ಅನುದಿನದ ಮನ್ನಾ
ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
Saturday, 9th of March 2024
3
2
477
Categories :
ಪ್ರೀತಿ (Love)
ಬುದ್ಧಿವಂತಿಕೆ (Wisdom)
ನಮ್ಮನ್ನು ಉತ್ತೇಜಿಸುವ ಅನೇಕ ಸಂಗತಿಗಳಿವೆ. ಆದರೆ ಭಯ ಎಂಬುದೇ ಅತ್ಯಂತ ಶಕ್ತಿಯುತವಾದಂತಹ ಉತ್ತೇಜನಕಾರಿಯಾಗಿದೆ. ಆದರೆ ಈ ಭಯವು ನಮಗೆ ನಿಜವಾಗಿಯೂ ಒಳ್ಳೆಯ ಉತ್ತೇಜನಕಾರಿಯೋ? ಜನರನ್ನು ಉತ್ತೇಜಿಸಲು ಭಯವನ್ನು ಬಳಸಿಕೊಳ್ಳಬಹುದೇ?
"ಬೆಂಕಿ ಗಂಧಕಗಳ ಕೆರೆ" ಕುರಿತು ಬೋಧಿಸಿ ಜನರನ್ನು ಮೊದಲು ನೀವು ಓಡಿ ಬರುವಂತೆ ಮಾಡಬಹುದು. ಆದರೆ ಕಟ್ಟ ಕಡೆಗೆ ಅದು ಜನರನ್ನು ಪ್ರಬುದ್ಧತೆಗೆ ತರಲಾರದು. ಬದಲಾಗಿ ಅವರು ಕೇವಲ ಭಯದ ದೆಸೆಯಿಂದ ಮಾತ್ರ ನೀವು ಹೇಳಿದ್ದನ್ನು ಹಿಡಿದುಕೊಂಡಿರುತ್ತಾರೆ.
ತಂದೆ ತಾಯಿಗಳಾಗಿ, ಅನಿತಾ ಹಾಗೂ ನಾನು ಯಾವಾಗಲೂ ಎಲ್ಲಾ ತಂದೆ ತಾಯಿಗಳು ಎದುರಿಸುವಂತಹ ಸವಾಲುಗಳನ್ನು ಎದುರಿಸುತ್ತಾ ಇರುತ್ತೇವೆ. ನಮ್ಮ ಮಕ್ಕಳು ದೀರ್ಘಾವಧಿಯ ಕಾಲಕ್ಕೂ ಉತ್ತಮವಾದದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಅವರನ್ನು ಉತ್ತೇಜಿಸಲು ಭಯವೆಂಬುದನ್ನು ನಾವು ಬಳಸಿದರೆ ಏನಾಗುತ್ತದೆ?ಭಯವು ಕಾರ್ಯ ಮಾಡಲಾರದು ಎಂಬುದನ್ನು ದೇವರಾತ್ಮನಿಂದ ತಿಳಿದುಕೊಂಡದ್ದು ನಿಜಕ್ಕೂ ನಮ್ಮ ಮೇಲೆ ಪ್ರಭಾವಬೀರಿತು.
ನಾವು ನಮ್ಮ ಮಕ್ಕಳಿಗೆ ಭಯವನ್ನು ಹುಟ್ಟಿಸಿ ತಾಕೀತು ಮಾಡಿದರೆ ಸಮಯ ಕಳೆದ ಹಾಗೆ ಆ ಭಯವು ಮಾಯವಾಗಿ ಬಿಟ್ಟಿರುತ್ತದೆ. ಇದಕ್ಕೆ ಇನ್ನೊಂದನ್ನು ಸೇರಿಸಿ ಹೇಳುವುದಾದರೆ ಯಾವುದನ್ನು ನಾವು ಮಾಡಬೇಡ ಎಂದು ಎಚ್ಚರಿಸುತ್ತೇವೋ ಅದನ್ನೇ ಕುತೂಹಲದಿಂದ ಮಾಡುವಂತದ್ದು ಮಾನವನ ಸ್ವಾಭಾವಿಕ ಸ್ವಭಾವವಾಗಿದೆ. ಉದಾಹರಣೆಗೆ ನೀವು ಮಕ್ಕಳಿಗೆ ಬಿಸಿಯಾದ ಐರನ್ ಬಾಕ್ಸನ್ನು ಮುಟ್ಟಬೇಡ ಎಂದರೆ ಅವನಾಗಲೀ ಅವಳಾಗಲೀ ಖಂಡಿತವಾಗಿ ಕಾಲ ಕಳೆದಂತೆ ಹೋಗಿ ಅದನ್ನು ಮುಟ್ಟೇ ಮುಟ್ಟುತ್ತಾರೆ.ನಾನು ನಿಮಗೆ ಏನನ್ನು ತಿಳಿಸಲು ಬಯಸುತ್ತಿದ್ದೇನೆ ಎಂಬುದನ್ನು ನೀವು ಅರಿತುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ?
ಇನ್ನೊಂದು ಕಡೆಯಲ್ಲಿ ವಿವೇಕ ಎನ್ನುವಂತದ್ದು ಭಯಕ್ಕಿಂತಲೂ ಉತ್ತಮವಾದ ಉತ್ತೇಜಕ. ನಾನು ಸಭೆಯಲ್ಲಿ ಕಲಿಸುವಾಗ ಅಥವಾ ನನ್ನ ಮಕ್ಕಳಿಗೆ ಕಲಿಸುವಾಗ ನಾನು ಏಕೆ ಈ ನಿರ್ದಿಷ್ಟವಾದ ಕಾರ್ಯವು ಆಗಬೇಕು ಎಂಬುದನ್ನು ಅವರಿಗೆ ಕಲಿಸುವುದರ ಮೇಲೆ ನನ್ನ ಲಕ್ಷ್ಯವನ್ನಿಡುತ್ತೇನೆ. ಈ ಒಂದು ಪ್ರಕ್ರಿಯೆಯು ಬಹಳ ಸಮಯವನ್ನು ಶ್ರಮವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಆದರೂ ಜನರು ಯಾವಾಗಲೂ ತಮ್ಮನ್ನು ತಾವು ಆ ಸ್ಥಾನದಲ್ಲಿ ಗುರುತಿಸಿಕೊಳ್ಳುವಾಗ ವಿಷಯಗಳನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಾರೆ. ಭಯವು ನಿಮಗೆ ಅಲ್ಪಕಾಲೀಕ ಲಾಭವನ್ನು ಕೊಡುತ್ತದೆ. ಆದರೆ ವಿವೇಕವು ಯಾವಾಗಲೂ ದೀರ್ಘಕಾಲಿಕವಾದ ಎಂದೂ ಕೊನೆಯಾಗದ ಲಾಭವನ್ನು ತಂದುಕೊಡುತ್ತದೆ
ಭಯ ಎನ್ನುವಂಥದ್ದು ಇನ್ನೊಂದು ರೀತಿಯಲ್ಲಿ ಆ ವ್ಯಕ್ತಿಯನ್ನು ಹಿಂಸಿಸಿ ಅವರಲ್ಲಿ ಆತ್ಮನಿಂದನೆಯನ್ನು ಹುಟ್ಟಿಸುತ್ತದೆ. ಹಾಗೆಯೇ ನಾವು ಭಯವನ್ನು ಉತ್ತೇಜನಕಾರಿಯಾಗಿ ಬಳಸುವಾಗ ಜನರು ನೀವು ಅವರನ್ನು ಗಮನಿಸುವವರೆಗೂ ಮಾತ್ರ ನೀವು ಹೇಳುವುದನ್ನು ಮಾಡುತ್ತಿರುತ್ತಾರೆ ಆದರೆ ನೀವು ಆ ಚಿತ್ರಣದಲ್ಲಿ ಇಲ್ಲ ಎಂದು ಗೊತ್ತಾದ ಕ್ಷಣವೇ ಅವರಿಗೆ ಯಾವುದು ಮಹತ್ವ ಎನಿಸುತ್ತದೆ ಅದನ್ನು ಮಾಡಲು ಹೋಗಿಬಿಡುತ್ತಾರೆ.
ಕ್ರೈಸ್ತರಾಗಿ ನಾನಾಗಲಿ ನೀವಾಗಲಿ ಭಯದ ಆತ್ಮವನ್ನು ಹೊಂದದೆ ಬಲ -ಪ್ರೀತಿ-ಶಿಸ್ತಿನ ಆತ್ಮವನ್ನು ಹೊಂದಿದ್ದೇವೆ ಎಂಬ ಶುಭ ಸುದ್ದಿಯನ್ನು 2 ತಿಮೋತಿ 1:7 ನಮಗೆ ಹೇಳುತ್ತದೆ. " ಪರಿಪೂರ್ಣವಾದ ಪ್ರೀತಿಯು ಭಯವನ್ನು ಓಡಿಸುತ್ತದೆ" ಎಂದು 1ಯೋಹಾನ 4:18 ಹೇಳುತ್ತದೆ.ನೀವು ಹೆಚ್ಚು ಹೆಚ್ಚಾಗಿ ದೇವರ ಪ್ರೀತಿಯನ್ನು ಮತ್ತು ಆತನಲ್ಲಿನ ಸೌಭಾಗ್ಯವನ್ನು ದೃಷ್ಟಿಸುತ್ತಿದ್ದರೆ ನೀವು ಭಯದಿಂದ ಮುಕ್ತರಾಗುವಿರಿ.
ದೇವರ ವಾಕ್ಯ ಹೇಳುತ್ತದೆ"ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ; ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ."ಎಂದು (ಕೀರ್ತನೆಗಳು 37:30).ನೀವು ದೇವರ ಪ್ರೀತಿಯನ್ನು ಗಳಿಸಿಕೊಳ್ಳುತ್ತಾ ಹೋಗುತ್ತಿದ್ದರೆ ದೈವಿಕ ಜ್ಞಾನವು ನಿಮ್ಮಲ್ಲಿ ಕಾರ್ಯ ಮಾಡಲು ಆರಂಭಿಸುತ್ತದೆ. ಅಂತ ಒಂದು ದೈವಿಕ ಜ್ಞಾನಕ್ಕೆ ಸಡ್ಡು ಹೊಡೆಯುವಂತದ್ದು ಯಾವುದೂ ಇಲ್ಲ.

ಅರಿಕೆಗಳು
ನನ್ನ ಬೆಳಕೂ ನನ್ನ ರಕ್ಷಣೆಯೂ ಆಗಿರುವ ಕರ್ತನೇ,ಭಯವು ನನ್ನ ಮೇಲೆ ಆಳ್ವಿಕೆ ನಡೆಸಲು ಸಾಧ್ಯವಿಲ್ಲ. ದೇವರೇ ನನ್ನ ಬಲವು ನನ್ನ ಪ್ರಾಣದ ಆಧಾರವು. ಆದುದರಿಂದ ನಾನು ಹೆದರುವುದಿಲ್ಲ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ ಆಮೇನ್.(ಕೀರ್ತನೆ 27 :1)
Join our WhatsApp Channel
Most Read
● ಯಾಬೇಚನ ಪ್ರಾರ್ಥನೆ● ಅಂತಿಮ ಸುತ್ತನ್ನೂ ಗೆಲ್ಲುವುದು
● ಯಹೂದವು ಮುಂದಾಗಿ ಹೊರಡಲಿ
● ಬದಲಾಗಲು ಇರುವ ತೊಡಕುಗಳು.
● ದೇವರ ಕನ್ನಡಿ
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
ಅನಿಸಿಕೆಗಳು