತರಾಗಿದ್ದುಬಿಟ್ಟಿದ್ದರು. ಅವರ್ಯಾರೂ ಸಹ ವಾಗ್ದಾನ ಮಾಡಲ್ಪಟ್ಟ ಸ್ಥಳಗಳಿಗೆ ಅಂದರೆ ಅವರ ಸಹೋದರರಿಗೆ ಸಿಕ್ಕಂತ ಬಾದ್ಯತೆ ಸ್ಥಳಕ್ಕೇ ಕರೆದೋಯ್ದಂತೆ ಇವರನ್ನೂ ಕರೆತರುವಷ್ಟು ದೇವರು ನಂಬಿಗಸ್ತನಾಗಿದ್ದರೂ ತಮ್ಮ ಸ್ವಾಸ್ತ್ಯ ಗಳನ್ನು ಸ್ವಾಧೀನ ಮಾಡಿಕೊಳ್ಳುವಂತಹ ಗೋಜಿಗೆ ಅವರು ಹೋಗಿರಲಿಲ್ಲ.
ಇದನ್ನೆಲ್ಲ ನೋಡುವಾಗ ಅವರು ದೇವರು ತಮಗಾಗಿ ಕೊಟ್ಟಿದ್ದನ್ನು ಪಡೆದುಕೊಳ್ಳಲು ಯಾಕೆ ಮುನ್ನಡೆಯಲಿಲ್ಲ? ಎನಿಸುತ್ತದೆ. ವಾಸ್ತವವಾಗಿ ದೇವರು ಅವರ ಜೊತೆಗೇ ಇದ್ದರೆ ವಿನಃ ಅವರಿಗೆ ವಿರೋಧವಾಗೇನೂ ಇರಲಿಲ್ಲ.
ಹಾಗಾದರೆ ಸಮಸ್ಯೆ ಏನಾಗಿತ್ತು? ಅವರು ಸ್ವತಂತ್ರ್ಯಸಿಕೊಳ್ಳಬೇಕಾದ ಸ್ಥಳಗಳು ಅವರಿಗೆ ಹಿತಕರವಾಗಿದ್ದರೂ ಅದು ಅವರ ಹೊಕ್ಕುಬಳಕೆಗೆ ಸರಿಹೊಂದುವುದಿಲ್ಲ ಎಂಬ ಕಾರಣದಿಂದ ಅವರು ಹಿಂಜರಿದಿರಬಹುದಾ? ಅಥವಾ ತಾವೀಗ ಇರುವಂತಹ ಸ್ಥಳವೇ ಹಿತಕರವಾಗಿ ಆರಾಮದಾಯಕವಾಗಿದೆ ಎಂದು ತಮ್ಮನ್ನು ತಾವೇ ಸಮರ್ಥಿಸಿಕೊಂಡು ಅಲ್ಲೇ ಉಳಿದುಕೊಂಡಿರಬಹುದು. ಸ್ಪಷ್ಟವಾಗಿ ಹೇಳಬೇಕೆಂದರೆ ಅವರ ಈ ಸಮರ್ಥನೆಯು ಅವರನ್ನು ದೇವರ ಮಾತಿಗೆ ಸಂಪೂರ್ಣವಾಗಿ ಅವಿಧೇಯತೆ ತೋರುವ ಕೇಂದ್ರ ಬಿಂದುವಿಗೆ ತಂದು ನಿಲ್ಲಿಸಿತ್ತು. "ಆಗ ಯೆಹೋಶುವನು ಇಸ್ರಾಯೇಲ್ಯರಿಗೆ - ನಿಮ್ಮ ಪಿತೃಗಳ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವದರಲ್ಲಿ ಇನ್ನೆಷ್ಟು ತಡಮಾಡುತ್ತೀರಿ?" ಎಂದು ಯೆಹೋಶುವನು ಅವರ ಎದುರು ನಿಂತು ಈ ಮಾತನ್ನು ಹೇಳುವವರೆಗೂ ಪರಿಸ್ಥಿತಿ ಹಾಗೆಯೇ ಇತ್ತು.(ಯೆಹೋಶುವ 18:3)
ಇಂದಿಗೂ ಅನೇಕ ಜನ ಕ್ರೈಸ್ತರು ಇದೇ ರೀತಿಯ ಪರಿಸ್ಥಿತಿಯಲ್ಲಿದ್ದಾರೆ. ಅವರು ಪೇತ್ರನ ಹಾಗೆ ದೇವರ ಮಾತಿನ ಮೇಲೆ ನೀರಿನ ಮೇಲೆ ಕಾಲಿಟ್ಟು ನಡೆಯುವುದನ್ನು ಬಿಟ್ಟು, ಇನ್ನು ದೋಣಿಯಲ್ಲಿ ಕೂತು ನೋಡುತ್ತಿರುವುದೇ ಅವರಿಗೆ ಆರಾಮವಾಗಿರುವ ಕೆಲಸ ಎನಿಸಿಬಿಟ್ಟಿದೆ. ಇಂದು ಅನೇಕ ದೇವ ಜನರು ದೇವರು ಅವರಿಗಾಗಿ ಇಟ್ಟಿರುವ ವಾಗ್ದಾನಗಳನ್ನು ಸ್ವಂತ ಮಾಡಿಕೊಳ್ಳದ ಕಾರಣದಿಂದಾಗಿ ದೇವರು ಅವರಿಗಾಗಿ ಯೋಜಿಸಿರುವ ಜೀವಿತವನ್ನು ಜೀವಿಸಲಾರದವರಾಗಿದ್ದಾರೆ.
ಕ್ರೈಸ್ತರಾಗಿ ನಾವು ಆತ್ಮ ತೃಪ್ತಿಯು ನಮ್ಮೊಳಗೆ ಬೇರು ಬಿಡದಂತೆ ಗಂಭೀರವಾಗಿ ನಮ್ಮ ಜೀವಿತಗಳನ್ನು ಗಮನಿಸುತ್ತಿರಬೇಕು. ಈ ಆತ್ಮ ತೃಪ್ತಿಯ ಗುಣವು ನಮ್ಮ ಆತ್ಮಿಕ ಬಲವನ್ನೆಲ್ಲಾ ಬಗ್ಗು ಪಡೆದು ನಮಗಾಗಿ ದೇವರು ಕೊಟ್ಟಿರುವ ಕರೆಯನ್ನು - ದರ್ಶನವನ್ನು ಪೂರೈಸುವ ನಮ್ಮ ಮನೋ ದೃಷ್ಟಿಯನ್ನು ತಿರುಗಿಸಿಬಿಡುತ್ತದೆ. (ಜ್ಞಾನೋಕ್ತಿ 29:18ನ್ನು ಓದಿರಿ).
ಯೆಹೋಶುವನು ತನ್ನ ಜನರನ್ನು ಹುರಿದುಂಬಿಸುವ ತನ್ನ ಸೇವಾ ಕಾರ್ಯವನ್ನು ಪೂರೈಸಿ ಅವರನ್ನೆಲ್ಲಾ ದೇವರು ವಾಗ್ದಾನ ಮಾಡಿದ ಸ್ಥಳಕ್ಕೆ ಸೇರಿಸಲು ಅವರನ್ನು ಹುರಿದುಂಬಿಸಿದನು. ನಾವು ವಿಧೇಯ ಪೂರ್ವಕವಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಮಗೆಲ್ಲರಿಗೂ ಯೆಹೋಶುವನಂತಹ ಉರಿದುಂಬಿಸುವ ಜನರು ಇಂದು ಬೇಕಾಗಿದ್ದಾರೆ.
ಪ್ರಾರ್ಥನೆಗಳು
1. ತಂದೆಯೇ, ನೀನು ವಾಗ್ದಾನ ಕೊಟ್ಟು ಅದನ್ನು ನೆರವೇರಿಸುವ ದೇವರಾಗಿರುವುದಕ್ಕಾಗಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನಿನ್ನ ಒಂದು ಮಾತಾದರೂ ನಿಷ್ಬಲವಾಗುವುದೇ ಇಲ್ಲ. ನಾನು ನಿನ್ನ ವಾಗ್ದಾನದಲ್ಲಿ ನೆಲೆ ನಿಲ್ಲುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಗ ನಾನು ನನಗಾಗಿ ನೀನು ಯೋಜಿಸಿರುವ ಎಲ್ಲವನ್ನೂ ಮಾಡಲು ಶಕ್ತನಾಗುವೆನು.
2. ತಂದೆಯೇ, ನನ್ನ ಆತ್ಮಿಕ ಜೀವಿತಕ್ಕೆ ಪ್ರೋತ್ಸಾಹ ಕೊಡುವ ಜನರಿಂದ ನನ್ನ ಜೀವಿತವನ್ನು ಯೇಸು ನಾಮದಲ್ಲಿ ತುಂಬಿಸು ಆಮೆನ್
2. ತಂದೆಯೇ, ನನ್ನ ಆತ್ಮಿಕ ಜೀವಿತಕ್ಕೆ ಪ್ರೋತ್ಸಾಹ ಕೊಡುವ ಜನರಿಂದ ನನ್ನ ಜೀವಿತವನ್ನು ಯೇಸು ನಾಮದಲ್ಲಿ ತುಂಬಿಸು ಆಮೆನ್
Join our WhatsApp Channel
Most Read
● ಕರ್ತನ ಆನಂದ● ಹೆಚ್ಚಿನ ಹೊರೆ ಬೇಡ
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಕನಸು ಕಾಣುವ ಧೈರ್ಯ
● ಸಾಧನೆಯ ಪರೀಕ್ಷೆ.
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
ಅನಿಸಿಕೆಗಳು