ಯೇಸು ಬೆಥ್ಲೆಹೆಮ್ ನಲ್ಲಿ ಜನಿಸಿದ ನಂತರ, " ಅರಸನಾದ ಹೆರೋದನ ದಿನಗಳಲ್ಲಿ ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಲ್ಲಿ ಯೇಸು ಹುಟ್ಟಿದಾಗ ಮೂಡಣದೇಶದ ಜೋಯಿಸರು ಯೆರೂಸಲೇವಿುಗೆ ಬಂದು - ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಮೂಡಣದೇಶದಲ್ಲಿ ಕಂಡು ಆತನಿಗೆ ಅಡ್ಡಬೀಳುವದಕ್ಕೆ ಬಂದೆವು ಅಂದರು.'" ಎಂದು ಮತ್ತಾಯ 2:1-2 ನಮಗೆ ಹೇಳುತ್ತದೆ.
ತುಸು ವಿರಾಮ ಹಾಕಿ ಅದರ ಕುರಿತು ಯೋಚಿಸಿ.
ಪರ್ಷಿಯಾದಿಂದ ಬಂದಿರುವ ಮೂಡಣದ ವಿದ್ವಾಂಸರ ಗುಂಪು ಯಹೂದಿ ಮಗುವನ್ನು ಹುಡುಕಲು ನೂರಾರು ಮೈಲುಗಳಷ್ಟು ಪ್ರಯಾಣಿಸಿತ್ತು. ಈ ವಿದೇಶಿ ಜ್ಞಾನಿಗಳು ಯಹೂದಿ ಪ್ರವಾದನೆ ಕುರಿತು ಏಕೆ ಕಾಳಜಿ ವಹಿಸಬೇಕಿತ್ತು ? ಕಥೆ ನಿಜವಾಗಿಯೂ ಆಕರ್ಷಕವಾಗುವುದು ಅಲ್ಲಿಯೇ.
ಈ ಮೂಡಣದ ಜ್ಞಾನಿಗಳು ಯಾರು?
“ಜ್ಞಾನಿಗಳು” ಎಂಬುದಕ್ಕೆ ಬಳಸಲಾದ ಗ್ರೀಕ್ ಪದ ಮಾಗೋಗಳು. ಇದು ಅವರು ಕೇವಲ ನಕ್ಷತ್ರವೀಕ್ಷಕರಿಗಿಂತ ಹೆಚ್ಚಿನವರಾಗಿದ್ದರು ಎಂಬುದನ್ನು ಸೂಚಿಸುತ್ತದೆ. ಅವರು ಜೋಯೀಷರಾಗಿದ್ದರು - ಖಗೋಳಶಾಸ್ತ್ರ, ಪ್ರಾಚೀನ ಗ್ರಂಥಗಳು ಮತ್ತು ಬಹುಶಃ ನ್ಯಾಯಾಲಯದ ಮಟ್ಟದ ಸಲಹಾ ಪಾತ್ರಗಳಲ್ಲಿ ತರಬೇತಿ ಪಡೆದ ಮನುಷ್ಯರಾಗಿದ್ದರು.
ಅವರ ಸಂಸ್ಕೃತಿಯಲ್ಲಿ, ಅಂತಹ ಮನುಷ್ಯರನ್ನು ಹೆಚ್ಚು ಗೌರವಿಸಲಾಗುತ್ತಿತ್ತು. ಈಗ ದಾನಿಯೇಲನ ಕುರಿತು ಯೋಚಿಸಿ. ದಾನಿಯೇಲನನ್ನು ಬಾಬೆಲಿಗೆ ಸೆರೆಹಿಡಿದುಕೊಂಡು ಬಂದಾಗ (ದಾನಿಯೇಲ 1), ಅವನು ಅಂತಿಮವಾಗಿ ಸಾಮ್ರಾಜ್ಯದ ಜೋಯೀಷರು ಮತ್ತು ಜ್ಞಾನಿಗಳ ಮೇಲೆ ಮುಖ್ಯಸ್ಥನಾದನು (ದಾನಿಯೇಲನು 2:48). ಅವನು ಕೇವಲ ವಿದೇಶಿ ದೇಶದಲ್ಲಿ ಜೀವನ ಸಾಗಿಸುತ್ತಿರಲಿಲ್ಲ - ಅವನು ಅದನ್ನು ಮುನ್ನಡೆಸುವನಾಗಿದ್ದನು .
ಪರ್ಷಿಯಾ ಬಾಬೆಲನ್ನು ವಶಪಡಿಸಿಕೊಂಡಾಗ, ದಾನಿಯೇಲನು ಹೊಸ ಆಡಳಿತದ ಅಡಿಯಲ್ಲಿಯೂ ತಾನು ಸೇವೆ ಸಲ್ಲಿಸುವುದನ್ನು ಮುಂದುವರೆಸಿದನು (ದಾನಿಯೇಲನು 6). ದಾನಿಯೇಲನ ಬರಹಗಳು, ಪ್ರವಾದನೆಗಳು ಮತ್ತು ಬೋಧನೆಗಳನ್ನು ಆ ರಾಜಮನೆತನದ ದಾಖಲೆಗಳಲ್ಲಿ ಸಂರಕ್ಷಿಸಲಾಗಿರಲು ಸಂಪೂರ್ಣವಾಗಿ ಸಾಧ್ಯವಿತ್ತು. ತಲೆಮಾರುಗಳವರೆಗೆ, ಪರ್ಷಿಯನ್ ವಿದ್ವಾಂಸರು ಬರಲಿರುವ ಮೆಸ್ಸೀಯ ಮತ್ತು ಎಂದಿಗೂ ನಾಶವಾಗದ ದೈವಿಕ ರಾಜ್ಯದ ಕುರಿತು ದಾನಿಯೇಲನು ಬರೆದ ಪ್ರವಾದನೆ ವಾಕ್ಯಗಳನ್ನು ಅವರು ಅಧ್ಯಯನ ಮಾಡಿರಬಹುದು (ದಾನಿಯೇಲ 2:44; 7:13–14; 9:24–27).
ಈ ವಿದ್ವಾಂಸರು ಪ್ರಾಚೀನ ಸುರುಳಿಗಳನ್ನು ಪರಿಶೀಲಿಸುತ್ತಿರುವುದನ್ನು ಕಲ್ಪಿಸಿಕೊಳ್ಳಿ. ನಂತರ ಇದ್ದಕ್ಕಿದ್ದಂತೆ, ಒಂದು ಹೊಸ ಮತ್ತು ಅಸಾಧಾರಣ ನಕ್ಷತ್ರ ಕಾಣಿಸಿಕೊಳ್ಳುತ್ತದೆ. ಅವರು ಆ ಎಲ್ಲಾ ಚುಕ್ಕೆಗಳನ್ನು ಕೂಡಿಸಿ . "ಇದು ಇಲ್ಲಿದೆ." ಎಂಬುದಾಗಿ ಕಂಡುಕೊಂಡರು.
ಹೊರಗಿನವರು ಅರಸನನ್ನು ಗುರುತಿಸಿಕೊಂಡರು.
ಈ ವೃತ್ತಾಂತವನ್ನು ಇನ್ನಷ್ಟು ಗಮನಾರ್ಹವಾಗಿಸುವ ವಿಷಯವೆಂದರೆ: ಜೆರುಸಲೆಮ್‌ನಲ್ಲಿ ಯಹೂದಿ ಧಾರ್ಮಿಕ ಮುಖಂಡರು ಎಚ್ಚರದಿಂದಿದ್ದರು. ಮೆಸ್ಸೀಯನು ಎಲ್ಲಿ ಹುಟ್ಟುತ್ತಾನೆ ಎಂದು ಹೆರೋದನು ಕೇಳಿದಾಗ, ಅವರು ಮೀಕ 5:2 ರ ವಾಕ್ಯವನ್ನು ಖರಾರುವಕ್ಕಾಗಿ ಉಲ್ಲೇಖಿಸಿದರು - ಆದರೆ ಅವರಲ್ಲಿ ಯಾರೂ ಸಹ ತಮ್ಮ ಮೆಸ್ಸಿಯನನ್ನು ನೋಡಲು ತಾವಾಗಿ ಬೆಥ್ಲೆಹೆಮ್‌ಗೆ ಹೋಗಲಿಲ್ಲ.
- ಈ ವಿದ್ವಾಂಸರಿಗೆ ಜ್ಞಾನವಿತ್ತು.
- ಮೂಡಣದ ಜ್ಞಾನಿಗಳಿಗೆ ಹಸಿವಿತ್ತು.
- ಸ್ಥಳೀಯರಿಗೆ ಸಾಮೀಪ್ಯವಿತ್ತು.
- ಆದರೆ ಈ ವಿದೇಶಿಯರಲ್ಲಿ ಹುಡುಕಾಟವಿತ್ತು .
ಇದುವೇ ಗಂಭೀರವಾದ ವ್ಯತ್ಯಾಸ. ಹಾಗಾದರೆ ಇಬ್ಬರಿಗಿದ್ದ
ವ್ಯತ್ಯಾಸವೇನು? ಧರ್ಮಗ್ರಂಥ.
"ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. (2 ತಿಮೊಥೆಯ 3:15).ಎಂದು ಅಪೊಸ್ತಲ ಪೌಲನು ನಂತರ ಬರೆಯುತ್ತಾನೆ. ಈ ಜೋಯೀಷರು ಹುಟ್ಟಿನಿಂದ ಯಹೂದಿಗಳಲ್ಲ, ಆದರೆ ಅವರಿಗೆ ಪ್ರವಾದನ ಸತ್ಯ ಹೊಂದುವುದಕ್ಕೆ ಪ್ರವೇಶವಿದ್ದದರಿಂದ ಅವರು ಅದನ್ನು ಗಂಭೀರವಾಗಿ ಪರಿಗಣಿಸಿದರು.
- ದೇವರ ವಾಕ್ಯವು ಗಡಿಗಳನ್ನು ದಾಟಿತು.
- ದೇವರ ವಾಕ್ಯವು ಸಾಮ್ರಾಜ್ಯಗಳನ್ನು ಮೀರಿ ಬದುಕಿತು.
- ದೇವರ ವಾಕ್ಯವು ಅನ್ವೇಷಕರನ್ನು ಸೃಷ್ಟಿಸಿತು.
ದಾನಿಯೇಲನ ದೇಶಭ್ರಷ್ಟ ಜೀವನವನ್ನು ರೂಪಿಸಿದ ಅದೇ ಬರಹಗಳು ಅಂತಿಮವಾಗಿ ಪರ್ಷಿಯನ್ ವಿದ್ವಾಂಸರನ್ನು ಮೆಸ್ಸೀಯನನ್ನು ಹುಡುಕಲು ಪ್ರೇರೇಪಿಸಿದವು. ಅದು ಧರ್ಮಗ್ರಂಥಕ್ಕಿರುವ ಶಕ್ತಿ - ಅದು ಒಂದು ಪೀಳಿಗೆ ಅಥವಾ ಸಂಸ್ಕೃತಿಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅದು ಇಂದಿಗೂ ಮಾತನಾಡುತ್ತದೆ. ಅದು ಸೆಳೆಯುತ್ತದೆ. ಅದು ಜಾಗೃತಗೊಳಿಸುತ್ತದೆ.
ಪರಿಗಣಿಸುವ ರೀತಿ
ಜ್ಞಾನವು ಒಂದು ಧರ್ಮದ ಒಳಗಿನವರಿಗೆ ಮಾತ್ರ ಮೀಸಲಾಗಿರದೇ ಅದು ಅನ್ವೇಷಕರಿಗೆ ಸೇರಿದ್ದಾಗಿದೆ ಎಂಬುದನ್ನು ಈ
- ಜೋಯೀಷರು ನಮಗೆ ನೆನಪಿಸುತ್ತಾರೆ.
- ಅವರು ಒಂದು ಚಿಹ್ನೆಯನ್ನು ನೋಡಿದರು.
- ಅವರು ಆ ವಾಕ್ಯವನ್ನು ನೆನಪಿಸಿಕೊಂಡರು.
- ನಂತರ ಅವರು ಪ್ರಯಾಣ ಬೆಳೆಸಿ ಬಂದು ಆತನನ್ನು ಆರಾಧಿಸಿದರು .
ಅದು ಮಾದರಿ.
ನೀವು ನಿಮ್ಮ ಹೃದಯ ಮತ್ತು ಮನಸ್ಸನ್ನು ಧರ್ಮಗ್ರಂಥಕ್ಕೆ ತೆರೆದರೆ, ಇತರರು ಏನು ಕಳೆದುಕೊಳ್ಳುತ್ತಾರೆ ಎಂಬುದನ್ನು ನೀವು ನೋಡಲು ಪ್ರಾರಂಭಿಸಬಹುದು. ಇತರರು ಏನನ್ನು ಕಡೆಗಣಿಸುತ್ತಾರೆ ಎಂಬುದನ್ನು ನೀವು ಗುರುತಿಸಬಹುದು.
ನಿಜವಾದ ಬುದ್ಧಿವಂತಿಕೆಯು ಮಾಹಿತಿಯನ್ನು ಹೊಂದುವುದರ ಕುರಿತಲ್ಲ ಅಲ್ಲ ಬದಲಾಗಿ ಅದರ ಪ್ರಕಟಣೆ ಹೊಂದುವ ಬಗೆಯಾಗಿದ್ದು ಕೆಲವೊಮ್ಮೆ, ಆತ್ಮೀಕವಾಗಿ ಹೆಚ್ಚು ದೂರ ಪ್ರಯಾಣಿಸುವವರು ಅರಸನನ್ನು ನಿಜವಾಗಿಯೂ ನೋಡುವವರಾಗಿದ್ದಾರೆ.
Bible Reading: Number 18-20
ಪ್ರಾರ್ಥನೆಗಳು
ಪರಲೋಕದ ತಂದೆಯೇ, ರಕ್ಷಣೆಯ ಮಾರ್ಗದಲ್ಲಿ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುವ ನಿಮ್ಮ ವಾಕ್ಯದ ವರಕ್ಕಾಗಿ ನಾವು ನಿಮಗೆ ಸ್ತೋತ್ರ ಸಲ್ಲಿಸುತ್ತೇವೆ. ಜೋಯೀಶರಿಗಾಗಿ ನೀವು ಮಾಡಿದಂತೆ, ನಮ್ಮನ್ನು ಕ್ರಿಸ್ತನ ಬಳಿಗೆ ಕರೆದೊಯ್ಯುವ ಗುರುತುಗಳನ್ನು ಮತ್ತು ಅದ್ಭುತಗಳನ್ನು ನೋಡುವಂತೆ ನಮ್ಮ ಕಣ್ಣುಗಳನ್ನು ತೆರೆಯಿರಿ. ನಾವು ಶ್ರದ್ಧೆಯಿಂದ ನಿಮ್ಮ ಬೋಧನೆಗಳನ್ನು ಅಧ್ಯಯನ ಮಾಡಿ ಅನ್ವಯಿಸಿಕೊಂಡು ತಿಳುವಳಿಕೆಯಲ್ಲಿಯೂ ಮತ್ತು ನಂಬಿಕೆಯಲ್ಲಿಯೂ ಯೇಸುನಾಮದಲ್ಲಿ ಬೆಳೆಯುವಂತಾಗಲಿ . ಆಮೆನ್.
Join our WhatsApp Channel
Most Read
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ● ಯೇಸು ಅಂಜೂರದ ಮರವನ್ನು ಏಕೆ ಶಪಿಸಿದನು?
● ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
● ನೀವು ಹೊಟ್ಟೆಕಿಚ್ಚುನ್ನು ಹೇಗೆ ನಿರ್ವಹಿಸಬೇಕು
● ವಿಶ್ವಾಸಿಗಳ ರಾಜತ್ವ ಯಾಜಕತ್ವ
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ದೂರದಿಂದ ಹಿಂಬಾಲಿಸುವುದು
ಅನಿಸಿಕೆಗಳು
