"ಒಂದು ದಿನ ಯೋಸೇಫನು ಕನಸುಕಂಡು ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಲು ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು."(ಆದಿಕಾಂಡ 37:5 )
ಎಲ್ಲರಿಗೂ ತಮ್ಮ ಜೀವನದ ಕಾರ್ಯಗಳ ವಿಚಾರದಲ್ಲಿ ತಮ್ಮದೇ ಆದ ಕನಸುಗಳು ಯೋಜನೆಗಳು ಇದ್ದೇ ಇರುತ್ತವೆ. ನಮ್ಮವರಲ್ಲಿ ಕೆಲವರು ತಾವು ಆಲೋಚಿಸಿದ ಕಾರ್ಯಗಳನ್ನು ಕಾರ್ಯಕತಗೊಳಿಸಲು ಅಚ್ಚುಕಟ್ಟಾಗಿ ಹಂತ ಹಂತವಾಗಿ ಅದನ್ನು ಮಾಡುತ್ತಾ ಬರುತ್ತಿರುತ್ತಾರೆ. ಕೆಲವರಂತೂ ಪ್ರಕ್ರಿಯೆಗಳನ್ನು ಹೇಗೆಂದರೆ ಹಾಗೆ ಗಾಳಿ ಬೀಸಿದ ಕಡೆಗೆ ಸಾಗುವಂತೆ ಸಾಗಿಸುತ್ತಿರುತ್ತಾರೆ.
ದೊಡ್ಡ ದೊಡ್ಡ ಕಾರ್ಯಗಳೆಲ್ಲವೂ ದೊಡ್ಡ ದೊಡ್ಡ ಕನಸುಗಳಿಂದಲೇ ಆರಂಭವಾಗುತ್ತದೆ. ಯೋಸೆಫನು ತಾನೊಂದು ದಿನ ಬಲವುಳ್ಳ ನಾಯಕನಾಗುವ ಹಾಗೆ ಕನಸು ಕಂಡಿದ್ದನು.
ಇದೆಲ್ಲವೂ ನಿಮ್ಮ ಜೀವನವೇ ಎಂಬುದನ್ನು ಮೊದಲು ನೆನಪಿಡಿರಿ. ದೈವಿಕವಾದ ಕನಸುಗಳಿಗೆಲ್ಲಾ ಯಾವಾಗಲೂ ವಿರೋಧಗಳು ಇದ್ದೇ ಇರುತ್ತವೆ. ಆದುದರಿಂದಲೇ ಕನಸುಗಳು ಅಪಾಯಕಾರಿ ಎಂದು ನಾನು ಹೇಳಿದ್ದು. ಯೋಸೆಫನ ಕನಸುಗಳು ಅವನ ಸ್ವಂತ ಸಹೋದರರಿಗೆ ಹೊಟ್ಟೆಕಿಚ್ಚನ್ನು ಹುಟ್ಟಿಸಿತು. ಅವರ್ಯಾರಿಗೂ ಅವರು ಯೋಸೇಫನಿಗೆ ಅಡ್ಡ ಬೀಳುವ ಆಲೋಚನೆ ಸರಿ ಬರಲಿಲ್ಲ. ಅವನ ಕನಸಿನಿಂದಾಗಿ ಅವನ ಸಹೋದರರು ಹೀಗೆ ಮಾತಾಡಿಕೊಂಡರು :
"ಅವರು ಅವನನ್ನು ದೂರದಿಂದ ನೋಡಿ ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲುವದಕ್ಕೆ ಒಳಸಂಚುಮಾಡಿಕೊಂಡರು. [19] ಅವರು ಒಬ್ಬರಿಗೊಬ್ಬರು - ಅಗೋ, ಆ ಕನಸಿನವನು ಬರುತ್ತಾನೆ; [20] ನಾವು ಅವನನ್ನು ಕೊಂದು ಈ ಗುಂಡಿಗಳಲ್ಲಿ ಒಂದರೊಳಗೆ ಹಾಕಿ ದುಷ್ಟಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ ಬನ್ನಿ; ಆಗ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಮಾತಾಡಿಕೊಂಡರು."(ಆದಿಕಾಂಡ 37:18-20)
ಕೆಲವೊಮ್ಮೆ ನಮ್ಮ ದಿನನಿತ್ಯದ ಜೀವನ ಜಂಜಾಟದಿಂದಾಗಿ ಹತಾಶೆಯಿಂದಾಗಿ ನಮ್ಮ ಕೈಯಲ್ಲಿ ಕನಸುಗಳನ್ನು ಪೂರೈಸಲು ಶಕ್ತಿ ಇಲ್ಲದೆ ಕೆಲವು ಕನಸುಗಳು ನುಚ್ಚುನೂರಾಗುತ್ತವೆ.
ಆದರೆ ಯೋಸೇಫನು ತಾನು ಕೆಲಸ ಮಾಡುವ ಸ್ಥಳಗಳಲ್ಲೆಲ್ಲಾ ದೇವರ ಹಸ್ತವಿದ್ದದನ್ನು ಅವನು ಕಂಡು ಕೊಂಡಿದ್ದನು.ಅನೇಕ ವರ್ಷಗಳಾದ ಮೇಲೆ ಅವನು ತನ್ನ ಸಹೋದರರೊಂದಿಗೆ ಮತ್ತೆ ಕೂಡಿ ಬಂದಾಗ "ಯೋಸೇಫನು ಅವರಿಗೆ - ಹೆದರಬೇಡಿರಿ; ನಾನೇನು ದೇವರ ಪ್ರತಿನಿಧಿಯೇ? ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದ್ದಿರಿ; [20] ಆದರೆ ದೇವರು ಮೇಲಾಗಬೇಕೆಂದು ಸಂಕಲ್ಪಿಸಿದನು. ಈಗ ಅನುಭವಕ್ಕೆ ಬಂದ ಪ್ರಕಾರವೇ ಅನೇಕ ಪ್ರಾಣಿಗಳಿಗೆ ಸಂರಕ್ಷಣೆಯುಂಟಾಗುವಂತೆ ಮಾಡಿದನು."ಎಂದು ಹೇಳಿದನು (ಆದಿಕಾಂಡ 50:19-20)
ಅವನ ಜೀವನದ ಅನೇಕ ನೋವು ಸಂಕಟಗಳ ಮಧ್ಯದಲ್ಲೂ ದೇವರು ಅದ್ಭುತವಾಗಿ ಅವನ ಜೀವನದ ಹಿನ್ನೆಲೆಯಲ್ಲಿ ಕಾರ್ಯ ಮಾಡಿ ಯೋಸೇಫನನ್ನು ಎಲ್ಲಾ ಕೆಡುಕುಗಳಿಂದಲೂ ಸಂರಕ್ಷಿಸಿ ಐಗುಪ್ತದಲ್ಲಿಯೇ ಅವನನ್ನು ಉನ್ನತವಾದ ಸ್ಥಾನಕ್ಕೆ ಏರಿಸಿದನು.
ಯೋಸೇಫನ ಕನಸುಗಳು ಅನೇಕರ ಜೀವಿತಕ್ಕೆ ಆಶೀರ್ವಾದ ಕರವಾಗಿತ್ತು. ಯೋಸೇಫನ ಜೀವನ ಚರಿತ್ರೆಯು ಬರಬೇಕಾದ ಮಹೋನ್ನತ ವಿಮೋಚಕನಾದ- ಕರ್ತನಾದ ಯೇಸುಕ್ರಿಸ್ತನಿಗೆ ಪ್ರವಾದನ ರೂಪದ ಹೋಲಿಕೆಯಾಗಿದೆ.
ನಿಮ್ಮ ಕನಸುಗಳನ್ನು ಕರ್ತನಿಗೆ ಒಪ್ಪಿಸಿರಿ. ನಿಮ್ಮ ಜೀವಿತದಲ್ಲಿ ಆತನಿಗೆ ಕಾರ್ಯ ಮಾಡಲು ಅನುವು ಮಾಡಿಕೊಟ್ಟರೆ ನಿಮ್ಮ ಕನಸುಗಳು ಖಂಡಿತವಾಗಿಯೂ ನನಸಾಗುವವು. ಆತನನ್ನು ವಿಶ್ವಾಸಿಸಿ- ಖಂಡಿತವಾಗಿಯೂ ನೀವು ಅದನ್ನು ಸಾಕಾರಗೊಳಿಸುವಿರಿ.
ಪ್ರಾರ್ಥನೆಗಳು
ತಂದೆಯೇ, ನೀನು ನನಗೆ ಕೊಟ್ಟಿರುವ ಕನಸುಗಳಿಗಾಗಿ ಸ್ತೋತ್ರ. ನನ್ನ ಸುತ್ತಲೂ ಏನಾಗುತ್ತಿದೆಯೋ ಎಂದು ನಾನು ಯೋಚಿಸಲು ಅಸಾಧ್ಯವಾಗಿರುವ ಸಮಯದಲ್ಲಿಯೂ ಸಹ ನನ್ನ ಜೀವಿತವನ್ನು ನಿನ್ನ ಕೈಗೆ ಒಪ್ಪಿಸಿ ಕೊಟ್ಟಿರುವುದರಿಂದ ಎಲ್ಲಾ ಕಾರ್ಯಗಳು ನನ್ನ ಹಿತಕ್ಕಾಗಿ ಜರಗುತ್ತಿವೆ ಎಂದು ಯೇಸು ನಾಮದಲ್ಲಿ ನಾನು ನಿನ್ನನ್ನು ನಂಬುತ್ತೇನೆ ಆಮೇನ್
Join our WhatsApp Channel
Most Read
● ಬೀಜದಲ್ಲಿರುವ ಶಕ್ತಿ -2● ಆತ್ಮನಿಂದ ನಡೆಸಲ್ಪಡುವುದು ಎಂಬುದರ ಅರ್ಥವೇನು?
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
● ಪ್ರೀತಿಯ ಭಾಷೆ
● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
● ಅನುಕರಣೆ
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು