ಅನುದಿನದ ಮನ್ನಾ
ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
Monday, 25th of December 2023
0
0
317
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಅಂಧಕಾರ ರಾಜ್ಯದ ಕಾರ್ಯಗಳನ್ನು ಪ್ರತಿರೋಧಿಸಿ ಅದನ್ನು ಹಿಂದೆ ಇದ್ದ ಹಾಗೆ ಸರಿಮಾಡುವುದು.
"ಕಿತ್ತುಹಾಕುವದು, ಕೆಡವುವದು, ನಾಶಪಡಿಸುವದು, ಹಾಳುಮಾಡುವದು, ಕಟ್ಟುವದು, ನೆಡುವದು, ಈ ಕಾರ್ಯಗಳನ್ನು ಮಾಡುವದಕ್ಕೋಸ್ಕರ ಜನಾಂಗಗಳ ಮೇಲೂ ರಾಜ್ಯಗಳ ಮೇಲೂ ನಿನ್ನನ್ನು ಈ ದಿನ ನೇವಿುಸಿದ್ದೇನೆ ಅಂದನು. "
(ಯೆರೆಮೀಯ 1:10).
ವಿಶ್ವಾಸಿಗಳಾಗಿ ಅಂಧಕಾರ ರಾಜ್ಯದ ಕ್ರಿಯೆಗಳನ್ನು ವಿರೋಧಿಸುವುದು ನಾಶಪಡಿಸುವಂತದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಯಾವುದನ್ನು ಪ್ರತಿರೋಧಿಸುವುದೆಲ್ಲವೋ ಅವೆಲ್ಲ ಹಾಗೆಯೇ ಉಳಿದುಕೊಳ್ಳುತ್ತವೆ. ಬಹುತೇಕ ವಿಶ್ವಾಸಿಗಳು ತಮ್ಮ ಜೀವಿತದಲ್ಲಿ ಸೈತಾನನ ಕಾರ್ಯಗಳನ್ನು ದೇವರು ಪ್ರತಿರೋಧಿಸಲಿ ಎಂದು ಕಾಯುತ್ತಾ ಕುಳಿತಿರುತ್ತಾರೆ.ಏಕೆಂದರೆ "ಸೈತಾನನ್ನು ಎದುರಿಸಿ" ಎಂದು ದೇವರು ಅವರಿಗೆ ಕೊಟ್ಟ ಜವಾಬ್ದಾರಿಯ ದೈವಿಕ ನಿಯಮದ ಕುರಿತು ಅವರು ಉದಾಸೀನಾರಾಗಿದ್ದಾರೆ.
ಈ ಭೂಮಿಯ ಮೇಲೆ ಅಂಧಕಾರ ರಾಜ್ಯದ ಬಲವು ಕಾರ್ಯ ಮಾಡುತ್ತಿದೆ ಎಂಬುದು ಸತ್ಯವಾದ ವಿಚಾರವಾಗಿದೆ. ನಾವು ಪ್ರತಿದಿನವೂ ಅವುಗಳನ್ನು ನಮ್ಮ ಸಮುದಾಯಗಳಲ್ಲಿ ಸುದ್ದಿಗಳಲ್ಲಿ ದೇಶದಲ್ಲಿ ನೋಡುತ್ತಲೇ ಇದ್ದೇವೆ. ಅನೇಕರು ಇವುಗಳನ್ನು ಕೇವಲ ಪದಗಳಲ್ಲಿ ವಿವರಿಸಲು ಪ್ರಯತ್ನಿಸುತ್ತಾರೆ. ಆದರೆ ಆತ್ಮಿಕ ವ್ಯಕ್ತಿ ಮಾತ್ರವೇ ಇವುಗಳು ಆತ್ಮಿಕ ಆಯಾಮದಿಂದ ಹೊರಟು ಬರುತ್ತವೆ ಎಂಬುದನ್ನು ತಿಳಿದವನಾಗಿದ್ದಾನೆ.
"ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವದಷ್ಟೆ."(ಅಪೊಸ್ತಲರ ಕೃತ್ಯಗಳು 10:38).
ಶತ್ರುವಿನ ಆಯುಧಗಳಾವುವು.?
ನಾನಿಲ್ಲಿ ನಿಮಗೆ ಶತ್ರುವಿನ ಎಲ್ಲಾ ಆಯುಧಗಳ ಪಟ್ಟಿಯನ್ನು ಕೊಡಲು ಸಾಧ್ಯವಿಲ್ಲ. ಆದರೆ ಅವನ ದುಷ್ಟ ಕಾರ್ಯದ ಕಾರ್ಯಾಚರಣೆ ಬಗ್ಗೆ ನಿಮ್ಮ ಮನೋನೇತ್ರಗಳು ತೆರೆಯಲ್ಪಡುವಂತೆ ಅವನ ಗುರಿಯೇನು ಎಂಬುದನ್ನು ನಿಮಗೆ ತಿಳಿಸಬಲ್ಲೆ. ಈ ಕೆಲವು ಸತ್ಯವೇದ ವಾಕ್ಯಧಾರಿತವಾದ ಪಟ್ಟಿಗಳು ನಿಮಗೆ ಆತ್ಮಿಕ ತಿಳುವಳಿಕೆಯನ್ನು ಕೊಡುತ್ತದೆ.
1. ರೋಗಗಳು ಮತ್ತು ವ್ಯಾಧಿಗಳು.
ಒಂದು ಸಬ್ಬತ್ತಿನ ದಿನದಲ್ಲಿ ಯೇಸು ಸಭೆಯಲ್ಲಿ ಬೋಧಿಸುತ್ತಿರುವಾಗ ಆತನು ಸೈತಾನನಿಂದ ಕಟ್ಟಿ ಹಾಕಲ್ಪಟ್ಟ ಒಬ್ಬ ಹೆಂಗಸನ್ನು ಕಂಡನು. ಆಕೆಯು 18 ವರ್ಷಗಳಿಂದ ಸೈತಾನನಿಂದ ಕಟ್ಟಲ್ಪಟ್ಟವಳಾಗಿ ಗೂನು ಬೆನ್ನಿನಿಂದ ತನ್ನ ತಲೆಯನ್ನು ಎತ್ತಲಾಗದೆ ಬಗ್ಗಿಕೊಂಡೆ ಇದ್ದಳು. ನಮ್ಮ ಕರ್ತನಾದ ಯೇಸು ಅವಳನ್ನು ಕಂಡಾಗ ಆತನು "ಸ್ತ್ರೀಯೇ ನಿನ್ನ ವ್ಯಾಧಿಯು ಗುಣವಾಯಿತು" ಎಂದು ಹೇಳಿ ಅವಳನ್ನು ಮುಟ್ಟಿದನು. ಕೂಡಲೇ ಅವಳ ಗೂನು ಬೆನ್ನು ಹೋಗಿ ಅವಳು ನೆಟ್ಟಗೆ ನಿಲ್ಲಲು ಸಾಧ್ಯವಾಯಿತು. (ಲೂಕ 13:10-13,6-17).
2. ಆರೋಪಣೆಗಳು.
ಸೈತಾನನೇ ಜನರನ್ನು ಪಾಪಕ್ಕೆ ನೂಕಿ ಅವನೇ ದೇವರ ಮುಂದೆ ಜನರ ಮೇಲೆ ಆಪಾದನೆ ಮಾಡುತ್ತಿರುತ್ತಾನೆ.
"ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವದನ್ನು ಯೆಹೋವನು ನನಗೆ ತೋರಿಸಿದನು; ಸೈತಾನನು ಯೆಹೋಶುವನಿಗೆ ಪ್ರತಿಕಕ್ಷಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು. [2] ಆಗ ಯೆಹೋವನ ದೂತನು ಸೈತಾನನಿಗೆ - ಸೈತಾನನೇ, ಯೆಹೋವನು ನಿನ್ನನ್ನು ಖಂಡಿಸಲಿ, ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ ಎಂದು ಹೇಳಿದನು."(ಜೆಕರ್ಯ 3:1-2).
".. ನಮ್ಮ ದೇವರಿಗೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ."
(ಪ್ರಕಟನೆ 12:10).
ಈ ಎಲ್ಲಾ ಆಪಾದನೆಗಳ ಮಧ್ಯೆಯಲ್ಲಿಯೂ ನಾವು ದೇವರ ಸತ್ಯ ವಾಕ್ಯದ ಮೂಲಕ ನಿರೀಕ್ಷೆಯನ್ನು ಬಲವನ್ನು ಹೊಂದಬಹುದು. ಕರ್ತನಾದ ಯೇಸುವೇ ಸೈತಾನನಿಂದ ಆರೋಪಿಸಲ್ಪಟ್ಟನು. ಆದರೆ ಕರ್ತನು ದೇವರ ವಾಕ್ಯದ ಮೂಲಕ ತಾನು ದೇವರ ಮಗನೇ ಎಂದು ತನ್ನ ನಿಲುವನ್ನು ತಾಳಿದನು.
3. ವಂಚನೆ, ಭಯ , ಸಂದೇಹ ಸುಳ್ಳು.
ದುರಾತ್ಮನ ದಾಳಿಯು ಕೇವಲ ವ್ಯಾದಿಗಳು ರೋಗಗಳಿಗೆ ಮಾತ್ರ ಸೀಮಿತವಾಗಿಲ್ಲ. ನಾವು ಸತ್ಯದ ಬಗ್ಗೆ ಉದಾಸೀನರಾಗಿದ್ದರೆ ಸೈತಾನನು ಅವನ ಸುಳ್ಳುಗಳನ್ನು ನಮಗೆ ಮಾರಾಟ ಮಾಡಲು ಆರಂಭಿಸುತ್ತಾನೆ. ವಂಚನೆ ಮತ್ತು ಸುಳ್ಳು ಇವು ರೋಗಗಳು ವ್ಯಾಧಿಗಳು ಮರಣ ಬಡತನ ಮತ್ತು ಎಲ್ಲಾ ರೀತಿಯ ಸೈತಾನನ ದಾಳಿಗೆ ಬಾಗಿಲನ್ನು ತೆರೆದು ಕೊಡುತ್ತದೆ.
"ಆಗ ಆ ಶೋಧಕನು ಆತನ ಬಳಿಗೆ ಬಂದು - ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಎಂದು ಹೇಳಲು ಆತನು.. "(ಮತ್ತಾಯ 4:3)
ಸೈತಾನನು ಎಲ್ಲಾ ಮೋಸಕ್ಕೂ ಸುಳ್ಳಿಗೂ ಒಡೆಯನಾಗಿದ್ದು ಸತ್ಯವನ್ನು ತಿರುಚುವ ಮತ್ತು ನಮ್ಮ ಮನಸ್ಸಿನಲ್ಲಿ ಸಂದೇಹವನ್ನು ಬಿತ್ತುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾನೆ. ನಾವು ಅನುದಿನವು ನಮ್ಮ ನಂಬಿಕೆಗೆ ಆಧಾರವಾದ ಸತ್ಯ ವಾಕ್ಯಗಳನ್ನು ಓದುವ ಮತ್ತು ಧ್ಯಾನಿಸುವ ಮೂಲಕ ಅವುಗಳಿಗೆ ಪ್ರತಿರೋಧ ಒಡ್ಡಬಹುದು.
4. ಕೆಡುಕನ ಬಾಣಗಳು.
ಕೆಡುಕನ ಬಾಣಗಳು ಜನರ ಮೇಲೆ ಅವರನ್ನು ಕೊಲ್ಲಲು ಇಲ್ಲವೇ ಅವರನ್ನು ನಾಶನದ ಹಾದಿಗೆ ತರಲು ಹೂಡುವ ಆತ್ಮಿಕ ಬಾಣಗಳಾಗಿವೆ.
"ನೀವು - ದುಷ್ಟರು ಕತ್ತಲಲ್ಲಿ ಯಥಾರ್ಥ ಹೃದಯವುಳ್ಳವರನ್ನು ಕೊಲ್ಲಬೇಕೆಂದು ಬಿಲ್ಲುಬೊಗ್ಗಿಸಿ ಹೆದೆಗೆ ಬಾಣವನ್ನು ಹೂಡಿದ್ದಾರೆ ನೋಡಿರಿ;"
(ಕೀರ್ತನೆಗಳು 11:2).
"ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ; ವಿಷವಚನವೆಂಬ ಬಾಣವನ್ನು ಹೂಡಿದ್ದಾರೆ."(ಕೀರ್ತನೆಗಳು 64:3).
ಕೆಡುಕನ ಅಗ್ನಿಬಾಣಗಳು ಅನೇಕ ರೂಪಗಳನ್ನು ತಾಳಬಹುದು. ಉದಾಹರಣೆಗೆ ವಿಷವಚನಗಳು. ಹಾಗಾಗಿ ಈ ಕೆಡುಕನ ಬಾಣಗಳನ್ನು ಎದುರಿಸಲು ಇರುವ ಏಕೈಕ ಮಾರ್ಗ ಎಫಸ್ಸೆ 6:10-17 ವರೆಗೆ ವಿವರಿಸಿರುವ ದೇವರು ಅನುಗ್ರಹಿಸಿರುವ ಸರ್ವಾಯುಧಗಳನ್ನು ಧರಿಸಿಕೊಳ್ಳುವಂತದ್ದು.
5. ಆತ್ಮೀಕ ಕುರುಡುತನ.
ನಿಮ್ಮ ಆತ್ಮಿಕ ಮನೋ ನೇತ್ರಗಳು ತೆರೆದಾಗಲೇ ನೀವು ಸೈತಾನನ ಬಲದಿಂದ ಬಿಡಿಸಿ ಕೊಂಡು ದೇವರಿಗೆ ಒಳಗಾಗುವುದು ಸಾಧ್ಯವಾಗುತ್ತದೆ.
"ಅವರು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು ನನ್ನಲ್ಲಿ ನಂಬಿಕೆಯಿಡುವದರಿಂದ ಪಾಪಪರಿಹಾರವನ್ನೂ ಪವಿತ್ರರಾದವರಲ್ಲಿ ಹಕ್ಕನ್ನೂ
ಹೊಂದುವಂತೆ ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಅಂದನು."(ಅಪೊಸ್ತಲರ ಕೃತ್ಯಗಳು 26:18)
"ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು."(2 ಕೊರಿಂಥದವರಿಗೆ 4:4).
6. ಮರಣ ಹತಾಶೆ ಮತ್ತು ಬಂಜೆತನ.
ಮರಣದ ದುರಾತ್ಮವು ಅನೇಕ ವಿಧಗಳಲ್ಲಿ ಕಾರ್ಯ ಮಾಡುತ್ತದೆ. ಕೆಲವೊಮ್ಮೆ ಜನರು ಕುಸಿದು ಬಿದ್ದು ಸಾಯುತ್ತಾರೆ ಮತ್ತು ಇನ್ನು ಕೆಲವೊಮ್ಮೆ ಆತ್ಮಹತ್ಯೆ ಅಪಘಾತ ಪ್ರಕೃತಿ ವಿಕೋಪ ಯುದ್ಧ ಮುಂತಾದವುಗಳ ಮೂಲದಿಂದ ಜನರು ಸಾಯುವಂತೆ ಕಾರ್ಯ ಮಾಡುತ್ತದೆ.
"ಕಳ್ಳನು ಕದ್ದುಕೊಳ್ಳುವದಕ್ಕೂ ಕೊಯ್ಯುವದಕ್ಕೂ ಹಾಳುಮಾಡುವದಕ್ಕೂ ಬರುತ್ತಾನೆ ಹೊರತು ಮತ್ತಾವದಕ್ಕೂ ಬರುವದಿಲ್ಲ..."(ಯೋಹಾನ 10:10).
7. ವೈಫಲ್ಯತೆಗಳು ಮತ್ತು ಬಡತನ.
ಬಡತನ ಎನ್ನುವಂಥದ್ದು ದುಷ್ಟನು ಜನರ ಮೇಲೆ ಆಳ್ವಿಕೆ ಮಾಡಲು ಬಳಸುವ ಮುಖ್ಯ ತಂತ್ರವಾಗಿದೆ. ಮನುಷ್ಯರು ತಮ್ಮ ಗುರಿಯನ್ನು ತಲುಪದಂತೆ ಅವರನ್ನು ಸೀಮಿತಗೊಳಿಸಲು ಈ ಬಡತನವೆಂಬ ಅಸ್ತ್ರವನ್ನು ಹೂಡುತ್ತಾನೆ. ನಿಮ್ಮ ಬಳಿ ಹಣವಿದ್ದರೆ ನೀವು ದೇವರ ರಾಜ್ಯಕ್ಕಾಗಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿ ಬಿಡುವಿರಿ. ಆದರೆ ಅದೇ ಹಣಕಾಸಿನ ಕೊರತೆಯಾದರೆ ಅಂತ ಬಡತನವು ಇಂದು ಅನೇಕರನ್ನು ಸೂಳೆಗಾರಿಕೆಗೂ ದರೋಡೆಗೂ ಹತಾಶೆಗೂ ದೂಡುತ್ತಿದೆ. ನಿಮ್ಮೆಲ್ಲಾ ಕೊರತೆಗಳು ನೀಗಿಸಲ್ಪಡಬೇಕು ಎಂಬುದೇ ದೇವರ ಚಿತ್ತವಾಗಿದೆ.
"ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು."(ಫಿಲಿಪ್ಪಿಯವರಿಗೆ 4:19 ).
8. ಪಾಪ.
ದೇವರ ಆಜ್ಞೆಯ ಅತಿಕ್ರಮವೇ ಪಾಪವಾಗಿದೆ. ಸೈತಾನನು ನಿಮ್ಮನ್ನು ದೇವರ ಆಜ್ಞೆಗಳಿಗೆ ಅವಿಧೇಯ ರಾಗುವಂತೆ ಮಾಡಿಬಿಟ್ಟರೆ ಯಾವುದೇ ಅಡೆತಡೆ ಇಲ್ಲದೆ ಅವನ ಕಾರ್ಯಗಳನ್ನು ನಿಮ್ಮ ಜೀವಿತದಲ್ಲಿ ಮಾಡಬಲ್ಲನು. ದೇವರ ಆಜ್ಞೆಗಳಿಗೆ ಅವಿಧೇಯರಾಗುವಂತದ್ದೇ ಸೈತಾನನಿಗೆ ನಿಮ್ಮ ಜೀವಿತದಲ್ಲಿ ಪ್ರವೇಶದ ಬಾಗಿಲನ್ನು ತೆರೆದು ಕೊಡುತ್ತದೆ.
"ಪಾಪಮಾಡುವ ಪ್ರತಿಯೊಬ್ಬನು ಅಧರ್ಮವನ್ನು ಮಾಡುವವನಾಗಿದ್ದಾನೆ; ಪಾಪವು ಅಧರ್ಮವೇ."(1 ಯೋಹಾನನು 3:4)
ಅಂಧಕಾರ ರಾಜ್ಯದ ಕಾರ್ಯಗಳನ್ನ ನಾವು ನಾಶಪಡಿಸುವುದು ಹೇಗೆ?
1. ನಂಬಿಕೆಯಲ್ಲಿ ಬಲವಾಗಿ ನಿಲ್ಲುವ ಮೂಲಕ.
ನೀವು ನಂಬಿಕೆಯಲ್ಲಿ ಕಾರ್ಯ ಮಾಡುವಾಗ ನಿಮಗೆ ಯಾವುದು ಅಸಾಧ್ಯವಲ್ಲ. ನಂಬಿಕೆಯೇ ಕೆಡುಕನ ಎಲ್ಲಾ ಅಗ್ನಿಭಾಣಗಳನ್ನು ನಂದಿಸುವಂಥದ್ದು. ಸೈತಾನನು ಏನೇ ಹಾಳು ಮಾಡಿದರೂ ಚಿಂತೆ ಇಲ್ಲ ನೀವು ನಂಬಿಕೆಯಿಂದ ಅದನ್ನು ಪುನಸ್ಥಾಪಿಸಲು ಸಾಧ್ಯ. ಲಾಜರನು ರೋಗದಿಂದ(ದುರಾತ್ಮನ ಕೈ ಕೆಲಸದಿಂದ)ಸತ್ತನು. ಆದರೆ ಕ್ರಿಸ್ತನು ಅವನನ್ನು ಎಬ್ಬಿಸಿ ಅದನ್ನು ಹೇಗೆ ಪುನ ಸ್ಥಾಪಿಸಬಹುದು ಎಂದು ಪ್ರದರ್ಶಿಸಿದನು. ಸಾಮಾನ್ಯ ಮನುಷ್ಯರಿಗೆ ಅಸಾಧ್ಯವೆಂದು ಕೆಲವು ಕಾಣಬಹುದು. ಆದರೆ ನಂಬಿಕೆಯುಳ್ಳ ಮನುಷ್ಯನಿಗೆ ಎಲ್ಲವೂ ಸಾಧ್ಯವೇ.
(ಮಾರ್ಕ 9:23).
2. ಸತ್ಯತೆಯಲ್ಲಿ ನಡೆಯಿರಿ.
ಎಲ್ಲಾ ರೀತಿಯ ಆತ್ಮಿಕ ಕುರುಡುತನ ವ್ಯಾದಿ ರೋಗ ಕುಯುಕ್ತಿಗೊಳಗಾಗುವುದು ಇನ್ನಿತರ ಯಾವುದೇ ರೀತಿಯ ದುಷ್ಟನ ಕಾರ್ಯಗಳನ್ನು ನಾಶಪಡಿಸುವುದಕ್ಕಾಗಿ ನಾವು ಸತ್ಯತೆಯಲ್ಲಿ ನಡೆಯುವುದು ಅವಶ್ಯವಾಗಿದೆ. ಸತ್ಯತೆಯು ಬಲವುಳ್ಳ ಅಸ್ತ್ರವಾಗಿದ್ದು ಯಾವುದು ಸಹ ಸತ್ಯದ ಮುಂದೆ ನಿಲ್ಲಲಾರದು. ನೀವು ಸತ್ಯಕ್ಕಾಗಿ ಹಸಿದು ಬಾಯಾರಿದವರಾಗಿರಬೇಕು. ಇದು ನಿಮ್ಮೊಳಗಿಂದಲೇ ಪ್ರವರ್ತಿಸ ಬೇಕಾದದ್ದು. ನೀವು ಎಷ್ಟು ಸತ್ಯಸಂದತೆಯಿಂದ ನಡೆಯುವಿರೋ ಅದೇ ನೀವು ಆನಂದಿಸಲಿರುವ ಜಯವನ್ನು ನಿರ್ಧರಿಸುತ್ತದೆ. (ಯೆರೆಮಿಯ 8:32-36)
3. ಪ್ರೀತಿಯಲ್ಲಿ ನೆಲೆಗೊಳ್ಳಿರಿ.
ದೇವರು ಪ್ರೀತಿ ಸ್ವರೂಪನು ನಾವು ಪ್ರೀತಿಯಲ್ಲಿ ನಡೆಯುವಾಗ ನಮ್ಮ ಯಾವುದೇ ಪರಿಸ್ಥಿತಿಗಳ ಮೇಲೆ ದೇವರ ಬಲವು ಇಳಿಯುವಂತೆ ಅದು ಮಾಡುತ್ತದೆ. ನಾವು ಎಷ್ಟು ಹೆಚ್ಚು ಹೆಚ್ಚಾಗಿ ಪ್ರೀತಿಯಲ್ಲಿ ನಡೆದುಕೊಳ್ಳುತ್ತೇವೆಯೋ ಅಷ್ಟೇ ಪರಿಣಾಮಕಾರಿಯಾಗಿ ದೇವರ ಬಲವು ನಮ್ಮ ಪರಿಸ್ಥಿತಿಗಳ ಮೇಲೆ ಇಳಿದು ಬರುತ್ತದೆ. ಕೆಟ್ಟದ್ದನ್ನು ಮಾಡಿ ಕೆಟ್ಟದರ ಮೇಲೆ ಜಯ ಹೊಂದುವುದು ನಿಮಗೆ ಸಾಧ್ಯವಿಲ್ಲ. ಕೆಟ್ಟದ್ದನ್ನು ಒಳ್ಳೆಯದರಿಂದ ಸೋಲಿಸಬೇಕು. ಪ್ರೀತಿಯ ಪಕ್ಷದಲ್ಲಿ ಬಲವಿದೆ. ಪ್ರೀತಿಯು ನಿರ್ಬಲವಾದುದಲ್ಲ. ಆದರೂ ಇಂದು ಅನೇಕರು ಪ್ರೀತಿಯ ಪಕ್ಷಕ್ಕೆ ಸೇರಬೇಕಾದ ಅವಶ್ಯಕತೆ ಇದೆ.
"ಕೆಟ್ಟತನಕ್ಕೆ ಸೋತು ಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು."(ರೋಮಾಪುರದವರಿಗೆ 12:21)
"ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು"(1 ಯೋಹಾನನು 4:8).
4. ಅಭಿಷೇಕವನ್ನು ಹೊಂದಿಕೊಳ್ಳಿರಿ.
ಅಭಿಷೇಕಕ್ಕೆ ಯಾವುದನ್ನಾದರೂ ನಾಶಪಡಿಸುವ ಶಕ್ತಿ ಇದೆ (ಯೆಶಾಯ 10:27) ಅಭಿಷೇಕವು ಆತ್ಮವೂ ಮತ್ತು ದೇವರ ವಾಕ್ಯವೂ ಆಗಿದೆ. ವಿಶ್ವಾಸಿಗಳಾಗಿರುವುದರಿಂದ ನಿಮ್ಮಲ್ಲಿ ಆಗಲೇ ಅಭಿಷೇಕವಿದೆ ನೀವು ಕೇವಲ ಅದನ್ನು ಸರಿಯಾಗಿ ಬಾಯಿಂದ ಅರಿಕೆ ಮಾಡಿ ಘೋಷಿಸಬೇಕಷ್ಟೆ ಮತ್ತು ಆ ಅಭಿಷೇಕಕ್ಕಾಗಿ ಪ್ರಾರ್ಥಿಸಬೇಕು. (ಯೇಶಾಯ 10:27)
5. ಕ್ರಿಸ್ತನಿಂದ ಹೊಂದಿದ ಅಧಿಕಾರವನ್ನು ಅಭ್ಯಾಸಿಸಿ.
ನಮಗೆ ದೊರೆತಿರುವ ಅಧಿಕಾರವನ್ನು ಬಳಸಿಕೊಳ್ಳುವಂತದ್ದು ವೈರಿಯಾದ ಸೈತಾನನೊಂದಿಗೆ ವ್ಯವಹರಿಸುವ ನ್ಯಾಯ ಬದ್ಧ ಮಾರ್ಗವಾಗಿದೆ. ಸೈತಾನನು ಹಾಳು ಮಾಡಿದ್ದೆಲ್ಲವನ್ನು ತಿರುಗಿ ಮೊದಲಿನಂತೆ ಸರಿ ಮಾಡುವ ಅಧಿಕಾರ ಕ್ರಿಸ್ತನಲ್ಲಿ ನಮಗಿದೆ. ನಾವು ಕಟ್ಟುವುದಕ್ಕಾಗಲಿ ಬಿಡಿಸುವುದಕ್ಕಾಗಲಿ ಈ ಅಧಿಕಾರವನ್ನು ಭೂಮಿಯ ಮೇಲೆ ಬಳಸಿಕೊಳ್ಳದಿದ್ದರೆ ಪರಲೋಕದ ಆಯಾಮದಲ್ಲಿ ಏನೂ ನಡೆಯುವುದಿಲ್ಲ. (ಮತ್ತಾಯ 15:13).
ಯೇಸು ಕ್ರಿಸ್ತನ ಬರೋಣದ ಉದ್ದೇಶವೇ ಸೈತಾನನು ಹಾಳು ಮಾಡಿದ್ದೆಲ್ಲವನ್ನು ತಿರುಗಿ ಸರಿ ಮಾಡಲು ಮತ್ತು ವಿಶ್ವಾಸಿಗಳಿಗೆ ಈ ಅಧಿಕಾರವನ್ನು ಅನುಗ್ರಹಿಸಲು. ಸೈತಾನನು ಹಾಳು ಮಾಡಿದ್ದನ್ನು ತಿರುಗಿ ಸರಿಪಡಿಸಲು ಸೈತಾನನ ಕಾರ್ಯಗಳನ್ನು ನಾಶಪಡಿಸಲು ನೀವು ಸಿದ್ಧರಾಗಿದ್ದೀರಾ?(1ಯೋಹಾನ 3:8)
ಗುಣುಗುಟ್ಟುವುದನ್ನು ಗೋಳಾಡುವುದನ್ನು ನಿಲ್ಲಿಸಿ, ಈ ಸಮಯವು ಸೈತಾನನ ಬಲದ ಮೇಲೆ ನಿಮ್ಮ ಅಧಿಕಾರ ಬಳಸಬೇಕಾದ ಸಮಯವಾಗಿದೆ . ನಿಮ್ಮ ಜೀವಿತದಲ್ಲಿ ಉತ್ತಮ ಬದಲಾವಣೆಯನ್ನು ಯೇಸು ನಾಮದಲ್ಲಿ ನಾನು ಕಾಣುತ್ತಿದ್ದೇನೆ.
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1.ನನ್ನ ಹಾಗೂ ನನ್ನ ಕುಟುಂಬದ ವಿರುದ್ಧವಾಗಿ ವೈಫಲ್ಯತೆಯನ್ನು ರೋಗಗಳನ್ನು ಸಂಕಟಗಳನ್ನು ತಂದು ಹಾಕಲು ಕಟ್ಟಲ್ಪಟ್ಟಿರುವ ಎಲ್ಲ ದುಷ್ಟ ಯಜ್ಞ ವೇದಿಗಳನ್ನು ಯೇಸುನಾಮದಲ್ಲಿ ನಾನು ಕೆಡವಿ ಹಾಕುತ್ತೇನೆ. (ಮೀಕಾ 5:11-12).
2. ನನ್ನ ದೇಹದಲ್ಲಿ ಸುಪ್ತವಾಗಿ ಕಾರ್ಯ ಮಾಡುತ್ತಿರುವ ಪ್ರಕಟಗೊಳ್ಳಲು ಯೋಜಿಸುತ್ತಿರುವ ಎಲ್ಲಾ ಖಾಯಿಲೆಗಳು ಯೇಸು ನಾಮದಲ್ಲಿ ನಿರ್ಮೂಲವಾಗಲಿ. (ಯೆರೆಮೆಯ 1:10).
3. ನನ್ನ ಮನೆಯ ಮತ್ತು ನನ್ನ ಕುಟುಂಬದೊಳಗೆ ನುಸುಳಲು ಪ್ರಯತ್ನಿಸುತ್ತಿರುವ ಎಲ್ಲ ದುರಾತ್ಮನ ಉಪಸ್ಥಿತಿಯು, ಅದರ ಬಚ್ಚಿಟ್ಟುಕೊಳ್ಳುವ ಸ್ಥಳಗಳು ಯೇಸು ನಾಮದಲ್ಲಿ ನಾಶವಾಗಿ ಹೋಗಲಿ. (ಕೀರ್ತನೆ 68:1-2).
4. ನನ್ನನ್ನು ಗಾಸಿಗೊಳಿಸಲು ನನಗೆ ವಿರೋಧವಾಗಿ ಕಲ್ಪಿಸಿರುವ ಯಾವುದೇ ಸಂಕಟಗಳಾಗಲಿ ಯೇಸು ನಾಮದಲ್ಲಿ ಹಿಂದಿರುಗಿ ಹೋಗಲಿ. (ಯೆಶಾಯ 54:17).
5. ನನಗಾಗಿ ಸಿದ್ಧವಾದ ಎಲ್ಲಾ ಮೇಲುಗಳು ಯೇಸು ನಾಮದಲ್ಲಿ ಈಗಲೇ ನನ್ನ ಜೀವನದಲ್ಲಿ ಮುಂದೆ ಬರಲಿ (ಧರ್ಮೋಪದೇಶ ಕಾಂಡ 28:6).
6. ನನಗೆ ವಿರೋಧವಾಗಿ ಕಲ್ಪಿಸಿದ ಎಲ್ಲಾ ಆಯುಧಗಳನ್ನು ಯೇಸು ನಾಮದಲ್ಲಿ ಚದರಿಸುತ್ತೇನೆ. (ಯೇಶಾಯ 54:17).
7. ನನ್ನ ಹಾಗೂ ನನ್ನ ಕುಟುಂಬವನ್ನು ನ್ಯಾಯ ತೀರ್ಪಿಗೆ ಸಿಕ್ಕಿಸಲು ಮಾತಾಡುವ ಎಲ್ಲಾ ಹೊಲಸಾದ ನಾಲಿಗೆಗಳನ್ನು ಯೇಸು ನಾಮದಲ್ಲಿ ಖಂಡಿಸುತ್ತೇನೆ.(ಯೇಶಾಯ 54:17).
8. ನನ್ನ ಹಾಗೂ ನನ್ನ ಕುಟುಂಬದ ವಿರೋಧವಾಗಿ ಏಳುವ ಎಲ್ಲಾ ಪಾಪದ ಧ್ವನಿಗಳು ಆರೋಪಣೆಯ ಧ್ವನಿಗಳು ಯೇಸು ನಾಮದಲ್ಲಿ ನಿಶಬ್ದವಾಗಿ ಹೋಗಲಿ. (ಪ್ರಕಟಣೆ 12:10).
9. ನನಗೂ ನನ್ನ ಕುಟುಂಬದ ಆಶೀರ್ವಾದಗಳಿಗೂ ಮತ್ತು ನನ್ನ ಏಳಿಗೆಗೂ ವಿರುದ್ಧವಾಗಿ ಸಂಚು ನಡೆಸುವ ಎಲ್ಲ ದುರಾತ್ಮನ ಕಾರ್ಯಗಳಿಗೆ ಎದುರಾಗಿ ದೇವದೂತರ ದಂಡನ್ನು ಯೇಸು ನಾಮದಲ್ಲಿ ಇಳಿಸುತ್ತೇನೆ. (ಕೀರ್ತನೆ 34:7).
10. ನನ್ನ ಜೀವಿತಕ್ಕೆ ವಿರೋಧವಾದ ಎಲ್ಲಾ ಪೈಶಾಚಿಕ ಕಾರ್ಯಗಳನ್ನು ಯೇಸು ನಾಮದಲ್ಲಿ ನಾಶಪಡಿಸುತ್ತೇನೆ ಮತ್ತು ಎಲ್ಲಾ ಕಾರ್ಯಗಳು ಯೇಸು ನಾಮದಲ್ಲಿ ನನಗೋಸ್ಕರ ನನ್ನ ಹಿತಕಾಗಿ ಕಾರ್ಯ ಮಾಡುತ್ತವೆ. (ರೋಮ 8:28)
11. ನನ್ನ ಕರೆಯನ್ನು ನಾಶಪಡಿಸಲು ಯೋಜಿಸಲ್ಪಟ್ಟ ಎಲ್ಲಾ ದುಷ್ಟ ತಂತ್ರಗಳನ್ನು ಯೇಸು ನಾಮದಲ್ಲಿ ನಾನು ರದ್ದು ಮಾಡುತ್ತೇನೆ. (ಯೆರೆಮಿಯ 29:11).
12. ನನ್ನ ಹಾಗೂ ನನ್ನ ಕುಟುಂಬದ ಮೇಲೆ ತೂಗುತ್ತಿರುವ ಎಲ್ಲಾ ದುಷ್ಟತ್ವವು ಯೇಸುನಾಮದಲ್ಲಿ ಲಯವಾಗಿ ಹೋಗಲಿ.(2ಥೆಸಲೋನಿಕ 3:3).
13. ನನ್ನ ಜೀವಿತ ಹಾಗೂ ನನ್ನ ಗೌರವಕ್ಕೆ ಧಕ್ಕೆ ತರಲು ಯೋಜಿಸುವ ಎಲ್ಲಾ ನ್ಯಾಯ ತೀರ್ಪನ್ನು ಎಲ್ಲಾ ಆರೋಪಗಳನ್ನು ಯಾವುದೇ ಹೊಲಸಾದ ದಾಖಲೆಗಳನ್ನು ಯೇಸು ನಾಮದಲ್ಲಿ ತೊಡೆದು ಹಾಕುತ್ತೇನೆ. (ಕೊಲಸ್ಸೆ 2:14).
14. ನನ್ನ ಉನ್ನತಿಗೆ ವಿರೋಧ ಮಾಡುವ ಯಾವುದೇ ಪ್ರತಿಕೂಲದ ಬಲಗಳ ಮೇಲೆ ಮತ್ತು ನಿಯಮಗಳ ಮೇಲೆ ಯೇಸು ನಾಮದಲ್ಲಿ ಯೇಸುವಿನ ರಕ್ತದ ಮೂಲಕ ನನಗೆ ಜಯ ಉಂಟಾಗಲಿ. (ಪ್ರಕಟಣೆ 12:11).
15. ನನ್ನ ಉನ್ನತಿಯನ್ನು ಮಹಿಮೆಯನ್ನು ಹಿಂದೆಳೆಯುತ್ತಿರುವ ಯಾವುದೇ ಪಾರಂಪರಿಕ ಹಾನಿಕಾರಕ ಒಡಂಬಡಿಕೆಗಳನ್ನು ಯೇಸು ನಾಮದಲ್ಲಿ ನಾಶಪಡಿಸುತ್ತೇನೆ. (2ಕೊರಿಯಂತೆ 10:4).
16. ಎಲ್ಲಾ ದುಷ್ಟತ್ವದಿಂದಲೂ ತೊಂದರೆಗಳಿಂದಲೂ ಸಂಕಟಗಳಿಂದಲೂ ಹಾನಿಗಳಿಂದಲೂ ಯಾವುದೇ ನಷ್ಟವಾಗದಂತೆ ಯೇಸುನಾಮದಲ್ಲಿ ಯೇಸುವಿನ ರಕ್ತದ ಮೂಲಕ ನಾನು ಮುಚ್ಚಲ್ಪಟ್ಟಿದ್ದೇನೆ. (ವಿಮೋಚನಾಕಾಂಡ 12:13)
17. ನನಗಾಗಿ ಮೀಸಲಿಟ್ಟ ಎಲ್ಲಾ ಮೇಲುಗಳು ಆಶೀರ್ವಾದಗಳು ಯೇಸು ನಾಮದಲ್ಲಿ ನನಗಾಗಿ ಬಿಡುಗಡೆಯಾಗಲಿ. (ಯೆಶಾಯ 45:2-3).
18. ತಂದೆಯೇ ಎಲ್ಲಾ ಕಾಲವನ್ನು ಎಲ್ಲಾ ಸಮಯವನ್ನು ನನ್ನ ಪರವಾಗಿ ನನ್ನ ಮೇಲಿಗಾಗಿ ಕಾರ್ಯನಿರ್ವಹಿಸುವಂತೆ ಯೇಸು ನಾಮದಲ್ಲಿ ಪುನಃ ಸಂಯೋಜಿಸಿ. (ಯೆಶಾಯ 45:2-3).
19. ಕರ್ತನೇ,ನನ್ನ ಆತ್ಮವನ್ನು ಯೇಸು ನಾಮದಲ್ಲಿ ಹುರಿದುಂಬಿಸು.(ಎಫಸ್ಸೆ 3:16)
20. ಕರ್ತನೆ, ನನಗೂ ಮತ್ತು ಈ ಉಪವಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನಿನ್ನನ್ನು ಇನ್ನೂ ಆಳವಾಗಿ ತಿಳಿದುಕೊಳ್ಳುವಂಥ ವಿವೇಕ ಮತ್ತು ಪ್ರಕಟಣೆಯ ಆತ್ಮವನ್ನು ಯೇಸು ನಾಮದಲ್ಲಿ ಅನುಗ್ರಹಿಸು. (ಎಫಸ್ಸೆ 1:17)
Join our WhatsApp Channel
Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ಮೊಗ್ಗು ಬಿಟ್ಟಂತಹ ಕೋಲು
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ಕೃತಜ್ಞತೆಯ ಯಜ್ಞ
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
ಅನಿಸಿಕೆಗಳು